HOME » NEWS » State » HUBBALLI WOMAN WHO IS AN EMPLOYER STARTING AN E BUSINESS FROM HOME PTH HK

Womens Day Special | ಮನೆಯಿಂದಲೇ ಇ- ವ್ಯಾಪಾರ ಆರಂಭಿಸಿ ನೂರಾರು ಮಂದಿಗೆ ಉದ್ಯೋಗದಾತೆಯಾದ ಹುಬ್ಬಳ್ಳಿಯ ಮಹಿಳೆ

ದೀಪಾಲಿ ಗೋಟಡಕೆಯವರು ಮಹಿಳಾ ಸಬಲೀಕರಣಕ್ಕಾಗಿ ವಿಶ್ವ ಸಂಸ್ಥೆಯ ಜೊತೆ ಕೈಜೋಡಿಸಿದ್ದಾರೆ. ನೇಪಾಳ, ಬೂತಾನ್, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಂತಹ ಹಿಂದುಳಿದ ರಾಷ್ಟ್ರಗಳಿಗೆ ಹೋಗಿ ಮಹಿಳೆಯರಿಗೆ ಇ-ಕಾಮರ್ಸ್‌ ಕುರಿತು ಮಾಹಿತಿ ನೀಡುತ್ತಿದ್ದಾರೆ.

news18-kannada
Updated:March 9, 2020, 2:48 PM IST
Womens Day Special | ಮನೆಯಿಂದಲೇ ಇ- ವ್ಯಾಪಾರ ಆರಂಭಿಸಿ ನೂರಾರು ಮಂದಿಗೆ ಉದ್ಯೋಗದಾತೆಯಾದ ಹುಬ್ಬಳ್ಳಿಯ ಮಹಿಳೆ
ದೀಪಾಲಿ ಗೋಟಡಕೆ
  • Share this:
ಹುಬ್ಬಳ್ಳಿ(ಮಾ.08) : ಹುಬ್ಬಳ್ಳಿಯ ಬೈಲಪ್ಪನವರ ನಗರದ ನಿವಾಸಿ ದೀಪಾಲಿ ಗೋಟಡಕೆ ಅವರು ಇ- ಕಾಮರ್ಸ್ ಉದ್ಯಮಿಯಾಗಿ ಯಶಸ್ಸು ಗಳಿಸಿದ್ದಾರೆ. ಕಂಪ್ಯೂಟರ್‌ ಸೈನ್ಸ್‌ ಪದವೀಧರೆಯಾದ ದೀಪಾಲಿ ಗೋಟಡಕೆ 2001ರಲ್ಲಿ ಮನೆಯಿಂದಲೇ ಇ- ವ್ಯಾಪಾರ ಆರಂಭಿಸಿದ್ದರು. ವೆಬ್‌ ಡ್ರೀಮ್ಸ್‌ ಮತ್ತು ಕ್ಲಿಕ್‌ ಹುಬ್ಳಿ ಡಾಟ್‌ ಕಾಮ್‌ ಸಂಸ್ಥೆಗಳನ್ನು ಸ್ಥಾಪಿಸಿ ಅಭಿವೃದ್ಧಿ ಪಡಿಸುತ್ತಿದ್ದಾರೆ.

ಇ- ಕಾಮರ್ಸ್‌ ಮತ್ತು ವೆಬ್‌ ಡಿಸೈನಿಂಗ್‌ ವಿಭಾಗದಲ್ಲಿ ಹಲವು ಯುವಕ ಯುವತಿಯರಿಗೆ ಉದ್ಯೋಗ ನೀಡಿದ್ದಾರೆ. ಉತ್ತರ ಕರ್ನಾಟಕ ಭಾಗದ ಮೊದಲ ಇ- ಕಾಮರ್ಸ್ ಉದ್ಯಮಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆನ್ಲೈನ್ ಮೂಲಕ ಕೇಕ್, ಹೂವು ಮತ್ತು ಗಿಫ್ಟ್‌ಗಳನ್ನು ಗ್ರಾಹಕರಿಗೆ ತಲುಪಿಸುತ್ತಿದ್ದಾರೆ. ದೇಶದ ಮೂರುನೂರಕ್ಕೂ ಹೆಚ್ಚು ನಗರಗಳಲ್ಲಿ ಇವರ ಇ-ಕಾಮರ್ಸ್‌ ವಹಿವಾಟು ನಡೆಯುತ್ತಿದೆ.

ಇ- ವ್ಯಾಪಾರದ ಜೊತೆಗೆ ವೆಬ್‌ ಡಿಜೈನಿಂಗ್‌

ಸರ್ಕಾರ ಮತ್ತು ಸಂಘ ಸಂಸ್ಥೆಗಳಿಗೆ ವೆಬ್‌ ಡಿಸೈನಿಂಗ್ ಮಾಡಿಕೊಡುತ್ತಾರೆ. ಹುಬ್ಬಳ್ಳಿ- ಧಾರವಾಡ ಪೊಲೀಸ್‌, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ನೈರುತ್ಯ ರೈಲ್ವೆ ಸೇರಿದಂತೆ 400ಕ್ಕೂ ಹೆಚ್ಚು ಸಂಸ್ಥೆಗಳಿಗೆ ಇದುವರೆಗೆ ವೆಬ್‌ ಡಿಸೈನ್​​​ ಮಾಡಿದ್ದಾರೆ. ಇ-ಮೇಲ್‌ ಹೋಸ್ಟಿಂಗ್‌, ವೆಬ್‌ ಹೋಸ್ಟಿಂಗ್‌ ನಿರ್ವಹಣೆ ಮಾಡುತ್ತಾರೆ. ಮಹಿಳಾ ಉದ್ಯಮಿಯಾಗಿ ಇಪ್ಪತ್ತು ವರ್ಷಗಳಿಂದ ಇವರು ಮಾಡಿರುವ ಸಾಧನೆಗೆ ಹಲವು ಸಂಘ ಸಂಸ್ಥೆಗಳಿಂದ ಪ್ರಶಸ್ತಿ ಪುರಸ್ಕಾರಗಳು ಬಂದಿವೆ. ರಾಜ್ಯ ಸರ್ಕಾರದ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಯಿಂದ ಯಶಸ್ವಿ ಮಹಿಳಾ ಉದ್ಯಮಿ ಪ್ರಶಸ್ತಿ ನೀಡಿ ಸನ್ಮಾನಿಸಲಾಗಿದೆ. ಸದ್ಯ ಹುಬ್ಬಳ್ಳಿಯ ವಾಣಿಜ್ಯೊದ್ಯಮ ಸಂಸ್ಥೆಯಲ್ಲಿ ಮಹಿಳಾ ಘಟಕದ ಅಧ್ಯಕ್ಷೆಯಾಗಿದ್ದಾರೆ.

ಮಹಿಳಾ ಸಬಲೀಕರಣಕ್ಕೆ ವಿ-ಸೆಲ್‌

ದೀಪಾಲಿ ಗೋಟಡಕೆಯವರು ಮಹಿಳಾ ಸಬಲೀಕರಣಕ್ಕಾಗಿ ವಿಶ್ವ ಸಂಸ್ಥೆಯ ಜೊತೆ ಕೈಜೋಡಿಸಿದ್ದಾರೆ. ನೇಪಾಳ, ಬೂತಾನ್, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಂತಹ ಹಿಂದುಳಿದ ರಾಷ್ಟ್ರಗಳಿಗೆ ಹೋಗಿ ಮಹಿಳೆಯರಿಗೆ ಇ-ಕಾಮರ್ಸ್‌ ಕುರಿತು ಮಾಹಿತಿ ನೀಡುತ್ತಿದ್ದಾರೆ. ಮಹಿಳಾ ಸಬಲೀಕರಣಕ್ಕಾಗಿ ಶ್ರಮಿಸುತ್ತಿದ್ದಾರೆ. ವಿ-ಸೆಲ್‌ ಆನ್‌ಲೈನ್‌ ಪೋರ್ಟಲ್ ಪ್ರಾರಂಭಿಸಿದ್ದಾರೆ. ವಿ-ಸೆಲ್‌ ಮೂಲಕ ಆನ್‌ಲೈನ್‌ ಮಾರ್ಕೆಟಿಂಗ್ ಕುರಿತು ಮಾಹಿತಿ ನೀಡುತ್ತಿದ್ದಾರೆ. ಮಹಿಳೆಯರಿಗೆ ಉಚಿತವಾಗಿ ತರಬೇತಿ ಕೊಡುತ್ತಿದ್ದಾರೆ. ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿನ ಮಾರುಕಟ್ಟೆ ಕುರಿತು ತಿಳಿವಳಿಕೆ ನೀಡುತ್ತಿದ್ದಾರೆ.

ಇದನ್ನೂ ಓದಿ : ಅಕ್ಕ-ತಂಗಿಯ ಪುಷ್ಪ ಕೃಷಿ ಕಮಾಲ್; ಗುಲಾಬಿಯಿಂದ ಗುಲ್ಕಂದ್​ವರೆಗೂ ಉಪ ಉತ್ಪನ್ನ ತಯಾರಿಸಿ ಯಶಸ್ವಿ ಉದ್ಯಮಅಮೆರಿಕಾದಲ್ಲಿ ಆನ್‌ಲೈನ್‌ ಮಾರುಕಟ್ಟೆ ದೊಡ್ಡ ಪ್ರಮಾಣದಲ್ಲಿ ಬೆಳೆದಿದೆ. ಭಾರತದಲ್ಲಿಯೂ ಇ- ಕಾಮಾರ್ಸ್‌ಗೆ ಹೆಚ್ಚು ಮಹತ್ವ ಸಿಗುತ್ತಿದೆ. ಇದಕ್ಕೆ ದೊಡ್ಡ ಪ್ರಮಾಣದ ಹೂಡಿಕೆ ಬೇಕಿಲ್ಲ. ಮನಸ್ಸಿದ್ದಲ್ಲಿ ಮಾರ್ಗವಿದೆ ಎನ್ನುವಂತೆ ಸಾಧನೆ ಮಾಡಲು ಸಾಕಷ್ಟು ಹಾದಿಗಳಿ ಸಿಗುತ್ತವೆ. ಉದ್ಯೋಗ ಪ್ರಾರಂಭಿಸುವ ಮನಸ್ಸು ಮಾಡಿದ್ರೆ ಸಾಕು. ಹುಬ್ಬಳ್ಳಿಯಂತಹ ಎರಡನೆಯ ಹಂತದ ನಗರಗಳಲ್ಲಿಯೂ ಮಹಿಳಾ ಉದ್ಯಮಿಗಳು ದೊಡ್ಡ ಮಟ್ಟದಲ್ಲಿ ಬೆಳೆಯಬಹುದು ಎನ್ನುತ್ತಾರೆ ದೀಪಾಲಿ ಗೋಟಡಕೆ.
First published: March 8, 2020, 7:51 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading