ಹುಬ್ಬಳ್ಳಿ (ಅ.19): ರಾಹುಲ್ ಗಾಂಧಿ(Rahul Gandhi) ಒಬ್ಬ ಡ್ರಗ್ ಅಡಿಕ್ಟ್(Drug Addict), ಡ್ರಗ್ ಪೆಡ್ಲರ್(Drug Peddler) ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್(BJP State President Nalin Kumar Kateel) ವಿವಾದಾತ್ಮಕ ಹೇಳಿಕೆ(Controversial Statement) ನೀಡಿದ್ದಾರೆ. ಹುಬ್ಬಳ್ಳಿ(Hubli)ಯಲ್ಲಿ ಆಯೋಜಿಸಿದ್ದ ವಿಧಾನ ಪರಿಷತ್ ಚುನಾವಣೆ ಪೂರ್ವ ಸಿದ್ಧತೆ ಸಭೆ(Pre-Poll Election preparation meeting)ಯಲ್ಲಿ ಮಾತನಾಡಿದ ಕಟೀಲ್, ರಾಹುಲ್ ಗಾಂಧಿ ಒರ್ವ ಡ್ರಗ್ ಅಡಿಕ್ಟ್, ಪೆಡ್ಲರ್ ಅಂತ ವರದಿ ಇವೆ ಎಂದು ಆರೋಪಿಸಿದರು. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ(National Congress President)ರೂ ಜೈಲಿಗೆ ಹೋಗಿದ್ದರು. ಇತ್ತ ರಾಜ್ಯಾಧ್ಯಕ್ಷ ತಿಹಾರ್ ಜೈಲಿಗೆ ಹೋಗಿದ್ದರು. ಇವರೇನು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿ ಜೈಲಿಗೆ ಹೋದ್ರಾ..? ಇಲ್ಲಾ ಸಂಗ್ರಾಮದ ಕಥೆ ಬರೆಯಲು ಹೋಗಿದ್ರಾ..?ಇಂಥವರು ನಮ್ಮ ಮೋದಿ ಬಗ್ಗೆ ಟೀಕಿಸ್ತಾರೆ ಎಂದು ಕಿಡಿಕಾರಿದರು.
ಪಕ್ಷ ಮುನ್ನಡೆಸದವರು ದೇಶ ಮುನ್ನಡೆಸ್ತಾರಾ?
ಕಾಂಗ್ರೆಸ್ ಸಂವಿಧಾನದ ಮೇಲಿನ ನಂಬಿಕೆ ಕಳೆದುಕೊಂಡಿದೆ. ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಯಾರು ಹೇಳಿ..? ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರೇ ಅಧ್ಯಕ್ಷಗಿರಿಗೆ ಪೈಪೋಟಿ ಮಾಡುತ್ತಿದ್ದಾರೆ. ಅವರಿಗೆ ಪಕ್ಷವೇ ಮುನ್ನಡೆಸೋಕೆ ಆಗ್ತಿಲ್ಲ, ಇನ್ನು ದೇಶ ಮುನ್ನಡೆಸ್ತಾರಾ ಎಂದು ಕಟೀಲ್ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ:ಬೊಮ್ಮಾಯಿ RSSನಲ್ಲಿ ಇದ್ರಾ? ನಾನು ಯಾವ ಕುಟುಂಬದ ಹಿಡಿತದಲ್ಲೂ ಇಲ್ಲ, HDKಗೆ ನನ್ನ ಕಂಡ್ರೆ ಭಯ: Siddaramaiah
ಸಿದ್ಧರಾಮಯ್ಯ ವಿರುದ್ಧ ಹರಿಹಾಯ್ದ ನಾಯಕರು
ಹುಬ್ಬಳ್ಳಿಯ ಶ್ರೀನಿವಾಸ ಗಾರ್ಡನ್ ನಲ್ಲಿ ವಿಧಾನ ಪರಿಷತ್ ಚುನಾವಣೆಗಳ ಕುರಿತ ಬಿಜೆಪಿ ಪೂರ್ವಭಾವಿ ಸಭೆ ಆಯೋಜಿಸಲಾಗಿತ್ತು. ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ್ ಕಟೀಲ್, ಮಾಜಿ ಸಿಎಂ ಜಗದೀಶ್ ಶೆಟ್ಟರ್, ಶಾಸಕ - ಬಿಜೆಪಿ ಜಿಲ್ಲಾಧ್ಯಕ್ಷ ಅರವಿಂದ ಬೆಲ್ಲದ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ಮತ್ತಿತರರು ಭಾಗಿಯಾಗಿದ್ದರು. ಸ್ಥಳೀಯ ಸಂಸ್ಥೆ, ಶಿಕ್ಷಕರ ಕ್ಷೇತ್ರಕ್ಕೆ ನಡೆಯುತ್ತಿರೋ ಚುನಾವಣೆ ಸಿದ್ಧತೆ ಕುರಿತು ಚರ್ಚೆ ನಡೆಸಲಾಯಿತು. ಈ ವೇಳೆ ಮಾತನಾಡಿದ ಬಿಜೆಪಿ ಮುಖಂಡರು, ಸಿದ್ಧರಾಮಯ್ಯ ಮತ್ತು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ವಿರೋಧ ಪಕ್ಷ ಆಗಲು ನಾಲಾಯಕ್
ಆರ್ ಎಸ್ ಎಸ್ ವಿರುದ್ಧದ ಟೀಕೆಗೆ ಕಿಡಿಕಾರಿದರು. ಅಲ್ಪಸಂಖ್ಯಾತರ ಓಲೈಕೆಗೆ ಆರ್.ಎಸ್.ಎಸ್ ವಿರುದ್ಧ ಟೀಕೆ ಮಾಡ್ತಿದ್ದಾರೆ ಎಂದು ಆರೋಪಿಸಿದರು. ಪ್ರಧಾನಮಂತ್ರಿ ಮೋದಿ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂದರೆ ಸಿದ್ಧರಾಮಯ್ಯ ಸಾಬ್ರು ಕಾ ಸಾಥ್ ಸಾಬ್ರು ಕಾ ವಿಕಾಸ್ ಎನ್ನುತ್ತಾರೆ. ಕಾಂಗ್ರೆಸ್ ಪಕ್ಷ ವಿರೋಧಪಕ್ಷವಾಗಿ ಉಳಿಯಲೂ ನಾಲಾಯಕ್ ಆಗಿದೆ. ಎರಡೂ ಉಪ ಚುನಾವಣೆಯಲ್ಲಿ ಬಿಜೆಪಿ ಗೆದ್ದೇ ಗೆಲ್ಲುತ್ತೆ. ವಿಧಾನ ಪರಿಷತ್ ಸ್ಥಾನಗಳಲ್ಲಿಯೂ ಗೆದ್ದು ವಿಧಾನಪರಿಷತ್ನಲ್ಲಿಯೂ ಶಕ್ತಿಯುತವಾಗ್ತೇವೆ ಎಂದರು.
ಕಾಂಗ್ರೆಸ್ 2 ಹೋಳಾಗೋದು ಗ್ಯಾರಂಟಿ
ಕಾಂಗ್ರೆಸ್ನಲ್ಲಿ ಸಿದ್ಧರಾಮಯ್ಯ ಮತ್ತು ಡಿಕೆಶಿ ಜೋಡೆತ್ತು ಎನ್ನುತ್ತಾರೆ. ಆದರೆ ಒಳಗೊಳಗೆ ಕುಸ್ತಿ ಆಡುತ್ತಾರೆ. ಕಾಂಗ್ರೆಸ್ ನಾಯಕರ ಪಿಸುಮಾತಿನಲ್ಲಿಯೇ ಈ ಗುಟ್ಟು ರಟ್ಟಾಗಿದೆ. ವಿ ಎಸ್ ಉಗ್ರಪ್ಪ ಎಂದು ಪಿಸುಮಾತಿನಲ್ಲಿ ಮಾತನಾಡಿದವರಲ್ಲ. ಉಗ್ರವಾಗಿಯೇ ಮಾತನಾಡುತ್ತಿದ್ದರು. ಆದರೆ ಈ ಪಿಸು ಮಾತಿನ ಹಿಂದೆ ಸಿದ್ದರಾಮಯ್ಯ ಕುತಂತ್ರ ಅಡಗಿದೆ. ಕಾಂಗ್ರೆಸ್ ಪರಿಸ್ಥಿತಿ ಹೇಗಾಗಿದೆಯೆಂದರೆ ಮುಂದಿನ ಚುನಾವಣೆಯಲ್ಲಿ ಅವರು ಅಧಿಕಾರಕ್ಕೆ ಬರೋದಿರಲಿ, ಎರಡು ಹೋಳಾಗೋದು ಗ್ಯಾರಂಟಿ.
ಇದನ್ನೂ ಓದಿ:ಕುಮಾರಸ್ವಾಮಿ-ರೇವಣ್ಣ ಹೊಡೆದಾಡುತ್ತಾರೆ ಎಂದು ಕಾಯುತ್ತಿರುವವರ ಆಸೆ ಈಡೇರಲ್ಲ: ಜಮೀರ್ಗೆ Revanna ತಿರುಗೇಟು
ಕಾಂಗ್ರೆಸ್ & ಜೆಡಿಎಸ್ಗೆ ಭವಿಷ್ಯವಿಲ್ಲ
ಇನ್ನು ಜೆಡಿಎಸ್ ನಲ್ಲಿ ಕುಟುಂಬ ರಾಜಕಾರಣ ಜೋರಾಗಿದೆ. ಜೆಡಿಎಸ್ ನಲ್ಲಿ ಕುಟುಂಬದೊಳಗಿನ ಜಗಳ ಜಾಸ್ತಿ ಆಗ್ತಿದೆ. ಹೀಗಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ಗಳಿಗೆ ಭವಿಷ್ಯವಿಲ್ಲ. ಭಾರತೀಯ ಜನತಾ ಪಕ್ಷಕ್ಕೆ ಮಾತ್ರ ಭವಿಷ್ಯ ಇರೋದು. ಮುಂದಿನ ಚುನಾವಣೆಯಲ್ಲಿಯೂ ನಾವೇ ಅಧಿಕಾರಕ್ಕೆ ಬರುತ್ತೇವೆ. ಹೀಗಾಗಿ ವಿಧಾನ ಪರಿಷತ್ ನಲ್ಲಿ ಬಹುಮತ ಬೇಕೆಂದರೆ ಬಿಜೆಪಿ ಸದಸ್ಯರ ಸಂಖ್ಯೆ ಹೆಚ್ಚಬೇಕು. ವಿಧಾನ ಪರಿಷತ್ ಚುನಾವಣೆಯನ್ನು ಎಲ್ಲರೂ ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಕಟೀಲ್ ಕರೆ ನೀಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ