ಕುವೈತ್ ದೇಶದಿಂದ ಧಾರವಾಡಕ್ಕೆ ತಲುಪಿದ 50 ಮೆಟ್ರಿಕ್ ಟನ್ ಆಕ್ಸಿಜನ್: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಕುವೈತ್​ನಿಂದ ಬಂದಿರುವ ಆಕ್ಸಿಜನ್‌ನನ್ನು ಧಾರವಾಡ, ಬೆಳಗಾವಿ, ಗದಗ, ಹಾವೇರಿ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳಿಗೆ ಸಮರ್ಪಕ ಹಂಚಿಕೆ ಮಾಡಲು ಜಿಲ್ಲಾಡಳಿತ ಎಲ್ಲ ವ್ಯವಸ್ಥೆಯನ್ನು ಮಾಡಿಕೊಂಡಿದೆ.

ಕೇಂದ್ರ ಸಚಿವ ಪ್ರಹ್ಲಾದ್​ ಜೋಷಿ

ಕೇಂದ್ರ ಸಚಿವ ಪ್ರಹ್ಲಾದ್​ ಜೋಷಿ

  • Share this:
ಧಾರವಾಡ : ಭಾರತದಲ್ಲಿನ ಆಕ್ಸಿಜನ್​​ ಕೊರತೆ ಸಮಸ್ಯೆ ನೀಗಿಸಲು ವಿಶ್ವದ ಹಲವು ರಾಷ್ಟ್ರಗಳು ಸಹಾಯ ಹಸ್ತ ಚಾಚಿವೆ. ಕೇಂದ್ರ ಸರ್ಕಾರ ಬೇರೆ-ಬೇರೆ ರಾಷ್ಟ್ರಗಳ ಜೊತೆಗೆ ಉತ್ತಮ ಸಂಬಂಧ ಹೊಂದಿದೆ. ಇದರ ಫಲವಾಗಿ ಇಂದು ಕುವೈತ್ ರಾಷ್ಟ್ರದಿಂದ 75 ಮೆಟ್ರಿಕ್ ಟನ್ ಆಕ್ಸಿಜನ್ ಆಮದಾಗಲಿದೆ. ಅದನ್ನು ಜಿಲ್ಲಾಡಳಿತ ಸಮರ್ಪಕ ವಿತರಿಸಲು ಸಿದ್ಧವಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು. ಧಾರವಾಡದ ಬೇಲೂರು ಕೈಗಾರಿಕಾ ಪ್ರದೇಶದಲ್ಲಿರುವ ಪ್ರಾಕ್ಸಿಯರ್ ಆಕ್ಸಿಜನ್ ಮರುಪೂರ್ಣ (ರೀಪಿಲ್ಲಿಂಗ್) ಘಟಕ್ಕೆ ಭೇಟಿ ನೀಡಿದ ಅವರು, ಘಟಕದಿಂದ  ಟ್ಯಾಂಕರ್‌ಗೆ ಆಕ್ಸಿಜನ್ ತುಂಬುವ ಕಾರ್ಯ ಪರೀಶಿಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಭಾರತ ಸರ್ಕಾರದ ವಿದೇಶಾಂಗ ಸಚಿವಾಲಯ, ವಾಣಿಜ್ಯ ಸಚಿವಾಲಯ ಇತರೆ ರಾಷ್ಟ್ರಗಳ ಜತೆ ಉತ್ತಮ ಸಂಬಂಧ ಹೊಂದಿದೆ. ಕೊರೋನಾ ಹಿನ್ನಲೆಯಲ್ಲಿ ಜಾಗತಿಕ ಟೆಂಡರ್ ಮೂಲಕ ಆಕ್ಸಿಜನ್ ಆಮದು ಮಾಡಿಕೊಳ್ಳುತ್ತಿದೆ. ಭಾರತದ ಬೇಡಿಕೆಗಳು ವಿವಿಧ ರಾಷ್ಟ್ರಗಳು ಸ್ಪಂದಿಸುತ್ತಿವೆ. ಕುವೈತ್ ರಾಷ್ಟ್ರದಿಂದ 75 ಮೆಟ್ರಿಕ್ ಟನ್ ಆಕ್ಸಿಜನ್ ಪೂರೈಕೆಗೆ ಒಪ್ಪಂದವಾಗಿತ್ತು. ಅದನ್ನು ಧಾರವಾಡದಲ್ಲಿ ಸಂಗ್ರಹಿಸಿ ವಿವಿಧ ಜಿಲ್ಲೆಗಳಿಗೆ ಇಲ್ಲಿಂದ ವ್ಯವಸ್ಥಿತವಾಗಿ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ 50 ಮೆಟ್ರಿಕ್ ಟನ್ ಆಕ್ಸಿಜನ್ ಬಂದಿದೆ ಎಂದರು.

ಈ ಆಕ್ಸಿಜನ್‌ನನ್ನು ಧಾರವಾಡ, ಬೆಳಗಾವಿ, ಗದಗ, ಹಾವೇರಿ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳಿಗೆ ಸಮರ್ಪಕ ಹಂಚಿಕೆ ಮಾಡಲು ಜಿಲ್ಲಾಡಳಿತ ಎಲ್ಲ ವ್ಯವಸ್ಥೆಯನ್ನು ಮಾಡಿಕೊಂಡಿದೆ. ಇನ್ನುಳಿದ 25 ಮೆಟ್ರಿಕ್ ಟನ್ ಆಕ್ಸಿಜನ್ ಎರಡು ದಿನಗಳಲ್ಲಿ ಪೂರೈಕೆಯಾಗಲಿದೆ ಎಂದರು. ಕುವೈತ್ ರಾಷ್ಟ್ರದಿಂದ ಬಂದಿರುವ ಆಕ್ಸಿಜನ್ ವಿಶೇಷವಾಗಿ ಈ ಭಾಗಕ್ಕೆ ಕಳುಹಿಸಲು ಸಹಕರಿಸಿದ ಪ್ರಧಾನಮಂತ್ರಿ, ವಿದೇಶಾಂಗ-ವಾಣಿಜ್ಯ ಮಂತ್ರಿಗಳಿಗೆ ಸಚಿವರಿಗೆ ಧನ್ಯವಾದ ತಿಳಿಸಿದರು.

ಪೂರ್ವಾಂಚಲದಿಂದ 2 ಟ್ಯಾಂಕರ್ ಆಕ್ಸಿಜನ್ ಬಂದಿದ್ದು, ಓರಿಸ್ಸಾದಿಂದ ಒಂದು ಆಕ್ಸಿಜನ್ ಟ್ಯಾಂಕರ್ ಬರಲಿದೆ. ಇವೆಲ್ಲ ಒಟ್ಟುಗೂಡಿಸಿ ಜಿಲ್ಲೆಗೆ ನಿತ್ಯ ಬೇಕಾಗುವ ಆಕ್ಸಿಜನ್‌ನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಈ ಎಲ್ಲ ವ್ಯವಸ್ಥೆಯ ಮಧ್ಯೆಯೂ ಸಾರ್ವಜನಿಕರು ಜಾಗೃತರಾಗಿದ್ದು,  ರೋಗ ಲಕ್ಷಣ ಕಂಡು ಬಂದರೆ ತಕ್ಷಣ ಸಮೀಪದ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಬೇಕು ಎಂದು ಸಲಹೆ ನೀಡಿದರು.

ಇದನ್ನೂ ಓದಿ: 12 ವರ್ಷದೊಳಗಿನ ಮಕ್ಕಳೇ ಕೊರೋನಾ 3ನೇ ಅಲೆಯ ಟಾರ್ಗೆಟ್!? ಪೋಷಕರು ಇಂದೊಂದು ಕೆಲಸ ಮಾಡಲೇಬೇಕಂತೆ!

ಶಾಸಕರಾದ ಅರವಿಂದ ಬೆಲ್ಲದ, ಅಮೃತ ದೇಸಾಯಿ, ಜಿಲ್ಲಾಧಿಕಾರಿ ನಿತೇಶ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ, ಆಕ್ಸಿಜನ್ ತಂಡದ ನೊಡಲ್ ಅಧಿಕಾರಿಗಳಾದ  ಆಹಾರ ಇಲಾಖೆ ಜಂಟಿ ನಿರ್ದೇಶಕ ವಿನಾಯಕ ಪಾಲನಕರ, ಡಿಯುಡಿಸಿ ಯೋಜನಾ ನಿರ್ದೇಶಕ ರುದ್ರೇಶ, ಜಿಲ್ಲಾ ಸಹಾಯಕ ಔಷಧಿಗಳ ನಿಯಂತ್ರಕ  ಮಲ್ಲಿಕಾರ್ಜುನ ಕೆ.ಎಸ್, ಡಿವೈಎಸ್ ಪಿ  ಮಲ್ಲಿಕಾರ್ಜುನ ಬಿ.ಸಂಕದ ಇದ್ದರು.

ಇನ್ನು ದೇಶಾದ್ಯಂತ ಕಳೆದ 24 ಗಂಟೆಗಳಲ್ಲಿ 2,81,386  ಪಾಸಿಟಿವ್​ ಪ್ರಕರಣಗಳು ಪತ್ತೆಯಾಗಿವೆ. ಆ ಮೂಲಕ ದೇಶದಲ್ಲಿ ಕೊರೋನಾ ಕೇಸ್​​​ಗಳ ಸಂಖ್ಯೆ 2,49,65,463ಕ್ಕೆ ಏರಿಕೆ ಆಗಿದೆ.‌ ಭಾನುವಾರ 3,78,741 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.  ದಿನದಿಂದ ದಿನಕ್ಕೆ ಕೊರೋನಾ ರೋಗಕ್ಕೆ ಬಲಿ ಆಗುತ್ತಿರುವವರ ಸಂಖ್ಯೆ ಕೂಡ‌ ಹೆಚ್ಚಾಗಿದೆ. 24 ಒಂದೇ ದಿನ 4,106 ಜನರು ಬಲಿ ಆಗಿದ್ದು ಈವರೆಗೆ ಕೊರೋನಾದಿಂದ ಸತ್ತವರ ಸಂಖ್ಯೆ 2,74,390ಕ್ಕೆ ಏರಿಕೆ ಆಗಿದೆ.
Published by:Kavya V
First published: