ದೇವಸ್ಥಾನಗಳ ತೆರವು ವಿಚಾರದಲ್ಲಿ ಅಧಿಕಾರಿಗಳ ತರಾತುರಿ ಸಲ್ಲ; ಜಗದೀಶ್ ಶೆಟ್ಟರ್

ದೇವಸ್ಥಾನಗಳ ತೆರವು ಅತ್ಯಂತ ಸೂಕ್ಷ್ಮ ವಿಚಾರವಾಗಿದ್ದು, ಅಧಿಕಾರಿಗಳು ತೋರಿದ ತರಾತುರಿ ಸರಿಯಲ್ಲ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅಸಮಾಧಾನ ವ್ಯಕ್ತಪಡಿಸಿದರು

ಜಗದೀಶ್ ಶೆಟ್ಟರ್

ಜಗದೀಶ್ ಶೆಟ್ಟರ್

  • Share this:
ಹುಬ್ಬಳ್ಳಿ (ಸೆ. 18): ರಾಜ್ಯದ  ದೇವಸ್ಥಾನಗಳ ತೆರವಿನ ವಿಚಾರದಲ್ಲಿ ಅಧಿಕಾರಿಗಳು ತರಾತುರಿ ತೂರಿಸುವುದು ಸರಿಯಲ್ಲ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.  ನಗರದಲ್ಲಿ ಮಾತನಾಡಿದ ಅವರು, ದೇವಸ್ಥಾನ ತೆರವು ಬಹಳ ಸೂಕ್ಷ್ಮ ವಿಚಾರವಾಗಿದೆ. ಈ ಸಂಬಂಧ ಸುಪ್ರೀಂಕೋರ್ಟ್ ತೀರ್ಪು ಇರಬಹುದು. ಆದರೆ ಪುರಾತನ ದೇವಾಲಯ ತೆರವು ವೇಳೆ ಅರ್ಚಾತುರ್ಯ ಆಗಿದೆ. ಸುಪ್ರೀಂಕೋರ್ಟ್ ತೀರ್ಪಿನಲ್ಲಿ‌ ಕೆಲವು ಷರತ್ತುಗಳನನು ಹಾಕಲಾಗಿದೆ. ಜೊತೆಗೆ ಕೆಲ ನಿರ್ದೇಶನಗಳಿವೆ. ಆದರೂ ತರಾತುರಿಯಲ್ಲಿ ದೇವಾಲಯಗಳನ್ನ ಒಡೆಯಬಾರದು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು

ಸಂಬಂಧಪಟ್ಟವರೊಂದಿಗೆ ಚರ್ಚೆ ಮುಖ್ಯ

ರಸ್ತೆಗಳಿಗೆ ಅಡ್ಡಿ ಆಗುವುದನ್ನು ತೆರವುಗೊಳಿಸಬಹುದು. ನೂರಾರು ವರ್ಷಗಳ ಹಳೆಯ ದೇವಾಲಯ ಕೆಡುವುವ ವೇಳೆ ಸಬಂಧಪಟ್ಟವರ ಜೊತೆ ಅಧಿಕಾರಿಗಳು ಚರ್ಚೆ ಮಾಡಬೇಕಿತ್ತು. ತೀರ್ಮಾನಕ್ಕೂ ಮುನ್ನ ಸೌಹಾರ್ದಯುತವಾಗಿ ಚರ್ಚಿಸಬೇಕಿತ್ತು. ರಸ್ತೆಗಳಿಗೆ ಅಡ್ಡಿ ಆಗುವ ಧಾರ್ಮಿಕ ಕೇಂದ್ರಗಳ ತೆರವು ವಿಚಾರವಾಗಿ ಕೆಲವಡೆ ಭೂಸ್ವಾಧೀನ ಆಗಿದೆ. ಪರಿಹಾರ ತಗೆದುಕೊಂಡ ನಂತರವೂ ಕೆಲವಡೆ ತೆರವು ಮಾಡಿಲ್ಲ. ಈ ಕುರಿತು ನಾನು ಅಧಿಕಾರಿಗಳ ಜೊತೆ ಚರ್ಚೆ ಮಾಡಿದಾಗಲೂ ಅಧಿಕಾರಿಗಳು ಅಸಡ್ಡೆ ತೋರಿದ್ದಾರೆ.  ಎಲ್ಲೆಲ್ಲಿ ಪರಿಹಾರ ನೀಡಲಾಗಿದೆ ಅದನ್ನು ಭೂ ಸ್ವಾಧೀನ ಮಾಡಿಕೊಳ್ಳಬೇಕು. ಸೌಹಾರ್ದಯುತ ಮಾತುಕತೆ ಮೂಲಕ ತೆರವುಗೊಳಿಸಬೇಕೆಂದು ಜಗದೀಶ್ ಶೆಟ್ಟರ್ ಅಭಿಪ್ರಾಯಪಟ್ಟಿದ್ದಾರೆ.

ಬಿಜೆಪಿ ಕಾರ್ಯಕಾರಿಣಿಯಲ್ಲಿ ಮಹತ್ವದ ಚರ್ಚೆ

ಇಂದಿನಿಂದ ದಾವಣಗೆರೆಯಲ್ಲಿ ನಡೆಯುತ್ತಿರೋ ಬಿಜೆಪಿ ಕಾರ್ಯಕಾರಣಿ ಸಭೆಯಲ್ಲಿ ಪಕ್ಷದ ಸಂಘಟನೆ ಮತ್ತಿತರ ಮಹತ್ವದ ವಿಷಯಗಳ ಚರ್ಚೆ ನಡೆಯಲಿದೆ. ಪಕ್ಷದ ಕಾರ್ಯಕಾರಿಣಿ ಸಭೆ ಎನ್ನುವುದು ನಿರಂತರ ಪ್ರಕ್ರಿಯೆ. ಮೂರು ತಿಂಗಳಿಗೆ ಒಮ್ಮೆ ಪಕ್ಷದಲ್ಲಿ ಕಾರ್ಯಕಾರಿಣಿ ಆಯೋಜನೆ ಮಾಡಲಾಗುತ್ತದೆ. ಬೆಂಗಳೂರು ಮಂಗಳೂರು ಕಲಬುರಗಿ ಮತ್ತಿತರ ಕಡೆ ಮಾಡಿದ್ದ ಕಾರ್ಯಕಾರಣಿ ಸಭೆ ಯಶಸ್ವಿಯಾಗಿತ್ತು. ಕೋವಿಡ್ ಇದ್ದಿದ್ದರಿಂದ ಈ ಹಿಂದೆ ವರ್ಚುವಲ್ ಕಾರ್ಯಕಾರಿಣಿ ಸಭೆ ಮಾಡಲಾಗಿತ್ತು. ಕೋವಿಡ್ ಒಂದಷ್ಟು ಕಡಿಮೆಯಾದ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲಿ ಸಭೆ ಮಾಡಲಾಗ್ತಿದೆ. ಪಕ್ಷದ ಸಂಘಟನೆ ಇತ್ಯಾದಿಗಳ ಕುರಿತು ಕಾರ್ಯಕಾರಿಣಿಯಲ್ಲಿ ಚರ್ಚೆ ನಡೆಯುತ್ತೆ. ಪಕ್ಷದ ಬೆಳವಣಿಗೆ ಕುರಿತ ಮಹತ್ವದ ಸಂಗತಿಗಳ ಚರ್ಚೆ ನಡೆಯಲಿದೆ ಎಂದರು.

ಇದನ್ನು ಓದಿ: ಕುಟುಂಬದ ಐವರ ಸಾವು ಪ್ರಕರಣಕ್ಕೆ ಹೊಸ ತಿರುವು: ಪೊಲೀಸರಿಗೆ ಸಿಕ್ತು ಸಾವಿಗೆ ಮುನ್ನ ಮಧುಸಾಗರ್​ ಬರೆದಿದ್ದ ಡೈರಿ

ಮೇಕೆದಾಟ ಯೋಜನೆ ಕುರಿತು ಕೇಂದ್ರದಿಂದ ಸೂಕ್ತ ನಿರ್ಧಾರ
ಮೇಕೆದಾಟು ಯೋಜನೆಗೆ ತಮಿಳುನಾಡು ಸರ್ಕಾರ ಅಪಸ್ವರ ತೆಗೆದಿದೆ. ಕೇಂದ್ರ ಸರ್ಕಾರ ಈ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಲಿದೆ. ಯೋಜನೆ ಅನುಷ್ಠಾನಕ್ಕೆ ಕೇಂದ್ರದ ಅರಣ್ಯ ಮತ್ತು ಪರಿಸರ ಇಲಾಖೆ ಅನುಮತಿಗಾಗಿ ನಿರೀಕ್ಷಿಸಲಾಗಿದೆ. ಮಹಾದಾಯಿ ಯೋಜನೆ ಅನುಷ್ಠಾನಕ್ಕೆ ಯಡಿಯ್ಯೂರಪ್ಪನವರು ಮುಖ್ಯಮಂತ್ರಿಗಳು ಇದ್ದ ವೇಳೆ 500 ಕೋಟಿ ರೂಪಾಯಿಗಳನ್ನು ಮೀಸಲಿರಿಸಿದ್ದಾರೆ ಎಂದರು.

ವಿಕಲಚೇತನರಿಗೆ ತ್ರಿಚಕ್ರ ವಾಹನ ವಿತರಣೆ...ಹುಬ್ಬಳ್ಳಿ ಸರ್ಕ್ಯೂಟ್ ಹೌಸ್ ಆವರಣದಲ್ಲಿ ಜಗದೀಶ್ ಶೆಟ್ಟರ್ ತ್ರಿಚಕ್ರ ಮೋಟಾರು ಸೈಕಲ್ ವಾಹನಗಳನ್ನು ವಿತರಣೆ ಮಾಡಿದರು. ತ್ರಿಚಕ್ರ ವಾಹನಗಳನ್ನು ವಿತರಿಸಿ, ಫಲಾನುಭವಿಗಳಿಗೆ ಕೀ ಹಸ್ತಾಂತರಿಸಿದರು. ವಿಕಲಚೇತನರು ಪ್ರತಿನಿತ್ಯ ಓಡಾಟ ನೆಡಸಲು ಕಷ್ಟಪಡುವುದನ್ನು ನಾವೆಲ್ಲ ನೋಡಿದ್ದೇವೆ. ಸರ್ಕಾರದಿಂದ ನೀಡಿರುವ ತ್ರಿಚಕ್ರ ವಾಹನ ವಿಕಲಚೇನರಿಗೆ ಸ್ವಾವಲಂಬಿ ಜೀವನ ಕಟ್ಟಿಕೊಳ್ಳಲು ಸಹಾಯಕಾರಿಯಾಗಿದೆ‌ ಎಂದರು.
Published by:Seema R
First published: