Karnataka Politics: ಪರಿಷತ್ ಘಟನೆಗೆ ಸಭಾಪತಿ ಹೊರಟ್ಟಿ ಮತ್ತೊಮ್ಮೆ ಬೇಸರ; ಸಿಎಂ ಕೂಡ ಆಕ್ರೋಶ

Basavaraj Horatti Anguish: ವಿಧಾನಪರಿಷತ್ ಸದನ ಕಲಾಪದ ವೇಳೆ ನಿನ್ನೆ ಸಭಾಪತಿಗಳ ಕೋಣೆಗೆ ನುಗ್ಗಿ ಕಾಂಗ್ರೆಸ್ ಸದಸ್ಯರು ತೋರಿದ ದುರ್ವರ್ತನೆ ಬಗ್ಗೆ ಸಭಾಪತಿ ಬಸವರಾಜ ಹೊರಟ್ಟಿ ಇಂದೂ ಕೂಡ ಬೇಸರ ಹೊರಹಾಕಿದ್ದಾರೆ.

ಬಸವರಾಜ ಹೊರಟ್ಟಿ

ಬಸವರಾಜ ಹೊರಟ್ಟಿ

  • Share this:
ಹುಬ್ಬಳ್ಳಿ, ಡಿ. 25: ಚಳಿಗಾಲದ ಅಧಿವೇಶನದ (Winter Assembly Session) ಕೊನೆಯ ದಿನ ವಿಧಾನ ಪರಿಷತ್ (Assembly Council) ನಲ್ಲಿ ನಡೆದ ಹೈಡ್ರಾಮಾಕ್ಕೆ ಸಭಾಪತಿ ಬಸವರಾಜ ಹೊರಟ್ಟಿ (Basavaraj Horatti) ಮತ್ತೊಮ್ಮೆ ಬೇಸರ ವ್ಯಕ್ತಪಡಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ನಿನ್ನೆ ಪರಿಷತ್ ನ ವಿಪಕ್ಷ ಸದಸ್ಯರು ನಡೆದುಕೊಂಡ ರೀತಿಗೆ ನನಗೆ ಬಹಳ ನೋವು ತಂದಿದೆ. ನನ್ನ ತೇಜೋವಧೆ ಮಾಡುವ ನಿಟ್ಟಿನಲ್ಲಿ ಪ್ರತಿಪಕ್ಷಗಳ ಸದಸ್ಯರು ಮಾತನಾಡಿದ್ರು. ಅವರ ವರ್ತನೆಯಿಂದ ನನಗೆ ಬಹಳ ನೋವು ಆಯ್ತು. ನನ್ನ 40 ವರ್ಷದ ರಾಜಕೀಯ ಜೀವನದಲ್ಲಿ ಈ ತರಹದ ಮಾತುಗಳನ್ನ ಕೇಳಿರಲಿಲ್ಲ. ನನ್ನನ್ನ ಬಿಜೆಪಿ ಏಜೆಂಟ್ ಅಂದ್ರು. ಅದು ತೀವ್ರ ಬೇಸರ ತರಿಸಿತು ಎಂದು ಹೇಳಿದರು.

ನಂತರ ಪರಿಷತ್ ನಲ್ಲಿ ವಿರೋಧ ಪಕ್ಷದ ನಾಯಕರು ನನಗೆ ಕ್ಷಮೆ ಕೇಳಿದ್ದಾರೆ. ಹೀಗಾಗಿ ಪ್ರಕರಣ ಇತ್ಯರ್ಥವಾಗಿದೆ ಎಂದು ಸ್ಪಷ್ಟಪಡಿಸಿದ ಬಸವರಾಜ ಹೊರಟ್ಟಿ ಅವರು, ಫೆಬ್ರವರಿಯಲ್ಲಿ ಜಂಟಿ ಸದನ ಕರೆಯುತ್ತೇವೆ. ಒಂದು ವಾರದ ನಂತರ ಬಜೆಟ್ ಅಧಿವೇಶನ ನಡೆಯುತ್ತದೆ ಎಂದು ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು.

ಸಿಎಂ ಬೊಮ್ಮಾಯಿ ಆಕ್ರೋಶ....

ಪರಿಷತ್ ಸಭಾಪತಿಗಳ ಕೋಣೆಗೆ ನುಗ್ಗಿ ಕಾಂಗ್ರೆಸ್ ಸದಸ್ಯರು ನಡೆದುಕೊಂಡ ರೀತಿಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಸಭಾಪತಿಗಳು ಅನ್ನೋದನ್ನ ಮರೆತು ಕಾಂಗ್ರೆಸ್ ನವರು ಮಾತಾಡಿದ್ದಾರೆ. ಅನುಚಿತವಾಗಿ ವರ್ತಿಸಿದ್ದಾರೆ. ಅವ್ರ ಮನಸಿಗೆ ನೋವಾಗಿ ರಾಜಿನಾಮೆ ಸಹ ನೀಡಲು ಮುಂದಾಗಿದ್ದರು. ನಾನೇ ಸಭಾಪತಿಗಳಿಗೆ ಕರೆ ಮಾಡಿ ಆ ರೀತಿ ನಿರ್ಧಾರ ಮಾಡಬೇಡಿ ಎಂದು ಕೇಳಿಕೊಂಡೆ. ನಂತರ ಅವರನ್ನ ಮನವೊಲಿಸಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ: Omicron ಹೆಚ್ಚಳದಿಂದ ರಾಜ್ಯಾದ್ಯಂತ Night Curfew..? ನಾಳಿನ ಸಿಎಂ ಸಭೆಯಲ್ಲಿ ಮಹತ್ವದ ನಿರ್ಧಾರ

ಮತಾಂತರ ನಿಷೇಧ ಕಾಯ್ದೆ ವಿಚಾರದಲ್ಲಿ ನಮ್ಮ ನಿಲುವು ಸ್ಪಷ್ಟವಾಗಿದೆ. ಮೇಲ್ಮನೆಯಲ್ಲಿ ನಮಗೆ ಸಪೋರ್ಟ್ ಇಲ್ಲ. ಅಲ್ಲಿ ನಮ್ಮವರು ಇರಲಿಲ್ಲ, ಅವರು ಬಂದಿದ್ದರೆ ನಾವು ಅವರ ಸಪೋರ್ಟ್ ಕೇಳುತ್ತಿದ್ದೆವು ಎಂದು ಸಿಎಂ ಬಸವರಾಜ ಬೊಮ್ಮಾಯಿ ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.

ವಿದೇಶಕ್ಕೆ ಹೋಗಲ್ಲ ಎಂದ ಸಿಎಂ....

ವಿದೇಶದಲ್ಲಿ ಕಾಲಿಗೆ ಶಸ್ತ್ರ ಚಿಕಿತ್ಸೆ ವಿಚಾರಕ್ಕೆ ಪ್ರತಿಕ್ರಿಯಿಸಿರೋ ಸಿಎಂ, ಡಾವೋಸ್ ಶೃಂಗ ಸಭೆಯೇ (Davos Summit) ಮುಂದೆ ಹೋಗಿದೆ. ಯಾವುದೇ ಕಾರಣಕ್ಕೂ ನಾನು ವಿದೇಶ ಪ್ರವಾಸಕ್ಕೆ ಹೋಗುವುದಿಲ್ಲ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

ಒಮೈಕ್ರಾನ್ ಭೀತಿ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಹೋಗಿ ತಜ್ಞರ ಜೊತೆ ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳುವುದು. ನೈಟ್ ಕರ್ಫ್ಯೂ ಬಗ್ಗೆ ನಾಳೆ ಚರ್ಚಿಸಲಾಗುವುದು. ಎಲ್ಲ ಕ್ರಮಗಳ ಬಗ್ಗೆ ಚರ್ಚಿಸಿ ನಾಳೆ ನಿರ್ಧಾರ ಕೈಗೊಳ್ಳಲಾಗುವುದು ಎಂದವರು ಮಾಹಿತಿ ನೀಡಿದರು.

ಇದನ್ನೂ ಓದಿ: ಕೇವಲ 22 ವರ್ಷದ Hockey Playerಗೆ ಮೈದಾನದಲ್ಲೇ ಹೃದಯಾಘಾತ.. ಕೊಡಗಿನಲ್ಲಿ ಇದೆಂಥಾ ಸಾವು!?

ಸಿಎಂ ಬದಲಾವಣೆ ಸದ್ಯಕ್ಕಿಲ್ಲ ಎಂದ ಜೋಶಿ: 

ಮುಖ್ಯಮಂತ್ರಿ ಬದಲಾವಣೆ ಇಲ್ಲ, ಊಹಾಪೋಹಗಳನ್ನು ಕಿವಿಗೊಡಬೇಡಿ ಎಂದು ಕೇಂದ್ರ ಗಣಿ, ಕಲ್ಲಿದ್ದಲು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದರು. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಬದಲಾವಣೆ ಸುದ್ದಿಗಳು ಹರಡುವುದು ತಪ್ಪು. ಅವರು ಅಮೇರಿಕಾ ಹೋಗ್ತಾರೆ, ತೆಗೀತಾರೆ ಅನ್ನೋದೆಲ್ಲಾ ಸುಳ್ಳು. ಸಿಎಮ್ ಬದಲಾವಣೆ ಬಗ್ಗೆ ವರಿಷ್ಠರ ಮಟ್ಟದಲ್ಲಿ ಯಾವುದೇ ಚರ್ಚೆಗಳು ನಡೆದಿಲ್ಲ. ಯಾರು ಈ ರೀತಿ ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾರೆ, ಇದನ್ನು ಕೈಬಿಡಬೇಕು. ಸಂಸತ್ ಸದನದಲ್ಲಿ ಪ್ರತಿಪಕ್ಷಗಳ ವರ್ತನೆಗೆ ವಿಷಾದವಿದೆ ಎಂದರು.

ವರದಿ: ಶಿವರಾಮ ಅಸುಂಡಿ
Published by:Vijayasarthy SN
First published: