• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • BRTS Chigari: ಬರೋಬ್ಬರಿ ₹970 ಕೋಟಿ ಖರ್ಚು ಮಾಡಿ ರಸ್ತೆ ಮಾಡಿದ್ರು, ಮೂರೇ ವರ್ಷದಲ್ಲಿ ಮತ್ತೆ 70 ಕೋಟಿ ವೆಚ್ಚ!

BRTS Chigari: ಬರೋಬ್ಬರಿ ₹970 ಕೋಟಿ ಖರ್ಚು ಮಾಡಿ ರಸ್ತೆ ಮಾಡಿದ್ರು, ಮೂರೇ ವರ್ಷದಲ್ಲಿ ಮತ್ತೆ 70 ಕೋಟಿ ವೆಚ್ಚ!

BRTS ಬಸ್

BRTS ಬಸ್

ಈಗ ಸ್ಮಾರ್ಟ್ ಸಿಟಿ ಯೋಜನೆಯಲ್ಲಿನ 70 ಕೋಟಿ ರೂಪಾಯಿ ವಿನಿಯೋಗಿಸಿ, ಈ ಕಾರಿಡಾರ್ ವಿನ್ಯಾಸದಲ್ಲಿ ಬದಲಾವಣೆ ಮಾಡೋಕೆ ಮುಂದಾಗಿರೋದಕ್ಕೆ ಸಾರ್ವಜನಿಕ ವಲಯದಿಂದ ಆಕ್ರೋಶ ವ್ಯಕ್ತವಾಗಿದೆ.

  • Share this:

ಧಾರವಾಡ : ಹುಬ್ಬಳ್ಳಿ-ಧಾರವಾಡ (Hubballi Dharwad) ಅವಳಿ ನಗರದ ಮಧ್ಯೆ ತ್ವರಿತಗತಿ ಬಸ್ ಸೇವೆ (Bus Service) ನೀಡುವ ಬಿ.ಆರ್.ಟಿ.ಎಸ್.ನ ಚಿಗರಿ ಬಸ್ (BRTS Chigari Service) ಸೇವೆ ಉದ್ಘಾಟನೆಗೊಂಡು ಈಗ ಮೂರು ವರ್ಷ. ಯಾವುದೇ ಒಂದು ಯೋಜನೆ ಉದ್ಘಾಟನೆಗೊಂಡ ಬಳಿಕ ಅದು ಜನರಿಂದ ಶ್ಲಾಘನೆಯೆ ಒಳಗಾಗುವಂತಿರಬೇಕು. ಆದ್ರೆ ಈ ಯೋಜನೆಗೆ ಸದಾ ಕಾಲ ಜನ ಶಪಿಸುವಂತಾಗಿದೆ. ಸುಉಗಮ ಸಂಚಾರ ಬದಲು ಕಿರಿಕಿರಿ ಸಂಚಾರವಾಗಿ ಸೃಷ್ಟಿಯಾಗಿರೊ ಈ BRTS ಮೂಲ ಕಾರಿಡಾರ್ (BRTS Corridor) ಬದಲಿಸೋಕೆ ಈಗ ಮುಂದಾಗಿದ್ದಾರೆ. ಒಂದೆಡೆ ಕಿರಿದಾದ ರಸ್ತೆಯಲ್ಲಿ ಕಿಕ್ಕಿರಿದು ನಿಂತಿರುವ ವಾಹನಗಳ ಟ್ರಾಫಿಕ್ ಜಾಮ್. ಮಗದೊಂದು ಕಡೆ ವಾಹನಗಳ ಓಡಾಟವೇ ಇಲ್ಲದೇ ಖಾಲಿಯಾಗಿರೋ ವಿಶಾಲ ರಸ್ತೆ. ಇದು ಹುಬ್ಬಳ್ಳಿ-ಧಾರವಾಡ ಮಧ್ಯೆ ತ್ವರತಗತಿಯಲ್ಲಿ ಚಿಗರಿ ಬಸ್ ಓಡಿಸೊ ಬಿ.ಆರ್.ಟಿ.ಎಸ್ ಯೋಜನೆ.


ಹೌದು ಈ ಯೋಜನೆಗೆ ಸರ್ಕಾರ ಒಟ್ಟು ಖರ್ಚು ಮಾಡಿದ್ದು 970 ಕೋಟಿ. ಇಷ್ಟು ಕೋಟಿ ರೂಪಾಯಿಯಲ್ಲಿ ನಿರ್ಮಾಣಗೊಂಡಿರೋ ವಿಶಾಲವಾದ ಪ್ರತ್ಯೇಕ ರಸ್ತೆಯಲ್ಲಿ ನಿತ್ಯ ಅವಳಿ ನಗರದ ಮಧ್ಯೆ 85 ಚಿಗರಿ ಬಸ್ ಗಳು 950 ಟ್ರಿಪ್ ಗಳಲ್ಲಿ ಓಡಾಡುತ್ತವೆ. ಆದ್ರೆ ಪಕ್ಕದಲ್ಲಿರೋ ಸಣ್ಣ ರಸ್ತೆಯಲ್ಲಿ ಮಾತ್ರ ಉಳಿದ ಸಾವಿರಾರೂ ವಾಹನಗಳು ಓಡಾಡುತ್ತವೆ. ಹೀಗಾಗಿ ನಿತ್ಯ ಸಂಚಾರ ಕಿರಿಕಿರಿ ಉಂಟಾಗುತ್ತಿದೆ.


ಮತ್ತೆ 70 ಕೋಟಿ ಖರ್ಚು


ಈ ಬಿ.ಆರ್.ಟಿ.ಎಸ್ ಕಾರಿಡಾರ್ ನಲ್ಲಿ ಸರ್ಕಾರದ ಇತರೆ ಪ್ರಯಾಣಿಕ ಬಸ್ ಗಳನ್ನೂ ಓಡಿಸುವಂತಿಲ್ಲ. ಹೀಗಾಗಿ ಸಾಮಾನ್ಯ ರಸ್ತೆಯಲ್ಲಿ ಸಂಚಾರ ಕಿರಿಕಿರಿ ತಪ್ಪಿಸೋಕೆ ಈಗ ಮತ್ತೇ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ 70 ಕೋಟಿ ರೂಪಾಯಿ ಖರ್ಚು ಮಾಡೋಕೆ ಮುಂದಾಗುತ್ತಿದೆ.


BRTS ಬಸ್ ನಿಲ್ದಾಣ


ಇದನ್ನೂ ಓದಿ:  Dharwadi Buffalo: ಧಾರವಾಡಿ ಎಮ್ಮೆ ತಳಿಗೆ ಸಿಕ್ಕಿತು ರಾಷ್ಟ್ರೀಯ ಮಾನ್ಯತೆ; ಈ ಎಮ್ಮೆಗೆ ಎಷ್ಟೆಲ್ಲಾ ವೈಶಿಷ್ಟ್ಯಗಳಿವೆ ಗೊತ್ತಾ?


ಸದ್ಯ ಇರೋ ಕಾರಿಡರ್ ವಿಸ್ತಾರವನ್ನೇ ಕಡಿಮೆ ಮಾಡಿ, ಆಚೆ-ಈಚೆ ಇರೋ ಸಾರ್ವಜನಿಕ ವಾಹನಗಳ ಓಡಾಟದ ರಸ್ತೆಯ ವಿಸ್ತಾರ ಹೆಚ್ಚಿಸೋಕೆ ಮುಂದಾಗಲಾಗಿದೆ ಎಂದು ಮೇಯರ್ ಈರೇಶ್ ಅಂಚಟಗೇರಿ ಹೇಳುತ್ತಿದ್ದಾರೆ.


ಸಾರ್ವಜನಿಕರಿಂದ ಆಕ್ರೋಶ


ಆದ್ರೆ ಈಗಾಗಲೇ ಉದ್ಘಾಟನೆಗೊಂಡ ಬಳಿಕವೂ ಕೋಟಿ ಕೋಟಿ ಮೊತ್ತದಲ್ಲಿ ಬೇರೆ ಬೇರೆ ಕಡೆ ಕಾಮಗಾರಿಗಳನ್ನು ಮಾಡುತ್ತಲೇ ಇದ್ದು, ಪುನಃ ಈಗ ಸ್ಮಾರ್ಟ್ ಸಿಟಿ ಯೋಜನೆಯಲ್ಲಿನ 70 ಕೋಟಿ ರೂಪಾಯಿ ವಿನಿಯೋಗಿಸಿ, ಈ ಕಾರಿಡಾರ್ ವಿನ್ಯಾಸದಲ್ಲಿ ಬದಲಾವಣೆ ಮಾಡೋಕೆ ಮುಂದಾಗಿರೋದಕ್ಕೆ ಸಾರ್ವಜನಿಕ ವಲಯದಿಂದ ಆಕ್ರೋಶ ವ್ಯಕ್ತವಾಗಿದೆ. ಯಾಕಂದ್ರೆ ಈಗಾಗಲೇ ಈ ಯೋಜನೆ ಹೆಸರಿನಲ್ಲಿ ಸಾಕಷ್ಟು ಹಣ ವ್ಯಯವಾಗಿದ್ದರೂ, ಅವೈಜ್ಞಾನಿಕತೆಯಿಂದಾಗಿ ಸಾಕಷ್ಟು ತೊಂದರೆ ಎದುರಾಗಿದೆ.


BRTS ಬಸ್


ಈ ಯೋಜನೆ ಆರಂಭದಿಂದ‌ ಇಲ್ಲಿಯವರೆಗೆ ವಿರೋಧ ವ್ಯಕ್ತವಾಗುತ್ತಾ ಬಂದಿದೆ. ಅಲ್ಲದೇ ಅವೈಜ್ಞಾನಿಕವಾಗಿ ಕಾಮಗಾರಿ ನಡೆದಿದೆ. ಕಾಮಗಾರಿ ಮುಗಿದು ಸಾರ್ವಜನಿಕರ ವಾಹನಗಳ ಸಂಚಾರಕ್ಕೆ ಅನಾನುಕೂಲವಾಗುತ್ತಿರುವ ಕಾರಣ.


ಕಾಮಗಾರಿ ಹೆಸರಿನಲ್ಲಿ ಹಣ ಪೋಲು


ಈಗ ಮತ್ತೇ 70 ಕೋಟಿ ಖರ್ಚು ಮಾಡಿ ಕಾರಿಡಾರ್ ರಸ್ತೆ ಕಡಿಮೆ ಮಾಡಿ ಸಾರ್ವಜನಿಕ ವಾಹನಗಳಿಗೆ ಹೆಚ್ಚಿನ ರಸ್ತೆ ಮಾಡಲು ಮುಂದಾಗುತ್ತಿದೆ ಪಾಲಿಕೆ. ಕಾಮಗಾರಿ ಹೆಸರಲ್ಲಿ ಹಣವನ್ನು ಪೋಲು ಮಾಡುತ್ತಿದ್ದಾರೆ. ಇದರ ಬದಲಾಗಿ ಸಂಪೂರ್ಣ ಕಾರಿಡಾರ್ ಕಿತ್ತು ಎಲ್ಲ ರಸ್ತೆಗಳನ್ನು ಮುಕ್ತಗೊಳಿಸಿ ಎಂದು ಸ್ಥಳೀಯರಾದ ವೆಂಕನಗೌಡ ಪಾಟೀಲ ಒತ್ತಾಯ ಮಾಡಿದ್ದಾರೆ.


BRTS ಬಸ್ ಮಾರ್ಗ


ಇದನ್ನೂ ಓದಿ:  Dharwad Central Jail: ಧಾರವಾಡ ಸೆಂಟ್ರಲ್​​ ಜೈಲಿನಲ್ಲಿ ಕೈದಿಗಳ ಭೇಟಿಗೆ ಹೊಸ‌ ತಂತ್ರಜ್ಞಾನ


ಈ ಯೋಜನೆಯಿಂದ ಅನಾನುಕೂಲ ಹೆಚ್ಚು


ಈಗಾಗಲೇ ಒಂದೇಡೆ ಬಿ.ಆರ್.ಟಿ.ಎಸ್ ಯೋಜನೆಯ ನವಲೂರ ಸೇತುವೆಯ ಕಾಮಗಾತಿ ಇನ್ನೂ ಮುಗಿದಿಲ್ಲ. ಅತ್ತ ಸೇತುವೆಗೆ ಹಂತ ಹಂತವಾಗಿ ಹಣ ವ್ಯಯವಾಗುತ್ತಲೇ ಹೊರಟಿದ್ದು ಈಗ ಬಿ.ಆರ್.ಟಿ.ಎಸ್ ಕಾರಿಡಾರ್ ಬದಲಾಯಿಸೋಕೆ ಮತ್ತಷ್ಟು ಕೋಟಿ ವ್ಯಯಿಸಲಾಗುತ್ತಿದೆ. ಒಟ್ಟಾರೆಯಾಗಿ ಸಾರ್ವಜನಿಕರಿಗೆ ಅನುಕೂಲವಾಗಬೇಕಿದ್ದ ಯೋಜನೆಗಳು ಮಾತ್ರ ಅನಾನುಕೂಲಕ್ಕೆ ಕಾರಣವಾಗುತ್ತಿವೆ.

top videos
    First published: