ಯಡಿಯೂರಪ್ಪ ಯುಗಾಂತ್ಯ - ಬೊಮ್ಮಾಯಿ ರಬ್ಬರ್ ಸ್ಟಾಂಪ್ ಸಿಎಂ: ಕಾಂಗ್ರೆಸ್ ಲೇವಡಿ

ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದರೊಂದಿಗೆ ಯಡಿಯೂರಪ್ಪ ಯುಗ ಅಂತ್ಯವಾಗಿದೆ. ಇದೇ ಸಂದರ್ಭದಲ್ಲಿ ಮಧು ಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆಗೊಂಡು ಉಜ್ವಲ ಭವಿಷ್ಯದತ್ತ ಹೆಜ್ಜೆ ಇಟ್ಟಿದ್ದಾರೆ

ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದರೊಂದಿಗೆ ಯಡಿಯೂರಪ್ಪ ಯುಗ ಅಂತ್ಯವಾಗಿದೆ. ಇದೇ ಸಂದರ್ಭದಲ್ಲಿ ಮಧು ಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆಗೊಂಡು ಉಜ್ವಲ ಭವಿಷ್ಯದತ್ತ ಹೆಜ್ಜೆ ಇಟ್ಟಿದ್ದಾರೆ

ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದರೊಂದಿಗೆ ಯಡಿಯೂರಪ್ಪ ಯುಗ ಅಂತ್ಯವಾಗಿದೆ. ಇದೇ ಸಂದರ್ಭದಲ್ಲಿ ಮಧು ಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆಗೊಂಡು ಉಜ್ವಲ ಭವಿಷ್ಯದತ್ತ ಹೆಜ್ಜೆ ಇಟ್ಟಿದ್ದಾರೆ

  • News18
  • Last Updated :
  • Share this:
ಹುಬ್ಬಳ್ಳಿ (ಜು. 30): ಯಡಿಯೂರಪ್ಪ ರಾಜೀನಾಮೆ ನೀಡಿ, ಬಸವರಾಜ ಬೊಮ್ಮಾಯಿ ನೂತನ ಸಿಎಂ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಇದರ ಬೆನ್ನ ಹಿಂದೆಯೇ ಕಾಂಗ್ರೆಸ್ ಸಂಘಟನಾ ಸಭೆಗಳನ್ನು ಆರಂಭಿಸಿದೆ. ಸಭೆಯಲ್ಲಿ ಭಾಗವಹಿಸಲು ಆಗಮಿಸಿದ್ದ ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಯಡಿಯೂರಪ್ಪ ಯುಗಾಂತ್ಯವಾಗಿ ಎಂದಿರೋ ನಾಯಕರು, ಬೊಮ್ಮಾಯಿ ರಬ್ಬರ್ ಸ್ಟಾಂಪ್ ಸಿಎಂ ಎಂದು ಲೇವಡಿ ಮಾಡಿದ್ದಾರೆ. ಯಾವುದೇ ಸಂದರ್ಭದಲ್ಲಿಯಾದ್ರೂ ಮಧ್ಯಂತರ ಚುನಾವಣೆ ಬರಹುದೆಂಬ ಲೆಕ್ಕಾಚಾರದಲ್ಲಿ ಈಗಿನಿಂದ್ಲೇ ಪಕ್ಷದ ಸಂಘಟನೆ ಮಾಡಲು ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ. ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದರೊಂದಿಗೆ ಯಡಿಯೂರಪ್ಪ ಯುಗ ಅಂತ್ಯವಾಗಿದೆ. ಇದೇ ಸಂದರ್ಭದಲ್ಲಿ ಮಧು ಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆಗೊಂಡು ಉಜ್ವಲ ಭವಿಷ್ಯದತ್ತ ಹೆಜ್ಜೆ ಇಟ್ಟಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

ಹುಬ್ಬಳ್ಳಿಯ ಗೋಕುಲ್ ಗಾರ್ಡನ್ ನಲ್ಲಿ ನಡೆದ ವಿಭಾಗ ಮಟ್ಟದ ಸಭೆಯಲ್ಲಿ ಮಾಜಿ ಶಾಸಕ ಮಧು ಬಂಗಾರಪ್ಪ ಅವರನ್ನು ಕಾಂಗ್ರೆಸ್ ಗೆ ಬರಮಾಡಿಕೊಂಡ ನಂತರ ಮಾತನಾಡಿದ ಅವರು, ಬಂಗಾರಪ್ಪ ಅವರು ಸೇರ್ಪಡೆಗೊಂಡ ನಂತ್ರ ಬಿಜೆಪಿ ರಾಜ್ಯದಲ್ಲಿ ಉತ್ತಮ ಸಾಧನೆ ಮಾಡಲಾರಂಭಿಸಿತು. ಬಿಜೆಪಿ ಈ ಮಟ್ಟಕ್ಕೆ ಬೆಳೆಯಲು ಬಂಗಾರಪ್ಪ ಅವರೂ ಕಾರಣ. ಶಿವಮೊಗ್ಗ ಜಿಲ್ಲೆಯವರೇ ಆದ ಯಡಿಯೂರಪ್ಪ ರಾಜಕೀಯ ಯುಗಾಂತ್ಯವಾಗಿದೆ. ಅದೇ ಜಿಲ್ಲೆಯವರಾದ ಮಧು ಬಂಗಾರಪ್ಪ ಅವರ ಉಜ್ವಲ ಭವಿಷ್ಯ ಕಾಂಗ್ರೆಸ್ ಸೇರ್ಪಡೆಯೊಂದಿಗೆ ಆರಂಭಗೊಂಡಿದೆ. ಬಂಗಾರಪ್ಪ ಅವರ ಅಭಿಮಾನಿಗಳು ರಾಜ್ಯಾದ್ಯಂತ ಇದಾರೆ. ಅವರನ್ನು ಒಟ್ಟುಗೂಡಿಸಿ ಕಾಂಗ್ರೆಸ್ ಕರೆತರೊ ಮೂಲಕ ಪಕ್ಷ ಬಲವರ್ಧನೆಗೆ ಮಧು ಬಂಗಾರಪ್ಪಗೆ ಸಿದ್ಧರಾಮಯ್ಯ ಕರೆ ನೀಡಿದರು.

ರಬ್ಬರ್ ಸ್ಟಾಂಪ್ ಸಿಎಂ ಎಂದು ಲೇವಡಿ....

ನಂತರ  ಮಾತನಾಡಿದ ಸಿದ್ಧರಾಮಯ್ಯ, ಬಸವರಾಜ ಬೊಮ್ಮಾಯಿ ರಬ್ಬರ್ ಸ್ಟ್ಯಾಂಪ್ ಸಿಎಂ ಎಂದು ಲೇವಡಿ ಮಾಡಿದರು. ಇಲ್ಲಾಂದ್ರೆ ಅವರರ್ಯಾಕೆ ಪದೇ ಪದೇ ಅದನ್ನೇ ಹೇಳಬೇಕು ಎಂದು ಪ್ರಶ್ನಿಸಿದ್ದಾರೆ. ಪ್ರವಾಹ ಸಂದರ್ಭದಲ್ಲಿ ಬಿಜೆಪಿಯವರು ಅಧಿಕಾರಕ್ಕಾಗಿ ಓಡಾಡುತ್ತಿದ್ದಾರೆ. ಕಾಟಾಚಾರಕ್ಕೆ  ಬೊಮ್ಮಾಯಿ ಉತ್ತರ ಕನ್ನಡ ಪ್ರವಾಸ ಮಾಡಿದ್ದಾರೆ. ರಾಜ್ಯದ ಐದಾರು ಜಿಲ್ಲೆಯಲ್ಲಿ ನೆರೆ ಬಂದಿದೆ. ಬರೀ ಉತ್ತರ ಕನ್ನಡಕ್ಕೆ ಹೋಗಿ ಪರಿಹಾರ ಕೊಡ್ತಿನಿ ಅಂತ ದೆಹಲಿ ಹೋಗಿದ್ದಾರೆ. ಇಲ್ಲಿ ಯಾರು ಮಂತ್ರಿಗಳಿಲ್ಲ. ರಾಜ್ಯದ ಜನರಿಗೆ ದ್ರೋಹ ಮಾಡ್ತಿದ್ದಾರೆ.

ಇದನ್ನು ಓದಿ: ವಾರದೊಳಗೆ ಸಂಪುಟ ರಚನೆಯಾಗಬಹುದು; ಸಿಎಂ ಬಸವರಾಜ ಬೊಮ್ಮಾಯಿ

ಇವರಿಗೆ ಜನರ ಹಿತ ಮುಖ್ಯ ಅಲ್ಲ. ದೆಹಲಿಗೆ ಹೋಗಿ ನೆರೆ ಪರಿಹಾರ ಕೇಳಬೇಕು. ಕೂಡಲೇ ಮಂತ್ರಿ ಮಂಡಲ ಮಾಡೋ ಬಗ್ಗೆ ಕೇಳಬೇಕು. ಇಲ್ಲಿ ಜಿಲ್ಲಾ ಮಂತ್ರಿಗಳಿಲ್ಲ. ಇಂತಹ ಕೆಟ್ಟ ಪರಸ್ಥಿತಿ ರಾಜ್ಯದಲ್ಲಿ ಎಂದು ಬಂದಿಲ್ಲ. ಸಿಎಂ ಘೋಷಣೆ ಮಾಡಿದ್ರು, ವೃದ್ದಾಪ್ಯ ವೇತನ, ರೈತರ ಮಕ್ಕಳಿಗೆ ಸ್ಕಾಲರ್ ಶಿಪ್ ಹೇಳಿದ್ರು. ಹಣ ಎಲ್ಲಿದೆ, ಸರ್ಕಾರ ದಿವಾಳಿಯಾಗಿದೆ.

ಬೊಮ್ಮಾಯಿಯವರಿಗೆ ಸರ್ಕಾರ ನಡೆಸೋದು ಕಷ್ಟ ಇದೆ. ಯಾಕೆಂದ್ರೆ ನಮ್ಮಲ್ಲಿ ದುಡ್ಡೇ ಇಲ್ಲ, ಇಲಾಖೆಯ ಹಣ ಕಟ್ ಮಾಡಿ ಅಂತ ಹೇಳಿದ್ದಾರೆ. ಅದು ಬಿಟ್ಟು ರಾಜ್ಯಕ್ಕೆ ನ್ಯಾಯುತವಾಗಿ ಬರಬೇಕಾದ ಜಿ.ಎಸ್.ಟಿ, ನೆರೆ ಪರಿಹಾರ ಕೇಳಬೇಕೆಂದು ಆಗ್ರಹಿಸಿದರು.

ಬಿಜೆಪಿಗೆ ಕೇವಲ ಪವರ್ ಬೇಕಿದೆ ಎಂದ ಡಿಕೆಶಿ...

ಬಿಜೆಪಿಯವರು ಬಹಳ ಅರ್ಜೆಂಟ್ ನಲ್ಲಿದ್ದಾರೆ. ಅವರಿಗೆ ರಾಜ್ಯದ ಜನರ ಹಿತ ಮುಖ್ಯವಲ್ಲ, ಕೇವಲ ಪವರ್ ಬೇಕಾಗಿದೆ‌ ಎಂದು ರಾಜ್ಯ ಸರ್ಕಾರದ ವಿರುದ್ದ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ವಾಗ್ದಾಳಿ ನಡೆಸಿದರು, ಹೋದ ಬಾರಿಯ ನೆರೆಯ ಪರಿಹಾರವೇ ಸಿಕ್ಕಿಲ್ಲ. ಅವರೇನು ಮಾಡಲಿಲ್ಲ, ಮನೆ ಬಿದ್ದಿದಕ್ಕೆ ಪರಿಹಾರ ಕೊಡ್ತಿನಿ ಅಂದಿದ್ರು ಏನು ಕೊಟ್ಟಿಲ್ಲ. ಕೇಂದ್ರ ಸರ್ಕಾರ ಕೊಡಲಿಲ್ಲ, ರಾಜ್ಯ ಸರ್ಕಾರದ ಬಳಿ ದುಡ್ಡಿಲ್ಲ. ಅವರೆಲ್ಲಾ ಪ್ರವಾಸ ಮಾಡ್ಕೊಂಡು ರೆಸ್ಟ್ ತೊಗೊಳ್ಳಲಿ. ಜನ ಕಾಯ್ತಿದ್ದಾರೆ, ಮತದಾರ ಕಾಯ್ಕೊಂಡು ನಿಂತಿದ್ದಾರೆ. ಅವರು ಓಟ್ ಮಾಡುವಾಗ ತೋರಿಸುತ್ತಾರೆ. ನಾನು ಈ ಹಿಂದೆ ಅಸೆಂಬ್ಲೀಲಿ ಹೇಳಿದ್ದೇನೆ ಅದನ್ನ ರಿಪೀಟ್ ಮಾಡಿ ನೋಡಿ. ಬೊಮ್ಮಾಯಿ ಸಂಪುಟ ಸೇರಲ್ಲ ಎಂಬ ಶೆಟ್ಟರ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿಕೆಶಿ, ಅದು ಅವರ ಪಾರ್ಟಿಯ ಆಂತರಿಕ ವಿಚಾರ ಎಂದು ಸುಮ್ಮನಾದರು.
Published by:Seema R
First published: