ಹುಬ್ಬಳ್ಳಿ(ಫೆ.02) : ಹುಬ್ಬಳ್ಳಿ - ಧಾರವಾಡದ ಬಹುನಿರೀಕ್ಷೆಯ ಬಿಆರ್ಟಿಎಸ್ ಸಾರಿಗೆ ಯೋಜನೆಗೆ ಇಂದು ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರು ಚಾಲನೆ ನೀಡಲಿದ್ದಾರೆ. ನಂತರ ಚಿಗರಿ ಬಸ್ ಗಳಿಗೆ ಹಸಿರು ನಿಶಾನೆ ತೋರುವರು.
ಏನಿದು ಬಿಆರ್ಟಿಎಸ್ ಯೋಜನೆ?
ಹುಬ್ಬಳ್ಳಿ ಧಾರವಾಡ ಅವಳಿ ನಗರ ರಾಜಧಾನಿ ಬೆಂಗಳೂರು ನಂತರ ತ್ವರಿತವಾಗಿ ಬೆಳೆಯುತ್ತಿದೆ. 22 ಕಿಲೋ ಮೀಟರ್ನ ಹುಬ್ಬಳ್ಳಿ ಧಾರವಾಡ ಕಾರಿಡಾರ್ನಲ್ಲಿ ಪ್ರತಿದಿನ ಸರಿಸುಮಾರು ಒಂದು ಲಕ್ಷ ಪ್ರಯಾಣಿಕರು ಪ್ರಯಾಣಿಸುತ್ತಾರೆ. ಹೀಗಾಗಿ ಹುಬ್ಬಳ್ಳಿ-ಧಾರವಾಡ ಮಧ್ಯ ಮೆಟ್ರೋದಂತಹ ತ್ವರಿತ ಸಾರಿಗೆಯನ್ನು ತರಬೇಕು, ಸಂಚಾರ ಸಮಸ್ಯೆಯನ್ನು ಕಡಿಮೆ ಮಾಡಬೇಕು ಎಂಬ ಕೂಗು ಹೆಚ್ಚಾಗಿತ್ತು. ಅಂದಿನ ಬಿಜೆಪಿ ಸರ್ಕಾರ, 2011 ರಲ್ಲಿ ವಿಶ್ವಬ್ಯಾಂಕ್ ಆರ್ಥಿಕ ನೆರವಿನೊಂದಿಗೆ ಬಿಆರ್ಟಿಎಸ್ ಯೋಜನೆ ಅನುಷ್ಠಾನಕ್ಕೆ ಹಸಿರು ನಿಶಾನೆ ತೋರಿಸಿತ್ತು. ಇದಕ್ಕಾಗಿ ಬಿಆರ್ಟಿಎಸ್ ಸಾರಿಗೆ ನಿಗಮವನ್ನು ಸ್ಥಾಪಿಸಲಾಗಿತ್ತು
ಯೋಜನೆಯ ಭಾಗವಾಗಿ ಹುಬ್ಬಳ್ಳಿ ಧಾರವಾಡ ನಡುವಿನ 22 ಕಿಲೋ ಮೀಟರ್ ರಸ್ತೆಯನ್ನು ಷಟ್ಪಥಗಳ ಮಾರ್ಗವನ್ನಾಗಿ ಮಾಡಲಾಗಿದೆ. ನಡುವೆ 32 ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ಇದಕ್ಕಾಗಿ 120 ಹವಾ ನಿಯಂತ್ರಿತ ಬಸ್ಗಳನ್ನು ಖರೀದಿಸಲಾಗಿದೆ. ಇವುಗಳಿಗೆ ಚಿಗರಿ ಬಸ್ ಎಂದು ನಾಮಕರಣ ಮಾಡಲಾಗಿದೆ
ಇದನ್ನೂ ಓದಿ :
ಇಮ್ಮಡಿಗೊಂಡ ಹುಬ್ಬಳ್ಳಿ ಚೆಲುವು; ಸುಸಜ್ಜಿತ ರಸ್ತೆಯಿಂದ ಕಂಗೊಳಿಸುತ್ತಿರುವ ಅವಳಿ ನಗರ
ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರು
ಬೆಳಗ್ಗೆ 7 ಗಂಟೆಗೆ ಬಾಬಾ ರಾಮದೇವ್ ಅವರ ಯೋಗ ಮತ್ತು ಧ್ಯಾನ ಶಿಬಿರ. 11:30ಕ್ಕೆ ದೇಶಪಾಂಡೆ ಪ್ರತಿಷ್ಠಾಣದ ಅಭಿವೃದ್ಧಿ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ 2:30ಕ್ಕೆ ಹೊಸೂರಿನ ಬಳಿ ಹಾಗೂ 3:30ಕ್ಕೆ ನವನಗರದಲ್ಲಿ ಬಿಆರ್ಟಿಎಸ್ ಯೋಜನೆಗೆ ಅಧಿಕೃತ ಚಾಲನೆ ನೀಡಲಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ