ಕಾಂಗ್ರೆಸ್​ನ ಗಿರೀಶ್ ಗದಿಗೆಪ್ಪಗೌಡಗೆ Drug Mafia ನಂಟು: ಹೆಂಡತಿಯಿಂದಲೇ ಸ್ಫೋಟಕ ಮಾಹಿತಿ

ಕಾಂಗ್ರೆಸ್ ಮುಖಂಡ ಗಿರೀಶ್ ಗದಿಗೆಪ್ಪಗೌಡರಿಗೆ ಡ್ರಗ್ಸ್ ನಂಟಿದೆ. ತನ್ನನ್ನು ಹಾಗೂ ತನ್ನ ಸಂಬಂಧಿಕರನ್ನು ಹೆದರಿಸಲು ಗನ್ ದುರ್ಬಳಕೆ ಮಾಡಿದ್ದಾರೆ ಎಂದು  ಗಿರೀಶ್ ಗದಿಗೆಪ್ಪಗೌಡರ ಪತ್ನಿ ಜಯಲಕ್ಷ್ಮಿ ಆರೋಪಿಸಿದ್ದಾರೆ. 

ಗಿರೀಶ್ ಗದಿಗೆಪ್ಪಗೌಡ, ಜಯಲಕ್ಷ್ಮಿ

ಗಿರೀಶ್ ಗದಿಗೆಪ್ಪಗೌಡ, ಜಯಲಕ್ಷ್ಮಿ

  • Share this:
ಹುಬ್ಬಳ್ಳಿ: ಸೆಲೆಬ್ರಿಟಿಗಳ ಡ್ರಗ್ಸ್ (Drugs) ನಂಟಿನ ವಿಚಾರ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿತ್ತು. ಅದಕ್ಕೆ ಪೂರಕವಾಗಿ ಕಾಂಗ್ರೆಸ್ (Congress) ಪಕ್ಷದ ನಾಯಕನಿಗೂ ಡ್ರಗ್ಸ್ ನಂಟಿದೆ ಎಂಬ ಆರೋಪ ಕೇಳಿ ಬಂದಿದೆ. ಸ್ವತಹ ಕಾಂಗ್ರೆಸ್ ಮುಖಂಡನ ಪತ್ನಿಯ (wife) ಈ ಗುರುತರ ಆರೋಪ ಮಾಡಿದ್ದಾರೆ. ಕಾಂಗ್ರೆಸ್ ಮುಖಂಡ ಗಿರೀಶ್ ಗದಿಗೆಪ್ಪಗೌಡರಿಗೆ (Girish GadigeppaGowda) ಡ್ರಗ್ಸ್ ನಂಟಿದೆ. ತನ್ನನ್ನು ಹಾಗೂ ತನ್ನ ಸಂಬಂಧಿಕರನ್ನು ಹೆದರಿಸಲು ಗನ್ ದುರ್ಬಳಕೆ ಮಾಡಿದ್ದಾರೆ ಎಂದು  ಗಿರೀಶ್ ಗದಿಗೆಪ್ಪಗೌಡರ ಪತ್ನಿ ಜಯಲಕ್ಷ್ಮಿ ಆರೋಪಿಸಿದ್ದಾರೆ. ಗಿರೀಶ್ ಗದಿಗೆಪ್ಪಗೌಡ ಕಾಂಗ್ರೆಸ್ ಮುಖಂಡನಾಗಿದ್ದು, ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯೂ ಆಗಿದ್ದಾರೆ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಗಿರೀಶ್ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದಾರೆ. ಕೌಟುಂಬಿಕ ಕಲಹಕ್ಕೆ ರಾಜಕೀಯ ಬಣ್ಣ ಇದೆ ಎಂದು ಪತ್ನಿ ಆರೋಪಿಸಿದ್ದಾರೆ.

ಅನೈತಿಕ ಸಂಬಂಧವೇ ಕೌಟುಂಬಿಕ ಕಲಹಕ್ಕೆ ಕಾರಣ

ಹುಬ್ಬಳ್ಳಿಯಲ್ಲಿ ಮಾತನಾಡಿರೋ ಜಯಲಕ್ಷ್ಮಿ, ಕಾಂಗ್ರೆಸ್ ಮುಖಂಡ ರಜತ್, ಚೇತನ್ ಸೇರಿದಂತೆ ಯಾರೊಬ್ಬರೂ ಕಾರಣವಲ್ಲ. ತಮ್ಮ ಕುಟುಂಬಕ್ಕೂ ರಜತ್ ಗೂ ಯಾವದೇ ಸಂಬಂಧವಿಲ್ಲ. ಗಿರೀಶ್ ಅನೈತಿಕ ಸಂಬಂಧವೇ ಕೌಟುಂಬಿಕ ಕಲಹಕ್ಕೆ ಕಾರಣ. ಗದಗ ಮೂಲದ ಯುವತಿಯೊಂದಿಗೆ ಗಿರೀಶ್ ಅನೈತಿಕ ಸಂಬಂಧ. ಅವಳನ್ನು ಮದುವೆಯಾಗಲು ತನ್ನ ಜೊತೆ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದಾರೆ. ಅಳಿಯ, ತಂಗಿಯೊಡನೆ ಸೇರಿಕೊಂಡು ತನಗೆ ಕಿರುಕುಳ ನೀಡಿದ್ದಾರೆ. ಫೋರ್ಜರಿ ಸಹಿ ಮಾಡಿ ಹಣ ಲಪಟಾಯಿಸಿದ್ದರು. ಗಿರೀಶ್ ಸಹೋದರಿ ಮೈತ್ರಾಯಿಣಿಯಿಂದ ಫೋರ್ಜರಿ ಸಹಿ ಮಾಡಿದ್ದಳು. ಬ್ಯಾಂಕ್ ಗೆ ದೂರು ಕೊಟ್ಟ ಮೇಲೆ ಹಣ ವಾಪಸ್ ಕೊಟ್ಟಿದ್ದರು. ತನ್ನ ಹೆಸರಿಗಿರುವ ಆಸ್ತಿ ಲಪಟಾಯಿಸಲು ಸಂಚು ರೂಪಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: Crime News: ಮದುವೆ ನಂತರವೂ ಸಂಬಂಧಿಕನೊಂದಿಗೆ ಲವ್ವಿಡವ್ವಿ.. ಓಡಿ ಹೋದವರಿಗೆ 20 ದಿನದಲ್ಲೇ ಏನಾಯ್ತು?

ದೈಹಿಕ ಹಲ್ಲೆ ಮಾಡಿ ಮಾನಸಿಕ ಕಿರುಕುಳ ನೀಡಿದ್ದಾರೆ. ವಿದ್ಯಾನಗರ ಪೊಲೀಸ್ ಠಾಣೆಗೆ ದೂರು ನೀಡಿದರೂ ಕ್ರಮ ಜರುಗಿಸಿಲ್ಲ. ಸಿದ್ಧರಾಮಯ್ಯ, ದಲಿತ ಮುಖಂಡರ ಬೆಂಬಲ ಇದೆ ಎಂದು ಬೆದರಿಕೆ ಹಾಕ್ತಿದಾರೆ. ನನ್ನನ್ನೂ ಯಾರೂ ಏನೂ ಮಾಡಿಕೊಳ್ಳಲಾಗುವದಿಲ್ಲ ಎಂದು ಬೆದರಿಕೆ ಹಾಕ್ತಾರೆ. ನೀನು ಎಲ್ಲೇ ಹೋದ್ರೂ ನನಗೆ ಏನೂ ಮಾಡಲು ಸಾಧ್ಯವಿಲ್ಲ. ಹೆದರಿಸಿ ಆಸ್ತಿ ಪತ್ರಗಳಿಗೆ ಸಹಿ ಹಾಕುವಂತೆ ಒತ್ತಾಯ ಮಾಡುತ್ತಾರೆ.

ನಟಿ ರಾಗಿಣಿ ಭೇಟಿ 

ಅಳಿಯ ಹರ್ಷವರ್ಧನ, ನೀಲಕಂಠ ಸಹೋದರಿ ಮೈತ್ರಾಯಿಣಿ ಮೂವರಿಂದ ಮಾನಸಿಕ ದೈಹಿಕ ಕುರುಕುಳ ನಡೆದಿತ್ತು. ಗಿರೀಶ್ ಸೇರಿ ಮೂವರ ಹಿಂಸೆ ತಾಳದೇ ತವರು ಮನೆಯಲ್ಲಿದ್ದೇನೆ. ಗೋವಾದ ಡೆಲ್ಟಿನ್ ಜಾಕ್ ಕೆಸಿನೋದಲ್ಲಿ ಗಿರೀಶ್ ಹೂಡಿಕೆ ಇರುವದು ನಿಜ. ಡೆಲ್ಟಿನ್ ಜಾಕ್ ಕೆಸಿನೋ ಉದ್ಘಾಟನೆ ನಾನೇ ಹೋಗಿದ್ದೇನೆ. ಗಿರೀಶ್ ಗೆ ಡ್ರಗ್ಸ್ ನಂಟು ಪ್ರಸ್ತಾಪಿಸಿದ ಪತ್ನಿ ಜಯಲಕ್ಷ್ಮಿ, ಈವೆಂಟ್ ಮ್ಯಾನೇಜ್ಮೆಂಟ್ ಮಾಡುತ್ತಿದ್ದ ವ್ಯಕ್ತಿಯಿಂದ ಡ್ರಗ್ಸ್ ಪೂರೈಕೆಯಾಗಿದೆ. ದೇಶಿ ತಾರಾ ಈವೆಂಟ್ ಮ್ಯಾನ್ಮೆಂಟ್ ವ್ಯಕ್ತಿ ಸಮೀರನಿಂದ ಡ್ರಗ್ಸ್ ಸಪ್ಲೈ ಆಗಿದೆ. ನಟಿ ರಾಗಿಣಿ ಭೇಟಿ ವೇಳೆ ಸಮೀರ್ ನಿಂದ ಗಿರೀಶ್ ಗದಿಗೆಪ್ಪಗೌಡ ಅಳಿಯ ಹರ್ಷವರ್ಧನಗೆ ಡ್ರಗ್ಸ್ ಪೂರೈಕೆಯಾಗಿದೆ.ಧಮ್ಕಿ ಆಡಿಯೋ ವೈರಲ್ ‌

ಏರ್ ಪೋರ್ಟ್ ನಲ್ಲಿ ಸಮೀರನಿಂದ ಹರ್ಷವರ್ಧನಗೆ ಡ್ರಗ್ಸ್ ತಲುಪಿಸಲಾಗಿದೆ. ಹರ್ಷವರ್ಧನ ಹೊಟೆಲ್ ಗೆ ತಂದು ಪ್ಲೆಷ್ ನಲ್ಲಿ ಹಾಕಿದ್ದ. ಗಿರೀಶ್ ಗನ್ ದುರ್ಬಳಕೆ ಮಾಡಿಕೊಳ್ಳುತ್ತಾರೆ‌. ತನ್ನನ್ನು ಹಾಗೂ ತನ್ನ ಸಂಬಂಧಿಕರನ್ನು ಹೆದರಿಸಲು ಗನ್ ದುರ್ಬಳಕೆ ಮಾಡಿಕೊಳ್ಳುತ್ತಾರೆ. ಗೋವಾ ಕೆಸಿನೋ ವಿಚಾರವಾಗಿ ನಾಲ್ಕು ದಿನಗಳ ಹಿಂದೆ ಹುಬ್ಬಳ್ಳಿಯಲ್ಲಿ ದೊಡ್ಡ ಮಟ್ಟದ ಗಲಾಟೆ ನಡೆದಿತ್ತು ಎಂದು ಜಯಲಕ್ಷ್ಮಿ ಆರೋಪಿಸಿದ್ದಾಳೆ. ಅಲ್ಲದೇ ಗಿರೀಶ್ ಗದಿಗೆಪ್ಪಗೌಡರ ಧಮ್ಕಿ ಹಾಕಿರೋ ಆಡಿಯೋ ವೈರಲ್ ‌ಸಹ ಆಗಿತ್ತು. ಈ ಪ್ರಕರಣ ಹುಬ್ಬಳ್ಳಿಯ ಉಪನಗರ ಪೊಲೀಸ್ ಠಾಣೆಯ ಮೆಟ್ಟಲು ಏರಿತ್ತು.

ಇದನ್ನೂಓದಿ: Crime News: 2 ಮಕ್ಕಳ ತಾಯಿ ಜೊತೆ ಅಕ್ರಮ ಸಂಬಂಧ: ರೊಚ್ಚಿಗೆದ್ದ ಗಂಡ ಬೀಸಿಯೇ ಬಿಟ್ಟ ಮಚ್ಚು..!

ಕ್ಯಾಸಿನೋ ವಿಚಾರವಾಗಿಯೂ ಗದಿಗೆಪ್ಪಗೌಡನಿಂದ ಹಲ್ಲೆ ಆರೋಪ...

ಗೋವಾದಲ್ಲಿನ ಕ್ಯಾಸಿನೋ ವ್ಯವಹಾರಕ್ಕೆ ಸಂಬಂಧಿಸಿ ಹುಬ್ಬಳ್ಳಿಯಲ್ಲಿ ವ್ಯಕ್ತಿಯ ಮೇಲೆ ಹಲ್ಲೆ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ಕಾಂಗ್ರೆಸ್ ಮುಖಂಡ ಗಿರೀಶ್ ಗದಿಗೆಪ್ಪಗೌಡ ಮತ್ತು ಬೆಂಬಲಿಗರಿಂದ ಹಲ್ಲೆ ನಡೆದಿದೆ ಎಂದು ರಾಮತೀರ್ಥ ಐರಸಂಗ ಎಂಬಾತ ಆರೋಪಿಸಿದ್ದಾನೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಮೂರು ವರ್ಷಗಳಿಂದ ಗದಿಗೆಪ್ಪ ಗೌಡನೊಂದಿಗೆ ಭಾಗೀದಾರನಾಗಿ ಗೋವಾದಲ್ಲಿ ಡೆಲ್ಟೀನ್ ಜ್ಯಾಕ್ ಕ್ಯಾಸಿನೋದಲ್ಲಿ ಹೂಡಿಕೆ ಮಾಡಿದ್ದೆವು. ಧಾರವಾಡದ ಮೂವರು ಮಿತ್ರರು ಸೇರಿ 30 ಲಕ್ಷ ರೂಪಾಯಿ ಹಣ ಹೂಡಿಕೆ ಮಾಡಿದ್ದೆವು.

ಹೂಡಿದ ಹಣ ವಾಪಸ್ ಪಡೆಯೋಕೆ ಮುಂದಾಗಿದ್ದಕ್ಕೆ ಹುಬ್ಬಳ್ಳಿಯ ಸ್ವಾತಿ ಹೋಟೆಲ್ ಬಳಿ ಮಾತುಕತೆಗೆ ಕರೆಯಿಸಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಗಿರೀಶ್ ಗದಿಗೆಪ್ಪಗೌಡ ಹಾಗೂ 15 ಜನ ಸೇರಿ ಹಲ್ಲೆ ಮಾಡಿದ್ದಾರೆ. ಘಟನೆಗೆ ಸಂಬಂಧಿಸಿ ಉಪ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ. ಆದರೂ ಯಾರ ಮೇಲೂ ಕಾನೂನು ಕ್ರಮ ಕೈಗೊಂಡಿಲ್ಲ ಎಂದು ರಾಮತೀರ್ಥ ಆರೋಪಿಸಿದ್ದಾನೆ. ಗಿರೀಶ್ ಗದಿಗೆದ್ದಗೌಡ ರಾಜಕೀಯ ಪ್ರಭಾವ ಬಳಸಿ ಬಚಾವಾಗ್ತಿದಾರೆ. ಪೊಲೀಸರ ತನಿಖೆಯಲ್ಲಿ ಹಸ್ತಕ್ಷೇಪ ಮಾಡ್ತಿದಾರೆ ಅಂತ ಆರೋಪಿಸಿರೋ ರಾಮತೀರ್ಥ, ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಪೊಲೀಸ್ ಆಯುಕ್ತರಿಗೆ ಆಗ್ರಹಿಸಿದ್ದಾನೆ.
Published by:Kavya V
First published: