HOME » NEWS » State » HUBLI CONGRESS LEADER BASAVARAJ RAYAREDDY DEMAND CM BSY AND HEALTH MINISTER RESIGNATION RHHSN SAKLB

ಕೋವಿಡ್ ಚಿಕಿತ್ಸೆ ಹೆಸರಲ್ಲಿ ವ್ಯಾಪಕ ಭ್ರಷ್ಟಾಚಾರ, ನೈತಿಕ ಹೊಣೆ ಹೊತ್ತು ಸಿಎಂ, ಆರೋಗ್ಯ ಸಚಿವರ ರಾಜೀನಾಮೆಗೆ ರಾಯರೆಡ್ಡಿ ಆಗ್ರಹ

ನಮಗೆ ಸಚಿವ ಉಮೇಶ್ ಕತ್ತಿ ರೀತಿ ಮಾತನಾಡೋರು ಬೇಕಾ...? ಮಾನವಿಯತೆ ಅನ್ನೋದು ಬೇಡವಾ...? ಕತ್ತಿ ಮತ್ತು ಸುಧಾಕರ್ ಸಂಪುಟದಿಂದ ಹೊರ ನಡೆಯಬೇಕು. ಅವರಿಗೆ ನೈತಿಕತೆಯಿದ್ರೆ ಆ ಸ್ಥಾನದಲ್ಲಿ ಒಂದು ಕ್ಷಣವೂ ಮುಂದುವರೆಯಬಾರದು‌. ಅನುಭವ ಇಲ್ಲದ ಸುಧಾಕರ್ ಸ್ಥಾನಕ್ಕೆ ಎಕ್ಸ್ ಪರ್ಟ್ ಇದ್ದವರನ್ನು ಸಚಿವರನ್ನಾಗಿ ನೇಮಿಸಬೇಕೆಂದು ಬಸವರಾಜ ರಾಯರೆಡ್ಡಿ ಒತ್ತಾಯಿಸಿದರು.

news18-kannada
Updated:April 30, 2021, 5:00 PM IST
ಕೋವಿಡ್ ಚಿಕಿತ್ಸೆ ಹೆಸರಲ್ಲಿ ವ್ಯಾಪಕ ಭ್ರಷ್ಟಾಚಾರ, ನೈತಿಕ ಹೊಣೆ ಹೊತ್ತು ಸಿಎಂ, ಆರೋಗ್ಯ ಸಚಿವರ ರಾಜೀನಾಮೆಗೆ ರಾಯರೆಡ್ಡಿ ಆಗ್ರಹ
ಬವರಾಜ ರಾಯರೆಡ್ಡಿ
  • Share this:
ಹುಬ್ಬಳ್ಳಿ; ಕೊರೋನಾ ಹೆಸರಲ್ಲಿ ರಾಜ್ಯದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿರುವ ಮಾಜಿ ಸಚಿವ ಹಾಗೂ ಕೆಪಿಸಿಸಿ ವಕ್ತಾರ ಬಸವರಾಜ ರಾಯರೆಡ್ಡಿ, ನೈತಿಕ ಹೊಣೆ ಹೊತ್ತು ಸಿಎಂ ಮತ್ತು ಆರೋಗ್ಯ ಸಚಿವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ರಾಯರೆಡ್ಡಿ, ಸುಧಾಕರ್ ನಾಮಕವಾಸ್ತೆ ಡಾಕ್ಟರ್, ಅವರೆಲ್ಲಿ ಕ್ಲಿನಿಕ್ ಇಟ್ಕೊಂಡು ಪ್ರ್ಯಾಕ್ಟಿಸ್ ಮಾಡಿದ್ರು ಎಂದು ಪ್ರಶ್ನಿಸಿದ್ದಾರೆ. ಎಂಬಿಬಿಎಸ್ ಮುಗಿದಿದೆ ಅಂದ ಮಾತ್ರಕ್ಕೆ ಸುಧಾಕರ್ ಎಕ್ಸ್​ಪರ್ಟ್ ಅಲ್ಲ. ಅವರು ವೈದ್ಯಕೀಯ ಕ್ಷೇತ್ರವನ್ನು ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಆರೋಗ್ಯ ಸಚಿವ ಸುಧಾಕರ್ ವಿರುದ್ಧ ಬವರಾಜ ರಾಯರೆಡ್ಡಿ ವಾಗ್ದಾಳಿ ನಡೆಸಿದ್ದಾರೆ.

ಸುಧಾಕರ್ ಅವರನ್ನ ಬಿಟ್ಟು ಬೇರೆ ಪರಿಣಿತರನ್ನ ಕರೆದುಕೊಂಡು ಬನ್ನಿ. ರಾಜ್ಯದಲ್ಲಿ ಸದ್ಯ ಯುದ್ದದ ಸಮಯವಿದೆ. ಈ ಸಮಯದಲ್ಲಿ ನಿರ್ಲಕ್ಷ್ಯ ಮಾಡೋದು ಸರಿಯಲ್ಲ. ಕೇಂದ್ರ ಸರ್ಕಾರದ ದುರಹಂಕಾರದ ನೀತಿಯಿಂದಾಗಿ ಈ ರೀತಿ ಸಮಸ್ಯೆ ಆಗಿದೆ. ದೂರದೃಷ್ಟಿ ಕೊರತೆ ಎದ್ದು ಕಾಣುತ್ತಿದೆ. ಪ್ರಧಾನಿ ಮೋದಿ ಕೊರೋನಾ ಬಂದ್ರೆ ಘಂಟೆ ಹೊಡಿರಿ, ದೀಪ ಹಚ್ಚಿ, ತಮಟೆ ಬಾರಿಸಿ ಅಂತ ಹೇಳಿದರು. ಇಂತಹ ಅವೈಜ್ಞಾನಿಕ ನೀತಿಯಿಂದ ಭಾರತದಲ್ಲಿ ಈ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯ ಸರ್ಕಾರ ಕೊರೋನಾವನ್ನು ಭ್ರಷ್ಟಾಚಾರಕ್ಕೆ ಬಳಸಿಕೊಂಡಿದೆ. ಶ್ರೀರಾಮುಲು ಬಳಿ ಇದ್ದ ಆರೋಗ್ಯ ಖಾತೆ ಕಿತ್ತುಕೊಂಡಿದ್ದೂ ಅದಕ್ಕೆ. ಸಿಎಂ ಜೊತೆ ಭ್ರಷ್ಟಾಚಾರಕ್ಕೆ ಸಹಕರಿಸುತ್ತಾರೆ ಅಂತ ಸುಧಾಕರ್ ಅವರಿಗೆ ಎರಡು ಖಾತೆ ನೀಡಿದ್ದಾರೆ. ಸುಧಾಕರ್ ಆರೋಗ್ಯ ಸಚಿವನಾಗೋಕೆ ಅನ್ ಫಿಟ್. ಕಳೆದ ಬಾರಿ ಕೊರೋನಾ ಸಂದರ್ಭದಲ್ಲಿ ಮೆಡಿಕಲ್ ಉಪಕರಣ ಖರೀದಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದ್ದು ಗೊತ್ತೆ ಇದೆ. 2220 ಕೋಟಿ ರೂಪಾಯಿ ಭ್ರಷ್ಟಾಚಾರ ನಡೆದಿತ್ತು. ಈಗ ಮತ್ತೆ ಕೊರೋನಾ 2 ನೇ ಅಲೆ ಬಂದಿದೆ. ಮತ್ತೆ ವೈದ್ಯಕೀಯ ಉಪಕರಣ ಖರೀದಿ ಮಾಡಬೇಕು, ಮತ್ತೆ ಭ್ರಷ್ಟಾಚಾರ ಮಾಡಬೇಕೆಂದು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿದರು.

ನಾಳೆಯಿಂದ 18 ವರ್ಷ ಮೇಲ್ಪಟ್ಟವರಿಗೆ ಉಚಿತ ಲಸಿಕೆ ಎಂದ್ರು. ಆದರೆ ಈಗ ಲಸಿಕೆ ಲಭ್ಯ ಇಲ್ಲ, ಕೇಂದ್ರದಿಂದ ಇನ್ನೂ ಲಸಿಕೆ ಬಂದಿಲ್ಲ ಅಂತಾರೆ. ಇವರು ಸರಿಯಾಗಿ ಯಾವುದೇ ತಯಾರಿನೇ ಮಾಡಿಕೊಂಡಿಲ್ಲ. ಬಿಎಸ್ ವೈ ಸರ್ಕಾರ ಆಡಳಿತ ಮಾಡೋಕೆ ಯೋಗ್ಯವಲ್ಲ. ಯಡಿಯೂರಪ್ಪನವರಿಗೆ ಸರ್ಕಾರ ನಡೆಸೋಕೆ ಅಗಲಿಲ್ಲ ಅಂದ್ರೆ ಸಿಎಂ ಕುರ್ಚಿಯಿಂದ ಕೆಳಗೆ ಇಳಿಯಲಿ ಎಂದು ಆಗ್ರಹಿಸಿದರು.

ಇದನ್ನು ಓದಿ: ಅನಗತ್ಯವಾಗಿ ಸಂಚರಿಸುವ ವಾಹನ ಸೀಜ್ ಮಾಡಿ ಕೇಸ್ ಹಾಕಿ: ಚಾಮರಾಜನಗರ ಜಿಲ್ಲಾಧಿಕಾರಿ ಖಡಕ್ ಸೂಚನೆ

ನಮಗೆ ಸಚಿವ ಉಮೇಶ್ ಕತ್ತಿ ರೀತಿ ಮಾತನಾಡೋರು ಬೇಕಾ...? ಮಾನವಿಯತೆ ಅನ್ನೋದು ಬೇಡವಾ...? ಕತ್ತಿ ಮತ್ತು ಸುಧಾಕರ್ ಸಂಪುಟದಿಂದ ಹೊರ ನಡೆಯಬೇಕು. ಅವರಿಗೆ ನೈತಿಕತೆಯಿದ್ರೆ ಆ ಸ್ಥಾನದಲ್ಲಿ ಒಂದು ಕ್ಷಣವೂ ಮುಂದುವರೆಯಬಾರದು‌. ಅನುಭವ ಇಲ್ಲದ ಸುಧಾಕರ್ ಸ್ಥಾನಕ್ಕೆ ಎಕ್ಸ್ ಪರ್ಟ್ ಇದ್ದವರನ್ನು ಸಚಿವರನ್ನಾಗಿ ನೇಮಿಸಬೇಕೆಂದು ಬಸವರಾಜ ರಾಯರೆಡ್ಡಿ ಒತ್ತಾಯಿಸಿದರು.
Youtube Video

ಜಿಂದಾಲ್ ಗೆ ಭೂಮಿ ನೀಡಿಕೆ ವಿಚಾರದಲ್ಲಿ ಬಿಜೆಪಿ ದ್ವಂದ್ವ ನಿಲುವು ತಳೆದಿದೆ. ಮೊದಲು ಜಿಂದಾಲ್ ಗೆ ಭೂಮಿ ನೀಡೋದನ್ನು ವಿರೋಧಿಸಿದ್ದರು. ಅಧಿಕಾರಕ್ಕೆ ಬಂದ ಕೂಡಲೇ ಜಿಂದಾಲ್ ಪರವಾಗಿ ನಿಂತಿದ್ದಾರೆ. 1997 ರಲ್ಲಿಯೇ ಜಿಂದಾಲ್ ಭೂಮಿಯನ್ನು ಲೀಜ್ ಗೆ ಪಡೆದುಕೊಂಡಿದ್ದು, ಕಾನೂನಿನ ಪ್ರಕಾರವೇ ಮುಂದುವರಿದಿದೆ. ಆದರೆ ಈ ವಿಚಾರದಲ್ಲಿ ದ್ವಂದ್ವ ನಿಲುವು ತೆಗೆದುಕೊಂಡಿರುವ ಬಿಜೆಪಿ, ಜನರಲ್ಲಿ ಗೊಂದಲ ಮೂಡಿಸುತ್ತಿದೆ ಎಂದು ಬಸವರಾಜ ರಾಯರೆಡ್ಡಿ ಹೇಳಿದರು.ವರದಿ - ಶಿವರಾಮ ಅಸುಂಡಿ
Published by: HR Ramesh
First published: April 30, 2021, 4:59 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories