• Home
  • »
  • News
  • »
  • state
  • »
  • ಯೋಗೀಶ್ ಗೌಡ ಕೊಲೆ ಪ್ರಕರಣ- ವಿನಯ ಕುಲಕರ್ಣಿ ಆಪ್ತ ಕಾರ್ಯದರ್ಶಿ ಕೆಎಎಸ್ ಅಧಿಕಾರಿ ಸೋಮು ನ್ಯಾಮಗೌಡ ಬಂಧನ

ಯೋಗೀಶ್ ಗೌಡ ಕೊಲೆ ಪ್ರಕರಣ- ವಿನಯ ಕುಲಕರ್ಣಿ ಆಪ್ತ ಕಾರ್ಯದರ್ಶಿ ಕೆಎಎಸ್ ಅಧಿಕಾರಿ ಸೋಮು ನ್ಯಾಮಗೌಡ ಬಂಧನ

ಸೋಮು ನ್ಯಾಮಗೌಡ

ಸೋಮು ನ್ಯಾಮಗೌಡ

ವಿನಯ ಕುಲಕರ್ಣಿ ಸಹೋದರ ವಿನಯ ಕುಲಕರ್ಣಿ, ಜಿಪಂ‌ ಮಾಜಿ ಉಪಾಧ್ಯಕ್ಷ ಶಿವಾನಂದ ಕರಿಗಾರ, ಯೋಗೀಶ್ ಗೌಡ ಪತ್ನಿ ಮಲ್ಲಮ್ಮ ಗೌಡರರ ಸಿಬಿಐ ಅಧಿಕಾರಿಗಳಿಂದ ಮತ್ತೆ ವಿ

  • Share this:

ಧಾರವಾಡ : ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಸಿಬಿಐ ತನಿಖೆ ಮತ್ತೆ ಚುರುಕುಗೊಂಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ನಡೆದಿದ್ದು, ಈಗಾಗಲೇ ಮಾಜಿ ಸಚಿವ ವಿನಯ ಕುಲಕರ್ಣಿ,  ಅವರ ಸೋದರ ಮಾವ ಚಂದ್ರಶೇಖರ ಇಂಡಿಯನ್ನು ಬಂಧಿಸಲಾಗಿದ್ದು, ಅವರು ಜೈಲಿನಲ್ಲಿದ್ದಾರೆ. ಇವತ್ತು ಮತ್ತೆ ಬೆಳ್ಳಂಬೆಳಿಗ್ಗೆ ಕಾರ್ಯಾಚರಣೆಗೆ ಇಳಿದ ಸಿಬಿಐ ಅಧಿಕಾರಿಗಳು ಕೆಎಎಸ್ ಅಧಿಕಾರಿ ಸೋಮು ನ್ಯಾಮಗೌಡನನ್ನು ಬಂಧಿಸಿದ್ದಾರೆ. ಆ ಮೂಲಕ ವಿನಯ ಕುಲಕರ್ಣಿಗೆ ಮತ್ತೊಂದು ಬಿಗ್ ಶಾಕ್ ನೀಡಿದ್ದಾರೆ.


ಅದು 2015 ಜೂನ್ 16  ರಂದು ಧಾರವಾಡದ ಉದಯ ಜಿಮ್ ನಲ್ಲಿ  ಹುಬ್ಬಳ್ಳಿ ಜಿಲ್ಲಾ ಪಂಚಾಯಿತಿ ಬಿಜೆಪಿ ಸದಸ್ಯ ಯೋಗೀಶ್ ಗೌಡ ಹತ್ಯೆ ನಡೆದಿತ್ತು. ಈ  ಪ್ರಕರಣವನ್ನು ಸಿಬಿಐ ತನಿಖೆಗೆ ಬಿಜೆಪಿ ಅಧಿಕಾರಕ್ಕೆ ಬಂದ ತಕ್ಷಣ ಆದೇಶ ನೀಡಿತ್ತು.  ಸಿಬಿಐ  ಮಹತ್ವದ ದಾಖಲೆಗಳನ್ನು ಕಲೆಹಾಕುವ ಮೂಲಕ ಪ್ರಕರಣಕ್ಕೆ ಹೊಸಾ ತಿರುವು ಕೊಟ್ಟಿದ್ದರು.


ಈ ಪ್ರಕರಣದಕ್ಕೆ ಸಂಬಂಧಿಸಿದಂತೆ ಸಿಬಿಐ ಈಗಾಗಲೇ ಮಾಜಿ ಸಚಿವ ವಿನಯ ಕುಲಕರ್ಣಿಯನ್ನು ಸೆಪ್ಟೆಂಬರ್ 5, 2020 ರಂದು ಬಂಧಿಸಿತ್ತು. ಬಳಿಕ ಅವರ ಸೋದರ ಮಾವ ವಿಜಯಪುರದ ಚಂದ್ರಶೇಖರ ಇಂಡಿಯನ್ನು ಡಿಸೆಂಬರ್ 17, 2020 ರಂದು ಬಂಧಿಸಿತ್ತು. ವಿನಯ ಕುಲಕರ್ಣಿ ಇದೀಗ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದರೆ, ಇಂಡಿ ಧಾರವಾಡದ ಕೇಂದ್ರ ಕಾರಾಗೃಹದಲ್ಲಿದ್ದಾನೆ. ಈಗಾಗಲೇ ಸಿಬಿಐ ಪ್ರಕರಣಕ್ಕೆ ಸಂಬಂಧಿಸಿದಂತೆ  ಸಾವಿರಕ್ಕೂ ಅಧಿಕ ಪುಟದ ಆರೋಪ ಪಟ್ಟಿ ಸಲ್ಲಿಸಿದೆ.


ಇದೀಗ ಮತ್ತೆ ವಿಚಾರಣೆಯನ್ನು ಮುಂದುವರೆಸಿರೋ ಸಿಬಿಐ ಅಧಿಕಾರಿಗಳು ಇಂದು ಬೆಳ್ಳಂಬೆಳಿಗ್ಗೆ ಗದಗನಲ್ಲಿದ್ದ ಕೆಎಎಸ್ ಅಧಿಕಾರಿ ಸೋಮು ನ್ಯಾಮಗೌಡನನ್ನು ಬಂಧಿಸಿದ್ದಾರೆ. ಎಪಿಎಂಸಿ ಕಾರ್ಯದರ್ಶಿಯಾಗಿದ್ದ ಸೋಮು ನ್ಯಾಮಗೌಡನನ್ನು ಅವರ ಮನೆಯಿಂದಲೇ ಬಂಧಿಸಿದ ಸಿಬಿಐ ಅಧಿಕಾರಿಗಳು ಧಾರವಾಡದ ಉಪನಗರ ಠಾಣೆಗೆ ಕರೆ ತಂದರು. ವಿನಯ ಕುಲಕರ್ಣಿ ಸಚಿವರಾಗಿದ್ದಾಗ ಸೋಮು ನ್ಯಾಮಗೌಡ ಆಪ್ತ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದ. ಅಷ್ಟೇ ಅಲ್ಲದೇ ನ್ಯಾಮಗೌಡ ವಿನಯ ಕುಲಕರ್ಣಿ ಸಹಪಾಠಿಯೂ ಆಗಿದ್ದ. ಈ ಹಿನ್ನೆಲೆಯಲ್ಲಿ ಸೋಮು ನ್ಯಾಮಗೌಡನ ಬಂಧನ ಸಾಕಷ್ಟು ಮಹತ್ವ ಪಡೆದಿದೆ.


ಸೋಮು ನ್ಯಾಮಗೌಡ ಯೋಗೀಶ್ ಹತ್ಯೆಗೆ ಸಂಬಂಧಿಸಿದಂತೆ ನಡೆದಿದೆ ಎನ್ನಲಾದ ಎಲ್ಲ ಹಣಕಾಸು ವ್ಯವಹಾರವನ್ನು ಮಾಡಿದ್ದ ಎನ್ನಲಾಗಿದೆ. ಅಲ್ಲದೇ ಯೋಗೀಶ್ ಹತ್ಯೆ ನಡೆದ ದಿನ ವಿನಯ ಕುಲಕರ್ಣಿ ದೆಹಲಿ ಪ್ರವಾಸದ ದಾಖಲೆಗಳನ್ನು ನೀಡಿದ್ದ. ಆಗ ವಿನಯ ಸಚಿವರಾಗಿದ್ದ ಹಿನ್ನೆಲೆಯಲ್ಲಿ ಸಚಿವರ ಪ್ರವಾಸದ ಡೈರಿಯನ್ನು ಆಪ್ತ ಕಾರ್ಯದರ್ಶಿಯೇ ನಿರ್ವಹಿಸುತ್ತಿದ್ದ. ಹೀಗಾಗಿ ಅಂದಿನ ಪ್ರವಾಸದ ಕಾರ್ಯಕ್ರಮಗಳ ಬಗ್ಗೆ ಸಿಬಿಐ ಸೋಮುನನ್ನು ವಿಚಾರಣೆಗೆ ಒಳಪಡಿಸಿ, ಅನೇಕ ಪ್ರಶ್ನೆಗಳನ್ನು ಕೇಳಿದ್ದಾರೆ.


ಸೋಮು ನ್ಯಾಮಗೌಡನನ್ನು ಜಿಲ್ಲಾಸ್ಪತ್ರೆಗೆ ಸಿಬಿಐ ಅಧಿಕಾರಿಗಳು ಕೊವಿಡ್ ಟೆಸ್ಟ್ ಗೆ ಕರೆದೊಯ್ದರು. ಟೆಸ್ಟಿಂಗ್ ಬಳಿಕ ಅಳುತ್ತಲೇ ಕಾರು ಹತ್ತಿದ ನ್ಯಾಮಗೌಡ ಅವರನ್ನು ಮತ್ತೆ ಜಿಲ್ಲಾಸ್ಪತ್ರೆಯ ಆವರಣದಲ್ಲಿರೋ ಮತ್ತೊಂದು ಕಟ್ಟಡದಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು. ಪರೀಕ್ಷೆಯ ಬಳಿಕ ಮತ್ತೆ ಆತನನ್ನು ಉಪ ನಗರ ಠಾಣೆಗೆ ಕರೆತರಲಾಯಿತು. ಬಳಿಕ ವೀಡಿಯೋ ಕಾನ್ಫರೆನ್ಸ್ ಮೂಲಕವೇ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು.


ಇದನ್ನೂ ಓದಿ: BJP: ಶಿವಸೇನೆ ಮತ್ತು ಎನ್​ಸಿಪಿಗೆ, ಬಿಜೆಪಿ ಧನ್ಯವಾದ ಹೇಳಬೇಕು: ಸಂಜಯ್​ ರಾವತ್​ ವ್ಯಂಗ್ಯ


ಸೋಮು ವಶ ಪಡಿಸಿಸಿದ‌ ಸಿಬಿಐ ತಂಡ ಜಿ ಪಂ‌ ಮಾಜಿ‌ ಉಪಾಧ್ಯಕ್ಷ ಶಿವಾನಂದ ಕರಿಗಾರ, ಹತ್ಯೆಯ ಪೊಲೀಸ್ ತನಿಖೆಯ ಆರೋಪಿ ಬಸವರಾಜ ಮುತಗಿ, ಕೆಪಿಸಿಸಿ ಕಾರ್ಯದರ್ಶಿ ನಾಗರಾಜ ಗೌರಿ, ವಿಜಯ ಕುಲಕರ್ಣಿ ಸಹೋದರಿ ವಿಜಯ ಕುಲಕರ್ಣಿ ಹಾಗೂ ಯೋಗೇಶಗೌ ಪತ್ನಿ ಮಲ್ಲಮ್ಮ ಗೌಡರನ್ನು ಕರೆಸಿ ವಿಚಾರಣೆ ಮಾಡಿದರು.


ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.

Published by:HR Ramesh
First published: