ಡಿಕೆಶಿ ನನ್ನ ಜೇಬಿನಲ್ಲಿದ್ದಾರೆ ಎಂದು ಹೆಬ್ಬಾಳ್ಕರ್​​ ಅಳಿಯನಿಂದ ಆವಾಜ್ ಆರೋಪ ಸಭೆಯಲ್ಲಿ ಕೂಗಾಡಿದ ಕಾಂಗ್ರೆಸ್​ ಮುಖಂಡ

ಬೆಳಗಾವಿ ವಿಭಾಗ ಮಟ್ಟದ ಕಾಂಗ್ರೆಸ್ ಸಮಾವೇಶದಲ್ಲಿ ಮುಖಂಡರ ಜೊತೆ ಸಮಾಲೋಚನೆ ನಡೆಸುತ್ತಿರುವ ವೇಳೆ ಏಕಾಏಕಿ ನುಗ್ಗಿದ ವ್ಯಕ್ತಿಯೋರ್ವ ವಾಗ್ವಾದ ನಡೆಸಿದ್ದಾರೆ.

ಸಭೆಯ ದೃಶ್ಯ

ಸಭೆಯ ದೃಶ್ಯ

  • Share this:
ಹುಬ್ಬಳ್ಳಿ(ಜು. 31):  ಡಿಕೆಶಿ ನನ್ನ ಜೇಬಿನಲ್ಲಿದ್ದಾರೆ... ಹೀಗಂತ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​​ ಅಳಿಯ ಆವಾಜ್ ಹಾಕುತ್ತಿದ್ದಾರೆ. ಅವರ ವಿರುದ್ದ ಕ್ರಮ ಕೈಗೊಳ್ಳಿ ಎಂದು ಕಾಂಗ್ರೆಸ್ ಮುಖಂಡ ಗಿರೀಶ ಗದಿಗೆಪ್ಪ ಗೌಡ ಆರೋಪಿಸಿದ್ದಾರೆ. ಪಕ್ಷದ ಸಭೆಗೆ ನೇರವಾಗಿ ನುಗ್ಗಿದ ಅವರು ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿ ಮಾಡಿದರು. ಪಕ್ಷದ ಸಭೆಯಲ್ಲಿ ಕೆಪಿಸಿಸಿ ನಾಯಕರ ವಿರುದ್ಧ ಅವರು ನಡೆಸಿರುವ  ವಾಗ್ದಾಳಿ ಮಾಡಿರುವ ಘಟನೆ ವಿಡಿಯೋ ಇದೀಗ ವೈರಲ್ ಆಗಿದೆ. ಈ ರೀತಿ ಆರೋಪ ಮಾಡಿದವರು ಕಾಂಗ್ರೆಸ್​ ಮುಖಂಡ  ಗಿರೀಶ ಗದಿಗೆಪ್ಪಗೌಡ.   ಹುಬ್ಬಳ್ಳಿ ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ್ ಉಳ್ಳಾಗಡ್ಡಿಮಠ ಡಿಕೆಶಿ ತಮ್ಮಗೆ ತುಂಬಾ ಖಾಸ ಎಂದು ತನ್ನ ಮೇಲೆ ಆವಾಜ್​ ಹಾಕಿದ್ದಾರೆ ಎಂದು ಇವರು ಆರೋಪಿಸಿದ್ದಾರೆ. 

ನಿನ್ನೆ ಹುಬ್ಬಳ್ಳಿಯ ಗೋಕುಲ್ ರಸ್ತೆಯಲ್ಲಿರುವ ಖಾಸಗಿ ಹೋಟೆಲ್ ನಲ್ಲಿ ಬೆಳಗಾವಿ ವಿಭಾಗ ಮಟ್ಟದ  ಮುಖಂಡರ ಜೊತೆ ಪಕ್ಷದ ನಾಯಕರು ಸಮಾಲೋಚನೆ ನಡೆಸುತ್ತಿದ್ದರು. ಈ ವೇಳೆ ಸಭೆಗೆ ಏಕಾಏಕಿ ನುಗ್ಗಿದ ಗಿರೀಶ್​ ಗದ್ದಿಗೆಪ್ಪಗೌಡ ಈ ರೀತಿ ದೋಷಾರೋಪ ಮಾಡಿದ್ದಾರೆ.

ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ ಸುರ್ಜೇವಾಲ ಸಮ್ಮುಖದಲ್ಲಿಯೇ ವಾಗ್ವಾದ ನಡೆದಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ, ಎಚ್.ಕೆ.ಪಾಟೀಲ ಮತ್ತಿತರ ನಾಯಕರು ಪಾಲ್ಗೊಂಡಿದ್ದ ಸಭೆಯಲ್ಲಿ‌ ಕೆಲ ಕಾಲ ಬಿಸಿ ಬಿಸಿ ಚರ್ಚೆಗೆ ಈ ಘಟನೆ ಕಾರಣವಾಯಿತು.

ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್​​ ಅಳಿಯ ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ್ ಉಳ್ಳಾಗಡ್ಡಿ ಡಿಕೆಶಿ ತನ್ನ ಜೇಬಿನಲ್ಲಿದ್ದಾರೆ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಸಭೆಯಲ್ಲಿ ನಡೆದ ವಾಗ್ವಾದದ ವಿಡಿಯೋ ಇದೀಗ ವೈರಲ್ ಆಗಿದೆ. ಸಭೆಯಲ್ಲಿ ಅಚಾನಕ್​ ಆಗಿ ನಡೆದ ಈ ಘಟನೆ  ಪರಿಣಾಮ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗರಂ ಆದರು. ಏಯ್ ಏನದು ನಿಮ್ಮ ಗಲಾಟೆ ಎಂದು ಗದರಿಸಿದ ಕೆಪಿಸಿಸಿ ಅಧ್ಯಕ್ಷರು, ಆಯ್ತು... ಆಯ್ತು... ನೋಡ್ತೀನಿ ಅಂತ ವಾಗ್ವಾದ ನಡೆಸಿದ ವ್ಯಕ್ತಿಯನ್ನು ಹೊರಗೆ ಕಳುಹಿಸಿದ್ದಾರೆ. ನಂತ್ರ ಮುಖಂಡನನ್ನು ಏಕೆ ಒಳಗೆ ಬಿಟ್ಟಿರಿ ಎಂದು ಬಾಗಿಲಿನಲ್ಲಿದ್ದವರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.

ಇದನ್ನು ಓದಿ: ಯಡಿಯೂರಪ್ಪ ಯುಗಾಂತ್ಯ - ಬೊಮ್ಮಾಯಿ ರಬ್ಬರ್ ಸ್ಟಾಂಪ್ ಸಿಎಂ: ಕಾಂಗ್ರೆಸ್ ಲೇವಡಿ

ಕೊನೆಗೆ ಜಿಲ್ಲಾಧ್ಯಕ್ಷರಿಗೆ ಘಟನೆಯ ಬಗ್ಗೆ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ. ಸಭೆಯಲ್ಲಿ ಅನಗತ್ಯವಾಗಿ ಗಲಾಟೆ ಮಾಡಿದ ಗಿರೀಶ ಗದಿಗೆಪ್ಪಗೌಡರನ್ನ ಸಭೆಯಿಂದ ಹೊರಹಾಕಿದ ಸಭೆ ಮುಂದುವರೆಸಲಾಗಿದೆ. ಸಂಘಟನೆ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಇದರಿಂದ ಕ್ಷಣಕಾಲ ಗೊಂದಲ ಸೃಷ್ಟಿಯಾಗಿ,, ಚರ್ಚೆಗೆ ಗ್ರಾಸವಾಗಿದೆ.

ಕಾಂಗ್ರೆಸ್ ವಿರೋಧ ಪಕ್ಷದಲ್ಲಿದ್ದರೂ ನಾಯಕರ ನಡುವೆ ಕಿತ್ತಾಟ ಜೋರಾಗಿದ್ದು, ಹುಬ್ಬಳ್ಳಿ ಸಭೆಯಲ್ಲಿ ನಡೆದ ವಾಗ್ವಾದ ಅದಕ್ಕೆ ಮತ್ತೊಮ್ಮೆ ಪುಷ್ಟಿ ನೀಡಿದಂತಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್, ಅನುಮತಿ ಇಲ್ಲದೆಯೇ ಒಳ ಪ್ರವೇಶ ಮಾಡಿ ಗೊಂದಲ ಸೃಷ್ಟಿಸಿದ ಗದಿಗೆಪ್ಪಗೌಡರ ಮೇಲೆ ಕ್ರಮ ಕೈಗೊಳ್ಳುವುದು ನಿಶ್ಚಿತ ಎಂಬ ಮಾಹಿತಿ ಬಂದಿದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು
Published by:Seema R
First published: