Corona Vaccine: ಗ್ಯಾರಂಟಿ ಕೊಡ್ತೀರಾ ಎಂದ ವ್ಯಕ್ತಿ : ತಾವೇ ಖುದ್ದು ಲೆಟರ್ ನೀಡಿ ವ್ಯಾಕ್ಸಿನ್ ಹಾಕಿಸಿದ ಡಿಸಿ ಪಾಟೀಲ

ಕೋವಿಡ್ ಲಸಿಕೆಗೆ ಗ್ಯಾರಂಟಿ ಕೊಡ್ತೀರಾ ಎಂದು ಅಧಿಕಾರಿಗಳನ್ನೇ ತಬ್ಬಿಬ್ಬು ಮಾಡಿದ ವ್ಯಕ್ತಿಗೆ ಸ್ವತಹ ಧಾರವಾಡ ಡಿಸಿ ಲೆಟರ್ ಕೊಟ್ಟು, ಸ್ಥಳದಲ್ಲಿಯೇ ವ್ಯಾಕ್ಸಿನ್ ಹಾಕಿಸಿ, ಮನೆ ಮನೆಗೂ ತೆರಳಿ ಲಸಿಕೆ ಹಾಕಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ. ಧಾರವಾಡದಲ್ಲಿ ದಿಢೀರ್ ಏರಿಕೆಯಾಗಿರೋ ಕೋವಿಡ್ ನಿಯಂತ್ರಣಕ್ಕೆ ತುರ್ತು ಕ್ರಮ ಕೈಗೊಂಡಿದ್ದಾರೆ.

ಹುಬ್ಬಳ್ಳಿ

ಹುಬ್ಬಳ್ಳಿ

  • Share this:
ಹುಬ್ಬಳ್ಳಿ - ಲಸಿಕೆಗೆ ಗ್ಯಾರಂಟಿ ಪತ್ರ ಪಡೆದು ವ್ಯಕ್ತಿಯೋರ್ವ ಕೋವಿಡ್ ವ್ಯಾಕ್ಸಿನ್ (Corona Vaccine) ಹಾಕಿಸಿಕೊಂಡ ವಿಚಿತ್ರ ಘಟನೆ ಹುಬ್ಬಳ್ಳಿಯಲ್ಲಿ (Hubballi) ನಡೆದಿದೆ. ಸ್ವತH ಡಿಸಿ ನಿತೇಶ್ ಪಾಟೀಲರೇ ಗ್ಯಾರಂಟಿ ಪತ್ರಕ್ಕೆ ಸಹಿ ಹಾಕಿದ ನಂತ್ರ ವ್ಯಕ್ತಿ ವ್ಯಾಕ್ಸಿನ್ ಹಾಕಿಸಿಕೊಂಡಿದ್ದಾನೆ. ಕೊರೋನಾ ಮೂರನೇ ಅಲೆಯ  (Corona Third Wave)ಬರುವ ಆತಂಕ ಜನರನ್ನು ಕಾಡುತ್ತಿದೆ.‌ ಇದರ ಮಧ್ಯೆ ಎರಡು ಡೋಸ್ ಪಡೆದವರಿಗೂ ಕೊರೊನಾ ಪಾಸಟಿವ್ ಬಂದಿದ್ದು, ಲಸಿಕೆ (Vaccine) ಮೇಲೆ ವಿಶ್ವಾಸಾರ್ಹತೆಯನ್ನು ಹುಬ್ಬಳ್ಳಿಯ ವ್ಯಕ್ತಿಯೊಬ್ಬರು ಪ್ರಶ್ನಿಸಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚಳ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ನಿತೀಶ್ ಪಾಟೀಲ್ ನೇತೃತ್ವದಲ್ಲಿ ತುರ್ತು ಸಭೆ ಕರೆಯಲಾಗಿತ್ತು. ಹುಬ್ಬಳ್ಳಿ ಪಾಲಿಕೆ ಕಚೇರಿಯಲ್ಲಿ ಕರೆದ ಸಭೆಯಲ್ಲಿ ಶಾಫಿಂಗ್ ಮಾಲ್, ಜಿಮ್, ಬಾರ್ ಆಂಡ್ ರೆಸ್ಟೋರೆಂಟ್, ಮಲ್ಟಿಪ್ಲೆಕ್ಸ್, ಸಿನಿಮಾ ಮಂದಿರಗಳ ಮಾಲೀಕರು, ಧಾರ್ಮಿಕ ಮುಖಂಡರು ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಆನಂದ ಕುಂದನೂರು ಎಂಬ ವ್ಯಕ್ತಿ ಜಿಲ್ಲಾಧಿಕಾರಿಗೆ ಲಸಿಕೆ ಗ್ಯಾರೆಂಟಿ ಕೇಳಿದರು.

ನನಗೇನು ಆಗವುದಿಲ್ಲವೆಂದು ಬರೆದು ಕೊಡಿ. ಆವಾಗ ಬೇಕಿದ್ರೆ ಲಸಿಕೆ ಹಾಕಿಸಿಕೊಳ್ತೇನೆ. ಏನಾದ್ರೂ ಆದ್ರೆ ಯಾರು ಜವಾಬ್ದಾರರು. ಲಸಿಕೆ ಹಾಕಿಸಿಕೊಂಡ ನಂತ್ರ ಏನಾದ್ರು ಆದ್ರೆ ಏನ್ ಗತಿ ಎಂದು ವ್ಯಕ್ತಿ ಪ್ರಶ್ನೆ ಹಾಕಿದ. ವ್ಯಕ್ತಿಯ ಪ್ರಶ್ನೆಗೆ ಅಲ್ಲಿದ್ದ ಅಧಿಕಾರಿಗಳು ಒಂದು ಕ್ಷಣ ತಬ್ಬಿಬ್ಬಾಗಿದ್ದಾರೆ.

ಗ್ಯಾರೆಂಟಿ ಪತ್ರ ಬರೆದುಕೊಟ್ಟ ಜಿಲ್ಲಾಧಿಕಾರಿ

ಕೂಡಲೇ ಬರೆದುಕೊಂಡುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ‌ ಸೂಚನೆ ನೀಡಿದಲ್ಲದೇ ನಾನು ಸಹಿ ಮಾಡಿಕೊಡ್ತೇನೆ. ನೀವು ವ್ಯಾಕ್ಸಿನ್ ಹಾಕಿಸಿಕೊಳ್ಳಿ ಎಂದರು. ವ್ಯಕ್ತಿಗೆ ಗ್ಯಾರೆಂಟಿ ಪತ್ರ ಬರೆದುಕೊಟ್ಟು ಸಭೆಯಲ್ಲೇ ವ್ಯಕ್ತಿಗೆ ಲಸಿಕೆ ಹಾಕಿಸಿದರು.

ಡಿ.ಸಿ ನಿತೇಶ ಪಾಟೀಲ್, ಪಾಲಿಕೆ ಆಯುಕ್ತ ಸುರೇಶ ಇಟ್ನಾಳ ಸೇರಿದಂತೆ ಪಾಲಿಕೆ ಅಧಿಕಾರಿಗಳ ಸಮ್ಮುಖದಲ್ಲೇ ವ್ಯಕ್ತಿ  ಲಸಿಕೆ ಪಡೆದುಕೊಂಡರು.

ಇದನ್ನೂ ಓದಿ:  Coronavirus: ಆನೇಕಲ್ ತಾಲ್ಲೂಕಿನ 2 ಖಾಸಗಿ ಶಾಲೆಗಳಲ್ಲಿ ಕೊರೋನಾ ಸ್ಫೋಟ; 46 ಮಂದಿಯಲ್ಲಿ ಸೋಂಕು ಪತ್ತೆ!

ಕೊರೊನಾ ನಿಯಮ ಪಾಲಿಸುವಂತೆ ಎಚ್ಚರಿಕೆ

ಇದೇ ವೇಳೆ ನಡೆದ ಸಭೆಯಲ್ಲಿ ಕೊವಿಡ್ ಮಾರ್ಗಸೂಚಿ ಕಟ್ಟುನಿಟ್ಟಿನ ಪಾಲನೆ ಕುರಿತು ಸಮಾಲೋಚಿಸಲಾಯಿತು. ಎರಡೂ ಡೋಸ್ ಹಾಕಿಸಿಕೊಂಡವರಿಗೆ ಸಿನೆಮಾ ಮಂದಿರದೊಳಗೆ ಬಿಡುವಂತೆ ಜಿಲ್ಲಾಧಿಕಾರಿಗಳು ಸಲಹೆ ನೀಡಿದರು.

DC Nitesh Patik gives guarantee certificate for Corona Vaccine in Hubballi
ವ್ಯಾಕ್ಸಿನ್ ಪಡೆದ ವ್ಯಕ್ತಿ


ನಿಯಮ ಉಲ್ಲಂಘಿಸಿದ್ರೆ ಕಠಿಣ ಕ್ರಮ ಕೈಗೊಳ್ಳೋದಾಗಿ ಡಿಸಿ ಎಚ್ಚರಿಕೆ ನೀಡಿದರು. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಹಾಕಿಕೊಂಡು ಅಡ್ಡಾಡುವ, ಸಾಮಾಜಿಕ ಅಂತರ ಕಾಪಾಡುವ ಇತ್ಯಾದಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಿದೆ.

ಧಾರವಾಡ ನಗರದಲ್ಲಿ ವ್ಯಾಕ್ಸಿನ್ ಪ್ರಮಾಣ ಹೆಚ್ಚಿದೆ. ಆದರೆ ಹುಬ್ಬಳ್ಳಿಯಲ್ಲಿ ವ್ಯಾಕ್ಸಿನ್ ಪ್ರಮಾಣ ಕಡಿಮೆಯಾಗಿದೆ. ಶೇ. 100 ರಷ್ಟು ಗುರಿ ಸಾಧನೆಗೆ ಸಾರ್ವಜನಿಕರು ಸಹಕಾರ ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ಮನೆ ಮನೆಗೂ ವ್ಯಾಕ್ಸಿನ್ ಹಾಕೋ ಕಾರ್ಯವನ್ನೂ ಮಾಡುತ್ತಿದ್ದೇವೆ ಎಂದು ಡಿಸಿ ನಿತೇಶ್ ಪಾಟೀಲ ತಿಳಿಸಿದ್ದಾರೆ.

ಇದನ್ನೂ ಓದಿ:  Omicron ಆತಂಕ.. ಮೈಸೂರಿಗೆ ಹೊಂದಿಕೊಂಡಿರುವ ಕೇರಳ ಗಡಿಯಲ್ಲಿ ಹೈ ಅಲರ್ಟ್: ಯಾವೆಲ್ಲಾ ನಿಯಮ ಪಾಲಿಸಬೇಕು?

ಕೊರೋನಾ ದಿಢೀರ್ ಸ್ಫೋಟಕ್ಕೆ ನೆರೆ ರಾಜ್ಯಗಳು ಮೂಲ

ಧಾರವಾಡ ಎಸ್ ಡಿ ಎಂ ಕಾಲೇಜಿನಲ್ಲಿ ದಿನೇ ದಿನೇ ಕೋವಿಡ್ ಏರಿಕೆಯಾಗುತ್ತಿದ್ದು, ಇದಕ್ಕೆ ಮೂಲ ಕಾರಣ ನೆರೆ ರಾಜ್ಯ ವಿದ್ಯಾರ್ಥಿಗಳೆಂಬುದು ಬೆಳಕಿಗೆ ಬಂದಿದೆ. ಧಾರವಾಡ ಜಿಲ್ಲೆಯಲ್ಲಿ ಕೋವಿಡ್ ಪ್ರಮಾಣ ಜೀರೋ ಇತ್ತು. ಎಸ್.ಡಿ.ಎಂ. ಘಟನೆಯಿಂದ ದಿಢೀರ್ ಏರಿಕೆಯಾಗಿದೆ.

ಎಸ್.ಡಿ.ಎಂ. ನಲ್ಲಿ ಓದುತ್ತಿರೋ ನೆರೆ ರಾಜ್ಯದ ವಿದ್ಯಾರ್ಥಿಗಳಿಂದ ಸೋಂಕು ಹರಡಿದೆ. ಕೇರಳದ ಇಬ್ಬರು ಹಾಗೂ ಮಹಾರಾಷ್ಟ್ರ ದ ಓರ್ವ ವಿದ್ಯಾರ್ಥಿಯಿಂದ ಕೋವಿಡ್ ಹರಡೋಕೆ ಆರಂಭಗೊಂಡು, ಇದೀಗ ವ್ಯಾಪಕ ಸ್ವರೂಪ ಪಡೆದುಕೊಂಡಿದೆ.

ರೂಪಾಂತರಿ  ಕೊರೋನಾ ವೈರಸ್ ಅಲ್ಲ

ಕಾಲೇಜಿನಲ್ಲಿ ಓದುತ್ತಿರುವ ನೆರೆ ರಾಜ್ಯದ ವಿದ್ಯಾರ್ಥಿಗಳು ತಮ್ಮ ರಾಜ್ಯಕ್ಕೆ ಹೋಗಿ ಬಂದಿದ್ದಾರೆ. ಈ ಪೈಕಿ ಕೇರಳದ ಇಬ್ಬರು ಮತ್ತು ಮಹಾರಾಷ್ಟ್ರದ ಓರ್ವ ವಿದ್ಯಾರ್ಥಿಯಿಂದ ಕೋವಿಡ್ ಸೋಂಕು ಆರಂಭಗೊಂಡಿದೆ. ಅಂತಹ ವಿದ್ಯಾರ್ಥಿಗಳನ್ನು ಐಸೋಲೇಟ್ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಇದು ರೂಪಾಂತರಿ ಕೊರೋನಾ ವೈರಸ್ ಅಲ್ಲ. ಸದ್ಯ ಎಸ್ ಡಿ ಎಂ ಕಾಲೇಜಿನಲ್ಲಿ ಯಾವುದೇ ಹೊಸ ಪ್ರಕರಣ ಬಂದಿಲ್ಲ.

ಕಿಮ್ಸ್ ವೈದ್ಯಕೀಯ ಕಾಲೇಜಿನಲ್ಲಿ ಯಾವುದೇ ಪ್ರಕರಣ ಕಂಡುಬಂದಿಲ್ಲ. ಕಿಮ್ಸ್ ಕಾಲೇಜಿನಲ್ಲಿಯೂ ಯಾವುದೇ ಪ್ರಕರಣ ಕಂಡುಬಂದಿಲ್ಲ. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಹುಬ್ಬಳ್ಳಿ - ಧಾರವಾಡದ ಎಲ್ಲ ಕಾಲೇಜುಗಳಲ್ಲಿಯೂ ರಾಂಡಮ್ ಟೆಸ್ಟ್ ಗೆ ಸೂಚಿಸಲಾಗಿದೆ ಎಂದು ಡಿಸಿ ನಿತೇಶ್ ಪಾಟೀಲ ತಿಳಿಸಿದ್ದಾರೆ.

ವರದಿ - ಶಿವರಾಮ ಅಸುಂಡಿ.
Published by:Mahmadrafik K
First published: