ನನ್ನ ವಿರುದ್ಧ ಆ ನಾಯಿಗಳ ಮೂಲಕ ಬೊಗಳಿಸುತ್ತಿರೋದೇಕೆ.. C.M.Ibrahim ‘ಉಗ್ರ’ ಮಾತು ಯಾರ ಬಗ್ಗೆ?

ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಹೋಗುವುದಾಗಿ ಹೇಳಿಕೆ ನೀಡುತ್ತಲೇ ರಾಜ್ಯಾದ್ಯಂತ ಸಭೆಗಳನ್ನು ನಡೆಸುತ್ತಿರುವ ಸಿಎಂ ಇಬ್ರಾಹಿಂ ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದ್ದಾರೆ. ವಿ ಎಸ್ ಉಗ್ರಪ್ಪ ಅವರನ್ನು ಶ್ವಾನಕ್ಕೆ ಹೋಲಿಸಿರುವ ಇಬ್ರಾಹಿಂ, ವಿಧಾನಪರಿಷತ್ ಸ್ಥಾನಕ್ಕೆ ರಾಜೀನಾಮೆ ಕೊಡೋದಿಲ್ಲ ಎನ್ನುವ ಮೂಲಕ ಯೂಟರ್ನ್ ಹೊಡೆದಿದ್ದಾರೆ.

ಸಿಎಂ ಇಬ್ರಾಹಿಂ, ಉಗ್ರಪ್ಪ

ಸಿಎಂ ಇಬ್ರಾಹಿಂ, ಉಗ್ರಪ್ಪ

  • Share this:
ಹುಬ್ಬಳ್ಳಿ: ಕಾಂಗ್ರೆಸ್ ನಲ್ಲಿಯೇ (Congress) ಉಳಿಸಿಕೊಳ್ಳೋಕೆ ಕಾಂಪ್ರಮೈಸ್ (Compromise) ಮಾಡಿಸೋದಿದ್ರೆ ಶ್ವಾನಗಳ (Dogs) ಮೂಲಕ ಬೊಗಳಿಸು ಅವಶ್ಯಕತೆಯಿಲ್ಲ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಮಾಜಿ ಸಚಿವ  ಸಿಎಂ ಇಬ್ರಾಹಿಂ (C.M.Ibrahim) ಹರಿಹಾಯ್ದಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಮಾಜಿ ಸಂಸದ ವಿ ಎಸ್ ಉಗ್ರಪ್ಪರನ್ನು ಶ್ವಾನಕ್ಕೆ ಹೋಲಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಫೆಬ್ರವರಿ 14 ರಂದು ನಾನು ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿಲ್ಲ ಎನ್ನೋ ಮೂಲಕ ಸಿಎಂ ಇಬ್ರಾಹಿಂ ಯೂ ಟರ್ನ್ ಹೊಡೆದಿದ್ದಾರೆ. ಸದ್ಯಕ್ಕೆ ನಾಳೆ ರಾಜೀನಾಮೆ ನೀಡುವುದಿಲ್ಲ. ಕಾಂಗ್ರೆಸ್ ಹೈಕಮಾಂಡ್ ನಿಂದ ನನಗೆ ಬುಲಾವ್ ಬಂದಿದೆ. ಹೈಕಮಾಂಡ್ ಜೊತೆ ಮಾತನಾಡಿದ ನಂತರ ಮತ್ತೊಮ್ಮೆ ನಮ್ಮ‌ ಮುಖಂಡರ ಜೊತೆ ಸಭೆ ಮಾಡುತ್ತೇನೆ. ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ. ಆದರೆ ನನ್ನನ್ನ ಪಕ್ಷದಲ್ಲಿ ಉಳಿಸಿಕೊಳ್ಳೊಕೆ ಮನಸ್ಸಿದೆಯೋ ಇಲ್ಲವೋ ಅವರನ್ನೇ ಕೇಳಿ. ಹೈಕಮಾಂಡ್ ನವರು ಏನು ಹೇಳ್ತಾರೆ ನೋಡೋಣ. ಅದರ ನಂತರ ನಾನು ಮುಖಂಡರ ಸಭೆ ಮಾಡಿ ಅಂತಿಮ‌ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದರು. ಕಾಂಗ್ರೆಸ್ ನವರು ಒಂದುಕಡೆ ಬಯ್ಯೋದು, ಮತ್ತೊಂದು ಕಡೆ ತೆಗಳೋದು ಮಾಡಿಸುತ್ತಿದ್ದಾರೆ.

ಇದನ್ನೂ ಓದಿ: BJPಗೆ ವಲಸೆ ಹೋಗಿರುವವರು Congressಗೆ ವಾಪಸ್ ಬಂದೇ ಬರ್ತಾರೆ.. ಗುಟ್ಟು ಬಿಟ್ಟುಕೊಟ್ಟ ಜಾರಕಿಹೊಳಿ!

ಉಗ್ರಪ್ಪರನ್ನ ನಾಯಿಗೆ ಹೋಲಿಸಿ ಸಿಎಂ ಇಬ್ರಾಹಿಂ

ಉಗ್ರಪ್ಪ ಅವರ ಕಡೆಯಿಂದ ಭ್ರಷ್ಟಾಚಾರದ ಆರೋಪ ಮಾಡಿಸುತ್ತಿದ್ದಾರೆ. ವಕ್ಫ್ ಬೋರ್ಡ್ ನಲ್ಲಿ ಭ್ರಷ್ಟಾಚಾರ ಮಾಡಿರೋದಾಗಿ ಉಗ್ರಪ್ಪ ಹೇಳುತ್ತಿದ್ದಾರೆ. ಈಗ ಬಿಜೆಪಿ ಸರ್ಕಾರ ಇದೆ, ನನ್ನ ಮೇಲೆ ತನಿಖೆ ಮಾಡಿಸಲಿ ಎಂದು ಸವಾಲು ಹಾಕಿದರು. ಅದನ್ನು ಬಿಟ್ಟು ಮನೆ ಮುಂದೆ ಕಟ್ಟಿದ ಶ್ವಾನಗಳಿಂದ ಯಾಕೆ ಬೊಗಳಿಸುತ್ತಿದ್ದೀರಿ ಎನ್ನೋ ಮೂಲಕ ಉಗ್ರಪ್ಪರನ್ನ ನಾಯಿಗೆ ಹೋಲಿಸಿ ಸಿಎಂ ಇಬ್ರಾಹಿಂ ಕಿಡಿಕಾರಿದರು. ಜಮೀರ್ ಅಹ್ಮದ್ ಹೇಳೋದು ಒಂಥರ, ಮಹದೇವಪ್ಪ ಮನೆಗೆ ಬಂದಿದ್ರು, ಸಿದ್ರಾಮಯ್ಯ ಕರೆ ಮಾಡಿದ್ರು. ನಾವೇನೂ ಇಲ್ಲ ಅಂದಮೇಲೆ ನಮ್ಮನ್ನ ನಮ್ಮ ಪಾಡಿಗೆ ಬಿಟ್ಟುಬಿಡಬೇಕು. ಬೇಡ ಜಂಗಮರ ರೀತಿ ಹೊರೆಟುಬಿಡುತ್ತೇವೆ.

ಪರಿಷತ್ ಸ್ಥಾನಕ್ಕೆ ರಾಜೀನಾಮೆ ಇಲ್ಲ ಎಂದ ಇಬ್ರಾಹಿಂ

ಸದ್ಯಕ್ಕೆ ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ಕೊಡಲ್ಲ. ಮತಾಂತರ ನಿಷೇಧ ಮಸೂದೆ ಪರಿಷತ್ ನಲ್ಲಿ ಮಂಡನೆಯಾಗೋದಿದೆ. ಈ ವೇಳೆ ರಾಜೀನಾಮೆ ಕೊಟ್ಟರೆ ಬಿಜೆಪಿಯಿಂದ ಹಣ ಪಡೆದಿದ್ದಾರೆ ಎಂಬ ಆರೋಪ ಬರುತ್ತೆ. ನನ್ನ ರಾಜೀನಾಮೆಯಿಂದ ಬಿಜೆಪಿಗೆ ಲಾಭ ಆಗುತ್ತೆ. ಹೀಗಾಗಿ ಬಜೆಟ್ ಅಧಿವೇಶನದ ನಂತರ ರಾಜೀನಾಮೆ ಕುರಿತು ತೀರ್ಮಾನ ಮಾಡುತ್ತೇನೆ ಎಂದು ಸಿ ಎಂ ಇಬ್ರಾಹಿಂ ತಿಳಿಸಿದ್ದಾರೆ.

2023 ರಲ್ಲಿ ಬಿಜೆಪಿಗರಿಗೇ ಹಿಜಾಬ್ ನೆರವಾಗುತ್ತೆ 

ಹಿಜಾಬ್ ನ್ನು ವಿರೋಧಿಸುತ್ತಿರುವ ಬಿಜೆಪಿ ನಾಯಕರಿಗೆ 2023 ರಲ್ಲಿ ಮುಖ ಮುಚ್ಚಿಕೊಳ್ಳೋಕೆ ನೆರವಾಗುತ್ತೆ ಎಂದು ಮಾಜಿ ಸಚಿವ ಸಿ ಎಂ ಇಬ್ರಾಹಿಂ ಲೇವಡಿ ಮಾಡಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ವಿಧಾನಸಭೆಯಲ್ಲಿ ಸೋತ ಬಿಜೆಪಿ ನಾಯಕರಿಗೆ ಮುಖ ಮುಚ್ಚಿಕೊಳ್ಳೋಕೆ ಹಿಜಾಬ್ ಅನುಕೂಲವಾಗುತ್ತೆ.
ಹಿಜಾಬ್ ಹಾಕಿಕೊಳ್ಳೋದು ಮುಸ್ಲಿಂ ಸಮುದಾಯದ ಸಂಪ್ರದಾಯ. ಹಿಂದೂಗಳ ಮಹಿಳೆಯರು ಸೀರೆಯ ಸೆರಗನ್ನ ಹಾಕಿಕೊಳ್ತಾರೋ, ಅದೇ ರೀತಿ ಮುಸ್ಲಿಂ ಸಮುದಾಯದಲ್ಲಿ ಹಿಜಾಬ್ ಹಾಕಿಕೊಳ್ತಾರೆ. ಹೆಣ್ಣು ಮಕ್ಕಳು ತಲೆಗೆ ಬಟ್ಟೆ ಹಾಕಿಕೊಳ್ಳಬಾರದು ಅಂತಾ ಪ್ರಪಂಚದಲ್ಲಿ ಎಲ್ಲೂ ಹೇಳಿಲ್ಲ. ಆದರೆ ಕೆಲ ಒಬ್ಬರು ಅದನ್ನು ವಿವಾದ ಮಾಡ್ತಿದಾರೆ. ಈಶ್ವರಪ್ಪನ ಮಗನೇ ಕೇಸರಿ ಶಾಲು ಹಂಚೋ ಕೆಲಸ ಮಾಡಿದ್ದಾನೆ.

ಇದನ್ನೂ ಓದಿ: ನೀಲಿ ಶಾಲು ಹಾಕುವವರೆಲ್ಲ ಥಾಟ್ಸ್ ಆನ್ ಪಾಕಿಸ್ತಾನ ಪುಸ್ತಕ ಓದಿ: MP Pratap Simha

ಈಶ್ವರಪ್ಪ ಉಚ್ಚಾಟನೆಗೆ ಆಗ್ರಹ...
ಇನ್ನು ಈಶ್ವರಪ್ಪ ದೆಹಲಿಯ ಕೆಂಪುಕೋಟೆ ಮೇಲೆ ಕೇಸರಿ ಧ್ವಜ ಹಾರಿಸುವ ಹೇಳಿಕೆ ನೀಡ್ತಾನೆ. ಕರ್ನಾಟಕದ ಮುಖ್ಯ ಕಾರ್ಯದರ್ಶಿ ಮಲಗಿದ್ದಾನಾ ? ಪೊಲೀಸ್ ಮಹಾನಿರ್ದೇಶಕ ನಿದ್ದೆ ಮಾಡ್ತಿದಾನಾ ? ಯಾಕೆ ಈಶ್ವರಪ್ಪನ ಮೇಲೆ ಕೇಸ್ ಹಾಕಿಲ್ಲ ಎಂದು ಪ್ರಶ್ನಿಸಿದರು. ರಾಷ್ಟ್ರಪತಿ ಬಿಟ್ಟರೆ ಬೇರೆ ಯಾರೂ ಕೆಂಪು ಕೋಟೆ ಮೇಲೆ ರಾಷ್ಟ್ರ ಧ್ವಜ ಹಾರಿಸಲ್ಲ.

ಏ ಬೊಮ್ಮಣ್ಣ ಏನ್ಮಾಡ್ತಿದೀ...
ಪ್ರಮಾಣ ವಚನ ಸ್ವೀಕರಿಸಿದ ಮಂತ್ರಿಯೊಬ್ಬ ಈ ರೀತಿ ಮಾತನಾಡಿದರೆ ಸಿಎಂ ಏನು ಮಾಡುತ್ತಿದ್ದಾರೆ. ಏ ಬೊಮ್ಮಣ್ಣ ಎಲ್ಲಿದಿಯಾ, ಏನ್ ಮಾಡ್ತಿದಿಯಾ ? ಎನ್ನೋ ಮೂಲಕ ಸಿಎಂ ಬೊಮ್ಮಾಯಿ ವಿರುದ್ಧವೂ ಇಬ್ರಾಹಿಂ ಹರಿಹಾಯ್ದರು. ಈಶ್ವರಪ್ಪ ವಿರುದ್ಧ ಸಿಎಂ ಕ್ರಮ ಕೈಗೊಳ್ಳದಿದ್ದರೆ ನಾವೇ ಪ್ರಕರಣ ದಾಖಲಿಸಿ ಬಂಧಿಸುವಂತೆ ಆಗ್ರಹಿಸ್ತೇವೆ. ರಾಮ ಮಂದಿರ, ಗೋಹತ್ಯೆ ನಿಷೇಧ ಆಯ್ತು, ಅವೆಲ್ಲ ದುಖಾನ್ ಬಂದ್ ಆಗಿವೆ. ಈಗ ಹಿಜಾಬ್ ದುಖಾನ್ ಶುರುವಾಗಿದೆ.

ಯಡಿಯೂರಪ್ಪ ಮಧ್ಯಪ್ರವೇಶಕ್ಕೆ ಆಗ್ರಹ...
ಹಿಜಾಬ್ ವಿಚಾರದಲ್ಲಿ ಯಡಿಯೂರಪ್ಪ ಅವರು ಮಧ್ಯೆ ಪ್ರವೇಶ ಮಾಡಬೇಕು. ಸೌಹಾರ್ದಯುತವಾಗಿ ಬಗೆಹರಿಸೋಕೆ ಮಧ್ಯಸ್ಥಿಕೆ ವಹಿಸಬೇಕು. ಇಲ್ಲವಾದಲ್ಲಿ 2023 ರಲ್ಲಿ ಇದೇ ಹಿಜಾಬ್ ಬಿಜೆಪಿಗೆ ನೆರವಾಗುತ್ತೆ. ಸೋತ ಮೇಲೆ ಇದೇ ಹಿಜಾಬ್ ನಿಂದ ಮುಖ ಮುಚ್ಚಿಕೊಂಡು ಹೋಗಬೇಕಾಗುತ್ತೆ ಎಂದು ಅಭಿಪ್ರಾಯಪಟ್ಟಿದ್ದಾರೆ.
Published by:Kavya V
First published: