• Home
  • »
  • News
  • »
  • state
  • »
  • By Electionನಲ್ಲಿ ಸೋಲಿಗೆ ನಾನೊಬ್ಬನೇ ಕಾರಣ ಅಲ್ಲ; ಸಾಮೂಹಿಕ ನಾಯಕತ್ವದ ಜಪಕ್ಕಿಳಿದ CM Bommai

By Electionನಲ್ಲಿ ಸೋಲಿಗೆ ನಾನೊಬ್ಬನೇ ಕಾರಣ ಅಲ್ಲ; ಸಾಮೂಹಿಕ ನಾಯಕತ್ವದ ಜಪಕ್ಕಿಳಿದ CM Bommai

ಸಿಎಂ ಬಸವರಾಜ ಬೊಮ್ಮಾಯಿ

ಸಿಎಂ ಬಸವರಾಜ ಬೊಮ್ಮಾಯಿ

ಉಪ ಚುನಾವಣೆಯ ಫಲಿತಾಂಶ ಮುಂದಿನ ಸಾರ್ವತ್ರಿಕ ಚುನಾವಣೆಗೆ ದಿಕ್ಸೂಚಿಯಾಗುವುದಿಲ್ಲ. ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಿದ್ದು ಸೋಲಿನ ಹೊಣೆಯನ್ನು ಎಲ್ಲರೂ ಹೊರುತ್ತೇವೆ ಎಂದರು.

  • Share this:

ಹುಬ್ಬಳ್ಳಿ: ಹಾನಗಲ್ ಉಪ ಚುನಾವಣೆಯಲ್ಲಿ(Hangal By Election) ಬಿಜೆಪಿ(BJP) ಅಭ್ಯರ್ಥಿ ಶಿವರಾಜ ಸಜ್ಜನ್ ಸೋಲನುಭವಿಸಿದ ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraja Bommai )ಸಾಮೂಹಿಕ ನಾಯಕತ್ವದ ಜಪ ಮಾಡಲಾರಂಭಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ(Amit Shah), ಮುಂದಿನ ಸಾರ್ವತ್ರಿಕ ಚುನಾವಣೆಯನ್ನು ಬೊಮ್ಮಾಯಿ ನೇತೃತ್ವದಲ್ಲಿಯೇ ನಡೆಸೋದಾಗಿ ತಿಳಿಸಿದಾಗ, ಬೊಮ್ಮಾಯಿ ಒಳಗೊಳಗೆ ಬೀಗಿದ್ದರು. ಆದರೆ ಹಾನಗಲ್ ನಲ್ಲಿಯೇ ಬೀಡು ಬಿಟ್ಟು, ಅರ್ಧ ಡಜನ್ ಗೂ ಹೆಚ್ಚು ಸಚಿವರನ್ನು ಸೇರಿಸಿಕೊಂಡು ರಣತಂತ್ರ ಹೆಣೆದರೂ ಹಾನಗಲ್ ನಲ್ಲಿ ಬಿಜೆಪಿ ಗೆಲ್ಲಲಾಗಿಲ್ಲ. ಹೀಗಾಗಿ ಈಗ ಬೊಮ್ಮಾಯಿ ಬಾಯಿಯಿಂದ ಸಾಮೂಹಿಕ ನಾಯಕತ್ವದ ಮಾತು ಕೇಳಿ ಬಂದಿವೆ. 


ಸೋಲಿಗೆ ನಾನೊಬ್ಬನೇ ಕಾರಣನಲ್ಲ


ಉಪ ಚುನಾವಣೆಯ ಫಲಿತಾಂಶ ಮುಂದಿನ ಸಾರ್ವತ್ರಿಕ ಚುನಾವಣೆಗೆ ದಿಕ್ಸೂಚಿಯಾಗುವುದಿಲ್ಲ. ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಿದ್ದು ಸೋಲಿನ ಹೊಣೆಯನ್ನು ಎಲ್ಲರೂ ಹೊರುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ. ಹುಬ್ಬಳ್ಳಿಗೆ ಆಗಮಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ಹಾನಗಲ್ ಉಪ ಚುನಾವಣೆಯಲ್ಲಿ ಬಿಜೆಪಿಗೆ ಸೋಲಾಗಿದೆ. ಸೋಲಿಗೆ ನಾನೊಬ್ಬನೇ ಕಾರಣನಲ್ಲ. ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಮಾಡಿದ್ದೇವೆ. ಸೋಲಿನ ಹೊಣೆಯನ್ನು ಎಲ್ಲರೂ ಸಾಮೂಹಿಕವಾಗಿ ಹೊರುತ್ತೇವೆ ಎಂದರು.


ಕಾಂಗ್ರೆಸ್ ಅಭ್ಯರ್ಥಿ ಒಳ್ಳೆ ಕೆಲಸ ಮಾಡಿದ್ದರು 


ನಮ್ಮ ಕೇಂದ್ರದ  ನಾಯಕ ಅಮಿತ್ ಶಾ ನನ್ನ ಹೆಸರು ಹೇಳಿದಾಗಲೇ ಹೇಳಿದ್ದೆ. ನಾನು ಒಬ್ಬ ತಂಡದ ಮುಖ್ಯಸ್ಥ ಇರಬಹುದು. ಆದ್ರೂ ಸಾಮೂಹಿಕ ನಾಯಕತ್ವದಲ್ಲೇ ಚುನಾವಣೆ ಮಾಡುತ್ತೇವೆ ಎಂದಿದ್ದೆ. ಈಗಲೂ ಅದನ್ನೇ ಹೇಳುತ್ತೇನೆ. ಉದಾಸಿ ಇದ್ದಾಗಲೂ ಒಮ್ಮೆ ಬಿಜೆಪಿ - ಒಮ್ಮೆ ಕಾಂಗ್ರೆಸ್  ಗೆದ್ದು ಬರುತ್ತಿತ್ತು. ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆಯವರು ಕೋವಿಡ್ ಸಂದರ್ಭದಲ್ಲಿ ಮಾಡಿದ ಜನಪರ‌ ಕೆಲಸಗಳನ್ನು ಜನರು ಬೆಂಬಲಿಸಿದ್ದಾರೆ. ಸೋಲಿನ ಪರಾಮರ್ಶೆ ಮಾಡಲಾಗುವುದು ಎಂದರು.


ನಮ್ಮ ಆಡಳಿತಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ


ಹಾನಗಲ್ ಸೋಲು ಬಿಜೆಪಿ‌ ದುರಾಡಳಿದಿಂದ ಸೋಲು ಎಂಬ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ಬಿಜೆಪಿ ದುರಾಡಳಿದ ಪ್ರಶ್ನೆಯೇ ಇಲ್ಲ. ಸಿಂದಗಿ ಜನರು ಯಾಕೆ ಹೆಚ್ಚಿನ ಮತ ನೀಡಿದ್ರು..? ಸಿಂದಗಿಯಲ್ಲಿ‌ ಜನರು ನಮ್ಮ ಆಡಳಿತಕ್ಕೆ ನೀಡಿದ ದೊಡ್ಡ ಮೆಚ್ಚುಗೆ ವ್ಯಕ್ತವಾಗಿದೆ. ಸಿಂದಗಿ ಫಲಿತಾಂಶ ನೋಡಿದ್ರೆ ಕಾಂಗ್ರೆಸ್ ಪಕ್ಷವನ್ನು ಜನರು ಸಂಪೂರ್ಣ ತಿರಸ್ಕರಿಸಿದ್ದಾರೆ. ಒಂದು ಉಪ ಚುನಾವಣೆ, ಸಾರ್ವತ್ರಿಕ ಚುನಾವಣೆಗೆ ದಿಕ್ಸೂಚಿ ಅಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿ ಇದ್ದಾಗಲೂ ಉಪ ಚುನಾವಣೆ ನಡೆದಿದೆ‌. ಕೆಲ ಕ್ಷೇತ್ರಗಳಲ್ಲಿ ಅವರು ಗೆದ್ದಿದ್ದರು, ಕೆಲ ಕ್ಷೇತ್ರಗಳಲ್ಲಿ ಸೋತಿದ್ದರು. ಹೀಗಾಗಿ ಫಲಿತಾಂಶವನ್ನು ಸಾರ್ವತ್ರಿಕ ಚುನಾವಣೆಗೆ ದಿಕ್ಸೂಚಿಯಾಗಲ್ಲ ಎಂದು ಬೊಮ್ಮಾಯಿ ತಿಳಿಸಿದ್ದಾರೆ.ಬಿಟ್ ಕಾಯಿನ್ ತನಿಖೆ ಮುಂದುವರೆದಿದೆ.


ಇದನ್ನೂ ಓದಿ: CM Bommai Govt @100days: ಬೊಮ್ಮಾಯಿ ಸಿಎಂ ಆಗಿ 100 ದಿನ; ಸಂಭ್ರಮವನ್ನು ಕಸಿಯಿತಾ ಹಾನಗಲ್ ಸೋಲು?


ಬಿಟ್ ಕಾಯಿನ್ ವಿಚಾರದಲ್ಲಿ ಆರೋಪ ಪ್ರತ್ಯಾರೋಪ ತಾರಕಕ್ಕೇರಿದ್ದು, ಸೂಕ್ತ ತನಿಖೆ ನಡೆಸಲಾಗುತ್ತಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಬಿಟ್ ಕಾಯಿನ್ ವಿಚಾರದಲ್ಲಿ ಈಗಾಗಲೇ ಸ್ಪಷ್ಟೀಕರಣ ನೀಡಿದ್ದೇನೆ. ನಾವೇ ಅವರನ್ನ‌ ಬಂಧಿಸಿ, ಕೇಸ್ ದಾಖಲಿಸಿದ್ದೇವೆ ವಿಚಾರಣೆ ನಡೆಸಿ ಚಾರ್ಜ್ ಸೀಟ್ ಸಲ್ಲಿಸಿದ್ದೇವೆ. ವಿಚಾರಣೆ ವೇಳೆ ಇಡಿ ಗೆ ಶಿಫಾರಸು ಮಾಡಬೇಕು ಅಂದಿದಕ್ಕೆ 'ಇಡಿ'ಗೆ ಶಿಫಾರಸು ಮಾಡಿದ್ದೇವೆ. ಇದರಲ್ಲಿ ಅಂತರರಾಷ್ಟ್ರೀಯ ವಹಿವಾಟು ನಡೆದಿರುವುದರಿಂದ ಸಿಬಿಐ ಇಂಟರ್ ಪೋಲ್ ಗೆ ವಹಿಸಿಬೇಕಾಗಿ‌ ಬಂದಿದೆ. ಸಿಬಿಐ ತನಿಖೆಗೆ ವಹಿಸಿದ್ದೇವೆನಾವೇ ತನಿಖೆ ನಡೆಸುತ್ತಿದ್ದೇವೆ ಎಂದರು.


ನೂರು ದಿನ ಆಡಳಿತದ ಮೌಲ್ಯಮಾಪನ ಸರಿಯಲ್ಲ 


ಬೊಮ್ಮಾಯಿ ಸರ್ಕಾರ ನೂರು ದಿನ ಪೂರೈಸಿದ ಕುರಿತು ಪ್ರತಿಕ್ರಿಯಿಸಿ, ನೂರ ದಿನ ದೊಡ್ಡ ಮೈಲುಗಲ್ಲು ಅಲ್ಲ. ಒಂದು ವರ್ಷನಾದ್ರು ಆಗಬೇಕು. ಪ್ರಾರಾಂಭಿಕವಾಗಿ ನಾವು ಹೇಗೆ ನಡೆದುಕೊಂಡಿದ್ದೇವೆ ಅಂತ ಹೇಳಬಹುದು. ನೂರ ದಿವಸಗಳಲ್ಲಿ ಯಾವ ರೀತಿ ಹೆಜ್ಜೆ ಇಟ್ಟಿದ್ದೇವೆ‌, ಅಭಿವೃದ್ಧಿ ಪರ ಚಿಂತನೆ ಯಾವ ನಿಟ್ಟಿನಲ್ಲಿ ಇದೆ  ಅನ್ನೋದನ್ನ ನಾಳೆ ನಿಮ್ಮುಂದೆ ಇಡುತ್ತೇನೆ ಎಂದರು.


ಚಳಿಗಾಲದ ಅಧಿವೇಶನ ಬೆಳಗಾವಿಯಲ್ಲಿಯೇ 


ಈ ಬಾರಿಯ ಚಳಿಗಾಲದ ಅಧಿವೇಶನ ಬೆಳಗಾವಿಯಲ್ಲಿಯೇ ನಡೆಯಲಿದೆ ಎಂದು ಬೊಮ್ಮಾಯಿ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ. ನವೆಂಬರ್ 08 ರಂದು ನಡೆಯಲಿರೋ ಸಚಿವ ಸಂಪುಟ ಸಭೆಯಲ್ಲಿ ದಿನಾಂಕ ಅಂತಿಮಗೊಳ್ಳಲಿದೆ. ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಸೋಕೆ ಈಗಾಗಲೇ ತೀರ್ಮಾನಿಸಲಾಗಿದೆ. ದಿನಾಂಕ ನಿಗದಿಗೆ ಸಂಬಂಧಿಸಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಪತ್ರ ಬರೆದಿದ್ದಾರೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ದಿನಾಂಕ ಅಂತಿಮಗೊಳಿಸಲಾಗುವುದು. ಬೆಂಬಲ ಬೆಲೆಯೊಂದಿಗೆ ಶೀಘ್ರವೇ ಭತ್ತ ಖರೀದಿ ಪ್ರಕ್ರಿಯೆ ಆರಂಭಿಸಲಾಗುವುದು. ಭತ್ತ ಬೆಳೆಯುವ ಪ್ರದೇಶದಲ್ಲಿ ಖರೀದಿ ಕೇಂದ್ರ ಆರಂಭಿಸುವಂತೆ ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಮೆಕ್ಕೆಜೋಳ ಖರೀದಿ ಕುರಿತು ಸಚಿವ ಸಂಪುಟ ಉಪಸಮಿತಿ ಸಭೆ ತೀರ್ಮಾನ ಕೈಗೊಳ್ಳಲಿದೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ.

Published by:Kavya V
First published: