• Home
  • »
  • News
  • »
  • state
  • »
  • Hubballi News: ವಿಮಾನಕ್ಕಿಂತ ಬಸ್ ಟಿಕೆಟ್ ದರವೇ ಹೆಚ್ಚು! ಬೆಂಗಳೂರಿನಿಂದ ಹುಬ್ಬಳ್ಳಿಗೆ ಹೊರಟವರಿಗೆ ಶಾಕ್

Hubballi News: ವಿಮಾನಕ್ಕಿಂತ ಬಸ್ ಟಿಕೆಟ್ ದರವೇ ಹೆಚ್ಚು! ಬೆಂಗಳೂರಿನಿಂದ ಹುಬ್ಬಳ್ಳಿಗೆ ಹೊರಟವರಿಗೆ ಶಾಕ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Bengaluru To Hubballi: ಬೆಂಗಳೂರಿನಿಂದ ಹುಬ್ಬಳ್ಳಿಗೆ ಬಸ್​ನಲ್ಲಿ ಪ್ರಯಾಣಿಸುವುದಕ್ಕಿಂತ ವಿಮಾನದಲ್ಲಿ ಪ್ರಯಾಣಿಸುವುದೇ ಒಂದರ್ಥದಲ್ಲಿ ಬೆಸ್ಟ್ ಎಂಬ ಮಾತುಗಳು ಕೇಳಿಬರುತ್ತಿವೆ.

  • News18 Kannada
  • Last Updated :
  • Bangalore [Bangalore], India
  • Share this:

    ದೀಪಾವಳಿ ಹಬ್ಬಕ್ಕೆ ಹುಬ್ಬಳ್ಳಿಯ ಜನರಿಗೆ ಎಲ್ಲಿಲ್ಲದ ಶಾಕ್ ಎದುರಾಗಿದೆ. ಬೆಂಗಳೂರಿನಲ್ಲಿ ವಾಸವಿರುವ ಹುಬ್ಬಳ್ಳಿ- ಧಾರವಾಡದ (Hubballi Dharwad News) ನಾಗರಿಕರು ಹಬ್ಬಕ್ಕೆ ಊರಿಗೆ ಹೋಗೋಣ ಎಂದು ಬಸ್ ಬುಕ್ ಮಾಡಹೊರಟರೆ ಅಬ್ಬಾ! ಎಂದು ಮೂಗಿನ ಮೇಲೆ ಬೆರಳಿಡುವಂಥಾ ಸ್ಥಿತಿ ನಿರ್ಮಾಣವಾಗಿದೆ. ಹೌದು, ಕೆಎಸ್​ಆರ್​ಟಿಸಿ ಬಸ್​ಗೆ (KSRTC Bus Ticket Price) ಟಿಕೆಟ್ ಸಿಕ್ಕದೇ, ರೈಲಿನಲ್ಲೂ ಸಿಕೆಟ್ ಸಿಕ್ಕದೇ ಇರುವವರು ಅನಿವಾರ್ಯ ಎಂಬಂತೆ ಖಾಸಗಿ ಬಸ್ ಮೊರೆಹೋಗಬೇಕಾಗುತ್ತದೆ. ಆದರೆ ಬೆಂಗಳೂರಿನಿಂದ ಹುಬ್ಬಳ್ಳಿಗೆ ಖಾಸಗಿ ಬಸ್​ ಒಂದಕ್ಕೆ ಟಿಕೆಟ್ (Bengaluru To Hubballi Private Bus) ಬರೋಬ್ಬರಿ 5,000 ರೂ. ಪಾವತಿಸಬೇಕಾಗಿದೆ. ಬೆಂಗಳೂರಿನಿಂದ ಹುಬ್ಬಳ್ಳಿಗೆ ವಿಮಾನದಲ್ಲೇ ಪ್ರಯಾಣಿಸುತ್ತೀರಿ ಎಂದರೂ ಸಾಮಾನ್ಯವಾಗಿ ಟಿಕೆಟ್ ದರ 4ರಿಂದ 5 ಸಾವಿರ ಇರುತ್ತದೆ.




    ಬೆಂಗಳೂರಿನಿಂದ ಹುಬ್ಬಳ್ಳಿಗೆ ಬಸ್ ಪ್ರಯಾಣ ದರ
    ಸದ್ಯ ಬೆಂಗಳೂರಿನಿಂದ ಹುಬ್ಬಳ್ಳಿಗೆ ಬಸ್​ನಲ್ಲಿ ಪ್ರಯಾಣಿಸುವುದಕ್ಕಿಂತ ವಿಮಾನದಲ್ಲಿ ಪ್ರಯಾಣಿಸುವುದೇ ಒಂದರ್ಥದಲ್ಲಿ ಬೆಸ್ಟ್ ಎಂಬ ಮಾತುಗಳು ಕೇಳಿಬರುತ್ತಿವೆ.


    ಬೆಂಗಳೂರಿನಿಂದ ಹುಬ್ಬಳ್ಳಿಗೆ ವಿಮಾನ ಪ್ರಯಾಣ ದರ


    ಬೆಂಗಳೂರಿನಿಂದ ಹುಬ್ಬಳ್ಳಿಗೆ ವಿಮಾನ ಪ್ರಯಾಣ ದರ
    ಸರ್ಕಾರದ ಸೂಚನೆಗೂ ಕ್ಯಾರೇ ಇಲ್ಲ!
    ಸರ್ಕಾರ ಎಷ್ಟೆ ಬಿಗಿ ಹಿಡಿತದ ಭರವಸೆ ನೀಡಿದರೂ ಖಾಸಗಿ ಬಸ್ ಟಿಕೆಟ್ ದರ ಹೆಚ್ಚಳ ನಿಯಂತ್ರಣಕ್ಕೆ ಬಂದಿಲ್ಲ. ಬೆಂಗಳೂರಿನಿಂದ ಉತ್ತರ ಕರ್ನಾಟಕ, ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಿಗೆ ಪ್ರಯಾಣಿಸುವ ಜನರು ಅತಿ ಹೆಚ್ಚು ಬಸ್ ಟಿಕೆಟ್ ಪಾವತಿಸಬೇಕಾದ ಸಂದರ್ಭ ಎದುರಾಗಿದೆ.


    ಇದನ್ನೂ ಓದಿ: ಓಲಾ, ಉಬರ್​ಗೆ ಸೆಡ್ಡು ಹೊಡೆದು BMTC ಆ್ಯಪ್ ಆಧಾರಿತ ಸೇವೆ ನೀಡುತ್ತಾ?


    ಬೆಂಗಳೂರಿನಿಂದ ಯಾವೆಲ್ಲ ಊರಿಗೆ ಎಷ್ಟು ಟಿಕೆಟ್ ದರ ಇದೆ?
    ಬೆಂಗಳೂರು ನಗರದಿಂದ ಉತ್ತರ ಕನ್ನಡದ ಶಿರಸಿಗೆ ನೂರಾರು ಜನರು ಈ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಸುತ್ತಾರೆ. ಶಿರಸಿ ಅಥವಾ ಉತ್ತರ ಕನ್ನಡದ ಕಾರವಾರ, ಅಂಕೋಲಾ, ಯಲ್ಲಾಪುರದಂತಹ ಊರುಗಳಿಗೆ ಟಿಕೆಟ್ ಬೆಲೆ ನೋಡಿದರೆ ತಲೆ ಧಿಮ್ ಅನ್ನುತ್ತೆ! 1,400 ರೂ.ನಿಂದ ಶುರುವಾಗುವ ಖಾಸಗಿ ಬಸ್ ಟಿಕೆಟ್ ದರ 2000 ವನ್ನೂ ತಲುಪಿ ಮುನ್ನುಗ್ಗುತ್ತಿದೆ.


    ಖಾಸಗಿ ಬಸ್ ದರ ಹೆಚ್ಚಳಕ್ಕೆ ಪ್ರಯಾಣಿಕರಿಂದ ತೀವ್ರ ಆಕ್ರೋಶ
    ಖಾಸಗಿ ಬಸ್​ಗಳು ಹಬ್ಬ ಬಂದ್ರೆ ಸಾಕು, ಒಮ್ಮೆಲೆ ಹಿಗ್ಗಾಮುಗ್ಗಾ ಬಸ್ ಪ್ರಯಾಣ ದರ ಹೆಚ್ಚಳ ಮಾಡುತ್ತವೆ. ಎಲ್ಲರಿಗೂ ಕೆಎಸ್​ಆರ್​ಟಿಸಿ ಬಸ್ ಸೀಟುಗಳ ದೊರೆಯಲ್ಲ, ರೈಲು ಸೀಟುಗಳ ಸಹ ಸಿಗಲ್ಲ. ಹೀಗಾಗಿ ಅನಿವಾರ್ಯವಾಗಿ ಖಾಸಗಿ ಬಸ್​ಗಳನ್ನು ಆಶ್ರಯಿಸುವ ಪರಿಸ್ಥಿತಿ ಬಂದೊದಗುತ್ತದೆ. ಆದರೆ ಇದೇ ಅನಿವಾರ್ಯತೆಯನ್ನು ಖಾಸಗಿ ಬಸ್ ಸಂಸ್ಥೆಗಳು ದುರುಪಯೋಗಪಡಿಸಿಕೊಳ್ಳುವುದು ಸರಿಯಲ್ಲ. ಸರ್ಕಾರ ಖಾಸಗಿ ಬಸ್ ಸಂಸ್ಥೆಗಳಿಗೆ ಮೂಗುದಾರ ಹಾಕಬೇಕು ಎಂದು ಬೆಂಗಳೂರಿನಿಂದ ಹುಬ್ಬಳ್ಳಿಗೆ ಹೊರಟಿದ್ದ ಪ್ರಯಾಣಿಕರಾದ  ಪರಮಶಿವಪ್ಪ ಹುಬ್ಬಳ್ಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.


    ಭಾರತೀಯ ರೈಲ್ವೇಯಿಂದ ವಿಶೇಷ ರೈಲುಗಳು
    ಬೆಂಗಳೂರಿನಿಂದ ನೀವೂ ದೀಪಾವಳಿ ಹಬ್ಬಕ್ಕೆ ಊರಿಗೆ ಹೋಗುವ ಪ್ಲಾನ್ ಮಾಡಿದ್ದರೆ ಈ
    ವಿಶೇಷ ರೈಲುಗಳಲ್ಲಿ ಬುಕಿಂಗ್ ಮಾಡಬಹುದು. ಬೆಂಗಳೂರಿನಿಂದ ಹುಬ್ಬಳ್ಳಿ, ಬೆಳಗಾವಿ, ಶಿವಮೊಗ್ಗ ಸೇರಿದಂತೆ ಹಲವೆಡೆ ಈ ರೈಲುಗಳು ಸೇವೆ ನೀಡಲಿವೆ.


    ಇದನ್ನೂ ಓದಿ: Kalaburagi: ಈ ಡಾಕ್ಟರ್ ಫೀಸ್ 10 ರೂಪಾಯಿ ಮಾತ್ರ!


    ಅಕ್ಟೋಬರ್ 21ರ ಮಧ್ಯಾಹ್ನ 2:30 ಕ್ಕೆ ಬೆಂಗಳೂರಿನಿಂದ ಹೊರಡುವ ಯಶವಂತಪುರ ಎಸ್ ಎಸ್ ಎಸ್ ಹುಬ್ಬಳ್ಳಿ ಸೂಪರ್ ಫಾಸ್ಟ್​ ವಿಶೇಷ ಎಕ್ಸ್​ಪ್ರೆಸ್ ರೈಲು ರಾತ್ರಿ 9:50ಕ್ಕೆ ಹುಬ್ಬಳ್ಳಿ ನಗರವನ್ನು ತಲುಪಲಿದೆ.


    ಹುಬ್ಬಳ್ಳಿಯಿಂದ ಹೊರಡುವ ಸಮಯ
    ಹುಬ್ಬಳ್ಳಿಯಿಂದ ಅಕ್ಟೋಬರ್ 22ರಂದು ಬೆಳಗ್ಗೆ 1 ಗಂಟೆಗೆ ಬೆಂಗಳೂರಿಗೆ ಹೊರಡುವ ಎಸ್.ಎಸ್.ಎಸ್. ಹುಬ್ಬಳ್ಳಿ- ಯಶವಂತಪುರ ಸೂಪರ್ ಫಾಸ್ಟ್​ ವಿಶೇಷ ಎಕ್ಸ್​ಪ್ರೆಸ್ ರೈಲು ಬೆಳಗ್ಗೆ 9:30ಕ್ಕೆಲ್ಲ ಬೆಂಗಳೂರನ್ನು ತಲುಪಲಿದೆ.


    ಬೆಳಗಾವಿ-ಯಶವಂತಪುರ ಸೂಪರ್ ಫಾಸ್ಟ್ ವಿಶೇಷ ಎಕ್ಸ್‌ಪ್ರೆಸ್ ರೈಲು
    ಅಕ್ಟೋಬರ್ 26ರಂದು ಬೆಳಗಾವಿ ರೈಲು ನಿಲ್ದಾಣದಿಂದ ಬೆಳಗಾವಿ-ಯಶವಂತಪುರ ಸೂಪರ್ ಫಾಸ್ಟ್ ವಿಶೇಷ ಎಕ್ಸ್‌ಪ್ರೆಸ್ ರೈಲು ರಾತ್ರಿ 10 ಗಂಟೆಗೆ ಹೊರಟು ಮರುದಿನ ಬೆಳಗ್ಗೆ 6.50ಕ್ಕೆ ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣವನ್ನು ತಲುಪಲಿದೆ.

    Published by:ಗುರುಗಣೇಶ ಡಬ್ಗುಳಿ
    First published: