Booster Dose: ಕೊರೊನಾ ವಾರಿಯರ್ಸ್ ಗೆ ಶೀಘ್ರವೇ ಬೂಸ್ಟರ್ ಡೋಸ್: ಸಿಎಂ ಬೊಮ್ಮಾಯಿ

ರಾಜ್ಯದ ಹಲವೆಡೆ ಕೊರೋನಾ ಸದ್ದಿಲ್ಲದೇ ಏರಿಕೆಯಾಗಲಾರಂಭಿಸಿದೆ. ಅದರಲ್ಲಿಯೂ ವ್ಯಾಕ್ಸಿನ್ ಹಾಕಿಸಿಕೊಂಡ ಕೊರೋನಾ ವಾರಿಯರ್ಸ್ ನಲ್ಲಿಯೂ ಮತ್ತೆ ಕೋವಿಡ್ ಕಾಣಿಸಲಾರಂಭಿಸಿದೆ. ಈ ಹಿನ್ನೆಲೆಯಲ್ಲಿ ಕೊರೋನಾ ವಾರಿಯರ್ಸ್ ಗೆ ಶೀಘ್ರವೇ ಬೂಸ್ಟರ್ ಡೋಜ್ ಹಾಕಿಸೋದಾಗಿ ಹುಬ್ಬಳ್ಳಿಯಲ್ಲಿ ಬೊಮ್ಮಾಯಿ ತಿಳಿಸಿದ್ದಾರೆ.

ಸಿಎಂ ಬಸವರಾಜ್ ಬೊಮ್ಮಾಯಿ

ಸಿಎಂ ಬಸವರಾಜ್ ಬೊಮ್ಮಾಯಿ

  • Share this:
ಹುಬ್ಬಳ್ಳಿ - ರಾಜ್ಯದ (Karnataka) ಹಲವೆಡೆ ಕೊರೊನಾ (Corona Virus) ಸದ್ದಿಲ್ಲದೇ ಹೆಚ್ಚಾಗಲಾರಂಭಿಸಿದೆ. ಅದರಲ್ಲಿಯೂ ಕೋವಿಡ್ ನಿಯಂತ್ರಣಕ್ಕೆ ಮುಂಚೂಣಿಯಲ್ಲಿ ಕೆಲಸ ಮಾಡುವ ಕೊರೊನಾ ವಾರಿಯರ್ಸ್ (Corona Warriors) ಲ್ಲೇ ಹೆಚ್ಚು ಪ್ರಮಾಣದಲ್ಲಿ ಕೋವಿಡ್ ಕಾಣಿಸಿಕೊಂಡಿದೆ. ಅದರಲ್ಲಿಯೂ ಎರಡು ಡೋಸ್ ವ್ಯಾಕ್ಸಿನ್ (Corona Vaccine) ಹಾಕಿಸಿಕೊಂಡವರಲ್ಲಿಯೇ ಕೋವಿಡ್ ಪಾಸಿಟಿವ್ (COVID Postive) ಕಾಣಿಸಿಕೊಂಡಿರೋದು ಆತಂಕಕ್ಕೆ ಕಾರಣವಾಗಿದ್ದು, ಕೊರೋನಾ ವಾರಿಯರ್ಸ್ ಗೆ ಬೂಸ್ಟರ್ ಡೋಸ್ (Booster Dose) ಕೊಡೋಕೆ ರಾಜ್ಯ ಸರ್ಕಾರ (Government) ಮುಂದಾಗಿದೆ. ಕೊರೋನಾ ವಾರಿಯರ್ಸ್ ಗೆ ಶೀಘ್ರವೇ ಬೂಸ್ಟರ್ ಡೋಸ್ ಹಾಕಿಸೋದಾಗಿ ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai) ತಿಳಿಸಿದ್ದಾರೆ.

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ (Hubballi Airport) ಮಾತನಾಡಿದ ಅವರು, ಕೊರೊನಾ ಹಿನ್ನಲೆ ಕಠಿಣ ಕ್ರಮ ಕೈಗೊಳ್ಳೋದು ಅನಿವಾರ್ಯವಿದೆ. ಅದಕ್ಕಾಗಿ ನಾನು ಆರೋಗ್ಯ ಸಚಿವರಿಗೆ ಸೂಚನೆ ನೀಡಿದ್ದೇನೆ. ಡಿಸೆಂಬರ್ 2 ರಂದು ದೆಹಲಿಗೆ ತೆರಳುತ್ತಿದ್ದೇನೆ. ಅಲ್ಲಿ ಕೇಂದ್ರ ಆರೋಗ್ಯ ಸಚಿವರನ್ನ ಭೇಟಿ ಮಾಡ್ತೆನೆ. ಈಗಾಗಲೇ ನಮ್ಮ ಕೊರೊನಾ ವಾರಿಯಸ್೯ ಎರಡೂ ಡೋಸ್ ತೆಗೆದುಕೊಂಡು ಆರೇಳು ತಿಂಗಳು ಕಳೆದಿದೆ. ಅವರಿಗೆ ಬೂಸ್ಟರ್ ಡೋಸ್ ಕೊಡೋ ಬಗ್ಗೆ ಚರ್ಚೆ ಮಾಡ್ತೇವೆ. ಶೀಘ್ರವೇ ಕೊರೊನಾ  ವಾರಿಯರ್ಸ್ ಗೆ ಬೂಸ್ಟರ್ ಡೋಸ್ ಕೊಡ್ತೇವೆ ಎಂದರು.

ಕೇರಳದಿಂದ ಬರೋರ ಮೇಲೆ ನಿಗಾ

ರಾಜ್ಯದ ಬಾರ್ಡರ್ ಗಳಲ್ಲಿ ಕಟ್ಟು ನಿಟ್ಟಿನ ಕಣ್ಣಿಡಲು ಸೂಚನೆ ನೀಡಿದ್ದೆವೆ. ಆಫ್ರಿಕಾ ಪ್ರವಾಸಿಗರ ಸ್ಯಾಂಪಲ್ ಕಳುಹಿಸಿದ್ದೇವೆ . ಹೊರ ದೇಶಗಳಿಂದ ಬಂದವರ ಮೇಲೆ ಒಂದು ವಾರ ಅವರ ಮೇಲೆ ಇಲಾಖೆ ಕಣ್ಣಿಟ್ಟಿರುತ್ತೆ. ಕೇರಳ ರಾಜ್ಯದಿಂದ ಬಂದವರಿಗೂ ನಿಗಾ ಇಡಲು ಸೂಚನೆ ನೀಡಲಾಗಿದೆ ಎಂದರು.

ಇದನ್ನೂ ಓದಿ: Omicron Virus: ಬಿಬಿಎಂಪಿ ಹೈ ಅಲರ್ಟ್; ಮೊಬೈಲ್ ಟೆಸ್ಟಿಂಗ್ ಸೆಂಟರ್ ಪುನಾರಂಭ; ಸದ್ಯ ಲಾಕ್​ಡೌನ್ ಇಲ್ಲ

ಕ್ರಿಸ್ ಮಸ್ ಹಾಗೂ ಹೊಸ ವರ್ಷಾಚರಣೆಗೆ ಶೀಘ್ರವೇ ಮಾನದಂಡ ರೂಪಿಸ್ತೇವೆ ಎಂದ ಬೊಮ್ಮಾಯಿ, ಕೊರೊನಾ ಬಗ್ಗೆ ನಾವು ಗಮನಿಸುತ್ತಿದ್ದೆವೆ‌. ಅದನ್ನು ನೋಡಿ ಕ್ರಿಸ್ ಮಸ್ ಹಾಗೂ ನ್ಯೂಇಯರ್ ಸೆಲೆಬ್ರೆಷನ್ ಬಗ್ಗೆ ತೀರ್ಮಾನ ಮಾಡ್ತೇವೆ.

ಸದ್ಯಕ್ಕೆ ಆ ಬಗ್ಗೆ ತೀರ್ಮಾನ ಮಾಡಿಲ್ಲ. ಆದರೆ ಜನ ಆತಂಕಗೊಳ್ಳೋ ಅವಶ್ಯಕತೆ ಇಲ್ಲ. ಲಾಕ್ ಡೌನ್ ಮಾಡೋದೆ ಇಲ್ಲ. ಜನ ಈಗ ಆರ್ಥಿಕ ಪರಸ್ಥಿತಿಯಿಂದ ಸುಧಾರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಅದರ ಪ್ರಸ್ತಾವನೆ ಸದ್ಯಕ್ಕಿಲ್ಲ ಎಂದರು.

ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ..

ವಿಧಾನಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ಕುರಿತು ಶೀಘ್ರವೇ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಮಾಜಿ ಸಿಎಂ ಯಡಿಯೂರಪ್ಪ ಮತ್ತು ಎಚ್.ಡಿ.ಕೆ ಅಂತಿಮಗೊಳಿಸಲಿದ್ದಾರೆ.

ಇದನ್ನೂ ಓದಿ:  Omicron ಭೀತಿ ಹಿನ್ನೆಲೆ ರಾಜ್ಯ ಸರ್ಕಾರ ಫುಲ್ ಅಲರ್ಟ್; ಯಾವೆಲ್ಲಾ ನಿಯಮಗಳನ್ನು ಪಾಲಿಸಬೇಕು?

ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ನಿನ್ನೆ ಭೇಟಿಯಾಗಿದ್ದಾರೆ. ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿಗೆ ಜೆಡಿಎಸ್ ಬೆಂಬಲ ಸೇರಿ ಹಲವಾರು ವಿಷಯಗಳನ್ನು ಚರ್ಚಿಸಿದ್ದಾರೆ. ರಾಜ್ಯದಲ್ಲಿ ಕುಮಾರಸ್ವಾಮಿ ಹಾಗೂ ಬಿಎಸ್ ವೈ ಚರ್ಚೆ ಮಾಡಿ ಅಂತಿಮ ತೀರ್ಮಾನ ಕೈಗೊಳ್ಳುತ್ತಾರೆ ಎಂದು ತಿಳಿಸಿದರು.

ಹಾವೇರಿಯಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿ ಕಣಕ್ಕಿಳಿದಿರುವ ಕುರಿತು ಪ್ರತಿಕ್ರಿಯಿಸಿದ ಬೊಮ್ಮಾಯಿ, ಅವರು ಬಿಜೆಪಿಯವರು ಅಲ್ಲ ಒಮ್ಮೆ ಕಾಂಗ್ರೆಸ್ ಅಂತಾರೆ, ಇನ್ನೊಮ್ಮೆ ಬಿಜೆಪಿ ಅಭ್ಯರ್ಥಿ ಅಂತಾರೆ. ನಮ್ಮ ಅಭ್ಯರ್ಥಿ ಪ್ರದೀಪ್ ಶೆಟ್ಟರ್ ಪ್ರಥಮ ಪ್ರಾಶಸ್ತ್ಯದಲ್ಲಿಯೇ ಗೆದ್ದು ಬರ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಆರೋಪ ಹೊತ್ತವರಿಗೇ ತನಿಖೆಯ ಜವಾಬ್ದಾರಿ ನೀಡಿಲ್ಲ

ಹೊಸ ತಾಲೂಕುಗಳಿಗೆ ಮೂಲಸೌಕರ್ಯ ನೀಡದಕ್ಕೆ ಹೈಕೋರ್ಟ್ ಚಾಟಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ಕೋವಿಡ್ ಬಂದ ಹಿನ್ನೆಲೆಯಲ್ಲಿ ತಡವಾಗಿದೆ. ಕನಿಷ್ಟ ಸೌಲಭ್ಯಗಳನ್ನು ನೀಡುತ್ತೇವೆ. ಪಿಜಿ ವೈದ್ಯರು ರಾಜ್ಯಾದ್ಯಂತ ಪ್ರತಿಭಟನೆ ನಡಿಸಿದ್ದಾರೆ.

ಭತ್ಯೆ ಈಗಾಗಲೇ ಬಿಡುಗಡೆ ಆಗಿದೆ. ಎರಡು ಮೂರು ದಿನಗಳಲ್ಲಿ ಎಲ್ಲರಿಗೂ ಭತ್ಯೆ ವಿತರಣೆ ಮಾಡಲಾಗುವುದು ಎಂದರು. ಶೇ. 40 ರಷ್ಟು ಪರ್ಸಂಟೇಜ್ ನೀಡಬೇಕೆಂಬ ಗುತ್ತಿಗೆದಾರರ ಆರೋಪ ಪ್ರಕರಣವನ್ನು ಹಗರಣ ಮಾಡಿದವರಿಗೆ ನೀಡಿದ್ದಾರೆಂಬ ಪ್ರತಿಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ಟೆಂಡರ್ ನೀಡುವವರು ಎಂಜಿನಿಯರ್ ಗಳಿರುತ್ತಾರೆ.

ಪ್ರಿನ್ಸಿಪಲ್ ಸೆಕ್ರೆಟರಿಯಾಗಿ ಟೆಂಡರ್ ಗೂ ಸಂಬಂಧವಿರುವುದಿಲ್ಲ. ಪ್ರಿನ್ಸಿಪಲ್ ಸೆಕ್ರೆಟರಿ ಅಫಿಲಿಯೇಟ್ ಅಥಾರಿಟಿ ಇರುತ್ತಾರೆ. ಹೀಗಾಗಿ ಅವರಿಗೆ ತನಿಖೆಯ ಜವಾಬ್ದಾರಿ ವಹಿಸಲಾಗಿದೆ ಎಂದರು.

ವರದಿ - ಶಿವರಾಮ ಅಸುಂಡಿ.
Published by:Mahmadrafik K
First published: