Murder Case: ಗುರಾಯಿಸಿದ ಎಂಬ ಕಾರಣಕ್ಕೆ ಯುವಕನನ್ನೇ ಕೊಂದಿದ್ದ ಪಾಪಿಗಳು! ಹಂತಕರಿಗೆ ಈಗ ಜೀವಾವಧಿ ಶಿಕ್ಷೆ

ಗುರಾಯಿಸಿ ನೋಡಿದನೆಂಬ ಒಂದೇ ಕಾರಣಕ್ಕೆ ಯುವಕನನ್ನು ಕೊಲೆಗೈದಿದ್ದ ಆರೋಪಿಗಳಿಗೆ ಕಠಿಣ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. 1.50 ಲಕ್ಷ ರೂಪಾಯಿ ದಂಡವನ್ನೂ ವಿಧಿಸಿರೋ ನ್ಯಾಯಾಲಯ, ದಂಡದ ಮೊತ್ತವನ್ನು ಕೊಲೆಯಾದ ಯುವಕನ ಪೋಷಕರಿಗೆ ನೀಡುವಂತೆ ಸೂಚಿಸಿದೆ.

ಹುಬ್ಬಳ್ಳಿ-ಧಾರವಾಡ ನ್ಯಾಯಾಲಯ

ಹುಬ್ಬಳ್ಳಿ-ಧಾರವಾಡ ನ್ಯಾಯಾಲಯ

  • Share this:
ಹುಬ್ಬಳ್ಳಿ: ಕೆಲವೊಮ್ಮೆ ಸಣ್ಣ ಸಣ್ಣ ಕಾರಣಕ್ಕೂ (Small Reason) ದೊಡ್ಡ ಘಟನೆಗಳು (Big Incident) ನಡೆದು ಹೋಗಿಬಿಡುತ್ತವೆ. ಹುಬ್ಬಳ್ಳಿಯಲ್ಲಿ (Hubballi) ನಡೆದ ಅಂಥದ್ದೇ ಘಟನೆಗೆ ಇಬ್ಬರು ಯುವಕರು ಜೈಲು (Jail) ಪಾಲಾಗಿ ಶಿಕ್ಷೆಗೆ ಗುರಿಯಾಗಿದ್ದಾರೆ. ಗುರಾಯಿಸಿ ನೋಡಿದನೆಂಬ ಒಂದೇ ಕಾರಣಕ್ಕೆ ದ್ವೇಷ ಇಟ್ಟುಕೊಂಡು ಬರ್ಬರವಾಗಿ ಹತ್ಯೆಗೈದ (Murder) ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಇಬ್ಬರು ಯುವಕರಿಗೆ ಕಠಿಣ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಗುರಾಯಿಸಿ ನೋಡಿದನೆಂದು ಯುವಕನನ್ನು ಬರ್ಬರವಾಗಿ ಕೊಲೆ ಮಾಡಿದ ಪ್ರಕರಣದ ಆರೋಪಿಗಳಿಗೆ ಕಠಿಣ ಜೀವಾವಧಿ ಶಿಕ್ಷೆ ಪ್ರಕಟಿಸಲಾಗಿದೆ. ಹುಬ್ಬಳ್ಳಿಯ 5 ನೇ ಅಪರ ಮತ್ತು ಜಿಲ್ಲಾ ಸತ್ರ ನ್ಯಾಯಾಲಯದ (Court) ನ್ಯಾಯಾಧೀಶರಿಂದ ತೀರ್ಪು ಪ್ರಕಟಗೊಂಡಿದೆ.

2020ರ ಮಾರ್ಚ್‌ನಲ್ಲಿ ನಡೆದಿದ್ದ ಘಟನೆ

2020ರ ಮಾರ್ಚ್‌ನಲ್ಲಿ ಹುಬ್ಬಳ್ಳಿಯ ಪಠಾಣ ಗಲ್ಲಿಯಲ್ಲಿ ಘಟನೆ ನಡೆದಿತ್ತು. ಶಮಸುದ್ದಿನ್ ಸವಣೂರು ಮತ್ತು ಜುಬೇರ್ ಅಹ್ಮದ್ ಅಲಿಯಾಸ್ ಹಾಜಿ ಜೈಲಾನಿ ಶಿಕ್ಷೆಗೆ ಗುರಿಯಾದ ಆರೋಪಿಗಳಾಗಿದ್ದಾರೆ. ಮಾರ್ಚ್ 10, 2020 ರಂದು ಹುಬ್ಬಳ್ಳಿಯ ಕಸಬಾ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಕಟುಕರ ಓಣಿಯಲ್ಲಿರೋ ಸರ್ಕಾರಿ ಉರ್ದು ಶಾಲೆ ಬಳಿ ಆರೋಪಿಗಳಾದ ಶಮಸುದ್ದೀನ್ ಹಾಗೂ ಜುಬೇರ್ ಅಹ್ಮದ್ ಮಾತನಾಡುತ್ತಾ ಕುಳಿತಿದ್ದಾಗ ಶಾಬುದ್ದೀನ್ ಅಲ್ಲಿಗೆ ಬಂದಿದ್ದ. ಶಾಬುದ್ದೀನ್ ಗುರಾಯಿಸಿ ನೋಡಿದನೆಂದು ಶಮಸುದ್ದೀನ್ ಜಗಳ ತೆಗೆದಿದ್ದಾನೆ. ಈ ವೇಳೆ ನೆರೆದವರು ಜಗಳ ಬಿಡಿಸಿ ವಾಪಸ್ ಕಳುಹಿಸಿದ್ದರು.

ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ

ಅದೇ ದ್ವೇಷ ಇಟ್ಟುಕೊಂಡು ಶಮಸುದ್ದೀನ್ ಹಾಗೂ ಜುಬೇರ್ ಅಹ್ಮದ್ ಎಂಬ ಆರೋಪಿಗಳು ಶಾಬುದ್ದಿನ್ ಎಂಬಾತನನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದರು. ಕೊಲೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗಳಾದ ಶಮಸುದ್ದಿನ್ ಸವಣೂರು ಮತ್ತು ಜುಬೇರ್ ಅಹ್ಮದ್ @ ಹಾಜಿ ಜೈಲಾನಿ ಗೆ ಕಠಿಣ ಜೀವಾವಧಿ ಕಾರಾಗೃಹ ಶಿಕ್ಷೆ ಜೊತೆಗೆ ತಲಾ 1.50 ಲಕ್ಷ ದಂಡ ವಿಧಿಸಿ ತೀರ್ಪು ನೀಡಲಾಗಿದೆ. ದಂಡ ಪಾವತಿಸದೇ ಇದ್ದಲ್ಲಿ 2 ವರ್ಷ ಸಾದ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ. ದಂಡದ ಮೊತ್ತದಲ್ಲಿ 1.45 ಲಕ್ಷ ರೂಪಾಯಿ ಮೃತನ ತಂದೆ, ತಾಯಿಗೆ ನೀಡಲು ನ್ಯಾಯಮೂರ್ತಿ ಆದೇಶಿಸಿದ್ದಾರೆ.

ಇದನ್ನೂ ಓದಿ: Puttur: ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನೋ ಎಂಟ್ರಿ

 ಶೀಲ ಶಂಕಿಸಿ ಹೆಂಡತಿಯ ಕೊಲೆ

ಮತ್ತೊಂದು ಪ್ರಕಣದಲ್ಲಿ ಹೆಂಡತಿಯ ಶೀಲ ಶಂಕಿಸಿ ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸಿದ ಪ್ರಕರಣದಲ್ಲಿ ಪತಿ ಆರೋಪ ಸಾಬೀತಾಗಿದೆ. ಹುಬ್ಬಳ್ಳಿಯ 1 ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿಕ್ಷೆಯ ಪ್ರಮಾಣ ಕಾಯ್ದಿರಿಸಿದೆ. ಹುಬ್ಬಳ್ಳಿಯ ಗದಗ ರಸ್ತೆ ಚಾಲುಕ್ಯ ನಗರ ವಿನೂತನ ಕಾಲೋನಿಯ ಕಿಶೋರ ಬೊಮ್ಮಾಜಿ ಎಂಬಾತನ ಮೇಲಿನ ಆರೋಪ ಸಾಬೀತಾಗಿದೆ.

ಮದುವೆ ಬಳಿಕ ಪ್ರತಿನಿತ್ಯ ಕಿರುಕುಳ

ತನ್ನ ಪತ್ನಿ ಲವೀನಾ ಳ ಶೀಲ ಶಂಕಿಸಿ ವಾಯರ್‌ನಿಂದ ಕುತ್ತಿಗೆಗೆ ಬಿಗಿದು ಕೊಲೆ ಮಾಡಿದ್ದ. ಅದನ್ನು ಆತ್ಮಹತ್ಯೆ ಎಂಬಂತೆ ಬಿಂಬಿಸಲು ಆರೋಪಿ ಯತ್ನಿಸಿದ್ದ.
ಕಿಶೋರ ಬೊಮ್ಮಾಜಿ 2011 ರಲ್ಲಿ  ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ಮೂಲದ ಲವೀನಾಳನ್ನು ವಿವಾಹವಾಗಿದ್ದ. ಮದುವೆಯ ನಂತರ ಕಿಶೋರ ಹಾಗೂ ಆತನ ಕುಟುಂಬದ ಸದಸ್ಯರು ಲವೀನಾಳ ಮೇಲೆ ಸಂದೇಹಪಟ್ಟು ಕಿರುಕುಳ ಕೊಡತ್ತಿದ್ದರು ಎನ್ನಲಾಗಿದೆ.

ತವರಿಗೆ ಹೋದವಳನ್ನು ಕರೆ ತಂದಿದ್ದ

ಇದೆಲ್ಲ ಬೆಳವಣಿಗೆ ನಂತರ ಕಿಶೋರ ವಿನೂತನ ಕಾಲೋನಿಯಲ್ಲಿ ಪ್ರತ್ಯೇಕ ಮನೆ ಮಾಡಿ ಜೀವನ ಮುಂದುವರೆಸಿದ್ದ. ಅಷ್ಟಾದರೂ ಪತ್ನಿ ಶೀಲದ ಮೇಲಿನ ಶಂಕೆ ಆತನನ್ನು ಬಿಟ್ಟಿರಲಿಲ್ಲ. ಪದೇ ಪದೇ ಜಗಳ ಆಡುತ್ತಿದ್ದರಿಂದ ಬೇಸತ್ತು ಲವೀನಾ ತವರು ಮನೆಗೆ ಹೋಗಿದ್ದಳು. ಮತ್ತೊಮ್ಮೆ ಕಿರುಕುಳ ನೀಡಲ್ಲವೆಂದು ನಂಬಿಸಿ ಹೆಂಡತಿಯನ್ನು ವಾಪಸ್ ಕರೆದುಕೊಂಡು ಬಂದಿದ್ದ ಕಿಶೋರ, ಮೊಬೈಲನ್ನೂ ಕೊಡದೆ ಪೀಡಿಸುತ್ತಿದ್ದ.

ಮೊಬೈಲ್ ವಿಚಾರಕ್ಕೆ ಮತ್ತೆ ಗಲಾಟೆ

ಇವರು ವಾಸ ಮಾಡೋ ಪರಿಚಿತ ವ್ಯಕ್ತಿ ಲವೀನಾಳಿಗೆ ಮೊಬೈಲ್ ಕೊಟ್ಟಿರೋ ವಿಚಾರ ಕಿಶೋರ್ ಗೆ ಗೊತ್ತಾಗಿ, ಪತ್ನಿಯ ಜೊತೆ ಮತ್ತೆ ಜಗಳ ತೆಗೆದಿದ್ದಾನೆ. ಪತ್ನಿಯನ್ನು ಉಸಿರುಗಟ್ಟಿಸಿ ಸಾಯಿಸಿ, ಅದನ್ನು ಮುಚ್ಚಿ ಹಾಕಲು ಫ್ಯಾನ್ ಗೆ ನೇಣು ಹಾಕಿಕೊಂಡ ರೀತಿಯಲ್ಲಿ ದೃಶ್ಯಗಳನ್ನು ಸೃಷ್ಟಿಸಿ ಬಚಾವಾಗಲು ಯತ್ನಿಸುತ್ತಾನೆ. 2018ರ ಮಾರ್ಚ್ 23ರಂದು ಈ ಘಟನೆ ನಡೆದಿತ್ತು.

ಇದನ್ನೂ ಓದಿ: Bengal Violence: 8 ಜನರ ಸಜೀವ ದಹನದ ನಂತರ ದೀದಿ ರಾಜ್ಯದಲ್ಲಿ ಹೆಚ್ಚಿದ ಗದ್ದಲ, ಐವರು BJP ಶಾಸಕರು ಅಮಾನತು

ಮೃತಳ ಪೋಷಕರಿಂದ ದೂರು

ಆದರೆ ಲವೀನಾಳ ಪೋಷಕರು ತಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿಲ್ಲ, ಕೊಲೆ ಮಾಡಲಾಗಿದೆ ಎಂದು ದೂರು ನೀಡಿದ್ದರು. ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರು, ಕಿಶೋರನ ಮೇಲಿನ ಆರೋಪ ಸಾಬೀತಾಗಿದೆ ಎಂದಿದ್ದಾರೆ. ತೀರ್ಪನ್ನು ಕಾಯ್ದಿರಿಸಿದ್ದಾರೆ.
Published by:Annappa Achari
First published: