• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Hubballi: ಚಲಿಸುತ್ತಿದ್ದ ರೈಲಿನಲ್ಲಿ ಯುವಕನ ಹುಚ್ಚಾಟ: ಮಂಗನಂತೆ ಮಾಡೋದನ್ನ ನೋಡಿ ಪೆಚ್ಚಾದ ಜನ

Hubballi: ಚಲಿಸುತ್ತಿದ್ದ ರೈಲಿನಲ್ಲಿ ಯುವಕನ ಹುಚ್ಚಾಟ: ಮಂಗನಂತೆ ಮಾಡೋದನ್ನ ನೋಡಿ ಪೆಚ್ಚಾದ ಜನ

ಯುವಕನ ಮಂಗನಾಟ

ಯುವಕನ ಮಂಗನಾಟ

ಪ್ರಾಣದ ಹಂಗಿಲ್ಲದೆ ಮಂಗನ ರೀತಿಯಲ್ಲಿ ಯುವಕ ವರ್ತಿಸಿದ್ದು, ಸಹ ಪ್ರಯಾಣಿಕರನ್ನೂ ಕೆರಳಿಸುವಂತೆ ಮಾಡಿದೆ. ಸಹ ಪ್ರಯಾಣಿಕರು ಬುದ್ಧಿವಾದ ಹೇಳಿದರೂ ಕೇಳದೇ ಯುವಕ ತನ್ನ ಹುಚ್ಚಾಟ ಮುಂದುವರಿಸಿದ್ದಾನೆ.

  • Share this:

ಹುಬ್ಬಳ್ಳಿ: ರೈಲು (Train) ಹತ್ತುವಾಗ ಅಥವಾ ಇಳಿಯುವಾಗ ಸ್ವಲ್ಪ ಯಾಮಾರಿದರೂ ಪ್ರಾಣಕ್ಕೆ ಕಂಟಕವಾಗಬಲ್ಲದು. ಸ್ವಲ್ಪದರಲ್ಲಿಯೇ ರೈಲಿನಡಿ ಸಿಲುಕಿ ಅದೆಷ್ಟೋ ಜನ ಸಾವಿಗೀಡಾಗಿರೋದನ್ನು ನಾವು ಕಾಣ್ತೇವೆ. ಇಷ್ಟೆಲ್ಲ ನಮ್ಮ ಕಣ್ಣ ಮುಂದಿದ್ದರೂ ಕೆಲವೊಬ್ಬರು ಮಾಡೋ ಹುಚ್ಚು ಸಾಹಸಗಳು ಅಚ್ಚರಿ ಮೂಡಿಸುತ್ತದೆ. ಚಲಿಸುತ್ತಿರುವ ರೈಲಿನಲ್ಲಿ (Moving Train) ಜೀವದ ಮಹತ್ವವಿಲ್ಲದೆ ಯುವಕನೋರ್ವ (Youth) ಹುಚ್ಚಾಟ ಮೆರೆದ ಘಟನೆ ಮಂಗಳೂರಿನಿಂದ ಹುಬ್ಬಳ್ಳಿ (Managluuru To Hubballi) ಕಡೆಗೆ ಬರುತ್ತಿದ್ದ ರೈಲಿನಲ್ಲಿ ನಡೆದಿದೆ. ಚಲಿಸುತ್ತಿರುವ ರೈಲಿನಲ್ಲಿ  ಯುವಕ ಹುಚ್ಚಾಟ ಮಾಡಿದ ಯುವಕ, ನೋಡುಗರ ಎದೆ ಬಡಿದುಕೊಳ್ಳುವಂತೆ ಮಾಡಿದ್ದಾನೆ. ರೈಲಿನ ಬಾಗಿಲಿನಲ್ಲಿ ನಿಂತ ಯುವಕ, ಕೈಗೆ ಸಿಗುತ್ತಿದ್ದ ಗಿಡಗಳ ಎಲೆಗಳನ್ನು ಹರಿಯುವ ದುಸ್ಸಾಹಸ ಮಾಡಿದ್ದಾನೆ.


ರೈಲಿನ ಬಾಗಿಲು ಹಿಡಿದು ಜೋಕಾಲಿ ಆಡುವುದು, ಕಾಲು ಎತ್ತಿ ಜಿಗಿದಂತೆ ಮಾಡುವುದು ಇತ್ಯಾದಿಗಳನ್ನು ಮಾಡುತ್ತಲೇ ಸಾಗಿದ್ದಾನೆ. ಸುಮಾರು ಹೊತ್ತು ಯುವಕ ತನ್ನ ಹುಚ್ಚಾಟ ಮುಂದುವರಿಸಿದ್ದಾನೆ.




ರೈಲು ವೇಗವಾಗಿ ಚಲಿಸುತ್ತಿರುವಂತೆಯೇ ಯುವಕನ ಹುಚ್ಚಾಟವೂ ಹೆಚ್ಚಾಗಿದೆ. ಮಾರ್ಗದ ಮಧ್ಯೆ ಸಾಕಷ್ಟು ತಿರುವುಗಳು, ಪ್ರಪಾತಗಳು ಇದ್ದರೂ ಬೇಜವಾಬ್ದಾರಿಯಿಂದ ವರ್ತಿಸಿದ್ದಾನೆ. ಅಪ್ಪಿ ತಪ್ಪಿ ಏನಾದರೂ ಕಾಲೂ ಜಾರಿ ಬಿದ್ದರೇ ಜೀವವೇ ಹೋಗೋ ಆತಂಕ ಎದುರಾಗಿತ್ತು.


ರೈಲಿನಲ್ಲಿ ಯುವಕನ ಮಂಗನಾಟ


ಪ್ರಾಣದ ಹಂಗಿಲ್ಲದೆ ಮಂಗನ ರೀತಿಯಲ್ಲಿ ಯುವಕ ವರ್ತಿಸಿದ್ದು, ಸಹ ಪ್ರಯಾಣಿಕರನ್ನೂ ಕೆರಳಿಸುವಂತೆ ಮಾಡಿದೆ. ಸಹ ಪ್ರಯಾಣಿಕರು ಬುದ್ಧಿವಾದ ಹೇಳಿದರೂ ಕೇಳದೇ ಯುವಕ ತನ್ನ ಹುಚ್ಚಾಟ ಮುಂದುವರಿಸಿದ್ದಾನೆ. ಯುವಕನ ಹುಚ್ಚಾಟದ ದೃಶ್ಯಗಳನ್ನು ನೋಡಿದ್ರೆ ಮೈ ಝುಮ್ಮೆನ್ನುತ್ತೆ. ಯುವಕನ ಹುಚ್ಚಾಟದ ದೃಶ್ಯಗಳು ನ್ಯೂಸ್ 18 ಕನ್ನಡಕ್ಕೆ ಲಭ್ಯವಾಗಿದೆ.


ಇದನ್ನೂ ಓದಿ:  C T Ravi: ‘ಕಾಂಗ್ರೆಸ್​ನವರು ಚಡ್ಡಿ ಸುಟ್ಕೊಂಡೇ ಇರಲಿ, ನಮ್ಮ ಹಳೇ ಚಡ್ಡಿಗಳು ಇವೆ ಕಳಿಸಿ ಕೊಡುತ್ತೇವೆ, ಸುಟ್ಕಂಡ್ ಇರಿ’


ಚಡ್ಡಿ ಸುಡ್ತಿದೆ ಎಂಬ ಕಾಂಗ್ರೆಸ್ ಹೇಳಿಕೆಗೆ ಸಿಎಂ ಕಿಡಿ


ಎಲ್ಲಾ ಕಡೆಗಳಲ್ಲಿ ಆರ್ ಎಸ್ ಎಸ್ ಚಡ್ಡಿ ಸುಡುತ್ತೆವೆ ಎಂಬ  ಕೈ ನಾಯಕರ ಹೇಳಿಕೆಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಕಿಡಿಕಾರಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಆರ್ ಎಸ್ ಎಸ್ ಕಳೆದ 75 ವರ್ಷಗಳಿಂದ ಜನಸೇವೆ ಮಾಡ್ತಿರೋದು. ಆರ್ ಎಸ್ ಎಸ್ ಉತ್ತಮ ದೇಶಭಕ್ತಿ ಕೆಲಸ‌ ಮಾಡಿದೆ. ಜನರು ಸಂಕಷ್ಟದಲ್ಲಿದ್ದಾಗ ಸಹಾಯ ಮಾಡಿದೆ. ಆದರೆ ಕಾಂಗ್ರೆಸ್ ಅದಕ್ಕೆ ತಪ್ಪು ದಾರಿಗೆ ಎಳೆಯುತ್ತಿದ್ದಾರೆ.


ಸಿದ್ದರಾಮಯ್ಯ ಅಪಪ್ರಚಾರ ಮಾಡ್ತಿದ್ದಾರೆ. ಹೀಗೇ ಮಾಡೇ ಎಲ್ಲಾ ರಾಜ್ಯಗಳಲ್ಲಿ ಕಾಂಗ್ರೆಸ್ ಕಳೆದುಕೊಂಡಿದೆ. ಕಾಂಗ್ರೆಸ್ ಕರ್ನಾಟಕವನ್ನು ಸಹ ಕಳೆದುಕೊಳ್ಳಲಿದೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು. ರಾಜ್ಯಸಭೆ ಎಲೆಕ್ಷನ್ ನಲ್ಲಿ ಕ್ರಾಸ್ ವೋಟಿಂಗ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಬೊಮ್ಮಾಯಿ, 10 ನೇ ತಾರೀಖಿನವರೆಗೂ ಕಾದು ನೋಡಿ. ಪಠ್ಯ ವಿಚಾರದಲ್ಲೂ ರಾಜಕಾರಣ ಮಾಡ್ತಿದ್ದಾರೆ. ಅದಕ್ಕೆಲ್ಲವು ನಮ್ಮ ಶಿಕ್ಷಣ ಸಚಿವರು ಉತ್ತರ ನೀಡಿದ್ದಾರೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ.


ಪಠ್ಯ ಪುಸ್ತಕ ವಿವಾದ ಕೂಡಲೇ ಅಂತ್ಯಗೊಳಿಸಬೇಕು


ಪಠ್ಯ ಪುಸ್ತಕ ವಿವಾದ ಸೃಷ್ಟಿಯಾದ ಕೂಡಲೇ ಸಮಸ್ಯೆಯನ್ನ ಬಗೆಹರಿಸುವುದು ಸರ್ಕಾರದ ಕೆಲಸವಾಗಿತ್ತು ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಡಿಎಸ್‌ಸಿ ಆರ್ಟ್ ಸಮಿತಿಗೆ ಪರಿಷ್ಕರಣೆ ವಾಪಸ್ ಕಳಿಸುವುದು ಸೂಕ್ತ. ಮಂತ್ರಿಗಳಾದವರಿಗೆ ಬದ್ಧತೆ ಇರಬೇಕು, ಅದು ಈ ಸರ್ಕಾರದಲ್ಲಿ ಕಂಡು ಬರುತ್ತಿಲ್ಲ. ಮೇ 25 ರ ಒಳಗೆ ಪಠ್ಯ ಪುಸ್ತಕ ಲಭ್ಯವಾಗುವಂತೆ ನೋಡಿಕೊಳ್ಳುವುದು ಸೂಕ್ತ.


ಇದನ್ನೂ ಓದಿ:  Cheating: ಆನ್​ಲೈನ್​ನಲ್ಲಿ ‘ಎಣ್ಣೆ‘ ಬುಕ್ ಮಾಡಿದವನಿಗೆ ಮಕ್ಮಲ್ ಟೋಪಿ; ಮದ್ಯಪಾನ ಖರೀದಿಸಲು ಹೋಗಿ 89,545ರೂ ಕಳ್ಕೊಂಡ


ಸರ್ಕಾರ ತಕ್ಷಣ ಈ ತಿಂಗಳ ಅಂತ್ಯದವರೆಗೆ ಪಠ್ಯ ಪುಸ್ತಕವನ್ನ ಪೂರೈಸಬೇಕು. ಪಠ್ಯ ಪುಸ್ತಕದಲ್ಲಿ ಬಸವಣ್ಣನವರ ಇತಿಹಾಸ ತಿರುಚಿದ ಆರೋಪಕ್ಕೆ ಪ್ರತಿಕ್ರಿಯಿಸಿದ ಹೊರಟ್ಟಿ, ಬಸವಣ್ಣನವರ ಇತಿಹಾಸದ ಮೂಲಕ್ಕೆ ಯಾರು ಕೈ ಹಾಕಬಾರದು. ಆ ರೀತಿಯ ಪ್ರಮಾದ ಆಗಿರುವುದು ತಪ್ಪು, ಅದನ್ನ ಕೂಡಲೇ ಸರಿಪಡಿಸಬೇಕು ಎಂದು ಬಸವರಾಜ ಹೊರಟ್ಟಿ ಆಗ್ರಹಿಸಿದರು.

top videos
    First published: