ವೈದ್ಯಕೀಯ ಕಾಲೇಜಿನಿಂದ ಶಾಲೆಗೆ ವಿಸ್ತರಿಸಿದ ಕೋವಿಡ್: 9ನೇ ಕ್ಲಾಸ್ ವಿದ್ಯಾರ್ಥಿಗೆ ಸೋಂಕು ದೃಢ

ವೈದ್ಯಕೀಯ ಕಾಲೇಜಿನಿಂದ ಶಾಲೆಗೂ ಕೋವಿಡ್ ವಿಸ್ತರಿಸಿದ್ದು, ಹುಬ್ಬಳ್ಳಿಯಲ್ಲಿ ಆತಂಕ ಸೃಷ್ಟಿಸಿದೆ. ಶಾಲೆಗೆ ಮೂರು ದಿನಗಳ ಕಾಲ ರಜೆ ನೀಡಲಾಗಿದ್ದು, ಇಂದು ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಕೋವಿಡ್ ಟೆಸ್ಟ್ ಮಾಡಲಾಯಿತು.

ಕೊರೊನಾ ಪರೀಕ್ಷೆ

ಕೊರೊನಾ ಪರೀಕ್ಷೆ

  • Share this:
ಹುಬ್ಬಳ್ಳಿ : ವೈದ್ಯಕೀಯ ಕಾಲೇಜಿನಿಂದ (Medical College) ಕೋವಿಡ್ ಶಾಲೆಗೂ (School) ವಿಸ್ತರಿಸಿಕೊಂಡಿದೆ. ಧಾರವಾಡ ಎಸ್.ಡಿ.ಎಂ. ವೈದ್ಯಕೀಯ ಕಾಲೇಜಿನಿಂದ (SDM Medical College, Dharwad) ಹುಬ್ಬಳ್ಳಿ ಖಾಸಗಿ ಶಾಲೆಗೆ (Private School) ಕೊರೋನಾ ವಿಸ್ತರಣೆಗೊಂಡಿದೆ. 9 ನೇ ತರಗತಿ ವಿದ್ಯಾರ್ಥಿಗೂ ಕೊರೊನಾ (Corona Virus)  ವಕ್ಕರಿಸಿದೆ. ಹುಬ್ಬಳ್ಳಿಯ ಖಾಸಗಿ ಶಾಲೆಯ ವಿದ್ಯಾರ್ಥಿಗೆ ಸೋಂಕು ದೃಢಪಟ್ಟಿದೆ. ಅಶೋಕ ನಗರದ ಸಿಎಂ ನಿವಾಸದ ಕೂಗಳತೆ ದೂರದಲ್ಲಿರೋ ಖಾಸಗಿ ಶಾಲೆಯ ವಿದ್ಯಾರ್ಥಿಗೆ (Student) ಕೊರೋನಾ ಸೋಂಕಿರೋದು ಖಾತ್ರಿಯಾಗಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ  ಆತಂಕ ಸೃಷ್ಟಿಯಾಗಿದ್ದು, ಮೂರು ದಿನಗಳ ಕಾಲ ಶಾಲೆಗೆ ರಜೆ ನೀಡಲಾಗಿದೆ. ವಿದ್ಯಾರ್ಥಿಗಳು, ಪೋಷಕರು ಮತ್ತು ಸಿಬ್ಬಂದಿಗೆ ಕೋವಿಡ್ ಟೆಸ್ಟ್ (COVID Test) ಮಾಡಲಾಗುತ್ತಿದೆ. ಕೋವಿಡ್ ಪರೀಕ್ಷೆ ವರದಿಗಾಗಿ ಕಾಯುತ್ತಿದ್ದು, ವಿದ್ಯಾರ್ಥಿ ಮತ್ತು ಪೋಷಕರಲ್ಲಿ ಆತಂಕ ಮನೆ ಮಾಡಿದೆ. 

ವಿದ್ಯಾರ್ಥಿಯ ಸಹೋದರಿ ಧಾರವಾಡ ಎಸ್.ಡಿ.ಎಂ. ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್. (MBBS Student) ವ್ಯಾಸಾಂಗ ಮಾಡುತ್ತಿದ್ದಾಳೆ. ಎಂ.ಬಿ.ಬಿ.ಎಸ್. ವಿದ್ಯಾರ್ಥಿನಿಗೆ ಪಾಸಿಟಿವ್ ಬಂದಿದ್ದು, ಆಕೆಯಿಂದ ಕುಟುಂಬದ ಇತರೆ ಸದಸ್ಯರಿಗೆ ಹರಡಿದೆ. ಕುಟುಂಬದ ಸದಸ್ಯರಿಗೆ ಕೊರೋನಾ ಟೆಸ್ಟ್ ಮಾಡಿದಾಗ ಪಾಸಿಟಿವ್ (Corona Positive Report) ಇರೋದು ದೃಢಪಟ್ಟಿದೆ.

ಶಾಲೆಗೆ ಮೂರು ದಿನ ರಜೆ ಘೋಷಣೆ

ವಿದ್ಯಾರ್ಥಿಗೆ ಕೋವಿಡ್ ದೃಢಪಟ್ಟ ಹಿನ್ನೆಲೆ ಶಾಲೆಗೆ ಮೂರು ದಿನ ರಜೆ ಘೋಷಿಸಲಾಗಿದೆ. ಶಾಲೆ ಸಂಪೂರ್ಣ ಸ್ಯಾನಿಟೈಜ್ ಮಾಡಿಸಲು ಶಿಕ್ಷಣ ಇಲಾಖೆ ಮುಂದಾಗಿದೆ. ಎಸ್.ಡಿ.ಎಂ. ನಲ್ಲಿ ಕೋವಿಡ್ ನಿಯಂತ್ರಣಕ್ಕೆ ಬಂದಿದೆ ಎನ್ನುವಾಗಲೇ ಶಾಲೆಗೆ ಮಹಾಮಾರಿ ವಿಸ್ತರಣೆಗೊಂಡಿದ್ದು, ವಿದ್ಯಾರ್ಥಿ ಮತ್ತು ಪೋಷಕರಲ್ಲಿ ಆತಂಕ ಹೆಚ್ಚುವಂತೆ ಮಾಡಿದೆ.

ಇದನ್ನೂ ಓದಿ:  Omicron: ಕೊರೋನಾದ ಹೊಸ ರೂಪಾಂತರ ಓಮಿಕ್ರಾನ್​ ಲಕ್ಷಣಗಳೇನು? ಏನೆಲ್ಲಾ ಎಚ್ಚರಿಕೆ ವಹಿಸಬೇಕು? ವೈದ್ಯರು ನೀಡಿದ್ದಾರೆ ಫುಲ್ ಡೀಟೆಲ್ಸ್

ವಿದ್ಯಾರ್ಥಿಗಳ ಜೊತೆ ಪೋಷಕರಿಗೂ ಟೆಸ್ಟ್.

9 ನೇ ತರಗತಿಯ ವಿದ್ಯಾರ್ಥಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಖಾಸಗಿ ಶಾಲೆಯ ವಿದ್ಯಾರ್ಥಿಗಳಿಗೆ, ಪೋಷಕರಿಗೆ, ಸಿಬ್ಬಂದಿಗೆ ಕೊರೋನಾ ಟೆಸ್ಟ್ ಮಾಡಲಾಯಿತು. ಹುಬ್ಬಳ್ಳಿಯ ಆದರ್ಶ ನಗರದಲ್ಲಿರುವ (Adarsha Nagara, Hubballi) ಖಾಸಗಿ ಶಾಲೆಯ ಆವರಣದಲ್ಲಿಯೇ, ಶಾಲಾ ಸಿಬ್ಬಂದಿ ಸೇರಿದಂತೆ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಟೆಸ್ಟ್ ಆರೋಗ್ಯ ಇಲಾಖೆಯಿಂದ ಟೆಸ್ಟ್ ಮಾಡಲಾಗಿದೆ. ಓರ್ವ ವಿದ್ಯಾರ್ಥಿಯಿಂದ ಶಾಲೆಯ ಮಕ್ಕಳು, ಪೋಷಕರಲ್ಲಿ ಭೀತಿ ಸೃಷ್ಟಿಯಾಗಿದೆ.

9th class student test corona Positive in Hubballi
ಕೊರೊನಾ ಪರೀಕ್ಷೆ


ಪ್ರೌಢ ಶಾಲೆಯಲ್ಲಿ 8, 9 ಮತ್ತು 10 ನೇ ತರಗತಿಗಳು ನಡೆಯುತ್ತಿದ್ದು, ಎಲ್ಲ ವಿದ್ಯಾರ್ಥಿಗಳಿಗೆ ಟೆಸ್ಟ್ ಮಾಡಲಾಗುತ್ತಿದೆ. ಒಟ್ಟು 640 ವಿದ್ಯಾರ್ಥಿಗಳು ಮತ್ತು ಪೋಷಕರು ಸೇರಿ 38 ಶಾಲಾ ಸಿಬ್ಬಂದಿಗೆ ಟೆಸ್ಟ್ ಮಾಡಲು ತೀರ್ಮಾನಿಸಲಾಗಿದೆ. ಮತ್ತಷ್ಟು ಮಕ್ಕಳಿಗೆ, ಮಕ್ಕಳಿಂದ ಪೋಷಕರಿಗೆ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತ ಎಲ್ಲರಿಗೂ ಕೋವಿಡ್ ಟೆಸ್ಟ್ ಗೆ ಒಳಪಡಿಸಿದೆ.

ಶಾಲೆಗೆ ಮುಖ್ಯ ವೈದ್ಯಾಧಿಕಾರಿಗಳ ಭೇಟಿ

ಥ್ರೋಟ್ ಸ್ಯಾಂಪಲ್ ಸಂಗ್ರಹಿಸಿಸುತ್ತಿರುವ ಶಾಲೆಗೆ, ಪಾಲಿಕೆ ಮುಖ್ಯ ವೈದ್ಯಾಧಿಕಾರಿ ಡಾ.ಶ್ರೀಧರ್ ದಂಡಪ್ಪನವರ ಭೇಟಿ ನೀಡಿ ಪರಿಶೀಲಿಸಿದರು. ಶಾಲೆಯ ಮುಖ್ಯೋಪಾಧ್ಯಾಯರೊಂದಿಗೆ ಚರ್ಚಿಸಿದರು.

ಇದನ್ನೂ ಓದಿ:  Explained: ಕೊರೊನಾ ವೈರಸ್‌ನ ಮತ್ತೊಂದು ಪ್ರಭೇದ ಪತ್ತೆ: ಡೆಲ್ಟಾಗಿಂತ ಭಯಾನಕವಾಗಿರಲಿದ್ಯಾ ಹೊಸ ರೂಪಾಂತರಿ ಲ್ಯಾಂಬ್ಡಾ ವೈರಸ್

ಕೆಲ ವಿದ್ಯಾರ್ಥಿಗಳು ಹಾಗೂ ಪೋಷಕರು ಕಿಮ್ಸ್ ನಲ್ಲಿ ಟೆಸ್ಟ್ ಮಾಡಿಸಿಕೊಂಡಿರೋದಾಗಿ ಶಾಲಾ ಮುಖ್ಯೋಪಾಧ್ಯಾಯ ನರೇಶ್ ಪಾಟೀಲ್ ಮಾಹಿತಿ ನೀಡಿದ್ದಾರೆ. ಎಲ್ಲ ವಿದ್ಯಾರ್ಥಿಗಳು, ಪೋಷಕರಿಗೆ ಕಡ್ಡಾಯವಾಗಿ ಟೆಸ್ಟ್ ಮಾಡಿಸುವಂತೆ ವೈದ್ಯಾಧಿಕಾರು ಸೂಚನೆ ನೀಡಿದ್ದಾರೆ.

ಸಂಪೂರ್ಣ ಸ್ಯಾನಿಟೈಜ್

ಶಾಲೆಯಲ್ಲಿ ಈಗಾಗಲೇ ಸಂಪೂರ್ಣ ಸ್ಯಾನಿಟೈಜ್ ಮಾಡಲಾಗಿದೆ. ಮೂರು ದಿನ ರಜೆ ಕೊಟ್ಟಿರೋದ್ರಿಂದ ಅನುಕೂಲವಾಗಿದೆ. ಶಾಲೆಯಲ್ಲಿ ಎಲ್ಲ ಕೋವಿಡ್ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ ಎಂದು ವೈದ್ಯಾಧಿಕಾರಿ ಡಾ.ಶ್ರೀಧರ್ ದಂಡಪ್ಪನವರ ಮಾಹಿತಿ ನೀಡಿದ್ದಾರೆ. ಶಿಕ್ಷಣ ಇಲಾಖೆಯ ಅಧಿಕಾರಿಗಳೂ ಶಾಲೆಗೆ ಭೇಟಿ ನೀಡಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

ವರದಿ - ಶಿವರಾಮ ಅಸುಂಡಿ.
Published by:Mahmadrafik K
First published: