ಧಾರವಾಡ (ಜೂ. 28): ಮದುವೆ ಎಂಬ ಹೊಸ ಜೀವನದ ಬೆಸುಗೆ ಯಾರೊಂದಿಗೆ, ಹೇಗೆ ನಡೆಯುತ್ತದೆ ಎಂಬುದು ನಿಶ್ಚಯವಾಗಿರುತ್ತದೆ. ಅದರಂತೆ ನಡೆಯುತ್ತದೆ ಎಂಬ ಮಾತಿನಂತೆ ನಡೆದಿದೆ. ಇಲ್ಲೊಂದು ಅಪರೂಪದ ಮದುವೆ. ಅದೇ ರೀತಿ ಪ್ರೀತಿಯ ಭಾಷೆಗೆ ಸೋತ ಇಬ್ಬರು ಮೂಕ ಜೋಡಿಗಳು ಹಸೆಮಣೆ ಏರಿ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ವಿಶೇಷ ಎಂದರೆ ಲಾಕ್ಡೌನ್ ಸಡಲಿಕೆ ಬಳಿಕ ಧಾರವಾಡದಲ್ಲಿ ನಡೆದ ಅಪರೂಪದ ಮೊದಲ ಮದುವೆ ಇದಾಗಿದ್ದು, ಎಲ್ಲರ ಗಮನ ಸೆಳೆದಿದೆ. ಕೊರೋನಾ ಸಂದಿಗ್ಧತೆ ನಡುವೆ ಎಲ್ಲರಲ್ಲೂ ಭರವಸೆ ಮೂಡಿಸುವಂತೆ ಇದೆ ಈ ಮೂಕ ಹಕ್ಕಿಗಳ ದಾಂಪತ್ಯ ಜೀವನ. ಧಾರವಾಡದ ಸತ್ತೂರು ಗ್ರಾಮದ ನಿವಾಸಿ ಕುಮಾರ ತಳವಾರ ಹಾಗೂ ಧಾರವಾಡದ ಸಾರಸತ್ವಪುರದ ಶ್ವೇತಾ ಕಿಲ್ಲೇದಾರ ಇಬ್ಬರು ಮೂಕ ಹಕ್ಕಿಗಳು ಈಗ ಸತಿ ಪತಿಯರಾಗಿ ದ್ದಾರೆ.
ಸರಳವಾಗಿ ನಡೆದ ಮದುವೆ
ಮದುವೆ ಎಂದಾಕ್ಷಣ ಬೀಗರು, ಬಿಜ್ಜರು, ವಾದ್ಯ ಮೇಳ, ಗೌಜು-ಗದ್ದಲಗಳಿರುತ್ತದೆ. ಆದರೆ, ಈ ಮದುವೆಯಲ್ಲಿ ವಧುವಿಗೆ ವರ, ವರನಿಗೆ ವಧು ಪರಸ್ಪರ ಮಾಸ್ಕ್ ಬದಲಾಯಿಸುವ ಮೂಲಕ ಸತಿ-ಪತಿಗಳಾದರು. ನಂತರ ಸಂಪ್ರದಾಯದಂತೆ ತಾಳಿ ಕಟ್ಟಿದ ಬಳಿಕ ಅಕ್ಷತೆ ಹಾಕಲಾಯಿತು. ಕುಮಾರ ಹಾಗೂ ಶ್ವೇತಾ ಇಬ್ಬರು ಕಿವುಡ-ಮೂಕರಾಗಿದ್ದು, ಈ ವಿಶೇಷಚೇತನರ ವಿವಾಹಕ್ಕೆ ಅನೇಕ ಜನರು ಸಾಕ್ಷಿಯಾಗಿದ್ದು ವಿಶೇಷ.
ಕುಮಾರ ಕಾರ್ಖಾನೆಯೊಂದ ಉದ್ಯೋಯಾಗಿ ಸ್ವಂತ ಬದುಕು ಕಟ್ಟಿಕೊಂಡರೆ, ಶ್ವೇತಾ ಕಸೂತಿ ಕಲೆಯ ಮೂಲಕವೇ ತನ್ನೆಲ್ಲಾ ಮಾತನ್ನು ತಿಳಿಸುತ್ತಾಳೆ. ಇಬ್ಬರು ಜೋಡಿಗಳು ಪರಸ್ಪರ ಒಪ್ಪಿ ಕುಟುಂಬಸ್ಥರು ಮತ್ತು ಹಿರಿಯ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಇದನ್ನು ಓದಿ: ನಾಯಿಯನ್ನು ದ್ವಿಚಕ್ರ ವಾಹನಕ್ಕೆ ಕಟ್ಟಿ ಎಳೆದೊಯ್ದ ಕ್ರೌರ್ಯ ಮೆರೆದ ಇಬ್ಬರು ಮಹಿಳೆಯರು..!
ಈ ಮದುವೆಗೆ ಎರಡು ಕುಟುಂಬಗಳು ಒಪ್ಪಿದ್ದು, ಸರಳವಾಗಿ ಮದುವೆ ನಡೆಸಲಾಯಿತು. ಮಾತು ಕಿವಿ ಬಾರದ ಮಗ ಹೊಸ ಜೀವನಕ್ಕೆ ಕಾಲಿಟ್ಟ ಸಂತಸದಲ್ಲಿ ಮಾತನಾಡಿದ ಅವರ ತಂದೆ, ನನಗೆ ನಾಲ್ಕು ಮಕ್ಕಳಲ್ಲಿ ಕುಮಾರನಿಗೆ ಕಿವಿ ಕೇಳಲ್ಲ, ಮಾತು ಬರಲ್ಲ. ಅವರಿಗೆ ಹೊಂದುವ ವಧು ಹುಡುಕುತ್ತಿದ್ದೆವು, ಬಳಿಕ ಶ್ವೇತಾ ಸಿಕ್ಕಳು. ಇಬ್ಬರು ಪರಸ್ಪರ ನೋಡಿ, ಸಂಜ್ಞೆಗಳ ಮೂಲಕವೇ ಒಪ್ಪಿಗೆ ಸೂಚಿಸಿದರು. ಇಬ್ಬರಿಗೂ ಹೊಸ ಬಾಳು ಸಿಕ್ಕ ಸಂತಸ ನಮ್ಮಲ್ಲಿದೆ ಎನ್ನುತ್ತಾರೆ ವಧುವಿನ ತಂದೆ ಶಿವಪ್ಪ ತಳವಾರ.
ವಧು-ವರನ ಮಧ್ಯೆ ಪರಸ್ಪರ ಹೊಂದಾಣಿಕೆ ಇದೆ. ಸಂಜ್ಞೆಗಳ ಮೂಲಕ ಅವರ ಮಾತುಕತೆ ನಡೆದಿದೆ. ತಮ್ಮದೆ ಪ್ರಪಂಚದಲ್ಲಿ ಸ್ವಚ್ಛಂದವಾಗಿದ್ದು, ಈ ಮದುವೆಯಿಂದ ಎರಡು ಕುಟುಂಬದಲ್ಲಿ ಸಂತಸ ಮನೆ ಮಾಡಿದೆ. ಇಬ್ಬರು ಚೆನ್ನಾಗಿ ಇರಲಿ ಎಂದು ವಧುವಿನ ಸಂಬಂಧಿ ಶ್ವೇತಾ ತಿಳಿಸಿದ್ದಾರೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್ಡೌನ್ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ