Karnataka Politics: ಇಂದು ಹುಬ್ಬಳ್ಳಿಯಲ್ಲಿ ರಾಜ್ಯ ಬಿಜೆಪಿ ಕಾರ್ಯಕಾರಿಣಿ, ಸಿಎಂ ಸ್ಥಾನದಿಂದ ಬೊಮ್ಮಾಯಿಗೆ ಕೊಕ್​?

ಶಾಸಕರು ಅಹವಾಲುಗಳನ್ನೂ ಪಡೆಯಲಿರೋ ರಾಷ್ಟ್ರೀಯ ನಾಯಕರು, ಹೈಕಮಾಂಡ್ ಗೆ ತಲುಪಿಸೋ ಕಾರ್ಯ ಮಾಡಲಿದ್ದಾರೆ ಎನ್ನಲಾಗಿದೆ. ಮಹತ್ವದ ನಿರ್ಣಯಗಳಿಗೆ ಹುಬ್ಬಳ್ಳಿ ಕಾರ್ಯಕಾರಿಣಿ ಸಾಕ್ಷಿಯಾಗುತ್ತೆ ಅನ್ನೋ ನಿರೀಕ್ಷೆ ಇದೆ.

ಸಿಎಂ ಬೊಮ್ಮಾಯಿ

ಸಿಎಂ ಬೊಮ್ಮಾಯಿ

  • Share this:
ಹುಬ್ಬಳ್ಳಿ(ಡಿ.28): ಹತ್ತು ವರ್ಷಗಳ ನಂತರ ಹುಬ್ಬಳ್ಳಿ (Hubli)ಯಲ್ಲಿ ನಡೆಯುತ್ತಿರೋ ಬಿಜೆಪಿ ರಾಜ್ಯ ಕಾರ್ಯಕಾರಿಣಿ (BJP Core Committee Meeting)ಯತ್ತ ಎಲ್ಲರ ದೃಷ್ಟಿ ನೆಟ್ಟಿದೆ. ಧಾರವಾಡ ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai) ತವರು ಜಿಲ್ಲೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಾಜಿ ಸಿಎಂ ಜಗದೀಶ್ ಶೆಟ್ಟರ್ (Jagadeesh Shettar) ರಾಜಕೀಯ ಕರ್ಮಭೂಮಿಯಾಗಿರೋ ಹುಬ್ಬಳ್ಳಿಯಲ್ಲಿ ನಡೆಯುತ್ತಿರೋ ಕಾರ್ಯಕಾರಿಣಿ ಬಿಸಿಯೇರಿದ ಚರ್ಚೆಗೆ ವೇದಿಕೆಯಾಗುತ್ತೆ ಎಂದೇ ಚರ್ಚೆಗೊಳ್ಳುತ್ತಿದೆ. ಸಿಎಂ ಬದಲಾವಣೆ (CM Change) ಕುರಿತೂ ಮಾಹಿತಿ ಸಂಗ್ರಹಿಲಾಗುತ್ತಿದೆ ಎನ್ನೋ ಮಾತೂ ಕೇಳಿ ಬರುತ್ತಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಜೆ.ಪಿ.ನಡ್ಡಾ (JP Nadda) ಪ್ರವಾಸ ಕೊನೆಯ ಕ್ಷಣದಲ್ಲಿ ರದ್ದಾಗಿರೋದು ಕುತೂಹಲ ಕೆರಳಿಸಿದೆ. ಈ ನಡುವೆ ಸಿಎಂ ಬೊಮ್ಮಾಯಿ ಬದಲಾವಣೆ ಇಲ್ಲ ಎಂದು ಅರುಣ್ ಸಿಂಗ್ (Arun Singh) ಸ್ಪಷ್ಟಪಡಿಸಿದ್ದಾರೆ.

ಕಾರ್ಯಕಾರಿಣಿ ಸಭೆಗೆ ಸಿಎಂ ಚಾಲನೆ

ಹತ್ತು ವರ್ಷಗಳ ನಂತರ ಹುಬ್ಬಳ್ಳಿಯಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ನಡೆಯುತ್ತಿದೆ. ಇಂದಿನಿಂದ ಎರಡು ದಿನಗಳ ಕಾಲ ನಡೆಯಲಿರೋ ಕಾರ್ಯಕಾರಿಣಿಗೆ ಭರದ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಹುಬ್ಬಳ್ಳಿಯ ಖಾಸಗಿ ಹೋಟೆಲ್ ನಲ್ಲಿ ನಡೆಯಲಿರೋ ಕಾರ್ಯಕಾರಿಣಿಗೆ ಇಂದು ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ. ಕಾರ್ಯಕಾರಿಣಿಗೆ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿದ್ದು, ವಾಣಿಜ್ಯ ನಗರಿ ಬ್ಯಾನರ್, ಬಂಟಿಂಗ್ ಗಳಿಂದ ರಾರಾಜಿಸುತ್ತಿದೆ. ವಾಣಿಜ್ಯ ನಗರಿ ಹುಬ್ಬಳ್ಳಿ ಕೇಸರಿಮಯವಾಗಿದೆ. ರಾಜ್ಯದ ಮೂಲೆ ಮೂಲೆಗಳಿಂದ ಕಾರ್ಯಕಾರಿಣಿಗೆ ಬರೋ ನಾಯಕರಿಗೆ ಭವ್ಯ ಸ್ವಾಗತ ಕೋರಲಾಗಿದೆ.

ಇದನ್ನೂ ಓದಿ: CM Change Crisis: ಇನ್ನೆರಡು ದಿನದಲ್ಲಿ ಬೊಮ್ಮಾಯಿ‌ ಭವಿಷ್ಯ ನಿರ್ಧಾರ, ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡ್ತಾರಾ?

ನಾಳೆ ಮಹತ್ವದ ನಿರ್ಣಯ ಸಾಧ್ಯತೆ

ಡಿಸೆಂಬರ್ 29 ರಂದು ಸಮಾರೋಪ ಸಮಾರಂಭ ನಡೆಯಲಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಪ್ರವಾಸ ರದ್ದಾಗಿದ್ದು, ಉಳಿದಂತೆ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ್ ಕಟೀಲ್ ಮತ್ತಿತರರು ಭಾಗಿಯಾಗಲಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ ಬಹಿರಂಗ ಸಮಾವೇಶಗಳು ರದ್ದುಗೊಳಿಸಲಾಗಿದೆ. ಉಪ ಚುನಾವಣೆ, ಪರಿಷತ್ ಚುನಾವಣಾ ಫಲಿತಾಂಶದ ಕುರಿತು ಆತ್ಮಾವಲೋಕನ ನಡೆಯಲಿದೆ. ಮುಂಬರುವ ಚುನಾವಣೆಗೆ ಸಜ್ಜುಗೊಳ್ಳೋ ಕುರಿತು ಸಹ ಚರ್ಚೆಗಳು ನಡೆಯಲಿವೆ. ಶಾಸಕರು ಅಹವಾಲುಗಳನ್ನೂ ಪಡೆಯಲಿರೋ ರಾಷ್ಟ್ರೀಯ ನಾಯಕರು, ಹೈಕಮಾಂಡ್ ಗೆ ತಲುಪಿಸೋ ಕಾರ್ಯ ಮಾಡಲಿದ್ದಾರೆ ಎನ್ನಲಾಗಿದೆ. ಮಹತ್ವದ ನಿರ್ಣಯಗಳಿಗೆ ಹುಬ್ಬಳ್ಳಿ ಕಾರ್ಯಕಾರಿಣಿ ಸಾಕ್ಷಿಯಾಗುತ್ತೆ ಅನ್ನೋ ನಿರೀಕ್ಷೆ ಇದೆ.

ಮುಖ್ಯಮಂತ್ರಿ ಬದಲಾಗಲ್ಲ ಎಂದ ಅರುಣ್ ಸಿಂಗ್

ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಬದಲಾವಣೆ ಕೇವಲ ಊಹಾಪೋಹ. ಮುಂದಿನ ಚುನಾವಣೆಯನ್ನು ಬೊಮ್ಮಾಯಿ ನೇತೃತ್ವದಲ್ಲಿ ನಡೆಸಲಾಗುವುದು ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸ್ಪಷ್ಟಪಡಿಸಿದ್ದಾರೆ. ಬಿಜೆಪಿ ರಾಜ್ಯ ಕಾರ್ಯಕಾರಿಣಿ ಹಿನ್ನೆಲೆಯಲ್ಲಿ ಹುಬ್ಬಳ್ಳಿ ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ಮಾತನಾಡಿದ ಅರುಣ್ ಸಿಂಗ್, ಸಿಎಂ ಬೊಮ್ಮಾಯಿಗೆ ಬಹು ಪಾರಕ್ ಹೇಳಿದ್ದಾರೆ. ಸಿಎಂ ಅದ್ಬುತ ಕೆಲಸ‌ ಮಾಡುತ್ತಿದ್ದಾರೆ. ಬೊಮ್ಮಾಯಿ ಅತ್ಯಂತ ಪ್ರಾಮಾಣಿಕ, ಸಜ್ಜನ ರಾಜಕಾರಣಿ. ಬಸವರಾಜ ಬೊಮ್ಮಯಿ ಸಿಎಂ ಆಗಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ. ಬೊಮ್ಮಯಿ ನೇತೃತ್ವದಲ್ಲಿ ಮುಂದಿನ ಚುನಾವಣೆ ನಡೆಯಲಿದೆ ಎಂದರು.

ಕಾಂಗ್ರೆಸ್​​ನವರದ್ದು ತುಷ್ಠೀಕರಣ ರಾಜಕೀಯ

ಯಡಿಯೂರಪ್ಪ ಅವರು ಬದಲಾಗಲ್ಲ ಅಂತ ಹೇಳ್ತಿದ್ದ ವಿಚಾರವಾಗಿ, ಸಿಎಂ ಸ್ಥಾನದಿಂದ ನಾವಾಗಿಯೇ ತೆಗೆದಿಲ್ಲ. ಯಡಿಯೂರಪ್ಪ ಅವರೇ ಯುವಕರಿಗೆ ಸಿಎಂ ಸ್ಥಾನ ಬಿಟ್ಟುಕೊಟ್ಟಿದ್ದಾರೆ ಎಂದು ಸ್ಪಷ್ಟನೆ ನೀಡಿದರು. ಇದೇ ವೇಳೆ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಅರುಣ್ ಸಿಂಗ್, ದೇಶದಲ್ಲಿ ಎಲ್ಲಿಯೂ ಕಾಂಗ್ರೆಸ್ ಗೆ ನೆಲೆ ಇಲ್ಲ. ರಾಹುಲ್ ಗಾಂಧಿ ಮಾಡುವ ಆರೋಪಗಳಿಂದ ಬಿಜೆಪಿ ವರವಾಗುತ್ತೆ. ಕೇಂದ್ರದಲ್ಲಿ ಕಾಂಗ್ರೆಸ್ ಗೆ ಶಕ್ತಿ ಇಲ್ಲ. ಸಿಎಂ ಸ್ಥಾನಕ್ಕಾಗಿ ಡಿಕೆಶಿ ಮತ್ತು ಸಿದ್ಧರಾಮಯ್ಯ ನಡುವೆ ಈಗಿನಿಂದಲೇ ಕಿತ್ತಾಟ ಶುರುವಾಗಿದೆ. ಕಾಂಗ್ರೆಸ್ ನಲ್ಲಿ ಆಂತರಿಕ ಕಚ್ಚಾಟ ಜೋರಾಗಿದೆ. ಪ್ರಿಯಾಂಕಾ ಹಾಗೂ ರಾಹುಲ್ ವರ್ಚಸ್ಸು ನಡೆಯಲ್ಲ. ಕಾಂಗ್ರೆಸ್ ನವರು ತುಷ್ಠೀಕರಣ ರಾಜಕೀಯ ಮಾಡುತ್ತಿದ್ದಾರೆ. ಇದೇ ಅವರಿಗೆ ಮುಳುವಾಗಲಿದೆ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ‘ಕನ್ನಡ ಕಟುಕರ ಕೈಯಲ್ಲಿ ಸಿಕ್ಕಿಕೊಂಡಿದೆ‘: NET ಪರೀಕ್ಷೆಯಲ್ಲಿ ಹಿಂದಿ ಬಳಕೆ ವಿರುದ್ಧ HD Kumarasway ಆಕ್ರೋಶ

ಸಿಎಂ ಬದಲಾವಣೆ ಊಹಾಪೋಹ-ಕಟೀಲ್​

ಅರುಣ್ ಸಿಂಗ್ ಜೊತೆಗೆ ಧ್ವನಿಗೂಡಿಸಿರೋ ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ್ ಕಟೀಲ್, ಸಿಎಂ ಬದಲಾವಣೆ ಆಗ್ತಾರೆ ಎಂಬುದು ಉಹಾಪೋಹ. ಮುಂದಿನ ಚುನಾವಣೆವರೆಗೆ ಇವರೇ ಇರ್ತಾರೆ. ಯಡಿಯೂರಪ್ಪ ಅಧಿಕಾರ ವಹಿಸಿಕೊಂಡ ದಿನದಿಂದಲೂ ರಾಜೀನಾಮೆ ಕೊಡ್ತಾರೆ ಅಂತ ಸುದ್ದಿ ಹಬ್ಬಿಸಿದರು. ಆದರೆ ಅವರು ಎರಡೂವರೆ ವರ್ಷ ಸಿಎಂ ಆಗಿದ್ದರು. ಬೊಮ್ಮಾಯಿ ವಿಚಾರದಲ್ಲಿಯೂ ಇದೇ ಮಾತು ಕೇಳಿ ಬರ್ತಿದೆ. ಆದರೆ‌ ಈಗಲೂ ಅವರೇ ಸಿಎಂ ಆಗಿ ಮುಂದುವರೆದಿದ್ದಾರೆ ಎಂದರು.

ಹೈಕಮಾಂಡ್​ ಮುಂದೆ ಅತೃಪ್ತರ ಅಹವಾಲು

ಒಟ್ಟಾರೆ ಹುಬ್ಬಳ್ಳಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ಬಿಸಿಯೇರಿದ ಚರ್ಚೆಗಂತೂ ವೇದಿಕೆಯಾಗೋದು ಸತ್ಯ. ಅತೃಪ್ತರು ತಮ್ಮ ಅಹವಾಲುಗಳನ್ನು ಹೈಕಮಾಂಡ್ ಮುಂದಿಡೋಕೆ ಈಗಾಗಲೇ ಸಜ್ಜುಗೊಂಡಿದ್ದಾರೆ. ಅತೃಪ್ತಿ ಶಮನದ ಜೊತೆಗೆ ಪಕ್ಷದ ಸಂಘಟನೆಯ ನಿಟ್ಟಿನಲ್ಲಿಯೂ ಕಾರ್ಯಕಾರಿಣಿಯಲ್ಲಿ ಮಹತ್ವದ ನಿರ್ಣಯ ಕೈಗೊಳ್ಳುವ ಸಾಧ್ಯತೆಗಳಿವೆ.
Published by:Latha CG
First published: