Hubballi: ಮಠ ತೊರೆದ ಶ್ರೀಗಳ ಮನವೊಲಿಕೆಗೆ ಇಡೀ ಊರು ಆಗಮನ: ಯಾರೂ ಈ ಸ್ವಾಮೀಜಿ?

ವ್ಯಕ್ತಿಯೊಬ್ಬನ ವರ್ತನೆಯಿಂದ ಬೇಸತ್ತು ಮಠ ತೊರೆದಿರೋ ಶಿವಕುಮಾರ ಸ್ವಾಮೀಜಿ ಮನವೊಲಿಕೆಗೆ ಊರಿಗೇ ಊರೇ ಆಗಮಿಸಿದೆ. ಆದರೂ ಭಕ್ತರ ಮನವೊಲಿಕೆಯನ್ನು ಒಪ್ಪದ ಸ್ವಾಮೀಜಿ?

ಸ್ವಾಮೀಜಿ ಮತ್ತು ಭಕ್ತರು

ಸ್ವಾಮೀಜಿ ಮತ್ತು ಭಕ್ತರು

  • Share this:
ಹುಬ್ಬಳ್ಳಿ (hubballi) - ಮನೆಯಲ್ಲಿ (home) ಜಗಳ ಮಾಡಿದರೇ ಮಕ್ಕಳು (Children) ಮನೆ ಬಿಟ್ಟು ಬರುವುದು ಸಾಮಾನ್ಯ. ಆದರೆ ಜನರಿಗೆ ಆಶೀರ್ವಾದ ನೀಡಿ, ಊರಿಗೆ ಮಾರ್ಗದರ್ಶಕರಾಗಬೇಕಿದ್ದ ಸ್ವಾಮೀಜಿ(Swamiji)ಯೊಬ್ಬರು ಮಠ (Mutt) ತೊರೆದಿದ್ದಾರೆ. ವ್ಯಕ್ತಿಯೊಬ್ಬರ ಕಾರಣದಿಂದ ಮನಸ್ಸಿಗೆ ನೋವಾಗಿರುವ ಹಿನ್ನೆಲೆಯಲ್ಲಿ ಊರನ್ನೇ ಬಿಟ್ಟು ಬಂದಿದ್ದಾರೆ. ಆ ಮಹಾ ವ್ಯಕ್ತಿಯ ಮನವೊಲಿಸಲು ಊರಿಗೆ ಊರೇ ಅವರ ಬಳಿಗೆ ಬಂದಿದೆ. ಹಾಗಿದ್ದರೇ ಯಾರು ಆ ವ್ಯಕ್ತಿ, ಅಲ್ಲಿ ನಡೆದಿದ್ದಾರೂ ಏನು ಅಂತೀರಾ ಈ ಸ್ಟೋರಿ ಓದಿ. ಹೀಗೆ ನೂರಾರು ಸಂಖ್ಯೆಯಲ್ಲಿ ಸೇರಿರುವ ಭಕ್ತ (Devotees) ಸಾಗರ. ನೀವು ಬರಲೇ ಬೇಕು ಎಂದು ಪಟ್ಟು ಹಿಡಿದ ಹಿರಿಯ ನಾಗರೀಕರು. ಇದಕ್ಕೆಲ್ಲ ಸಾಕ್ಷಿಯಾಗಿದ್ದುದು ಹುಬ್ಬಳ್ಳಿಯ ಸಿದ್ಧಾರೂಢ ಮಠದ (siddaruda Mutt hubballi)  ಆವರಣ.

ಹೌದು.. ಯಾರೋ ಭಕ್ತರು ಮಾಡಿದ ತಪ್ಪಿನಿಂದ ಸ್ವಾಮೀಜಿಯೊಬ್ಬರು ಮನಸ್ಸಿಗೆ ನೋವು ಮಾಡಿಕೊಂಡು ಸುಮಾರು ಆರು ತಿಂಗಳ ಹಿಂದೆಯೇ ಮಠವನ್ನು ಬಿಟ್ಟು ಬಂದಿದ್ದಾರೆ. ಅಣ್ಣಿಗೇರಿಯ ಶ್ರೀ ಶಿವಕುಮಾರ್ ಸ್ವಾಮೀಜಿಯೇ (Annigeri Sri Shivakumar Swamjiji) ಭಕ್ತರೊಬ್ಬರು ಮಾಡಿದ ನಿಂದನೆಯಿಂದ ಮಠ ತೊರೆದು ಹುಬ್ಬಳ್ಳಿಗೆ ಬಂದಿದ್ದಾರೆ.

ಶ್ರೀಗಳ ಮನವೊಲಿಕೆಗೆ ಇಡೀ ಊರು ಆಗಮನ

ಈಗ ಸ್ವಾಮೀಜಿಯನ್ನು ಮಠಕ್ಕೆ ಕರೆ ತರಲು ಭಕ್ತ ಸಾಗರವೇ ಹರಿದು ಬಂದಿದೆ. ಬೆಳಿಗ್ಗೆಯಿಂದಲೇ ಸ್ವಾಮೀಜಿಯವರ ಮನವೊಲಿಸಲು ಮುಂದಾಗಿದ್ದು, ಸ್ವಾಮೀಜಿಯವರನ್ನು ಕರೆದುಕೊಂಡೇ ಹೋಗುತ್ತೇವೆ ಎಂದು ಪಟ್ಟು ಹಿಡಿದಿದ್ದಾರೆ.

ಇದನ್ನೂ ಓದಿ:  ಕಾಂಗ್ರೆಸ್​​ನಲ್ಲಿದ್ದಾಗ ಡಿಕೆಶಿಯಿಂದ ಕಿರುಕುಳ ಆಗಿತ್ತು, 2023ಕ್ಕೆ ಕನಕಪುರದಿಂದ ಸ್ಪರ್ಧೆ: CP Yogeeshwara

ಯಾರೋ ಒಬ್ಬ ವ್ಯಕ್ತಿ ಮಾಡಿದ ಮೂರ್ಖತನದಿಂದಾಗಿ ಈ ರೀತಿಯ ಘಟನೆಯಾಗಿದೆ. ನಮ್ಮ ಊರಿನ ಕಲ್ಯಾಣಕ್ಕೆ ಶ್ರಮಿಸಿದ ಶ್ರೀಗಳನ್ನು ಖಂಡಿತಾ ವಾಪಸ್ ಮಠಕ್ಕೆ ಕರೆದೊಯ್ಯುತ್ತೇನೆ ಎನ್ನೋ ವಿಶ್ವಾಸದಲ್ಲಿದ್ದಾರೆ ಅಣ್ಣಿಗೇರಿ ಪಟ್ಟಣದ ಭಕ್ತರು.

6 ತಿಂಗಳ ಹಿಂದೆಯೇ ಮಠ ತೊರೆದ ಸ್ವಾಮೀಜಿ

ಇನ್ನು ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪಟ್ಟಣದ ದಾಸೋಹ ಮಠದ ಶಿವಕುಮಾರ್ ಸ್ವಾಮೀಜಿ 6 ತಿಂಗಳ ಹಿಂದೆಯೇ ಮಠ ತೊರೆದಿದ್ದರು. ಮಠದ ಆಡಳಿತ ಮಂಡಳಿಯ ವ್ಯಕ್ತಿಯಿಂದ ಸ್ವಾಮೀಜಿಗೆ ನಿಂದನೆ ಆರೋಪ ಹಿನ್ನೆಲೆಯಲ್ಲಿ ಮಠವನ್ನು ತೊರೆದಿದ್ದ ಸ್ವಾಮೀಜಿ ಹುಬ್ಬಳ್ಳಿಯ ಸಿದ್ಧಾರೂಢರ ಮಠದಲ್ಲಿ ವಾಸ್ತವ್ಯ ಹೂಡಿದ್ದಾರೆ.

ಈ ವಿಷಯ ತಿಳಿದು ಸಿದ್ಧಾರೂಢ ಮಠಕ್ಕೆ ಆಗಮಿಸಿರೋ ಭಕ್ತರು ಗುರುವಾರ ಮಠಕ್ಕೆ ಆಗಮಿಸುವಂತೆ ಸ್ವಾಮೀಜಿಯವರನ್ನು ಮನವೊಲಿಸುತ್ತಿದ್ದಾರೆ.

ಇದನ್ನೂ ಓದಿ:  Kukke Subrahmanya ಅಭಿವೃದ್ಧಿಗೆ 300 ಕೋಟಿ ರೂ ಮಾಸ್ಟರ್ ಪ್ಲಾನ್; ಹೇಗಿರಲಿದೆ ಯೋಜನೆ?

ಸ್ವಾಮೀಜಿಗಳು ಹೇಳಿದ್ದೇನು?

ಆಡಳಿತ ಮಂಡಳಿಯ ಭಕ್ತರೊಬ್ಬರಿಂದ ನೋವು ಆಗಿರುವುದರಿಂದ ಸ್ವಾಮೀಜಿಯವರು ಸಾಕಷ್ಟು ಬೇಸರಗೊಂಡಿದ್ದಾರೆ. ಮಠಕ್ಕೆ ಒಳ್ಳೆಯದಾಗಬೇಕೆಂದು 15 ವರ್ಷಗಳಿಂದ ಶ್ರಮಿಸಿದೆ. ಆದರೆ ಯಾರೋ ಒಬ್ಬ ವ್ಯಕ್ತಿಯಿಂದ ಅಪಮಾನಕ್ಕೀಡಾದೆ. ನನ್ನ ಕಾರ್ಯಗಳಿಗೂ ತೊಂದರೆಯಾಯಿತು. ಇದೆಲ್ಲವೂ ಭಕ್ತರಿಗೆ ಮನವರಿಕೆಯಾಗಲಿ, ಯಾರು ಮಾಡಿದ್ದಾರೋ ಅನ್ನೋದು ಗೊತ್ತಾಗಲಿ ಅಂತಾ ಮಠ ಬಿಟ್ಟು ಬಂದಿದ್ದೇನೆ.

ಮಠದ ಕಲ್ಯಾಣ ಕೆಲಸಗಳು ಮುಂದುವರೆಯಬೇಕೆಂಬುದೇ ನನ್ನ ಇಚ್ಛೆಯಾಗಿದೆ. ಭಕ್ತರು ಏನು ಹೇಳ್ತಾರೋ ಅದರ ಪ್ರಕಾರ ನಡೆದುಕೊಳ್ಳೋದಾಗಿ ಶಿವಕುಮಾರ್ ಸ್ವಾಮೀಜಿ ತಿಳಿಸಿದ್ದಾರೆ.

ಮಠಕ್ಕೆ ಹಿಂದಿರುಗಲು ಒಪ್ಪದ ಸ್ವಾಮೀಜಿ

ಭಕ್ತರ ಸತತ ಮನವೊಲಿಕೆಯ ನಂತರವೂ ಮಠಕ್ಕೆ ವಾಪಸ್ಸಾಗೋಕೆ ಶ್ರೀಗಳು ಒಪ್ಪಿಲ್ಲ. ಒಟ್ಟಿನಲ್ಲಿ ಮಠವನ್ನು ಮಾತ್ರವಲ್ಲದೆ ಊರಿನ ಉದ್ಧಾರಕ್ಕಾಗಿ ಶ್ರಮಿಸಿದ ಸ್ವಾಮೀಜಿ ಕಾರ್ಯಕ್ಕೆ ಊರಿಗೆ ಊರೇ ಮನವೊಲಿಸಲು ಬಂದಿದ್ದಾರೆ.

ಕರೆದುಕೊಂಡು ಹೋಗುವ ಹುಮ್ಮಸ್ಸಿನಲ್ಲಿ ಭಕ್ತರು

ದಾಸೋಹ ಮಠದಲ್ಲಿ ಜ್ಞಾನ ದಾಸೋಹದ ಮೂಲಕ ಅಣ್ಣಿಗೇರಿ ಪಟ್ಟಣವನ್ನು ಶ್ರೀಮಂತಗೊಳಿಸಿದ ಸ್ವಾಮೀಜಿಯವರ ಆಗಮನಕ್ಕೆ ಊರಿಗೆ ಊರೇ ಎದುರು ನೋಡುತ್ತಿದೆ. ಅವರ ಮನವೊಲಿಕೆಯೊಂದಿಗೆ ಮಠಕ್ಕೆ ವಾಪಸ್ ಕರೆದುಕೊಂಡು ಹೋಗೋ ಹುಮ್ಮಸ್ಸಿನಲ್ಲಿದ್ದಾರೆ ಭಕ್ತರು.
Published by:Mahmadrafik K
First published: