• Home
 • »
 • News
 • »
 • state
 • »
 • Hubballi: ಮಟನ್ ಅಂಗಡಿಯಲ್ಲಿ ರಕ್ತದೋಕುಳಿ: ಕೊಲೆಯೋ, ಆತ್ಮಹತ್ಯೆಯೋ?

Hubballi: ಮಟನ್ ಅಂಗಡಿಯಲ್ಲಿ ರಕ್ತದೋಕುಳಿ: ಕೊಲೆಯೋ, ಆತ್ಮಹತ್ಯೆಯೋ?

ಹಳೆ ಹುಬ್ಬಳ್ಳಿಯ ಮಟನ್ ಅಂಗಡಿಯೊಂದರಲ್ಲಿ ರಕ್ತದೋಕುಳುಯಾಗಿದ್ದು, ರಕ್ತದ ಮಡುವಿನಲ್ಲಿ ಬಿದ್ದು ವ್ಯಕ್ತಿ ಸಾವನ್ನಪ್ಪಿದ್ದಾನೆ. ಇದೇನು ಕೊಲೆಯೋ ಅಥವಾ ಆತ್ಮಹತ್ಯೆಯೋ ಎನ್ನುವುದು ತಿಳಿದು ಬಂದಿಲ್ಲ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಹಳೆ ಹುಬ್ಬಳ್ಳಿಯ ಮಟನ್ ಅಂಗಡಿಯೊಂದರಲ್ಲಿ ರಕ್ತದೋಕುಳುಯಾಗಿದ್ದು, ರಕ್ತದ ಮಡುವಿನಲ್ಲಿ ಬಿದ್ದು ವ್ಯಕ್ತಿ ಸಾವನ್ನಪ್ಪಿದ್ದಾನೆ. ಇದೇನು ಕೊಲೆಯೋ ಅಥವಾ ಆತ್ಮಹತ್ಯೆಯೋ ಎನ್ನುವುದು ತಿಳಿದು ಬಂದಿಲ್ಲ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಹಳೆ ಹುಬ್ಬಳ್ಳಿಯ ಮಟನ್ ಅಂಗಡಿಯೊಂದರಲ್ಲಿ ರಕ್ತದೋಕುಳುಯಾಗಿದ್ದು, ರಕ್ತದ ಮಡುವಿನಲ್ಲಿ ಬಿದ್ದು ವ್ಯಕ್ತಿ ಸಾವನ್ನಪ್ಪಿದ್ದಾನೆ. ಇದೇನು ಕೊಲೆಯೋ ಅಥವಾ ಆತ್ಮಹತ್ಯೆಯೋ ಎನ್ನುವುದು ತಿಳಿದು ಬಂದಿಲ್ಲ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

 • News18 Kannada
 • Last Updated :
 • Hubli-Dharwad (Hubli), India
 • Share this:

  ಹುಬ್ಬಳ್ಳಿ(ಅ.14): ವಾಣಿಜ್ಯ ನಗರಿ ಹುಬ್ಬಳ್ಳಿ (Hubballi) ಅಪರಾಧ ಕೃತ್ಯಗಳ ತಾಣವಾಗಿ ಮಾರ್ಪಟ್ಟಿದೆ. ಕೊಲೆ, ಸುಲಿಗೆ, ದರೋಡೆ ಅನಾಯಾಸ ಎನ್ನುವಂತಾಗಿದೆ. ಕಳೆದ ರಾತ್ರಿ ಚಲಿಸುತ್ತಿದ್ದ ಬೈಕ್ ನಲ್ಲಿ ದುಡ್ಡಿನ ಬ್ಯಾಗ್ ಕದ್ದೊಯ್ದ ಘಟನೆ ಒಂದೆಡೆಯಾದರೆ, ಹಳೆ ಹುಬ್ಬಳ್ಳಿಯಲ್ಲಿ ವ್ಯಕ್ತಿಯೋರ್ವ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾನೆ. ಇದು ಆತ್ಮಹತ್ಯೆಯೋ (Suicide) ಅಥವಾ ಅವನ ಮಗನೇ ಬರ್ಬರವಾಗಿ ಹತ್ಯೆಗೈದಿದ್ದಾನೋ (Murder) ಎನ್ನುವುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


  ಮಟನ್ ಅಂಗಡಿಯಲ್ಲಿ ವ್ಯಕ್ತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಹಳೆ ಹುಬ್ಬಳ್ಳಿಯ ಮೆಹಬೂಬ್ ನಗರದಲ್ಲಿ ನಡೆದಿದೆ. ರಕ್ತದ ಮಡುವಿನಲ್ಲಿ ವ್ಯಕ್ತಿ ಬಿದ್ದಿದ್ದು, ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಕೊಲೆಯೋ ಅಥವಾ ಆತ್ಮಹತ್ಯೆಯೋ ಅನ್ನೋ ಬಗ್ಗೆ ಸಂಶಯಗಳು ಮೂಡಿವೆ. ಇನ್ನು ಮಟನ್ ಅಂಗಡಿಯಲ್ಲಿ ಭೀಕರವಾಗಿ ಸಾವನ್ನಪ್ಪಿರೋ ವ್ಯಕ್ತಿಯನ್ನು ಅಶ್ಪಾಕ್ ಬೇಪಾರಿ ಎಂದು ಗುರುತಿಸಲಾಗಿದೆ.


  ಇದನ್ನೂ ಓದಿ: New Zealand Whale Stranding: 500 ತಿಮಿಂಗಿಲಗಳ ಸಾಮೂಹಿಕ ಸಾವು; ಜೀವ ಉಳಿದರೆ ದಯಾಮರಣ


  ಮನೆಯಲ್ಲಿ ಜಗಳವಾಡಿ ಬಂದಿದ್ದ


  ಅಶ್ಪಾಕ್ ಸವದತ್ತಿ ತಾಲೂಕಿನ ಬೆಳವಾಡಿ ಗ್ರಾಮದ ನಿವಾಸಿಯಾಗಿದ್ದು, ನಿನ್ನೆ ಮನೆಯವರೊಂದಿಗೆ ಜಗಳ ಮಾಡಿಕೊಂಡು ಹುಬ್ಬಳ್ಳಿಗೆ ಬಂದಿದ್ದ. ಹುಬ್ಬಳ್ಳಿಯ ಸಂಬಂಧಿಕರ ಮನೆಗೆ ಬಂದಿದ್ದ ಅಶ್ಪಾಕ್​ನನ್ನು ಮನೆಗೆ ವಾಪಸ್ ಕರೆದುಕೊಂಡು ಹೋಗೋಕೆ ಆತನ ಮಗ ಬಂದಿದ್ದ ಎನ್ನಲಾಗಿದೆ. ಈ ವೇಳೆ ಮಗನ ಎದುರೇ ಎದೆ ಮತ್ತು ಕುತ್ತಿಗೆಗೆ ಚಾಕು ಹಾಕಿಕೊಂಡಿದ್ದಾನೆಂದು ಅಶ್ಪಾಕ್ ಮಗ ಪೊಲೀಸರಿಗೆ ಈ ವಿಚಾರ ತಿಳಿಸಿದ್ದಾನೆ. ಘಟನಾ ಸ್ಥಳಕ್ಕೆ ಹಳೆ ಹುಬ್ಬಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.


  ಮಟನ್ ಅಂ.ಗಡಿ ಬಳಿ ರಕ್ತದೋಕುಳಿ


  ಅಶ್ಪಾಕ್ ದೇಹದಿಂದ ಅಪಾರ ಪ್ರಮಾಣದ ರಕ್ತ ಹೊರಬಂದಿದ್ದು, ಮಟನ್ ಅಂಗಡಿ ಬಳಿ ರಕ್ತದ ಮಡುಗಟ್ಟಿತ್ತು. ಮೃತ ಅಶ್ಪಾಕ್ ಮಗನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಮಗನಿಂದ ಕೊಲೆ ನಡೆದಿದೆಯೋ ಅಥವಾ ತಾನೇ ಆತ್ಮಹತ್ಯೆ ಮಾಡಿಕೊಂಡಿದ್ದಾನೋ ಎನ್ನುವುದರ ತನಿಖೆ ನಡೆಸಲಾಗುತ್ತಿದೆ. ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.


  ನೋಡ ನೋಡುತ್ತಿರುವಂತೆಯೇ ಹಣದ ಥೈಲಿ ಮಂಗಮಾಯ!


  ಕಣ್ಣು ಮುಚ್ಚಿ ಕಣ್ಣು ಬಿಡೋದರಲ್ಲೇ 5.3 ಲಕ್ಷ ರೂ. ಮಂಗಮಾಯ ಮಾಡಿರೋ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಕಳ್ಳರಿಬ್ಬರ ಕೈಚಳಕದಿಂದ ವರ್ತಕ ಬೆಸ್ತು ಬಿದ್ದಿದ್ದಾನೆ. ಚಲಿಸುತ್ತಿದ್ದ  ಸ್ಕೂಟಿಯಲ್ಲಿದ್ದ ಹಣದ ಬ್ಯಾಗ್‌ ಕದ್ದ ಕಳ್ಳರು, ಕ್ಷಣಾರ್ಧ ದಲ್ಲಿ ಎಸ್ಕೇಪ್ ಆದ ಘಟನೆ ಹುಬ್ಬಳ್ಳಿಯ ದೇಶಪಾಂಡೆ ನಗರದಲ್ಲಿ ನಡೆದಿದೆ. ಅಹ್ಮದಾಬಾದ್ ನಿವಾಸಿ ವಿಜಯ್ ಕುಮಾರ್ ಜೈನ್ ಹಣ ಕಳೆದುಕೊಂಡ ವ್ಯಕ್ತಿಯಾಗಿದ್ದಾನೆ.


  ಇದನ್ನೂ ಓದಿ: Swiss Bank: ಕೇಂದ್ರ ಸರ್ಕಾರಕ್ಕೆ ಸಿಕ್ತು ಸ್ವಿಸ್ ಬ್ಯಾಂಕ್​ಲ್ಲಿ ಹಣ ಇಟ್ಟವರ ವಿವರ!


  5.3 ಲಕ್ಷ ರೂಪಾಯಿ ಹಣ ಸ್ಕೂಟಿಯಲ್ಲಿ ಇಟ್ಟುಕೊಂಡು ಹೋಗುತ್ತಿದ್ದ ವ್ಯಕ್ತಿಯನ್ನು ಗಮನಿಸಿ ಖದೀಮರು ಪಾಲೋ‌ ಮಾಡಿದ್ದಾರೆ. ದೇಶಪಾಂಡೆ ನಗರದ ಸರ್ಕಲ್ ಬಳಿ ಟ್ರಾಫಿಕ್ ಜಾಮ್ ಆಗುತ್ತಿದ್ದಂತೇ ಸ್ಕೂಟಿಯಲ್ಲಿದ್ದ ಹಣದ ಬ್ಯಾಗ್‌ನ್ನು ಕಿತ್ತುಕೊಂಡು ಎಸ್ಕೇಪ್ ಆಗಿದ್ದಾರೆ. ಬ್ಯಾಗ್ ನಲ್ಲಿ  5.3 ಲಕ್ಷ ಹಣ ಇತ್ತು ಎಂದು ವಿಜಯ್ ಕುಮಾರ್ ಹೇಳಿದ್ದಾರೆ. ಎಸಿಪಿ ಮುಕ್ತೆದಾರ ಸ್ಥಳಕ್ಕೆ ದೌಡಾಯಿಸಿದ್ದಾರೆ. ಉಪನಗರ ಠಾಣೆ ಪೊಲೀಸರಿಂದ ಪರಿಶೀಲನೆ ನಡೆದಿದೆ. ಖದೀಮರ ಪತ್ತೆಗಾಗಿ ಪೊಲೀಸರು ಬಲೆ ಬಿಸಿದ್ದಾರೆ. ಆದರೆ ಪೊಲೀಸರ ಬಗ್ಗೆ ಭಯ ಇಲ್ಲದೇ ಇರೋದ್ರಿಂದ ಈ ರೀತಿಯ ಘಟನೆಗಳು ನಡೆಯುತ್ತಿವೆ ಎಂದು ನಾಗರೀಕರು ಕಿಡಿಕಾರಿದ್ದಾರೆ. ಈ ಕುರಿತು ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.


  ವರದಿ - ಶಿವರಾಮ ಅಸುಂಡಿ

  Published by:Precilla Olivia Dias
  First published: