Hubballi: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮನೆಗೆ ವಿಜಯೇಂದ್ರ ಭೇಟಿ, ಗುಪ್ತ್-ಗುಪ್ತ್ ಮೀಟಿಂಗ್

ಸದ್ಯ ಬಿಜೆಪಿಯಲ್ಲಿ ರೆಬಲ್ ನಾಯಕರಂತೆ ಬಿಂಬಿತರಾಗಿರೋ ಜಗದೀಶ್ ಶೆಟ್ಟರ್​ ಅವರನ್ನ ಬಿ. ವೈ.ವಿಜಯೇಂದ್ರ ಭೇಟಿ ಮಾಡಿದ್ದು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಮುಂದಿನ ದಿನಗಳ ರಾಜಕೀಯ ಬದಲಾವಣೆಗಳಿಗೆ ಈ ಭೇಟಿ ಕಾರಣವಾಗುತ್ತಾ ಅನ್ನೋ ಚರ್ಚೆ ಶುರುವಾಗಿದೆ.

ಜಗದೀಶ್ ಶೆಟ್ಟರ್​, ವಿಜಯೇಂದ್ರ

ಜಗದೀಶ್ ಶೆಟ್ಟರ್​, ವಿಜಯೇಂದ್ರ

  • Share this:
ಹುಬ್ಬಳ್ಳಿ (ಮಾ.14): ಪಂಚ ರಾಜ್ಯಗಳ ಚುನಾವಣೆ ಮುಗೀತು. ಇನ್ನೇನು ಸಂಪುಟ ವಿಸ್ತರಣೆ (Cabinet Expansion) ನಡೆಯುತ್ತೆ ಅನ್ನೋ ಮಾತು ಇದೀಗ ಕೇಳಿ ಬರ್ತಿದೆ ಈ ಸಮಯದಲ್ಲೇ ವಿಜಯೇಂದ್ರ ದೆಹಲಿಗೆ ಭೇಟಿ ನೀಡಿದ್ರು. ರಾಷ್ಟ್ರ ನಾಯಕರನ್ನ ಭೇಟಿಯಾಗಿ ರಾಜ್ಯಕ್ಕೆ ಬರ್ತಿದ್ದಂತೆ  ಮಾಜಿ ಸಿಎಂ ಜಗದೀಶ್​ ಶೆಟ್ಟರ್​ ರನ್ನು (Jagadeesh Shettar) ಭೇಟಿಯಾಗಿದ್ದಾರೆ.  ಹುಬ್ಬಳ್ಳಿಯಲ್ಲಿ(Huballi)  ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹಾಗೂ ಮಾಜಿ ಸಿಎಂ ಪುತ್ರ ಬಿ.ವೈ.ವಿಜಯೇಂದ್ರ (B.Y Vijayendra) ಗುಪ್ತ್ ಗುಪ್ತ್ ಸಭೆ (Meeting) ನಡೆಸಿರೋದು ಚರ್ಚೆಗೆ ಗ್ರಾಸವಾಗಿದೆ. ಸದ್ಯದ ಮಟ್ಟಿಗೆ ರೆಬಲ್ ನಾಯಕರೆಂದೇ ಬಿಂಬಿತಗೊಂಡಿರೋ ಜಗದೀಶ್​ ಶೆಟ್ಟರ್ ಅವರನ್ನು ಭೇಟಿಯಾಗಿದ್ದು ಯಾಕೆ, ಈ ಭೇಟಿ ಮುಂದಿನ ರಾಜಕೀಯ ಬದಲಾವಣೆಗೆ ಕಾರಣವಾಗುತ್ತಾ ಅನ್ನೋ ಚರ್ಚೆ ಶುರುವಾಗಿದೆ.

ಕುತೂಹಲ ಮೂಡಿಸಿದೆ ವಿಜಯೇಂದ್ರ ಭೇಟಿ

ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಮಾಜಿ ಸಿಎಂ ಪುತ್ರ ಮತ್ತು ಮಾಜಿ ಸಿಎಂ ಭೇಟಿ ತೀವ್ರ ಕುತೂಹಲ ಕೆರಳಿಸಿದೆ. ಹುಬ್ಬಳ್ಳಿಯ ಕೇಶವಾಪುರದ ಮಧುರಾ ಎಸ್ಟೇಟ್ ನಲ್ಲಿರೋ ಶೆಟ್ಟರ್ ನಿವಾಸಕ್ಕೆ ವಿಜಯೇಂದ್ರ ಭೇಟಿ ನೀಡಿದ್ದರು. ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಜಾತ್ರೆಗೆ ಬಂದಿರೋದಾಗಿ ವಿಜಯೇಂದ್ರ ತಿಳಿಸಿದ್ದರು. ಮಣಕವಾಡದಲ್ಲಿ ನಡೆಯಲಿರೋ ಅಜ್ಜನ ಜಾತ್ರೆಯಲ್ಲಿ ಪಾಲ್ಗೊಳ್ಳಲು ಬಂದಿರೋದಾಗಿ ಮಾಧ್ಯಮಗಳಿಗೆ ತಿಳಿಸಿದ್ದರು.

ಒಂದು ಗಂಟೆಗಳ ಕಾಲ ಚರ್ಚೆ

ಜಾತ್ರೆಗೆ ಎಂದು ಬಂದ ವಿಜಯೇಂದ್ರ ದಿಢೀರ್ ಅಂತ ಜಗದೀಶ್ ಶೆಟ್ಟರ್ ನಿವಾಸಕ್ಕೆ ಭೇಟಿ ನೀಡಿ ಅಚ್ಚರಿ ಮೂಡಿಸಿದ್ದಾರೆ. ಒಂದು ಗಂಟೆಗೂ ಹೆಚ್ಚು ಕಾಲ ಚರ್ಚಿಸಿ ವಿಜಯೇಂದ್ರ ವಾಪಸ್ಸಾಗಿದ್ದಾರೆ. ನಿನ್ನೆಯಷ್ಟೇ ಸಚಿವ ಸಂಪುಟ ಸೇರ್ಪಡೆಯಾಗೋಲ್ಲ ಎಂದು ಜಗದೀಶ್ ಶೆಟ್ಟರ್ ಹೇಳಿದ್ದರು. ಮೊನ್ನೆಯಷ್ಟೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ವಿಜಯೇಂದ್ರ ಭೇಟಿಯಾಗಿದ್ದರು. ಪಂಚ ರಾಜ್ಯಗಳ ಚುನಾವಣೆ ನಂತ್ರ ಸಂಪುಟ ವಿಸ್ತರಣೆ ಮುಹೂರ್ತ ಫಿಕ್ಸ್ ಎಂದು ಬಿಜೆಪಿ ನಾಯಕರು ಹೇಳ್ತಿದ್ದಾರೆ.

ಇದನ್ನೂ ಓದಿ: HDK v/s Yogeshwar: ರಾಸಲೀಲೆ ಮಾಡಲು ಅಲ್ಲ ರೆಸ್ಟ್ ಮಾಡಲು ಹೋಗ್ತಿದ್ದೆ, ಅವನು ಗುಡಿಸಲಲ್ಲಿ ಇದ್ನಾ? ಚರ್ಚೆಗೆ ರೆಡಿ ಎಂದ್ರು HDK

‘ನಾನು ಸಂಪುಟ ಸೇರೋದಿಲ್ಲ’

ವಿಧಾನಸಭೆ ಬಜೆಟ್ ಅಧಿವೇಶನದ ನಂತ್ರ ಸಂಪುಟ ವಿಸ್ತರಣೆ ಇಲ್ಲವೆ, ಸಂಪುಟ ಪುನಾರಚನೆ ಖಚಿತ ಎಂಬ ಚರ್ಚೆ ಜೋರಾಗಿದೆ. ಸಂಪುಟ ವಿಸ್ತರಣೆಯಾಗುತ್ತಾ ಅಥವಾ ಸಿಎಂ ಬದಲಾವಣೆಯಾಗುತ್ತಾ ಅನ್ನೋ ಗುಮಾನಿ ಮೂಡಿದೆ. ಬಸವರಾಜ ಬೊಮ್ಮಾಯಿ ಸಿಎಂ ಆದಾಗಿನಿಂದಲೂ ಶೆಟ್ಟರ್ ಅವರ ವಿರುದ್ಧ ಬುಸುಗುಡುತ್ತಿದ್ದಾರೆ. ಕಿರಿಯರು ಸಿಎಂ ಆಗಿರೋವಾಗ ಹಿರಿಯನಾದ ತಾನು ಸಂಪುಟ ಸೇರಲ್ಲ ಅಂತ ಶೆಟ್ಟರ್ ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ.

ವಿಜಯೇಂದ್ರ ಭೇಟಿ ಹಿಂದಿದೆ ಹಲವು ಪ್ರಶ್ನೆ

ತಾನು ಸಂಪುಟ ಸೇರ್ಪಡೆಗೆ ವಿಜಯೇಂದ್ರ ಅಖಾಡ ರೆಡೀ ಮಾಡ್ಕೋತಿದ್ದಾರಾ ಅಥವಾ ಬೊಮ್ಮಾಯಿ ವಿರುದ್ಧ ಕತ್ತಿ ಮಸೆಯಬೇಡ್ರಿ ಅಂತ ಹೇಳೋಕೆ ಬಂದಿದ್ರಾ ಅನ್ನೋ ಕುತೂಹಲ ಮೂಡಿದೆ. ಇಲ್ಲವೆ ಸಿಎಂ ಬದಲಾದ್ರೆ ನೀವೇನಾದ್ರೂ ರೆಡೀನಾ ಅಂತ ಕೇಳೋಕೆ ಬಂದಿದ್ರಾ? ಅನ್ನೋ ಪ್ರಶ್ನೆಯೂ ಎದ್ದಿದೆ. ಜೆ.ಪಿ.ನಡ್ಡಾ ಭೇಟಿಯ ಬೆನ್ನಲ್ಲೇ ಇದೀಗ ಶೆಟ್ಟರ್ ಭೇಟಿಯಾಗಿರೋದು ಭಾರೀ ಕುತೂಹಲ ಕೆರಳಿಸಿದೆ.

ಇದನ್ನೂ ಓದಿ: ಮಂತ್ರಿ ಮಾಲ್​ನಲ್ಲಿ 'The Kashmir Files' ಸಿನಿಮಾ ವೀಕ್ಷಣೆಗೆ ವ್ಯವಸ್ಥೆ; ಆಡಳಿತ, ವಿಪಕ್ಷ ನಾಯಕರಿಗೆ Speaker​ ಆಹ್ವಾನ

ಬಿಜೆಪಿ ನಾಯಕರಿಂದ ಸಾಲು ಸಾಲು ಭೇಟಿ

ಈ ಹಿಂದೆಯೂ ರಮೇಶ್ ಜಾರಕಿಹೊಳಿ, ಮುರುಗೇಶ್ ನಿರಾಣಿ ಮತ್ತಿತರರು ಶೆಟ್ಟರ್ ಅವರನ್ನು ಭೇಟಿ ಮಾಡಿದ್ರು. ಕೆಲ ದಿನಗಳ ಹಿಂದೆಯಷ್ಟೇ ನವದೆಹಲಿಯಲ್ಲಿ ಬೀಡು ಬಿಟ್ಟಿದ್ದ ಶೆಟ್ಟರ್ ತೀವ್ರ ಚರ್ಚೆಗೆ ಗ್ರಾಸವಾಗಿದ್ದರು. ಇದೀಗ ವಿಜಯೇಂದ್ರ ಮತ್ತು ಶೆಟ್ಟರ್ ಭೇಟಿಗೆ ರಾಜಕೀಯ ಮಹತ್ವ ಪಡೆದುಕೊಂಡಿದೆ. ಶೆಟ್ಟರ್ ಮತ್ತೊಮ್ಮೆ ಸಿಎಂ ಆಗ್ತಾರಾ.. ಇಲ್ಲವೆ ವಿಜಯೇಂದ್ರ ಸಚಿವ ಸ್ಥಾನಕ್ಕೆ ಬೆಂಬಲ ನೀಡ್ತಾರಾ ಅನ್ನೋ ಪ್ರಶ್ನೆ ಎದ್ದಿದೆ. ಒಟ್ಟಾರೆ  ಶೆಟ್ಟರ್ – ವಿಜಯೇಂದ್ರ ಭೇಟಿ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
Published by:Pavana HS
First published: