ಹುಬ್ಬಳ್ಳಿ: ಕೈಯಲ್ಲಿ ಗಿರ ಗಿರಾ ಅಂತ ತಿರುಗೋ ಬಾಟಲ್ ಗಳು( Bottles). ರೊಂಯ್ ಎಂದು ಬಾಟಲ್ ಗಳನ್ನು ತಿರುಗಿಸೋ ಯುವತಿ. ಏಕ ಕಾಲಕ್ಕೆ ಎರಡು, ಮೂರು, ನಾಲ್ಕು ಬಾಟಲ್ ಗಳನ್ನೂ ತಿರುಗಿಸೋ (Juggling) ಚಾಕಚಕ್ಯತೆ. ಇದೇ ಚಾಕಚಕ್ಯತೆಯೊಂದಿಗೆ ವಿಶ್ವಮಟ್ಟದಲ್ಲಿ ಧಾರವಾಡ ಹೆಸರನ್ನು ಬೆಳಗಿದ ಬೆಡಗಿ. ಧಾರವಾಡ ಜಿಲ್ಲೆ ಬೆಟದೂರು ಗ್ರಾಮದ ಯುವತಿ ವರ್ಲ್ಡ್ ಬುಕ್ ಆಫ್ ರೆಕಾರ್ಡ್ (Guinness World Record) ಸಾಧನೆ ಮಾಡಿದ್ದಾಳೆ . ಜಗ್ಲಿಂಗ್ ನಲ್ಲಿ ವರ್ಲ್ಡ್ ಬುಕ್ ಆಫ್ ರೆಕಾರ್ಡ್ ಯುವತಿ ಸಾಧನೆಗೈದಿದ್ದಾಳೆ. ಹೀಗೆ ಸಾಧನೆ ಮಾಡಿದ ಯುವತಿಯ ಹೆಸರು ಕುಂದಗೋಳ ತಾಲೂಕಿನ ಬೆಟದೂರು ಗ್ರಾಮದ ಕವಿತಾ ಮೇದಾರ. ಬಾರ್ ಟೆಂಡರ್ ಗಳು ಬಾಟಲಿ ತಿರುಗಿಸುವುದನ್ನು ನೋಡಿಯೇ ಹೌಹಾರಿರುತ್ತೇವೆ. ಇಂಥದ್ದರಲ್ಲಿಯೇ ಗ್ರಾಮೀಣ ಪ್ರತಿಭೆ ಸಾಧನೆ ಮೆರೆದಿದ್ದಾಳೆ.
ವರ್ಲ್ಡ್ ಬುಕ್ ಆಫ್ ರೆಕಾರ್ಡ್ ಸಾಧನೆ
ಗಿರ ಗಿರ ಅಂತ ಬಾಟಲಿಗಳನ್ನು ತಿರುಗಿಸುತ್ತ ನೋಡುಗರನ್ನು ಅಚ್ಚರಿಗೆ ಒಳಪಡಿಸುವ ಈ ಕಲೆಗೆ ಜಗ್ಲಿಂಗ್ ಮತ್ತು ಫೇರಿಂಗ್ ಅಂತ ಕರೀತಾರೆ. ಸಾಮಾನ್ಯವಾಗಿ ಸಿನಿಮಾಗಳಲ್ಲಿ ಅಥವಾ ದೊಡ್ಡ ದೊಡ್ಡ ಪಬ್, ಬಾರ್ ಗಳಲ್ಲಿ ಈ ರೀತಿಯಾಗಿ ಹುಡುಗರು ತಿರುಗಿಸುವುದನ್ನ ನೀವು ನೋಡಿರ್ತೀರಾ. ಇದನ್ನೆಲ್ಲ ಕಲಿಬೇಕು ಅಂತ ಸುಮ್ಮನೆ ಮಾತಲ್ಲಿ ನೋಡೋಕೆ ಎಷ್ಟು ರೋಮಾಂಚನವಾಗುತ್ತದೆಯೋ ಇದನ್ನು ಕಲಿಯೋದು ಅಷ್ಟೇ ಟಫ್ ಕೂಡ. ಆದ್ರೆ ಹಳ್ಳಿಯಿಂದ ಪಟ್ಟಣಕ್ಕೆ ಹೋಗಿದ್ದ ಈ ಯುವತಿಗೆ ಜಗ್ಲಿಂಗ್, ಫೇರಿಂಗ್ ಆಕರ್ಷಣೆಯಾಗಿ ಕಂಡಿದೆ. ಈ ಯುವತಿ ಕಷ್ಟಪಟ್ಟು ಕಲಿತು, ಇದರಲ್ಲಿಯೇ ವರ್ಲ್ಡ್ ಬುಕ್ ಆಫ್ ರೆಕಾರ್ಡ್ ನಲ್ಲಿ ಸಾಧನೆ ಮಾಡಿದ್ದಾರೆ.
ಇದನ್ನೂ ಓದಿ: ಜೇನುನೊಣಗಳಿಂದ ಇಡೀ ದೇಹವನ್ನೇ ಮುಚ್ಚಿಕೊಂಡು Guinness Record ನಿರ್ಮಿಸಿದ ಭೂಪ..!
ಪುಣೆಯಲ್ಲಿ ಟ್ರೈನಿಂಗ್ ಪಡೆದು ಸಾಧನೆ ಮಾಡೋಕೆ ಕವಿತಾ ಮುಂದಾಗಿದ್ದಾರೆ. ಕವಿತಾಳಿಗೆ ಸೋದರ ಮಾವ ಪ್ರೋತ್ಸಾಹ ನೀಡಿದ್ದಾರೆ. ತರಬೇತಿ ಪಡೆದ ಕವಿತಾ ಪುಣೆಯ ಬಾರ್ ನಲ್ಲಿ ಬಾರ್ ಟೆಂಡರ್ ಆಗಿ ಕೆಲಸ ಮಾಡಿದ್ದಾಳೆ. ಸ್ವಿಟ್ಜರ್ಲ್ಯಾಂಡ್ ನಲ್ಲಿ ನಡೆಯುವ ಸ್ಪರ್ಧೆಗೆ ಈಗಾಗಲೇ ಕವಿತಾ ಆಯ್ಕೆಯಾಗಿದ್ದರು. ಆದ್ರೆ ಹಣದ ತೊಂದರೆ ಆಗಿತ್ತು. ಅದೃಷ್ಟವಶಾತ್ ವರ್ಲ್ಡ್ ಬುಕ್ ಆಫ್ ರೆಕಾರ್ಡ್ ತಂಡ ಭಾರತಕ್ಕೆ ಬಂದು ಸ್ಪರ್ಧೆ ಏರ್ಪಡಿಸಿ ಮಹಿಳೆಯ ದಾಖಲೆಗೆ ಮುನ್ನುಡಿ ಬರೆದಿದ್ದಾರೆ.
122 ಬಾರಿ ಫ್ಲಿಪ್ ಮಾಡಿ ದಾಖಲೆ
ಗೋವಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ವರ್ಲ್ಡ್ ಬುಕ್ ಆಫ್ ರೆಕಾರ್ಡ್ ಸಾಧನೆ ಮಾಡಿದ್ದಾಳೆ. ಒಂದು ನಿಮಿಷಯದಲ್ಲಿ 122 ಬಾರಿ ಫ್ಲಿಪ್ ಮಾಡೋ ಮೂಲಕ ಈ ಸಾಧನೆಗೆ ಸಾಕ್ಷಿಯಾಗಿದ್ದಾಳೆ. ಭಾರತದಲ್ಲಿಯೇ ಜಗ್ಲಿಂಗ್ ಆ್ಯಂಡ್ ಫೇರಿಂಗ್ ನಲ್ಲಿ ದಾಖಲೆ ಬರೆದ ಮೊದಲ ಮಹಿಳೆ ಎಂಬ ಕೀರ್ತಿ ಕವಿತಾಳದ್ದಾಗಿದೆ. ಮಹಿಳೆ ಅಂದ್ರೇ ಮನೆಯ ಕೆಲಸಕ್ಕೆ ಮಾತ್ರ ಸೀಮಿತವಲ್ಲ ಅನ್ನೋದನ್ನು ಕವಿತಾ ತೋರಿಸಿಕೊಟ್ಟಿದ್ದಾಳೆ. ಇವಳ ಸಾಧನೆ ಭಾರತ ಮಾತ್ರವಲ್ಲದೆ ಜಗತ್ತಿನ ಪ್ರಶಂಸೆಗೆ ಪಾತ್ರವಾಗುವಂತೆ ಮಾಡಿದೆ.
ಇದನ್ನೂ ಓದಿ: Guinness World Record: ಒಂದೂವರೆ ಸಾವಿರ ವಾಷಿಂಗ್ ಮಷೀನ್ನಿಂದ ವಿಶ್ವದಾಖಲೆ!
ಏನಾದ್ರೂ ಸಾಧನೆ ಮಾಡಬೇಕಂತ ಅನಿಸಿತು. ಕೊರೋನಾ ಸಂದರ್ಭದಲ್ಲಿ ಬಾರ್ ಗಳು ಮುಚ್ಚಿದ ಸಮಯವನ್ನು ಸದ್ಬಳಕೆ ಮಾಡಿಕೊಡೆ. ಜುಗ್ಲಿಂಗ್ ಮತ್ತು ಫೇರಿಂಗ್ ನ ನಿರಂತರ ಅಭ್ಯಾಸ ಮಾಡಿದೆ. ಕೊನೆಗೂ ಈ ಸಾಧನೆ ಮಾಡಿದೆ. ನನ್ನ ಸಾಧನೆಗೆ ತವರು ಜಿಲ್ಲೆಯ ಜನ ತೋರಿಸಿದ ಅಭಿಮಾನಕ್ಕೆ ಖುಷಿಯಾಗುತ್ತೆ ಎನ್ನುತ್ತಾರೆ ಕವಿತಾ ಮೇದಾರ. ಇನ್ನು ಕವಿತಾ ಸಾಧನೆಗೆ ಧಾರವಾಡ ಜಿಲ್ಲೆಯ ಜನತೆಯೂ ಮೆಚ್ಚುಗೆ ವ್ಯಕ್ತಪಡಿಸಿದೆ. ಸರ್ಕಾರದಿಂದಲೂ ಈಕೆಗೆ ಪ್ರೋತ್ಸಾಹ ಸಿಗಬೇಕೆಂದು ಅಭಿಪ್ರಾಯಪಟ್ಟಿದೆ. ಮಹಿಳೆ ಅಂದರೆ ಮನೆಯ ಕೆಲಸಕ್ಕೆ ಮಾತ್ರ ಸೀಮಿತವಾಗದೆ ಹೊಸ ಸಾಧನೆ ಮಾಡಬೇಕು ಎಂಬುವುದನ್ನು ಕವಿತಾ ತೋರಿಸಿಕೊಟ್ಟಿದ್ದಾರೆ. ಕವಿತಾಳ ಕೀರ್ತಿ ಇನ್ನಷ್ಟು ವ್ಯಾಪಿಸಲಿ. ಸರ್ಕಾರ ಏನಾದರೂ ಸಹಾಯ ಸೌಲಭ್ಯಗಳನ್ನು ನೀಡಲಿ ಎಂಬುವುದು ನಮ್ಮದೂ ಆಶಯವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ