ಸಿದ್ಧರಾಮಯ್ಯ ಹಸಿ ಸುಳ್ಳುಗಾರ; ಹಿಂದುಳಿದ ವರ್ಗದ ಹೀರೋ ಆಗೋಕೆ ಹೊರಟಿದ್ದಾರೆ: ಶೆಟ್ಟರ್ ಲೇವಡಿ

ಸಿದ್ಧರಾಮಯ್ಯ ಮಾಜಿ ಸಿಎಂ ಅನ್ನೋದಕ್ಕೆ ಅಪವಾದ ಅನ್ನೋ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ. ಹಸಿ ಸುಳ್ಳು ಹೇಳೋದನ್ನು ಕಾಯಕವಾಗಿಸಿಕೊಂಡಿದ್ದಾರೆ

ಜಗದೀಶ್ ಶೆಟ್ಟರ್

ಜಗದೀಶ್ ಶೆಟ್ಟರ್

  • Share this:
ಹುಬ್ಬಳ್ಳಿ (ಸೆ. 30): ಮಾಜಿ ಸಿಎಂ ಸಿದ್ಧರಾಮಯ್ಯ ಹಸಿ ಸುಳ್ಳುಗಾರ. ಸುಳ್ಳು ಹೇಳೋದರಲ್ಲಿ ನಿಸ್ಸೀಮ ಎಂದು ಸಿದ್ಧರಾಮಯ್ಯ ವಿರುದ್ಧ ಮಾಜಿ ಸಿಎಂ ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಜಾತಿ ಜನಗಣತಿ ವರದಿ ವಿಚಾರದಲ್ಲಿ ಸಿದ್ಧರಾಮಯ್ಯ ಹಸಿ ಸುಳ್ಳುಗಳನ್ನು ಹೇಳುತ್ತಾ ಸಾಗಿದ್ದಾರೆ. ವರದಿ ಕುರಿತ ಸಿದ್ಧರಾಮಯ್ಯ ಹೋರಾಟಕ್ಕೆ ರೆಡಿಯಾಗಿದ್ದಾರೆ. ಈಗ ಹಿಂದುಳಿದ ವರ್ಗದ ಬಗ್ಗೆ ಮೊಸಳೆ ಸುರಿಸ್ತಿದಾರೆ. ಹಿಂದುಳಿದ ವರ್ಗದ ಚಾಂಪಿಯನ್ ಆಗೋಕೆ ಹೊರಟಿದ್ದಾರೆ ಎಂದು ಶೆಟ್ಟರ್ ಕಿಡಿಕಾರಿದರು.

ಜನಗಣತಿ ವರದಿ ಯಾಕೆ ಅಂಗೀಕರಿಸಲಿಲ್ಲ

ಸಿದ್ಧರಾಮಯ್ಯ ಅಧಿಕಾರಕ್ಕೆ ಬಂದ ಎರಡು ವರ್ಷದಲ್ಲಿಯೇ ಜಾತಿ ಜನಗಣತಿ ವರದಿ ರೆಡಿಯಾಗಿತ್ತು. ಕಾಂತರಾಜು ನೇತೃತ್ವದಲ್ಲಿ ಸಿದ್ಧಗೊಂಡಿದ್ದ ಸಂಪೂರ್ಣ ಜಾತಿಗಣತಿ ವರದಿ 2015 ರಲ್ಲಿಯೇ ಸಲ್ಲಿಕೆಯಾಗಿತ್ತು. ಆದರೂ ಸಿದ್ಧರಾಮಯ್ಯ ಆಗ ಏಕೆ ವರದಿ ಅಂಗೀಕರಿಸಲಿಲ್ಲ, ವಿಧಾನ ಮಂಡಲದ‌ ಮುಂದೆ ಏಕಿಡಲಿಲ್ಲ. ಜಾತಿ ಜನಗಣತಿ ವರದಿಯನ್ನೇಕೆ ಬಹಿರಂಗಪಡಿಸಲಿಲ್ಲ ಎಂದು ಶೆಟ್ಟರ್ ಪ್ರಶ್ನಿಸಿದರು. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಸಿದ್ದರಾಮಯ್ಯ ಹೀರೋ ಆಗಲು ಹೊರಟಿದ್ದಾರೆ. ಮುಖ್ಯಮಂತ್ರಿ ಚಂದ್ರು‌ ನೇತೃತ್ವದಲ್ಲಿ ಈಗ ಹೋರಾಟ ರೂಪಿಸಲು ಪ್ಲಾನ್ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಚಂದ್ರು ರಿಟ್ ಪಿಟಿಷನ್ ನಲ್ಲಿಯೇ ವರದಿ ಸಿದ್ಧವಾದ ಬಗ್ಗೆ ನಮೂದಾಗಿದೆ. 2015 ಕ್ಕೆ ವರದಿ ಸಿದ್ದವಾಗಿದೆ ಎಂದು ಮುಖ್ಯಮಂತ್ರಿ ಚಂದ್ರು ಪ್ರಸ್ರಾಪಿಸಿದ್ದಾರೆ.

ಹಿಂದುಳಿದ ವರ್ಗದ ಚಾಂಪಿಯನ್ ಆಗೋಕೆ ಮುಂದಾಗಿದ್ದಾರೆ

ಇಷ್ಟಾದರೂ ಜಾತಿ ಗಣತಿ ವರದಿಯನ್ನು ಸಿದ್ದರಾಮಯ್ಯ ಏಕೆ ಅಂಗೀಕರಿಸಲಿಲ್ಲ ಎಂದು ಶೆಟ್ಟರ್ ಮುಖ್ಯಮಂತ್ರಿ ಚಂದ್ರು ರಿಟ್ ಅರ್ಜಿಯ ದಾಖಲೆ ಬಿಡುಗಡೆ ಮಾಡಿದರು. ಕುಮಾರಸ್ವಾಮಿ ಸಿಎಂ ಆಗಿದ್ದಾಗಲಾದ್ರೂ ಅಂಗೀಕರಿಸಬೇಕಿತ್ತು. ಆ ವೇಳೆಯಲ್ಲಿ ಕಾಂಗ್ರೆಸ್ ಪಕ್ಷದವರೇ ಜೆಡಿಎಸ್ ಗೆ ಬೆಂಬಲ ನೀಡಿದ್ದರು. ಸರ್ಕಾರ ಇವರದೇ ಇದ್ದಾಗ ಏನೂ ಮಾಡದೆ, ನಮ್ಮ ಸರ್ಕಾರ ಬಂದಾಗ ಕೇಳೋದ್ಯಾಕೆ. ಬೀದಿಗಿಳಿದ ಹೋರಾಟ ಮಾಡಲು ಹೊರಟಿರೋದ್ಯಾಕೆ. ಈಗ ಹಿಂದುಳಿದ ವರ್ಗದ ಚಾಂಪಿಯನ್ ಆಗೋಕೆ ಹೊರಟಿದ್ಯಾಕೆ ಎಂದು ಸಿದ್ಧರಾಮಯ್ಯಗೆ ಶೆಟ್ಟರ್ ಪ್ರಶ್ನಿಸಿದ್ದಾರೆ.

ಇದನ್ನು ಓದಿ: ಮಡಿಕೇರಿ ದಸರಾಕ್ಕೆ ಒಂದು ಕೋಟಿ ಅನುದಾನ ಘೋಷಿಸಿದ ಸರ್ಕಾರ

ಆರ್.ಎಸ್.ಎಸ್. - ತಾಲಿಬಾನ್ ಹೇಳಿಕೆಗೆ ಶೆಟ್ಟರ್ ಕಿಡಿ
ಆರ್.ಎಸ್.ಎಸ್. ಸಂಘಟನೆಯನ್ನು ಸಿದ್ದರಾಮಯ್ಯ ತಾಲಿಬಾನ್ ಹೋಲಿಕೆ ಮಾಡಿರೋದಕ್ಕೆ ಮಾಜಿ ಸಿಎಂ ವಿರುದ್ಧ ಮತ್ತೊಬ್ಬ ಮಾಜಿ ಸಿಎಂ ಕಿಡಿಕಾರಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಸಿದ್ಧರಾಮಯ್ಯ ವರ್ತನೆ ಬೇಜವಾಬ್ದಾರಿಯ ಪರಮಾವಧಿ ಎಂದಿದ್ದಾರೆ.

ಇದನ್ನು ಓದಿ: ಬೆಂಗಳೂರಿನಲ್ಲಿ ಇಂದಿನಿಂದ Electric Bus ಓಡಾಟ, ಟಿಕೆಟ್ ದರ ಎಷ್ಟು? ಎಲ್ಲೆಲ್ಲಿ ಪ್ರಯಾಣ?

ಸಿದ್ದರಾಮಯ್ಯ ಅಫ್ಘಾನಿಸ್ತಾನಕ್ಕೆ ಹೋಗಿ ಬರಲಿ

ರಾಷ್ಟ್ರಭಕ್ತ ಸಂಘಟನೆ ಆರ್.ಎಸ್.ಎಸ್.ನ್ನು ತಾಲಿಬಾನ್ ಗೆ ಹೋಲಿಕೆ ಮಾಡ್ತಾರೆ. ಆರ್.ಎಸ್.ಎಸ್. ಬಗ್ಗೆ ಹಸಿ ಸುಳ್ಳುಗಳನ್ನೇ ಹೇಳುತ್ತಾ ಸಾಗಿದ್ದಾರೆ. ತಾಲಿಬಾನಿಗಳು ಏನಂತ ತಿಳಿಯೋಕೆ ಸಿದ್ಧರಾಮಯ್ಯ ಅಫಘಾನಿಸ್ತಾನಕ್ಕೆ ಹೋಗಿ ಬರಲಿ. ತಾಲಿಬಾನಿಗಳ ಕ್ರೂರ ವರ್ತನೆ ಏನಂತ ಆಗ ಗೊತ್ತಾಗುತ್ತೆ ಎಂದರು.

ಸಿದ್ದರಾಮಯ್ಯ ಸುಳ್ಳು ಹರಡುತ್ತಿದ್ದಾರೆ.

ತಾಲಿಬಾನಿಗಳ ನಡವಳಿಕೆ, ಮಹಿಳೆಯರ ಮೇಲಿನ ದೌರ್ಜನ್ಯ, ಸನಾತನ ಕಾಲದ ಶಿಕ್ಷೆ ಜಾರಿಗೊಳಿಸಲು ಹೊರಟ ರೀತಿ ಎಲ್ಲವೂ ಭಯಾನಕವಾಗಿವೆ. ಇಂತಹ ತಾಲಿಬಾನ್‌ ನ್ನು ಆರ್.ಎಸ್.ಎಸ್.ಗೆ ಹೋಲಿಸ್ತಾರೆ. ದೇಶದ ಸಂಸ್ಕೃತಿ, ಮೌಲ್ಯಗಳನ್ನು ಎತ್ತಿ ತೋರುವ ಕೆಲಸಾನ ಆರ್.ಎಸ್.ಎಸ್. ಮಾಡ್ತಿದೆ. ರಾಷ್ಟ್ರಭಕ್ತಿ ಉಳಿಸೋ ಕೆಲಸಾನ ಮಾಡ್ತಿದೆ. ಆದ್ರೆ ಸಿದ್ಧರಾಮಯ್ಯ ಮಾತ್ರ ಇಂತಹ ಸಂಘಟನೆ ಬಗ್ಗೆ ಸುಳ್ಳು ಹೇಳೋ ಕೆಲಸ ಮಾಡ್ತಿದಾರೆ. ಮಾಜಿ ಸಿಎಂ ಆದಂಥವರಿಗೆ ಇದು ಶೋಭೆ ತರೋದಿಲ್ಲ. ಇನ್ನು ಮುಂದಾದ್ರೂ ತಿದ್ದುಕೊಂಡು ನಡೆಯಲಿ ಎಂದು ಸಿದ್ಧರಾಮಯ್ಯಗೆ ಶೆಟ್ಟರ್ ತಾಕೀತು ಮಾಡಿದರು.
Published by:Seema R
First published: