• Home
  • »
  • News
  • »
  • state
  • »
  • Hubballi: ಭಾರತೀಯ ಸೇನೆ ಸೇರಲು ರೆಡಿಯಾಗಿದೆ ಹುಬ್ಬಳ್ಳಿ ಗನ್; ಸ್ವದೇಶಿ ನಿರ್ಮಿತ ಪವರ್ ಫುಲ್ ಅಟಲ್

Hubballi: ಭಾರತೀಯ ಸೇನೆ ಸೇರಲು ರೆಡಿಯಾಗಿದೆ ಹುಬ್ಬಳ್ಳಿ ಗನ್; ಸ್ವದೇಶಿ ನಿರ್ಮಿತ ಪವರ್ ಫುಲ್ ಅಟಲ್

ಅಟಲ್ ಪಿಸ್ತೂಲ್​

ಅಟಲ್ ಪಿಸ್ತೂಲ್​

ಎಂಜಿನಿಯರಿಂಗ್ ವಿದ್ಯಾರ್ಥಿಯ ಕನಸಿನ ಕೂಸಾಗಿ ಸ್ವದೇಶಿ ನಿರ್ಮಿತ ಶಸ್ತ್ರಾಸ್ತ್ರಗಳು ರೂಪುಗೊಂಡು ಭಾರತೀಯ ಸೇನೆ ಸೇರೋಕೆ ಸಜ್ಜಾಗಿವೆ. ಡಿ.ಆರ್.ಡಿ.ಒ. ಹಸಿರು ನಿಶಾನೆ ಸಿಕ್ಕಿದ್ದು, ಅಟಲ್ ಅಸ್ತ್ರ ಇತ್ಯಾದಿ ಅತ್ಯಾಧುನಿಕ ಸ್ವದೇಶಿ ನಿರ್ಮಿತ ಶಸ್ತ್ರಾಸ್ತ್ರಗಳ ಬಗ್ಗೆ ಕೇಳಿದ್ರೆ ನೀವೂ ಹುಬ್ಬೇರಿಸ್ತೀರಿ.

ಮುಂದೆ ಓದಿ ...
  • Share this:

ಹುಬ್ಬಳ್ಳಿ (ಅ.4) : ಪ್ರಧಾನಿಗಳ ಆತ್ಮನಿರ್ಭರ್, ಮೇಕ್ ಇನ್ ಇಂಡಿಯಾದ ಪ್ರೇರಣೆ ಪಡೆದು ಹುಬ್ಬಳ್ಳಿಯ ((Hubballi)) ಯುವಕನೋರ್ವ ಸ್ವದೇಶಿ ನಿರ್ಮಿತ ಶಸ್ತ್ರಾಸ್ತ್ರ (Weapon) ಸಿದ್ಧಪಡಿಸಿದ್ದಾನೆ. ಭಾರತೀಯ ಸೇನೆಯ ಬತ್ತಳಿಕೆ ಸೇರಲು ಹುಬ್ಬಳ್ಳಿಯ ಶಸ್ತ್ರಾಸ್ತ್ರಗಳು ಸಜ್ಜಾಗಿವೆ. ಭಾರತ ಸೇನೆಗೆ ಬೇಕಿರೋ ಶಸ್ತ್ರಾಸ್ತ್ರ ತಯಾರಿಕೆಗೆ ಹುಬ್ಬಳ್ಳಿಯಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮೇಕ್ ಇನ್ ಇಂಡಿಯಾ (Make in India) ಯೋಜನೆ ಅಡಿ ಶಸ್ತ್ರಾಸ್ತ್ರ ತಯಾರಿಕೆ ಮಾಡಲಾಗುತ್ತಿದೆ. ಶಸ್ತ್ರಾಸ್ತ್ರ ತಯಾರಿಕಾ ಘಟಕಕ್ಕೆ DRDO ಹಸಿರು ನಿಶಾನೆ ತೋರಿಸಿದೆ. ಸೇನೆಯ ವಿವಿಧ ಪರೀಕ್ಷೆಗಳಲ್ಲೀ ಪಾಸ್ ಆಗಿರೋ ವೆಪನ್ಸ್ ಗೆ ಸರ್ಟಿಫಿಕೇಷನ್ (Certification For Weapons) ಟೆಸ್ಟ್ ಮಾತ್ರ ಬಾಕಿ ಉಳಿದಿದೆ. 


ಸ್ವದೇಶಿ ನಿರ್ಮಿತ ಶಸ್ತ್ರಾಸ್ತ್ರ ತಯಾರಿಸಿದ ಯುವಕ


ವಿಶೇಷವಾಗಿ ಸೇನೆಯ ಸಲುವಾಗಿಯೇ ಆಗಿದೆ ATAL(ಅಟಲ್) ಪಿಸ್ತೂಲ್ ಆವಿಷ್ಕಾರ ಮಾಡಲಾಗಿದೆ. ಅಸ್ತ್ರ ಇವರ ಆವಿಷ್ಕಾರದ ಮತ್ತೊಂದು ಗನ್ ಆಗಿದೆ. ಭಾರತೀಯ ಸೇನೆಯಲ್ಲಿ ಈಗಿರುವ ವೆಪನ್ ಗಿಂತ ಪವರ್ ಫುಲ್ ಹುಬ್ಬಳ್ಳಿ ವೆಪನ್‌ ಎನ್ನಲಾಗುತ್ತಿದೆ.




ಪವರ್ ಫುಲ್ ಹುಬ್ಬಳ್ಳಿ ವೆಪನ್‌


ಕಡಿಮೆ ತೂಕದ, ಅತಿ ದೂರಕ್ಕೆ ಗುರಿ ಇಡಬಲ್ಲ ಗನ್ ಗಳ ತಯಾರಿಕೆ ಮಾಡಲಾಗಿದೆ. ಮುಂದಿನ ತಿಂಗಳು ಗುಜರಾತ್ ನಲ್ಲಿ ನಡೆಯಲಿರುವ ಶಸ್ತ್ರಾಸ್ತ್ರ ಎಕ್ಸಿಬಿಷನ್ ನಲ್ಲಿ ಪ್ರದರ್ಶನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಂತರರಾಷ್ಟ್ರೀಯ ಹಾಗೂ ದೇಶೀಯ ರಕ್ಷಣಾ ವಲಯಕ್ಕೆ ತಮ್ಮ ಆವಿಷ್ಕಾರಳ ಪರಿಚಯ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಸ್ವದೇಶಿ ನಿರ್ಮಿತ ಶಸ್ತ್ರಾಸ್ತ್ರ ಪೂರೈಸೋ ನಿರೀಕ್ಷೆಯಲ್ಲಿದೆ ಹುಬ್ಬಳ್ಳಿಯ ಸ್ಟಾರ್ಟ್ ಅಪ್ ಕಂಪನಿ.


ಅಂಕುಶ್ ಕೊರವಿ ಕನಸಿನ ಫಲ


ಭಾರತ ಸೇನೆಯ ಇತಿಹಾಸದಲ್ಲೇ ಮೊದಲು ಈ ಶಸ್ತ್ರಾಸ್ತ್ರ ಪೂರೈಕೆ ಕನಸು ಕಾಣ್ತಿದೆ. ಭಾರತ ಈವರೆಗೂ ಅಮೇರಿಕಾ, ರಷ್ಯಾ ಮೇಲೆ ಅವಲಂಬಿತವಾಗಿದೆ. ಆತ್ಮ‌ನಿರ್ಭರ ಯೋಜನೆಯಡಿ ಶಸ್ತ್ರಾಸ್ತ್ರ ನಿರ್ಮಾಣಕ್ಕೆ ಮುಂದಾದ ಭಾರತದ ಏಕೈಕ ಖಾಸಗಿ ಸಂಸ್ಥೆ ಅಸ್ತ್ರ ಡಿಫೆನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯಾಗಿದೆ. ಹುಬ್ಬಳ್ಳಿಯ ಉತ್ಸಾಹಿ ಯುವಕ ಅಂಕುಶ್ ಕೊರವಿ ಕನಸಿನ ಫಲ ಇದಾಗಿದೆ.
ಅಸ್ತ್ರ ಡಿಫೆನ್ಸ್ ಲಿಮಿಟೆಡ್ ಕಂಪನಿ ದೇಶದ ಗಮನ ಸೆಳೆಯುತ್ತಿದೆ.


ಇದನ್ನೂ ಓದಿ: Constable Challenge: ಪೊಲೀಸ್ ಎಸ್ಕಾರ್ಟ್ ಇಲ್ಲದೇ ಮನೆಗೆ ಹೋಗು; ಸಿದ್ದರಾಮಯ್ಯಗೆ ಪೊಲೀಸ್​ ಪೇದೆ ಸವಾಲ್​


ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನಲ್ಲಿ ಕಾರ್ಖಾನೆ ಸ್ಥಾಪಿಸಲಾಗಿದೆ. ಸರ್ವೀಸ್ ಪಿಸ್ತೂಲ್, ಸಿಟಿಜನ್ ಪಿಸ್ತೂಲ್, ಕ್ರೀಡೆಗಾಗಿಯೂ ಪಿಸ್ತೂಲ್ ತಯಾರಿಕೆ ಮಾಡಲಾಗ್ತಿದೆ. ಬಿಇ ವಿದ್ಯಾರ್ಥಿಯಾಗಿದ್ದಾಗಲೇ ಪಿಸ್ತೂಲ್, ಗನ್ ತಯಾರಿಕೆಯ ಪ್ರಾಜೆಕ್ಟ್ ತೆಗೆದುಕೊಂಡಿದ್ದ ಕೊರವಿ, ವಿದ್ಯಾರ್ಥಿ ದೆಸೆಯಲ್ಲಿನ ಕನಸನ್ನು ನನಸು ಮಾಡಿಕೊಳ್ತಿದ್ದಾನೆ. ASTR ಡಿಫೆನ್ಸ್ ಸ್ಟಾರ್ಟಪ್ ಸ್ಥಾಪಿಸಿ ಸ್ಥಳೀಯ ವಿನ್ಯಾಸಗಳ ಮೇಲೆ ಕೊರವಿ ಮೂರು ಪೇಟೆಂಟ್ ಪಡೆದಿದ್ದಾನೆ.


ಭಾರತೀಯ ಸೇನೆಗೆ ನನ್ನ ಕೊಡುಗೆ


ಭಾರತೀಯ ಸೇನೆಗೆ ಏನಾದ್ರೂ ಕೊಡುಗೆ ಕೊಡಬೇಕು ಅಂತ ಅಟಲ್ ಪಿಸ್ತೂಲ್ ರೂಪಿಸಿದ್ದೇನೆ. ಈಗಾಗಲೇ ಟ್ರಯಲ್ಸ್ ಮುಗಿದಿದೆ. ಸರ್ಟಿಫಿಕೇಷನ್ ಟ್ರಯಲ್ಸ್ ಮಾತ್ರ ಬಾಕಿ ಇದೆ. ಅದು ಪೂರೈಕೆಯಾಗುತ್ತಿದ್ದಂತೆಯೇ ಸೇನೆಗೆ ಅಗತ್ಯವಿರೂ ಗನ್ ತಯಾರಿಕೆ ಮಾಡ್ತೇವೆ ಎಂದು ಅಸ್ತ್ರ ಡಿಫೆನ್ಸ್ ಸ್ಟಾರ್ಟಪ್ ಸ್ಥಾಪಕ ಅಂಕುಶ್ ಕೊರವಿ ಮಾಹಿತಿ ನೀಡಿದ್ದಾರೆ. ಅಂಕುಶ್ ಕೊರವಿ ಪ್ರಯತ್ನಕ್ಕೆ ನಿವೃತ್ತ ಸೇನಾಧಿಕಾರಿಗಳಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.




ಇದನ್ನೂ ಓದಿ: Paresh Mesta Death Case: ಪರೇಶ್‌ ಮೇಸ್ತ ಸಾವು ಆಕಸ್ಮಿಕ! ಕೋರ್ಟ್‌ಗೆ ಸಲ್ಲಿಸಿದ ರಿಪೋರ್ಟ್‌ನಲ್ಲಿ ಸಿಬಿಐ ಉಲ್ಲೇಖ


ಹುಬ್ಬಳ್ಳಿಯ ಯುವಕನ ಸಾಧನೆಗೆ ಮೆಚ್ಚುಗೆ


ಸೇನೆ ಬಳಸುವ ಆಯುಧಗಳ ಬಿಡಿ ಭಾಗ ತೆರೆದ ಮಾರುಕಟ್ಟೆಯಲ್ಲಿ ಸಿಗಲ್ಲ. ಆದರೆ ಬಿಡಿ ಭಾಗಗಳ ಖರೀದಿಗೆ ಅನುಮತಿ ಪಡೆದು ಅತ್ಯಾಧುನಿಕ ಶಸ್ತ್ರಾಸ್ತ್ರ ರೂಪಿಸಿದ್ದಾರೆ. ಅಂಕುಶ್ ರೂಪಿಸಿರೋ ಶಾಸ್ತ್ರಾಸ್ತ್ರಗಳು ಖಂಡಿತಾ ಭಾರತ ಸೇನೆಗೆ ನೆರವಾಗಲಿವೆ. ಮುಂದಿನ ದಿನಗಳಲ್ಲಿ ಟೆಸ್ಟಿಂಗ್ ನಲ್ಲಿ ಪಾಸ್ ಆದ ನಂತರ ಇದಕ್ಕೆ ಸೇನೆಯಲ್ಲಿ ಮನ್ನಣೆ ಸಿಗಲಿದೆ. ಅಂಕುಶ್ ಕಾರ್ಯ ಶ್ಲಾಘನೀಯ ಎಂದು ನಿವೃತ್ತ ಮೇಜರ್ ಸಿ.ಎಸ್.ಆನಂದ್ ಬಣ್ಣಿಸಿದ್ದಾರೆ. ಹುಬ್ಬಳ್ಳಿಯ ಯುವಕನ ಸಾಧನೆಗೆ ಕರ್ನಾಟಕದ ಜನತೆಯಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.

Published by:ಪಾವನ ಎಚ್ ಎಸ್
First published: