CT Ravi: ನಾಲ್ಕೈದು ತಲೆಗಳಾದ್ರೂ ಉರುಳಿದ್ರೆ ಹುಬ್ಬಳ್ಳಿ ಶಾಂತವಾಗಿರ್ತಿತ್ತು; ಸಿಟಿ ರವಿ ವಿವಾದಾತ್ಮಕ ಹೇಳಿಕೆ

ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರಿಂದಲೇ ಗಲಭೆ ನಿಯಂತ್ರಣಕ್ಕೆ ಬಂದಿದೆ. ಗಲಭೆ ಮಾಡಿದವರ ನಾಲ್ಕೈದು ತಲೆಗಳಾದರೂ ಹೋಗಿದ್ರೆ ಹುಬ್ಬಳ್ಳಿ ಕೆಲವರ್ಷ ಶಾಂತವಾಗಿರುತ್ತಿತ್ತು

ಸಿಟಿ ರವಿ

ಸಿಟಿ ರವಿ

  • Share this:
ಹುಬ್ಬಳ್ಳಿ (ಏ. 30):  ಹುಬ್ಬಳ್ಳಿ ಗಲಭೆಯಲ್ಲಿ (Hubli Riots) ನಾಲ್ಕೈದು ಜನರ ತಲೆ ಉರುಳಿದ್ದರೆ ಮುಂದಿನ 25 ವರ್ಷಗಳ ಕಾಲ ಹುಬ್ಬಳ್ಳಿ ಶಾಂತವಾಗಿರುತ್ತಿತ್ತು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ (CT Ravi ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ಗಲಭೆಕೋರರಿಗೆ ಜಮೀರ್ ಅಹ್ಮದ್​​ ನೆರವಿನ ಹಸ್ತ ವಿಚಾರಕ್ಕೆ ಕಿಡಿಕಾರಿದರು. ಕಾಂಗ್ರೆಸ್ ನವರು, ಜಮೀರ್ ಅಹ್ಮದ್ ಇಂತಹ ಗಲಭೆಕೋರರ ಓಲೈಕೆಗೆ ಮುಂದಾಗಿದ್ದಾರೆ. ಗಲಭೆಕೋರರಿಗೆ ಸಹಕಾರ ನೀಡುವುದೇ  ಅವರ ಕೆಲಸವಾಗಿದೆ ಎಂದು ವಿಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು

ಓಟ್​ ಸಲುವಾಗಿ ಓಲೈಕೆ
ಓಟ್ ಬ್ಯಾಂಕ್ ಸಲುವಾಗಿ ಗಲಭೆ ಕೋರರ ಓಲೈಕೆಗೆ ಮುಂದಾಗಿದ್ದಾರೆ. ಗಲಭೆಕೋರರು ಎಲ್ಲರೂ ತಮ್ಮ ಸಹೋದರಂತೆ ಕಾಂಗ್ರೆಸ್ ನವರು ಭಾವಿಸುತ್ತಾರೆ. ಕಾಂಗ್ರೆಸ್ ನವರಿಗೆ ಕಾನೂನಿನ ಮೇಲೆ ನಂಬಿಕೆ ಇಲ್ಲ. ನಂಬಿಕೆ ಇದ್ದಿದ್ರೆ ಕಾಂಗ್ರೆಸ್ ನವರು ಈ ರೀತಿ ವರ್ತನೆ ಮಾಡುತ್ತಿರಲಿಲ್ಲ. ಮುಸ್ಲಿಂರ ರೀತಿಯಲ್ಲಿ ಹಿಂದೂ ಸಮಾಜದವರು ಪ್ರತಿಕ್ರಿಯೆ ನೀಡಿದ್ರೆ ದೇಶದಲ್ಲಿ ಏನೆಲ್ಲ ಅನಾಹುತಗಳು ಸಂಭವಿಸುತ್ತಿದ್ದವು.

ವಿವಾದಾತ್ಮಕ ಹೇಳಿಕೆ ನೀಡಿದ ಬಿಜೆಪಿ ನಾಯಕ

ಕಾಂಗ್ರೆಸ್ ನವರು ಗಲಭೆಕೋರರು ಹಾಗೂ ತುಕಡೆ ಗ್ಯಾಂಗ್ ಪರ ಅನ್ನೋದನ್ನ ಸಾಬೀತುಪಡಿಸಿದ್ದಾರೆ. ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರಿಂದಲೇ ಗಲಭೆ ನಿಯಂತ್ರಣಕ್ಕೆ ಬಂದಿದೆ. ಗಲಭೆ ಮಾಡಿದವರ ನಾಲ್ಕೈದು ತಲೆಗಳಾದರೂ ಹೋಗಿದ್ರೆ ಹುಬ್ಬಳ್ಳಿ ಕೆಲವರ್ಷ ಶಾಂತವಾಗಿರುತ್ತಿತ್ತು ಎಂದು ಸಿ. ಟಿ. ರವಿ ಅಭಿಪ್ರಾಯ ಪಟ್ಟಿದ್ದಾರೆ.

ಪಿಎಸ್ಐ ಮರು ಪರೀಕ್ಷೆ ಸಮಯೋಚಿತ ನಿರ್ಧಾರ
ಪಿಎಸ್ ಐ ಮರು ಪರೀಕ್ಷೆ ವಿಚಾರದಲ್ಲಿ ಸರ್ಕಾರ ಸಮಯೋಚಿತ ನಿರ್ಧಾರ ತೆಗೆದುಕೊಂಡಿದೆ ಎದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅಭಿಪ್ರಾಯಪಟ್ಟಿದ್ದಾರೆ. ಪಿ. ಎಸ್. ಐ.  ನೇಮಕಾತಿ ಪರೀಕ್ಷಾ ಅಕ್ರಮದ ಬಗ್ಗೆ ಈಗಾಗಲೇ ತನಿಖೆ ನಡೆಯುತ್ತಿದೆ. ಹಲವು ಜನರನ್ನ ಬಂಧನ ಮಾಡಲಾಗಿದೆ. ಒಂದು ವೇಳೆ ನೇರ ನೇಮಕ ಮಾಡಿದ್ರೆ ವಿಪಕ್ಷಗಳು ಟೀಕೆ ಮಾಡುತ್ತಿದ್ದರು. ಅಕ್ರಮಕ್ಕೆ ಅವಕಾಶವಾಗಬಾರದು ಎಂಬ ದೃಷ್ಠಿಯಿಂದ ಸರ್ಕಾರ ಈ‌ ನಿರ್ಧಾರ ತೆಗೆದುಕೊಂಡಿದೆ. ಪಾರದರ್ಶಕವಾಗಿ, ಪ್ರಾಮಾಣಿಕವಾಗಿ ಪರೀಕ್ಷೆ ನಡೆಸಬೇಕು ಎನ್ನುವ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿದೆ.

ಇದನ್ನು ಓದಿ: ಬಿಸಿಲು ಹೆಚ್ಚಿರುವ ಹಿನ್ನಲೆ ವಿದ್ಯುತ್​​ ಬೇಡಿಕೆ ಹೆಚ್ಚಿದೆ; ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಶಿ

ಅಕ್ರಮ ಎಸಗಿದರ ಪರ ಕಾಂಗ್ರೆಸ್  ವಕಾಲತ್ತು

ಇದರಲ್ಲಿ ಅಕ್ರಮ‌ ನಡೆಸಿ ಎಷ್ಟು ಜನ ಪಾಸಾಗಿದ್ದಾರೆ ಸ್ಪಷ್ಟವಾಗಿಲ್ಲ. ಪ್ರಾಮಾಣಿಕವಾಗಿ ಪರೀಕ್ಷೆ ಬರೆದವರು ಮರು ಪರೀಕ್ಷೆಯಲ್ಲಿ ಪಾಸ್ ಆಗೇ ಆಗ್ತಾರೆ. ತನಿಖೆ ಮುಗಿದು ತೀರ್ಪು ಬರೋದರೊಳಗಾಗಿ ಅಭ್ಯರ್ಥಿಗಳು ನಿವೃತ್ತಿ ವಯಸ್ಸಿಗೆ ಬಂದಿರುತ್ತಾರೆ. ನಮ್ಮ‌ದೇಶದಲ್ಲಿ ಇಂತಹ ಪ್ರಕರಣಗಳು 25 ವರ್ಷದವರೆಗೂ ಹೋಗುತ್ತವೆ. ಕಾಂಗ್ರೆಸ್ ನವರು ಅಕ್ರಮ ಎಸಗಿದವರ ಪರ ವಕಾಲತ್ತು ಮಾಡುತ್ತಿರುವಂತಿದೆ. ಅದಕ್ಕೆ ಸರ್ಕಾರದ ನಿರ್ಧಾರಕ್ಕೆ ಈ ರೀತಿ ಅಪಸ್ವರ ಎತ್ತುತ್ತಿದ್ದಾರೆ. ಈಗ ಆಗಿರುವ ತಪ್ಪುಗಳಿಂದ ಪಾಠ ಕಲಿತು ಮುಂದೆ ಹೀಗಾಗದಂತೆ ಎಚ್ಚರ ವಹಿಸಬೇಕಿದೆ ಎಂದರು.

ಇದನ್ನು ಓದಿ: ಹುಬ್ಬಳ್ಳಿ ಗಲಭೆ ಪ್ರಕರಣ; ಕಸ್ಟಡಿಯಲ್ಲಿದ್ದ ಆರೋಪಿಯಿಂದ ಆತ್ಮಹತ್ಯೆ ಯತ್ನ

ಸಿದ್ಧರಾಮಯ್ಯ ಹೇಳಿಕೆಗೆ ರವಿ ಕಿಡಿ
ಬಿಜೆಪಿಯಲ್ಲಿ ಅಡಿಯಿಂದ ಮುಡಿವರೆಗೂ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಸಿದ್ಧರಾಮಯ್ಯ ಆರೋಪಕ್ಕೆ ಸಿ. ಟಿ. ರವಿ ತಿರುಗೇಟು ನೀಡಿದರು. ರಾಜ್ಯ ರಾಜಕಾರಣದಲ್ಲಿ ಸಿದ್ಧರಾಮಯ್ಯನವರಷ್ಟು ಪ್ರಾಮಾಣಿಕರು ಯಾರೂ ಇಲ್ಲ ಎಂದು ವ್ಯಂಗ್ಯವಾಡಿದ ಬಿಜೆಪಿ ನಾಯಕ,  ಅವರ ಪ್ರಾಮಾಣಿಕತೆಗೆ ಅರ್ಕಾವತಿ ಬಡಾವಣೆ ಹರಣ ಗಮನಿಸಿ ಸಾಕು. ಕೆಂಪಣ್ಣ ಆಯೋಗದ ವರದಿ ತೆಗೆದು ನೋಡಿದರೆ ಸಿದ್ಧರಾಮಯ್ಯ ಪ್ರಾಮಾಣಿಕತೆಗೆ ಸರ್ಟಿಫಿಕೇಟ್ ಸಿಗುತ್ತೆ ಎಂದರು.
Published by:Seema R
First published: