Mothers Day Special: ಮಗನಿಗೆ ತನ್ನ ಕಿಡ್ನಿಯನ್ನೇ ಕೊಟ್ಟ ತಾಯಿ! ಕಿಮ್ಸ್‌ನಲ್ಲಿ ಸಕ್ಸಸ್‌ ಆಯ್ತು ಮೊದಲ ಕಸಿ

ಹೆತ್ತಮ್ಮ ಅಂದ್ರೆ ಎಲ್ಲದಕ್ಕೂ ಮಿಗಿಲು ಅಂತಾರೆ. ಅಂತಹ ಹೆತ್ತಮ್ಮ ತನ್ನ ಕಿಡ್ನಿ ದಾನ ಮಾಡೋ ಮೂಲಕ ಕರುಳ ಕುಡಿಗೆ ಮತ್ತೊಮ್ಮೆ ಜೀವದಾನ ಮಾಡಿದ್ದಾಳೆ. ಕಿಡ್ನಿ ಕಸಿಗೆ ಅನುಮತಿ ಪಡೆದು, ಯಶಸ್ವಿ ಕಸಿ ನೆರವೇರಿಸಿದ ಮೊದಲ ಪ್ರಕರಣದಲ್ಲಿಯೇ ಕಿಮ್ಸ್ ಆಸ್ಪತ್ರೆ, ತಾಯಿಯ ಮಮತೆಗೆ ಸಾಕ್ಷಿಯಾಗಿದೆ.

ಕಿಮ್ಸ್‌ನಲ್ಲಿ ಯಶಸ್ವಿಯಾದ ಕಿಡ್ನಿ ಕಸಿ

ಕಿಮ್ಸ್‌ನಲ್ಲಿ ಯಶಸ್ವಿಯಾದ ಕಿಡ್ನಿ ಕಸಿ

  • Share this:
ಹುಬ್ಬಳ್ಳಿ: ಜಗತ್ತಿನಲ್ಲಿ ಹೆತ್ತ ತಾಯಿಗಿಂತ (Mother) ಶ್ರೇಷ್ಠ ಯಾವುದೂ ಇಲ್ಲ. ತನಗೆ ಎಂತಹುದೇ ಸಂಕಷ್ಟಗಳು ಬಂದ್ರೂ ಕರುಳ ಕುಡಿಗಳನ್ನು ಸಂರಕ್ಷಿಸೋಕೆ ಮೊದಲ ಆದ್ಯತೆ ನೀಡ್ತಾಳೆ ತಾಯಿ. ಇಂಥದ್ದೊಂದು ಘಟನೆಗೆ ಕಿಮ್ಸ್ ಆಸ್ಪತ್ರೆ (KIMS Hospital) ಸಾಕ್ಷಿಯಾಗಿದೆ. ಹೆತ್ತ ತಾಯಿಯೋರ್ವಳು ತನ್ನ ಕಿಡ್ನಿಯನ್ನೇ ದಾನ (Kidney Donate) ಮಾಡೋ ಮೂಲಕ ಹೆತ್ತ ಕರುಳಿಗೆ ಮತ್ತೊಮ್ಮೆ ಜೀವದಾನ ಮಾಡಿದ್ದಾಳೆ. ಯಶಸ್ವಿ ಕಿಡ್ನಿ ಕಸಿ (Kidney Transplant) ಮಾಡೋ ಮೂಲಕ ಹೆತ್ತಮ್ಮ ಹಾಗೂ ಮಗ (Son) ಇಬ್ಬರನ್ನೂ ಸುರಕ್ಷಿತವಾಗಿ ಕಾಪಾಡುವಲ್ಲಿ ಕಿಮ್ಸ್ ವೈದ್ಯರು (KIMS Doctors) ಯಶಸ್ವಿಯಾಗಿದ್ದಾರೆ.

ಹೆತ್ತಮ್ಮನಿಂದಲೇ ಮಗನಿಗೆ ಕಿಡ್ನಿ ದಾನ

ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ಮೊದಲ ಕಿಡ್ನಿ ಕಸಿ ಪ್ರಕರಣ ತಾಯಿ ಮಮತೆಗೆ ಸಾಕ್ಷಿಯಾಗಿದೆ. ಉತ್ತರ ಕರ್ನಾಟಕದ ಬಡರೋಗಿಗಳ ಪಾಲಿನ ಸಂಜೀವಿನಿ ಎಂದೇ ಕಿಮ್ಸ್ ಖ್ಯಾತವಾಗಿದೆ. ಇದೀಗ  ಕಿಮ್ಸ್ ಆಸ್ಪತ್ರೆ ಮತ್ತೊಂದು ಐತಿಹಾಸಿಕ ಹೆಜ್ಜೆಯನ್ನಿಟ್ಟಿದೆ. ಕಿಮ್ಸ್ ಆಸ್ಪತ್ರೆಯಲ್ಲಿ ಕಿಡ್ನಿ ಕಸಿಗೆ ಇತ್ತೀಚೆಗಷ್ಟೇ ಸರ್ಕಾರ ಅನುಮತಿ ನೀಡಿತ್ತು. ಕಿಡ್ನಿ ಕಸಿ ಆರಂಭಿಸಿದ ಮೊದಲ ದಿನವೇ ತಾಯಿ ತ್ಯಾಗಕ್ಕೆ, ಮಗನ ಮೇಲಿನ ಮಮಕಾರಕ್ಕೆ ಸಾಕ್ಷಿಯಾಗಿದೆ.

22 ವರ್ಷದ ಯುವಕನಿಗೆ ಯಶಸ್ವಿ ಕಿಡ್ನಿ ಕಿಸಿ

ಮೂತ್ರಪಿಂಡ ಸೋಂಕಿನಿಂದ ಬಳಲುತ್ತಿದ್ದ ಬಾಗಲಕೋಟೆ ಜಿಲ್ಲೆಯ ಬೀಳಗಿ ಮೂಲದ 22 ವರ್ಷದ ಯುವಕನಿಗೆ ಯಶಸ್ವಿಯಾಗಿ ಕಿಡ್ನಿ ಕಸಿ ಮಾಡಲಾಗಿದೆ. ಮೊದ ಮೊದಲು ಯುವಕನಲ್ಲಿ ರೋಗದ ಲಕ್ಷಣ ಕಾಣಿಸಿರಲಿಲ್ಲ. ಹೀಗಾಗಿ ಯುವಕ ಅದರ ಬಗ್ಗೆ ತಲೆಕೆಡಿಸಿಕೊಳ್ಳಗೆ ಯಥಾರೀತಿ ಬದುಕು ಸಾಗಿಸುತ್ತಿದ್ದ. ಆದರೆ ಏಕಾಏಕಿ ಸೋಂಕು ಉಲ್ಬಣಗೊಂಡ ಹಿನ್ನೆಲೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿದಾಗ, ಕಿಡ್ನಿ ವೈಫಲ್ಯತೆ ಮಾಹಿತಿ ಸಿಕ್ಕಿತ್ತು.

ಇದನ್ನೂ ಓದಿ: Family Caring Tips: ನಿಮ್ಮ ತಾಯಿಯೊಂದಿಗೆ ಸಮಯ ಕಳೆಯಲು ಮತ್ತು ಖುಷಿ ಪಡಿಸಲು ಇಲ್ಲಿವೆ ಕೆಲ ಟಿಪ್ಸ್

ಕಿಡ್ನಿ ಕೊಡಲು ಮುಂದೆಬಂದ ಹೆತ್ತಮ್ಮ

ಕಳೆದ 6-7 ತಿಂಗಳಿಂದ ಹುಬ್ಬಳ್ಳಿ ಕಿಮ್ಸ್ ನಲ್ಲಿ ಯುವಕ ಡಯಾಲಿಸಸ್ ಚಿಕಿತ್ಸೆ ಪಡೆಯುತ್ತಿದ್ದ. ಇದು ನಿರೀಕ್ಷಿತ ಫಲ ನೀಡದ ಹಿನ್ನೆಲೆಯಲ್ಲಿ ಯುವಕನಿಗೆ ಕಿಡ್ನಿ ಕಸಿ ಅನಿವಾರ್ಯತೆಯಿತ್ತು. ಆದರೆ ಕಿಡ್ನಿ ದಾನ ಮಾಡುವವರು ಯಾರು ಸಿಕ್ಕಿರಲಿಲ್ಲ. ಅಲ್ಲದೆ ಯುವಕನದು ಬಡ ಕುಟುಂಬವಾಗಿರುವದರಿಂದ ಕಿಡ್ನಿ ಖರೀದಿಸುವಷ್ಟು ಶಕ್ತಿಯೂ ಇರಲಿಲ್ಲ. ಹೀಗಾಗಿ ಹೆತ್ತಮ್ಮಳೇ ಮುಂದೆ ಬಂದು ಮಗನಿಗೆ ಕಿಡ್ನಿ ದಾನ ಮಾಡಿದ್ದಾಳೆ.

ಕಿಮ್ಸ್‌ನಲ್ಲಿ ಯಶಸ್ವಿಯಾದ ಕಿಡ್ನಿ ಕಸಿ

ಕಿಮ್ಸ್ ವೈದ್ಯರಿಂದ ಯಶಸ್ವಿ ಕಿಡ್ನಿ ಕಸಿ ನಡೆದಿದೆ. ತಾಯಿ ಕಿಡ್ನಿಯ ನೆರವಿನಿಂದ ವೈದ್ಯರು ಮಗನಿಗೆ ಜೀವದಾನ ನೀಡಿದ್ದಾರೆ. ಇನ್ನೂ ಹಲವಾರು ಜನ ಕಿಡ್ನಿ ಕಸಿಗಾಗಿ ಕಾದು ಕುಳಿತಿದ್ದಾರೆ. ಎಲ್ಲ ವೈದ್ಯಕೀಯ ಪರೀಕ್ಷೆಗಳ ನಂತರ ಕಿಡ್ನಿ ಕಸಿ ಮಾಡ್ತೇವೆ. ಮೊದಲ ಪ್ರರಣದಲ್ಲಿಯೇ ತಾಯಿಯೊಬ್ಬರ ಕಿಡ್ನಿ ಮಗನಿಗೆ ಕಸಿ ಮಾಡಿದ್ದೇವೆ ಎನ್ನುತ್ತಾರೆ ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಅಂಟರತಾನಿ.

ಇದೇ ಮೊದಲ ಬಾರಿಗೆ ಕಿಮ್ಸ್‌ನಲ್ಲಿ ಕಿಡ್ನಿ ಕಸಿ

ಈ ಮುಂಚೆ ಕಿಡ್ನಿ ಕಸಿಗೆ ಬೆಂಗಳೂರು, ಮುಂಬೈ ಗಳಿಗೆ ಹೋಗಬೇಕಿತ್ತು. ಜೊತೆಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಲಕ್ಷಾಂತರ ರೂಪಾಯಿ ಖರ್ಚು ಮಾಡಬೇಕಿತ್ತು. ಸಕಾಲಕ್ಕೆ ಚಿಕಿತ್ಸೆ ಪಡೆಯದೆ ಸಾವುಗೀಡಾದ ಉದಾಹರಣೆಗಳೂ ಇದ್ದವು. ಇದೀಗ ಹುಬ್ಬಳ್ಳಿಯ ಕಿಮ್ಸ್ ನಲ್ಲಿಯೇ ಕಿಡ್ನಿ ಕಸಿ ಆರಂಭಗೊಂಡಿದೆ. ಕಿಡ್ನಿ ಕಸಿಗೆ ಅನುಮತಿ ಪಡೆದ ರಾಜ್ಯದ ಏಕೈಕ ಸರಕಾರಿ ಮೆಡಿಕಲ್ ಕಾಲೇಜು ಎಂಬ ಹೆಗ್ಗಳಿಕೆಗೆ ಕಿಮ್ಸ್ ಪಾತ್ರವಾಗಿದೆ.

ಇದನ್ನೂ ಓದಿ: Mothers Day 2022: ಜನ್ಮ ಕೊಟ್ಟವಳಿಗೆ ಧನ್ಯವಾದ ಹೇಳುವ ದಿನವಿದು, "ಅಮ್ಮಾ ಐ ಲವ್ ಯೂ..."

ಒಟ್ಟಿನಲ್ಲಿ ಇಷ್ಟು ದಿನ ಸರಿಯಾದ ಚಿಕಿತ್ಸೆಯಿಲ್ಲದೆ ಕಿಡ್ನಿ ಸೋಂಕಿನಿಂದ ಬಳಲಿ ಸಾವನ್ನಪ್ಪುತಿದ್ದ ಬಡ ರೋಗಗಳಿ ಪಾಲಿಗೆ ಕಿಮ್ಸ್ ಮತ್ತೊಂದು ಸಂಜೀವಿನಿಯಾಗಿದೆ. ಅನುಮತಿ ಪಡೆದ ಮೊದಲ ಪ್ರಕರಣದಲ್ಲಿಯೇ ತಾಯಿಯಿಂದ ಮಗನ ಜೀವ ಉಳಿಸಿದ ಸಾರ್ಥಕ ಕ್ಷಣಕ್ಕೆ ಕಿಮ್ಸ್ ಸಾಕ್ಷಿಯಾಗಿದೆ.
Published by:Annappa Achari
First published: