ಹುಬ್ಬಳ್ಳಿ - ಧಾರವಾಡ ಜಿಲ್ಲೆಯಲ್ಲಿ ಕೊರೋನಾ ಅಬ್ಬರ ತುಸು ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಅನ್ಲಾಕ್ ಪ್ರಕ್ರಿಯೆ ಆರಂಭಗೊಂಡಿದೆ. ಆದರೆ ಸೋಂಕಿನ ಭಯ ಇನ್ನೂ ದೂರವಾಗಿಲ್ಲ, ಇಂದು ಅದೇ ಭೀತಿಗೆ ವೃದ್ಧನೊಬ್ಬ ಬಲಿಯಾಗಿದ್ದಾನೆ. ಸೋಂಕಿಗೆ ಒಳಗಾಗಿದ್ದರಿಂದ ಆತಂಕಕ್ಕೆ ಒಳಗಾದ ವೃದ್ಧ ಕಿಮ್ಸ್ ಆಸ್ಪತ್ರೆಯ ಶೌಚಾಲಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹುಬ್ಬಳ್ಳಿಯ ರಣದಂಬ ಕಾಲೋನಿಯ 78 ವರ್ಷದ ವೃದ್ಧ ಸಾವಿಗೆ ಶರಣಾಗಿದ್ದಾರೆ. ಸಿಬ್ಬಂದಿ ಹಾಗೂ ಸಂಬಂಧಿಕರ ಕಣ್ತಪ್ಪಿಸಿ . ಮಧ್ಯರಾತ್ರಿ ಶೌಚಾಲಯದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಹುಬ್ಬಳ್ಳಿಯ ರಣದಂಬ ಕಾಲೋನಿಯ 78 ವರ್ಷದ ವೃದ್ದ ಆತ್ಮಹತ್ಯೆ ಮಾಡಿಕೊಂಡ ಸೋಂಕಿತನಾಗಿದ್ದಾನೆ. ಹುಬ್ಬಳ್ಳಿಯ ಕಿಮ್ಸ್ ವಾರ್ಡ ನಂ 303 ರಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ವಿದ್ಯಾನಗರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ಮಾಡಿದ್ದಾರೆ. ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಕೊರೋನಾ ಅಬ್ಬರ ತುಸು ಇಳಿಕೆಯಾದ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲೆಯಲ್ಲಿ ಇಂದಿನಿಂದ ಅನ್ ಲಾಕ್ ಪ್ರಕ್ರಿಯೆ ಆರಂಭಗೊಂಡಿದೆ. ಹಂತ ಹಂತವಾಗಿ ಅನ್ ಲಾಕ್ ಜಾರಿಗೆ ಜಿಲ್ಲಾಡಳಿತ ಮುಂದಾಗಿದೆ. ಬೆಳಿಗ್ಗೆ 6 ಗಂಟೆಯಿಂದ ಮದ್ಯಾಹ್ನ 2 ಗಂಟೆವರೆಗೆ ಖರೀದಿಗೆ ಅವಕಾಶ ನೀಡಲಾಗಿದೆ. ಕಿರಾಣಿ, ತರಕಾರಿ, ಹಣ್ಣು, ಹಾಲು, ಮಾಂಸ ಇತ್ಯಾದಿಗಳ ಖರೀದಿಗೆ ಅವಕಾಶ ನೀಡಲಾಗಿದೆ. ಮದ್ಯ ಮಾರಾಟಕ್ಕೂ ಮದ್ಯಾಹ್ನದವರೆಗೆ ಅವಕಾಶ ಕಲ್ಪಿಸಲಾಗಿದೆ. ಕಟ್ಟಡ ನಿರ್ಮಾಣದ ವಸ್ತುಗಳ ಅಂಗಡಿಗಳ ಓಪನ್ ಗೆ ಅವಕಾಶ ನೀಡಲಾಗಿದೆ. ವಾಯು ವಿಹಾರಕ್ಕೆ ಬೆಳಿಗ್ಗೆ 5 ರಿಂದ 10 ಗಂಟೆವರೆಗೆ ಅವಕಾಶ ಕೊಡಲಾಗಿದೆ. ಆಟೋ ಮತ್ತು ಕ್ಯಾಬ್ ಗಳಲ್ಲಿ ಗರಿಷ್ಟ ಇಬ್ಬರನ್ನು ಕೂಡಿಸಿಕೊಂಡು ಹೋಗಲು ಅವಕಾಶ ನೀಡಲಾಗಿದೆ.
ಇದನ್ನೂ ಓದಿ : Sanchari Vijay Mistake: ಕೊನೆ ಕ್ಷಣದಲ್ಲಿ ಸಂಚಾರಿ ವಿಜಯ್ ಅದೊಂದು ತಪ್ಪು ಮಾಡದಿದ್ದರೆ ಅನಾಹುತ ತಪ್ಪುತ್ತಿತ್ತು!
ಕೈಗಾರಿಕೆಗಳಲ್ಲಿ ಶೇ. 50 ರಷ್ಟು ಕಾರ್ಮಿಕರೊಂದಿಗೆ ಕಾರ್ಯನಿರ್ವಹಿಸಲು ಗ್ರೀನ್ ಸಿಗ್ನಲ್ ಸಿಕ್ಕಿದೆ. ಸರ್ಕಾರಿ ಕಛೇರಿಗಳಿಗೂ ಶೇ. 50 ರಷ್ಟು ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಣೆಗೆ ಅವಕಾಶ ಕೊಡಲಾಗಿದೆ. ಅನ್ ಲಾಕ್ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಜನ ಮಾರುಕಟ್ಟೆಗಳ ಕಡೆ ಮುಖಮಾಡಿದ್ದಾರೆ. ವಾಹನಗಳ ಓಡಾಟವೂ ಹೆಚ್ಚಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ