ಹುಬ್ಬಳ್ಳಿ: ಪ್ರೀತಿಸಿ ಮದುವೆಯಾದ (Love Marriage) ಯುವತಿಯನ್ನು (Girl) ಅಪಹರಿಸಿದ ಪ್ರಕರಣಕ್ಕೆ (Kidnap Case) ಸಂಬಂಧಿಸಿ ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆ (Hubballi Dharwad Corporation) ಕಾರ್ಪೋರೆಟರ್ ನನ್ನು (Corporator) ಕೊನೆಗೂ ಬಂಧಿಸಲಾಗಿದೆ. ಪಾಲಿಕೆ ಸದಸ್ಯ ಚೇತನ ಹಿರೇಕೆರೂರ ನನ್ನು ಹುಬ್ಬಳ್ಳಿಯ ಗೋಕುಲ ರೋಡ್ ಠಾಣೆ (Gokul Road Station) ಪೊಲೀಸರು (Police) ಬಂಧಿಸಿದ್ದಾರೆ. ಜೊತೆಗೆ ಯುವತಿಯ ತಂದೆ ಶಿವು ಹಿರೇಕೆರೂರ ಹಾಗೂ ತಾಯಿ ಜಯಲಕ್ಷ್ಮಿ ಎಂಬುವರನ್ನು ಕೂಡ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಸಹೋದರ ಸಂಬಂಧಿ ಯುವತಿಯನ್ನು ಅಪಹರಿಸಿದ್ದ ಆರೋಪ ಚೇತನ್ ಹಿರೇಕೆರೂರ ಮೇಲಿತ್ತು. ಪ್ರೀತಿಸಿ ಮದುವೆಯಾಗಿದಕ್ಕೆ, ಯುವತಿಯ ಕುಟುಂಬದ (Family) ಜೊತೆ ಸೇರಿ ಅಪಹರಿಸಿದ್ದ ಎಂದು ಆರೋಪಿಸಲಾಗಿತ್ತು. ಆತನನ್ನು ಪೊಲೀಸ್ ಠಾಣೆಗೆ ಕರೆಯಿಸಿ ವಿಚಾರಣೆ ನಡೆಸಿದ ವೇಳೆ ಚೇತನ್ ಬೆಂಬಲಿಗರೂ (Followers) ಗೋಕುಲ್ ಠಾಣೆ ಎದುರು ಜಮಾವಣೆಗೊಂಡು ಪ್ರತಿಭಟನೆ (Protest) ಮಾಡಿ, ಬಿಡುಗಡೆಗೆ ಒತ್ತಾಯಿಸಿದ್ದರು.
ಕೋರ್ಟ್ ಮೊರೆ ಹೋಗಿದ್ದ ನೊಂದ ಯುವತಿ
ಇದಾದ ನಂತರ ಪೊಲೀಸರು ಚೇತನ್ ನನ್ನು ಬಿಟ್ಟು ಕಳುಹಿಸಿದ್ದರು. ಯುವತಿಯನ್ನು ಗೋವಾದಲ್ಲಿ ಪತ್ತೆ ಹಚ್ಚಿದ್ದ ಪೊಲೀಸರು ಹುಬ್ಬಳ್ಳಿಗೆ ಕರೆತಂದು ಪತಿಯೊಂದಿಗೆ ಕಳುಹಿಸಿಕೊಟ್ಟಿದ್ದರು. ಆದರೆ ಅಪಹರಣಕಾರರ ಮೇಲೆ ಕ್ರಮ ಕೈಗೊಂಡಿಲ್ಲ ಎಂದು ಯುವತಿ ಸಹನಾ ಕೋರ್ಟ್ ಮೊರೆ ಹೋಗಿದ್ದಳು. ಹುಬ್ಬಳ್ಳಿಯ ಕೋರ್ಟ್ ಚೇತನ್, ಶಿವು ಹಿರೇಕೆರೂರ ಸೇರಿ ಐವರ ವಿರುದ್ಧ ವಾರಂಟ್ ಜಾರಿಗೊಳಿಸಿತ್ತು.
ಬಂಧನ ಭೀತಿಯಿಂದ ತಲೆ ಮರೆಸಿಕೊಂಡಿದ್ದ ಚೇತನ್
ಬಂಧನದ ಭೀತಿಯಿಂದ ಜೂನ್ 30 ರಂದು ಹುಬ್ಬಳ್ಳಿಯಲ್ಲಿ ನಡೆದಿದ್ದ ಮಹಾನಗರ ಪಾಲಿಕೆ ಸಾಮಾನ್ಯ ಸಭೆಗೂ ಚೇತನ್ ಹಿರೇಕೆರೂರ ಗೈರು ಹಾಜರಾಗಿದ್ದ. ಬಂಧನಕ್ಕೆಂದು ಬಂದಿದ್ದ ಗೋಕುಲ್ ಠಾಣೆ ಪೊಲೀಸರು ಬರಿಗೈಲಿ ವಾಪಸ್ ಆಗಿದ್ದರು. ಇದೀಗ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಆಹ್ವಾನ ಪತ್ರಿಕೆ ಕೊಡೋದಕ್ಕೆ ಹೋದಾಗ ಅಪಹರಣ
ಸಹನಾ ಹಾಗೂ ನಿಖಿಲ್ ದಾಂಡೇಲಿ ಪ್ರೀತಿಸಿ ಮದುವೆ ಆಗಿದ್ದರು.
ಆರತಕ್ಷತೆ ಆಹ್ವಾನ ಪತ್ರಿಕೆ ಕೊಡೋಕೆ ಹೋದಾಗ ಅಪಹರಣ ನಡೆದಿತ್ತು. ನಂತರ ಯುವತಿಯನ್ನು ಪತ್ತೆ ಹಚ್ಚಿ ಕರೆತಂದಿದ್ದ ಪೊಲೀಸರು, ಅಪಹರಣಕಾರರ ವಿರುದ್ಧ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಅಪಹರಣ ಕಾರಣದಿಂದಾಗಿ ಅರತಕ್ಷತೆ ಕಾರ್ಯಕ್ರಮವೂ ರದ್ದುಗೊಂಡಿತ್ತು. ಕೋರ್ಟ್ ವಾರಂಟ್ ಹಿನ್ನೆಲೆಯಲ್ಲಿ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ. ಇನ್ನು ಈ ಸಂಬಂಧ ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡಿವೈಡರ್ ಗೆ ಡಿಕ್ಕಿ ಹೊಡೆದು ಧಗ ಧಗನೆ ಹೊತ್ತಿ ಉರಿದ ಕಾರು
ಡಿವೈಡರ್ ಗೆ ಗುದ್ದಿ ಕಾರೊಂದು ಧಗಧಗನೆ ಹೊತ್ತಿ ಉರಿದ ಘಟನೆ ಧಾರವಾಡ ಜಿಲ್ಲೆ ಅಣ್ಣಿಗೇರಿ ಹೊರವಲಯದಲ್ಲಿ ನಡೆದಿದೆ. ಅಡ್ಡ ಬಂದ ಆಟೊ ಅಪಘಾತ ತಪ್ಪಿಸಲು ಹೋಗಿ ಅವಘಡ ಸಂಭವಿಸಿದೆ. ಆಟೋ ಢಿಕ್ಕಿ ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಡಿವೈಡರ್ ಗೆ ಗುದ್ದಿದೆ. ಗುದ್ದಿದ ರಭಸಕ್ಕೆ ಕಾರು ಸ್ಥಳದಲ್ಲಿಯೇ ಹೊತ್ತಿ ಉರಿದಿದೆ. ಹುಬ್ಬಳ್ಳಿಯಿಂದ ಸಿಂಧನೂರಿಗೆ ಹೊರಟಿದ್ದ ಸ್ವಿಫ್ಟ್ ಕಾರಿಗೆ ಬೆಂಕಿ ಹತ್ತಿದೆ.
ಇದನ್ನೂ ಓದಿ: Death: ನೇಣು ಬಿಗಿದ ಸ್ಥಿತಿಯಲ್ಲಿ ನವ ವಿವಾಹಿತೆ ಶವ ಪತ್ತೆ; ಕೂದಲು ಉದುರುವ ಸಮಸ್ಯೆ, ಯುವತಿ ಆತ್ಮಹತ್ಯೆ
ಸಂಪೂರ್ಣ ಸುಟ್ಟು ಹೋದ ಕಾರು
ಡಿಕ್ಕಿಯ ರಭಸಕ್ಕೆ ಕಾರು ಪಲ್ಟಿಯಾಗಿ ಸಂಪೂರ್ಣ ಸುಟ್ಟು ಕರಕಲಾಗಿದೆ. ಕಾರು ಪಲ್ಟಿಯಾಗುತ್ತಿದ್ದಂತೆಯೇ ಕಾರಿನಲ್ಲಿದ್ದ ನಾಲ್ವರು ತಕ್ಷಣ ಹೊರಗೆ ಬಂದು ಬಚಾವಾಗಿದ್ದಾರೆ. ಕಾರ್ ನಲ್ಲಿದ್ದ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅಣ್ಣಿಗೇರಿ ಅಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ. ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ