BJP ಕಾರ್ಯಕಾರಿಣಿ ಸಭೆ: BSY ಫ್ಯಾಮಿಲಿ, ಜಾರಕಿಹೊಳಿ ಬ್ರದರ್ಸ್ ಗೈರಿನ ಹಿಂದಿದೆಯಾ ರಾಜಕೀಯ ಲೆಕ್ಕಾಚಾರ?

ಸಭೆಗೆ ಬಹುತೇಕರು ಗೈರಾಗಿರೋದು ಕಂಡು ಬಂದಿತು. ಅದರಲ್ಲಿಯೂ ಯಡಿಯೂರಪ್ಪ ಮತ್ತು ಅವರ ಪುತ್ರರ ಅನುಪಸ್ಥಿತಿ ಒಂದು ಕಡೆ ಎದ್ದು ಕಾಣಿಸಿದರೆ, ಜಾರಕಿಹೊಳಿ ಬ್ರದರ್ಸ್ ಈ ಕಡೆ ಸುಳಿಯದೇ ಇರೋದು ಚರ್ಚೆಗೆ ಎಡೆಮಾಡಿಕೊಟ್ಟಿದೆ.

BJP ಕಾರ್ಯಕಾರಿಣಿ ಸಭೆ

BJP ಕಾರ್ಯಕಾರಿಣಿ ಸಭೆ

  • Share this:
ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ (BJP Executive Meeting) ಆರಂಭಗೊಂಡಿದೆ. ಎರಡು ದಿನಗಳ ಕಾಲ ನಡೆಯಲಿರೋ ಕಾರ್ಯಕಾರಣಿಗೆ ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai) ಚಾಲನೆ ನೀಡಿದರು. ಈ ಹಿಂದಿನ ಚುನಾವಣೆಗಳ ಫಲಿತಾಂಶದ (Election Results) ಪುನರ್ ಮನನ ಹಾಗೂ ಮುಂದಿನ ಚುನಾವಣೆಗಳ ತಯಾರಿ ಕುರಿತ ಚರ್ಚೆ ನಡೆಯಲಿರೋ ಸಭೆಗೆ ಬಹುತೇಕರು ಗೈರಾಗಿರೋದು ಕಂಡು ಬಂದಿತು. ಅದರಲ್ಲಿಯೂ ಯಡಿಯೂರಪ್ಪ ಮತ್ತು ಅವರ ಪುತ್ರರ ಅನುಪಸ್ಥಿತಿ ಒಂದು ಕಡೆ ಎದ್ದು ಕಾಣಿಸಿದರೆ, ಜಾರಕಿಹೊಳಿ ಬ್ರದರ್ಸ್ ಈ ಕಡೆ ಸುಳಿಯದೇ ಇರೋದು ಚರ್ಚೆಗೆ ಎಡೆಮಾಡಿಕೊಟ್ಟಿದೆ.

ಸಭೆಯಿಂದ ಯಡಿಯೂರಪ್ಪ ಫ್ಯಾಮಿಲಿ ದೂರ

ಪರಿಷತ್ ಚುನಾವಣೆಯಲ್ಲಿ ಬೆಳಗಾವಿಯಲ್ಲಿ ಬಿಜೆಪಿ ಅಭ್ಯರ್ಥಿ ಸೋಲು, ಹಾನಗಲ್ ಉಪ ಚುನಾವಣೆಯಲ್ಲಿ ಬಿಜೆಪಿಗೆ ಸೋಲಾಗಿರುವುದು ಇತ್ಯಾದಿ ವಿಚಾರಗಳ ಚರ್ಚೆ ಕಾರ್ಯಕಾರಿಣಿಯಲ್ಲಿ ನಡೆಯಲಿದೆ. ಮುಂಬರುವ ಜಿಲ್ಲಾ ಹಾಗೂ ತಾಲುಕು ಪಂಚಾಯ್ತಿ ಚುನವಣೆ ಮತ್ತು ವಿಧಾನ ಸಭೆ ಚುನಾವಣೆ ಸಿದ್ಧತೆ ಕುರಿತಾಗಿಯೂ ಚರ್ಚೆಗಳು ನಡೆಯಲಿವೆ. ಇಂತಹ ಮಹತ್ವದ ಕಾರ್ಯಕಾರಿಣಿ ಸಭೆಗೆ ಹೆಚ್ಚಿನ ಬಹುತೇಕ ನಾಯಕರು ಗೈರಾಗಿದ್ದುದು ಎದ್ದು ಕಾಣಿಸಿತು. ಅದರಲ್ಲಿಯೂ ಮಾಜಿ ಸಿಎಂ ಯಡಿಯೂರಪ್ಪ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ಯಡಿಯೂರಪ್ಪ ಫ್ಯಾಮಿಲಿ ಬಿಜೆಪಿ ಕಾರ್ಯಕಾರಣಿಯತ್ತ ಮುಖ ಮಾಡಲಿಲ್ಲ. ಬಿಜೆಪಿ ಕಾರ್ಯಕಾರಿಣಿ ಸಂದರ್ಭದಲ್ಲಿಯೇ ಯಡಿಯೂರಪ್ಪ ದುಬೈ ಟೂರ್ ಕೈಗೊಂಡಿದ್ದಾರೆ. ಯಡಿಯೂರಪ್ಪ ಪುತ್ರರಾದ ಸಂಸದ ರಾಘವೇಂದ್ರ ಹಾಗೂ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಸಹ ಗೈರು ಹಾಜರಾಗಿದ್ದಾರೆ.

ಇದನ್ನೂ ಓದಿ: Karnataka Politics: ಇಂದು ಹುಬ್ಬಳ್ಳಿಯಲ್ಲಿ ರಾಜ್ಯ ಬಿಜೆಪಿ ಕಾರ್ಯಕಾರಿಣಿ, ಸಿಎಂ ಸ್ಥಾನದಿಂದ ಬೊಮ್ಮಾಯಿಗೆ ಕೊಕ್​?

ಕಾರ್ಯಕಾರಿಣಿಯಲ್ಲಿ ಕಾಣದ ಜಾರಕಿಹೊಳಿ ಬ್ರದರ್ಸ್ 

ಬೆಳಗಾವಿ ಚುನಾವಣಾ ಫಲಿತಾಂಶ ಬಿಜೆಪಿಯ ಹೈಕಮಾಂಡ್ ಆಕ್ರೋಶಕ್ಕೆ ಕಾರಣವಾಗಿದೆ. ಬಿಜೆಪಿ ಅಧಿಕೃತ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರೋದಾಗಿ, ಕಾಂಗ್ರೆಸ್ ಸೋಲುಣಿಸಿ, ತಮ್ಮ ಸಹೋದರ ಲಖನ್ ನನ್ನು ಗೆಲ್ಲಿಸೋದಾಗಿ ಹೇಳಿದ್ದ ರಮೇಶ್ ಜಾರಕಿಹೊಳಿ ಮಾತು ಸುಳ್ಳಾಗಿದೆ. ಬಿಜೆಪಿ ಅಭ್ಯರ್ಥಿ ಮಹಾಂತೇಶ್ ಕವಟಗಿ ಮಠಗೆ ಸೋಲಾಗಿರುವ ಕುರಿತು ಈ ಕಾರ್ಯಕಾರಿಣಿಯಲ್ಲಿ ಮಹತ್ವದ ಚರ್ಚೆಯಾಗಲಿದೆ. ಸೋಲಿಗೆ ಕಾರಣರಾದವರ ಮೇಲೆ ಕ್ರಮ ಕೈಗೊಳ್ಳಲಿರೋದಾಗಿ ಈಗಾಗಲೇ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸುಳಿವು ನೀಡಿದ್ದಾರೆ.

ಜಾರಕಿಹೊಳಿ ಬ್ರದರ್ಸ್ ಗೈರು

ಹೀಗಿರುವಾಗ ಮಹತ್ವದ ಚರ್ಚೆ ನಡೆಯೋ ಕಾರ್ಯಕಾರಿಣಿಗೇ ಜಾರಕಿಹೊಳಿ ಬ್ರದರ್ಸ್ ಗೈರು ಹಾಜರಾಗಿದ್ದಾರೆ. ರಮೇಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಕಾರ್ಯಕಾರಿಣಿಗೆ ಗೈರಾಗಿದ್ದಾರೆ. ಬೆಳಗಾವಿಯಲ್ಲಿ ಬಿಜೆಪಿ ಅಭ್ಯರ್ಥಿ ಸೋಲಿನ ಪರಾಮರ್ಶೆ ನಡೆಯಲಿರೋದ್ರಿಂದಾಗಿ ಅಲ್ಲಿದ್ದರೆ ಸರಿಯಲ್ಲವೆಂದು ಜಾರಕಿಹೊಳಿ ಸಹೋದರರು ಬಂದಿಲ್ಲ ಎನ್ನಲಾಗುತ್ತಿದೆ. ಹೀಗಾಗಿ ಜಾರಕಿಹೊಳಿ ಬ್ರದರ್ಸ್ ಗೈರು ಹಾಜರಿಯೂ ಎದ್ದು ಕಾಣುತ್ತಿದೆ.

ಸಿಎಂ ವಿಮಾನ ಮತ್ತೆ ವಿಳಂಬ 

ಮುಖ್ಯಮಂತ್ರಿಗಳ ವಿಮಾನ ಮತ್ತೊಮ್ಮೆ ವಿಳಂಬವಾಗಿದೆ. ಬಿಜೆಪಿ ಕಾರ್ಯಕಾರಣಿಗೆಂದು ಸಚಿವರ ಜೊತೆ ವಿಶೇಷ ವಿಮಾನದ ಮೂಲಕ ಆಗಮಿಸೋಕೆ ಸಿಎಂ ನಿರ್ಧರಿಸಿದ್ದರು. ಆದರೆ 8.45 ಕ್ಕೆ ವಿಮಾನ ಟೇಕ್ ಆಫ್ ಆಗಲೇ ಇಲ್ಲ. ವಿಮಾನದಲ್ಲಿನ ತಾಂತ್ರಿಕ ದೋಷದದಿಂದಾಗಿ ಸಿಎಂ ಪ್ರವಾಸ ವಿಳಂಬವಾಯಿತು. ಕೊನೆಗೆ ಮದ್ಯಾಹ್ನ 1 ಗಂಟೆ ವೇಳೆಗೆ ಸಿಎಂ ಬೆಂಗಳೂರಿನಿಂದ ವಿಶೇಷ ವಿಮಾನದ ಮೂಲಕ ಹೊರಟು ಹುಬ್ಬಳ್ಳಿ ತಲುಪಿದರು. ಬೆಳಿಗ್ಗೆ ನಡೆಯಬೇಕಿದ್ದ ಗೋ ಪೂಜೆ, ಬಿಜೆಪಿ ಧ್ವಜಾರೋಹಣ ಕಾರ್ಯಕ್ರಮವೂ ಮದ್ಯಾಹ್ನದ ನಂತರ ನೆರವೇರಿತು. ಕಾರ್ಯಕಾರಿಣಿ ಸಭೆಯೂ ತಡವಾಗಿ ಉದ್ಘಾಟನೆಯಾಯಿತು.

ಇದನ್ನೂ ಓದಿ: ಆ ಮನುಷ್ಯ ಎಷ್ಟು ನೋವು ತಿಂತಾನೆ ಅಂತ ನಂಗೊತ್ತು.. HDK ಬಗ್ಗೆ ಸೋದರ Revanna ಭಾವುಕ ನುಡಿ

ಹುಬ್ಬಳ್ಳಿಯ ಡೆನಿಸನ್ ಹೋಟೆಲ್ ಸಭಾಂಗಣದಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ಆರಂಭಗೊಂಡಿದೆ. ಸಿಎಂ ಬೊಮ್ಮಾಯಿ ಕಾರ್ಯಕಾರಿಣಿ ಸಭೆಗೆ ಚಾಲನೆ ನೀಡಿದರು. ಕಾರ್ಯಕಾರಿಣಿ ಸಭೆಯಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಅರುಣಸಿಂಗ್‌, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ರಾಷ್ಟ್ರೀಯ ಪ್ರದಾನ ಕಾರ್ಯದರ್ಶಿ ಸಿಟಿ ರವಿ, ರಾಷ್ಟ್ರೀಯ ಉಪಾದ್ಯಕ್ಷೆ ಅರುಣಾ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮತ್ತಿತರರ ಉಪಸ್ಥಿತರಿದ್ದರು. ಸಚಿವರಾದ ಆರ್ ಅಶೋಕ್., ಎಸ್ ಟಿ ಸೋಮಶೇಖರ್, ಸುಧಾಕರ್, ಶಂಕರಪಾಟೀಲ ಮುನೇನಕೊಪ್ಪ, ಕೆ ಎಸ್ ಈಶ್ವರಪ್ಪ, ಎಂಟಿಬಿ ನಾಗರಾಜ, ಗೋವಿಂದ ಕಾರಜೋಳ, ಮಾಧುಸ್ವಾಮಿ, ಕೋಟಾ ಶ್ರೀನಿವಾಸ ಪೂಜಾರಿ, ಸುನೀಲಕುಮಾರ್, ಮಾಜಿ ಕೇಂದ್ರ ಸಚಿವ ಸದಾನಂದಗೌಡ, ಸಂಘಟನಾ ಕಾರ್ಯದರ್ಶಿ ಅರುಣಕುಮಾರ್ ಸೇರಿದಂತೆ ಹಲವು ಶಾಸಕರು, ಪರಿಷತ್ ಸದಸ್ಯರು ಸೇರಿದಂತೆ 300 ಜನ ಸದಸ್ಯರು ಭಾಗಿಯಾಗಿದ್ದರು.
Published by:Kavya V
First published: