ಹುಬ್ಬಳ್ಳಿ (ಆಗಸ್ಟ್ 07): ಮಾಜಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರ (Basavaraj Horatti) ಕಾರು ಅಪಘಾತವಾಗಿದೆ (Car Accident). ಹುಬ್ಬಳ್ಳಿಯಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಬಿ.ವಿ.ಬಿ ಕಾಲೇಜು (Collage) ಆವರಣದಲ್ಲಿ ಘಟನೆ ಸಂಭವಿಸಿದೆ. ಬಿ.ವಿ.ಬಿ ಕಾಲೇಜಿನಲ್ಲಿ ಪತ್ರಕರ್ತರ (Journalist) ವಾರ್ಷಿಕ ಪ್ರಶಸ್ತಿ ಪ್ರದಾನ (Award) ಸಮಾರಂಭ ಆಯೋಜಿಸಲಾಗಿತ್ತು. ಕಾರ್ಯಕ್ರಮ ಮುಗಿಸಿಕೊಂಡು ಹೋಗುತ್ತಿದ್ದಾಗ ಬಸವರಾಜ ಹೊರಟ್ಟಿಯವರ ಕಾರಿಗೆ ಬೈಕ್ ಸವಾರ ಢಿಕ್ಕಿ (Bike Accident) ಹೊಡೆದಿದ್ದಾನೆ. ಅದೃಷ್ಟವಶಾತ್ ಹೊರಟ್ಟಿಯವರಿಗೆ ಏನೂ ಪ್ರಾಣಾಪಾಯವಾಗಿಲ್ಲ. ಬೈಕ್ ಸವಾರನನ್ನು ಬೆಳಗಾವಿಯ ಸವದತ್ತಿ ಮೂಲದ ಕೆಂಚಪ್ಪ ಎಂದು ಗುರುತಿಸಲಾಗಿದ್ದು, ಆತನಿಗೆ ಗಂಭೀರ ಗಾಯವಾಗಿದೆ. ಘಟನೆ ಬಳಿಕ ಬಸವರಾಜ ಹೊರಟ್ಟಿ ಬೇರೆ ಕಾರನ್ನೇರಿ ತೆರಳಿದರು.
ಪತ್ರಕರ್ತರ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಮುಗಿಸಿಕೊಂಡು ವಾಪಸ್ ಬರೋವಾಗ ಬಸವರಾಜ ಹೊರಟ್ಟಿಯವರ ಕಾರು ಅಪಘಾತಕ್ಕೀಡಾಗಿದೆ. ಅಪಘಾತದಲ್ಲಿ ವಾಹನ ಸವಾರನಿಗೆ ಗಂಭೀರ ಗಾಯವಾಗಿದೆ.
ಅರ್ಧ ಗಂಟೆಯಾದರೂ ಬಾರದ ಆ್ಯಂಬ್ಯುಲೆನ್ಸ್
ಗಾಯಾಳು ರಸ್ತೆಯಲ್ಲಿ ಒದ್ದಾಡುತ್ತಿದ್ದರೂ ಅರ್ಧ ಗಂಟೆಯಾದರೂ ಘಟನಾ ಸ್ಥಳಕ್ಕೆ ಆ್ಯಂಬ್ಯುಲೆನ್ಸ್ ಬಂದಿಲ್ಲ. ಸದ್ಯ ಗಾಯಾಳು ಕೆಂಚಪ್ಪ ಎಂಬುವವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ: ಸಿದ್ದರಾಮೋತ್ಸವ ಬಳಿಕ ಅಖಾಡಕ್ಕಿಳಿದ ಅಣ್ತಮ್ಮಾಸ್! ಒಂದೇ ಕಲ್ಲಿಗೆ 2 ಹಕ್ಕಿ
ಇನ್ನು 10 ನಿಮಿಷ ಬಸವರಾಜ ಹೊರಟ್ಟಿ ಘಟನಾ ಸ್ಥಳದಲ್ಲಿದ್ದು, ನಂತರ ಅಲ್ಲಿಂದ ಬೇರೆ ವಾಹನ ತರಿಸಿ ತೆರಳಿದ್ದಾರೆ. ಸ್ಥಳಕ್ಕೆ ಉತ್ತರ ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮನೆಯಲ್ಲಿ ಗಲಾಟೆ-ಟವರ್ ಏರಿದ ವ್ಯಕ್ತಿ!
ವ್ಯಕ್ತಿಯೊಬ್ಬ ಟವರ್ ಏರಿದ ಘಟನೆ ಹುಬ್ಬಳ್ಳಿಯ ಬಿಡ್ನಾಳ ಎಂಬಲ್ಲಿ ನಡೆದಿದೆ. ರಾಘವೇಂದ್ರ ಎಂಬಾತನೇ ಟವರ್ ಏರಿ ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿ. ಆದರೆ ಹೆಸ್ಕಾಂ ಗ್ರಾಮೀಣ ಉಪವಿಭಾಗದ ಕಾರ್ಯಾನಿರ್ವಾಹಕ ಇಂಜಿನಿಯರ್ ಕಿರಣ್ ಕುಮಾರ್ ಅವರ ಸಮಯಪ್ರಜ್ಞೆಯಿಂದ ವ್ಯಕ್ತಿಯ ಪ್ರಾಣ ಉಳಿದಿದೆ.
ಇದನ್ನೂ ಓದಿ: ದರ್ಗಾಕ್ಕೆ ಕಾರು ಡಿಕ್ಕಿ ಹೊಡೆದು ಮೂವರು ಸ್ಥಳದಲ್ಲೇ ಸಾವು!
ರಾಘವೇಂದ್ರ ಟವರ್ ಹತ್ತುತ್ತಿದ್ದಂತೆ ತಕ್ಷಣ ಸ್ಥಳೀಯರು ಹುಬ್ಬಳ್ಳಿ ಹೆಸ್ಕಾಂ ಅಧಿಕಾರಿಗಳಿಗೆ ಕರೆ ಮಾಡಿದ್ದಾರೆ. ಸ್ಥಳೀಯರ ಕರೆ ಬರ್ತಿದ್ದಂತೆ ಕಾರ್ಯಪ್ರವೃತ್ತರಾದ ಹೆಸ್ಕಾಂ ಅಧಿಕಾರಿಗಳು ಎಲ್ಲಾ ಕಡೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ.
ಕೆಲವೇ ಕ್ಷಣಗಳಲ್ಲಿ ಬಚಾವ್!
ವಿದ್ಯುತ್ ಸಂಪರ್ಕ ಕಡಿತವಾದ ಕೆಲವೇ ಕ್ಷಣಗಳಲ್ಲಿ ಆತ ಹೈಟೆನ್ಷನ್ ವೈರ್ನ್ನು ಹಿಡಿದುಕೊಂಡಿದ್ದ. ಆದರೆ ಕರೆಂಟ್ ಪೂರೈಕೆ ನಿಂತಿದ್ದರಿಂದ ರಾಘವೇಂದ್ರ ಬಚಾವ್ ಆಗಿದ್ದಾನೆ.
ಮನೆಯಲ್ಲಿ ಗಲಾಟೆ ಹಿನ್ನೆಲೆ ಸಿಟ್ಟಿಗೆದ್ದು ರಾಘವೇಂದ್ರ ಮನೆಯಿಂದ ಹೊರಬಂದಿದ್ದ. ಸೂಸೈಡ್ ಮಾಡಿಕೊಳ್ಳಲು ಆಗಮಿಸಿದ್ದ. ಮಾತ್ರವಲ್ಲದೇ ಅಲ್ಲೇ ಸಮೀಪವಿರೋ ಬಿಡ್ನಾಳದ 11 ಕೆವಿ ಹೈಟೆನ್ಷನ್ ಟವರ್ ಮೇಲೆ ಹತ್ತುತ್ತಿದ್ದ.
ಗೋಗರೆದರೂ ಇಳಿಯದ ಭೂಪ!
ರಾಘವೇಂದ್ರ ಟವರ್ ಹತ್ತುತ್ತಿರೋದನ್ನು ಗಮನಿಸಿದ ಸ್ಥಳೀಯರು ಕೂಗಾಡಿದ್ದಾರೆ. ಇಳಿಯಪ್ಪ ಅಂತಾ ಗೋಗರೆದರೂ ಆತ ಇಳಿಯುವ ಗೋಜಿಗೆ ಹೋಗಲಿಲ್ಲ. ಇದರಿಂದ ಆತಂಕಕ್ಕೆ ಒಳಗಾದ ಸ್ಥಳೀಯರು ಹೆಸ್ಕಾಂ ಅಧಿಕಾರಿಗಳಿಗೆ ಕರೆ ಮಾಡಿದ್ದಾರೆ.
ವಿದ್ಯುತ್ ಸ್ಥಗಿತಗೊಳಿಸಿದರೂ ಇಳಿಯಲು ರಾಘವೇಂದ್ರ ಒಪ್ಪಿರಲಿಲ್ಲ. ಕೆಳಗೆ ಇಳಿಯುವಂತೆ ಜನ ಕೂಗುತ್ತಿದ್ದರೂ ಮತ್ತೆ ಮತ್ತೆ ಮೇಲೆಯೇ ಹತ್ತುತ್ತಿದ್ದ. ನಂತರ ಸ್ಥಳಕ್ಕೆ ಬಂದ ಹೆಸ್ಕಾಂ ಅಧಿಕಾರಿ ಹಾಗೂ ಸಿಬ್ಬಂದಿ ಆತನನ್ನು ಕೆಳಗೆ ಇಳಿಸುವಲ್ಲಿ ಯಶಸ್ವಿ ಆಗಿದ್ದಾರೆ.
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಮುಂದಾಗಿದ್ದೆ ಅಂತಾ ರಾಘವೇಂದ್ರ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ರಾಘವೇಂದ್ರನನ್ನು ವಿಚಾರಣೆ ನಡೆಸ್ತಿದ್ದಾರೆ.
ಹೆಸ್ಕಾಂ ಅಧಿಕಾರಿಗಳ ಕಾರ್ಯಕ್ಕೆ ಮೆಚ್ಚುಗೆ
ಇನ್ನು ಹೆಸ್ಕಾಂ ಅಧಿಕಾರಿಗಳ ಕಾರ್ಯಕ್ಕೆ ಪೊಲೀಸರು, ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜನ ಕರೆ ಮಾಡುತ್ತಿದ್ದಂತೆ ಕಾರ್ಯಪ್ರವೃತರಾಗಿದ್ದಕ್ಕೆ ಪ್ರಾಣ ಉಳಿದಿದೆ ಅಂತಾ ಶಹಬ್ಬಾಸ್ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ