• Home
 • »
 • News
 • »
 • state
 • »
 • Hubballi Riots: ಹುಬ್ಬಳ್ಳಿ ಗಲಭೆ ನಾಲ್ಕು ಸಾವಿರ ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ

Hubballi Riots: ಹುಬ್ಬಳ್ಳಿ ಗಲಭೆ ನಾಲ್ಕು ಸಾವಿರ ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ

ಹುಬ್ಬಳ್ಳಿ ಗಲಾಟೆ

ಹುಬ್ಬಳ್ಳಿ ಗಲಾಟೆ

ಘಟನೆ ನಡೆದ ಸುಮಾರು ಆರು ತಿಂಗಳ ನಂತರ ಚಾರ್ಜ್ ಶೀಟ್ ಸಲ್ಲಿಕೆಯಾಗಿದ್ದು, ಗಲಭೆಯ ಪಿತೂರಿಕಾರರು, ಕೃತ್ಯದಲ್ಲಿ ಭಾಗಿಯಾದವರು, ಗಲಭೆ ಹೇಗೆ ನಡೆಯಿತು ಎಂಬಿತ್ಯಾದಿ ಅಂಶಗಳನ್ನು ಚಾರ್ಜ್ ಶೀಟ್ ನಲ್ಲಿ ವಿವರವಾಗಿ ಸಲ್ಲಿಸಲಾಗಿದೆ

 • News18 Kannada
 • 4-MIN READ
 • Last Updated :
 • Hubli-Dharwad (Hubli), India
 • Share this:

ಹುಬ್ಬಳ್ಳಿ: ವಾಣಿಜ್ಯ ನಗರಿಯನ್ನು ತಲ್ಲಣಗೊಳಿಸಿದ್ದ ಹಳೆ ಹುಬ್ಬಳ್ಳಿ ಗಲಭೆ (Hubballi Riots) ಪ್ರಕರಣದ ತನಿಖೆ ತಾರ್ಕಿಕ ಅಂತ್ಯಕ್ಕೆ ಬಂದಿದೆ. ಹಳೇ ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ‌‌ಯಾಗಿದೆ. ಏಪ್ರಿಲ್ 16ರಂದು ರಾತ್ರಿ ಹಳೇ ಹುಬ್ಬಳ್ಳಿ ಠಾಣೆ ಎದುರು ನಡೆದಿದ್ದ ಗಲಭೆಗೆ ಸಂಬಂಧಿಸಿ ಬೆಂಗಳೂರಿನ ಎನ್​​ಐಎ ಕೋರ್ಟ್​​ಗೆ (NIA Court) ಚಾರ್ಜ್​ಶೀಟ್ (Charge sheet) ಸಲ್ಲಿಸಲಾಗಿದೆ. ಪ್ರಕರಣದ ತನಿಖೆ (Police Investigation) ನಡೆಸಿದ ಹಳೆ ಹುಬ್ಬಳ್ಳಿ ಪೊಲೀಸರು (hubballi Police), ತನಿಖೆ ಮುಗಿಸಿ ನಾಲ್ಕು ಸಾವಿರ ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದು, ಜೈಲಿನಲ್ಲಿಯೇ ಇರೋ ಆರೋಪಿಗಳಲ್ಲಿ (Accused) ತಲ್ಲಣ ಸೃಷ್ಟಿಸಿದೆ.


ಹಳೆ ಹುಬ್ಬಳ್ಳಿ ಪೊಲೀಸರಿಂದ ನ್ಯಾಯಾಲಯಕ್ಕೆ ಚಾರ್ಜ್​​ಶೀಟ್ ಸಲ್ಲಿಕೆಯಾಗಿದೆ. ಮಸೀದಿಯೊಂದರ ಮೇಲೆ ಭಾಗವಾ ಧ್ವಜ ಹಾರಿಸಿದ್ದ ಗ್ರಾಫಿಕ್ಸ್ ಫೋಟೋ ವಾಟ್ಸಪ್​ ಸ್ಟೇಟಸ್ ಇಟ್ಟಿದ್ದಕ್ಕೆ ಗಲಭೆ ಸೃಷ್ಟಿಯಾಗಿತ್ತು.


12 ಎಫ್​ಐಆರ್, 158 ಜನರ ಬಂಧನ


ಸಾವಿರಾರು ಜನರು ಏಕಕಾಲಕ್ಕೆ ಠಾಣೆ ಮುಂದೆ ಜಮಾಯಿಸಿ ಗಲಭೆ ಸೃಷ್ಟಿಸಿದ್ದರು. ಗಲಭೆ ಸೃಷಿಸಿದವರ ಮೇಲೆ ಒಟ್ಟು 12 ಎಫ್​​ಐಆರ್ ದಾಖಲಾಗಿದ್ದವು. 158 ಆರೋಪಿಗಳನ್ನು ಹಳೆ ಹುಬ್ಬಳ್ಳಿ ಪೊಲೀಸರು ಬಂಧಿಸಿದ್ದರು.


Hubballi Riots Police submitted charge sheet to court saklb mrq
ಪೊಲೀಸ್ ಠಾಣೆ


AIMIM ಪಕ್ಷದ ಕಾರ್ಪೋರೇಟರ್ ನಜೀರ್ ಹೊನ್ಯಾಳ ಮತ್ತು 7 ಜನ ಬಾಲಾಪರಾಧಿಗಳಿಗೆ ಮಾತ್ರ ಷರತ್ತುಬದ್ಧ ಜಾಮೀನು ದೊರೆತಿತ್ತು. ಉಳಿದ ಆರೋಪಿಗಳು ಇನ್ನು ಬಳ್ಳಾರಿ ಹಾಗೂ ಕಲಬುರಗಿ ಜೈಲಿನಲ್ಲಿದ್ದಾರೆ.


ನಡೆದ ಗಲಭೆ ಭಯಾನಕ


ಗಲಭೆಯ ಹಿಂದೆ ಕೆಲ ಸಂಘಟನೆಗಳು, ರಾಜಕೀಯ ಪಕ್ಷಗಳ ಕೈವಾಡದ ಶಂಕೆಯೂ ವ್ಯಕ್ತವಾಗಿತ್ತು. ಗಲಭೆ ಪ್ರಕರಣ ಬೆಂಗಳೂರಿನ NIA ನ್ಯಾಯಾಲಯಕ್ಕೆ  ವರ್ಗಾವಣೆಗೊಂಡಿತ್ತು. ಅಂದು ಹಳೆ ಹುಬ್ಬಳ್ಳಿ ಠಾಣೆ ಮುಂಭಾಗದಲ್ಲಿ ನಡೆದ ಗಲಭೆ ಭಯಾನಕವಾಗಿತ್ತು.


Hubballi Riots Police submitted charge sheet to court saklb mrq
ಬಂಧಿತ ಆರೋಪಿ


ಯುವಕನೊಬ್ಬ ವಾಟ್ಸಪ್ ಸ್ಟೇಟಸ್ ಇಟ್ಟದ್ದನ್ನೇ ಗುರಿಯಾಗಿಸಿಕೊಂಡು ಠಾಣೆ ಮುಂದೆ ಜಮಾಯಿಸಿದ್ದ ಮತ್ತೊಂದು ಕೋಮಿನ ಜನ, ಯುವಕನನ್ನು ತಮಗೆ  ಒಪ್ಪಿಸುವಂತೆ ಪ್ರತಿಭಟನೆ ನಡೆಸಿ, ಠಾಣೆ ಮೇಲೆ ಕಲ್ಲು ತೂರಾಟ ಮಾಡಿದ್ದರು. ನಂತರ ಪೊಲೀಸ್ ವಾಹನ ಪಲ್ಟಿ ಮಾಡಿ ಆಕ್ರೋಶ ಹೊರ ಹಾಕಿದ್ದರು.


ಕಲ್ಲು ತೂರಾಟ, ವಾಹನಗಳು ಜಖಂ


ಆಸ್ಪತ್ರೆ, ದೇವಸ್ಥಾನ, ಮನೆಗಳ‌ ಮೇಲೆ ದೊಡ್ಡ ದೊಡ್ಡ ಕಲ್ಲು ಎಸೆದಿದ್ದರು. ಘಟನೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿ ಸೇರಿ ಎಂಟು ಸಿಬ್ಬಂದಿ ಗಾಯಗೊಂಡಿದ್ದರು. ಹತ್ತಕ್ಕೂ ಹೆಚ್ಚು ಪೊಲೀಸ್ ವಾಹನಗಳು ಜಖಂಗೊಂಡಿದ್ದವು. ಈ ವೇಳೆ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದರು.


ಇದನ್ನೂ ಓದಿ:  Girl Death Case: ಮೃತ ಬಾಲಕಿ ಮನೆಗೆ ನಿಖಿಲ್ ಕುಮಾರಸ್ವಾಮಿ ಭೇಟಿ, ಕಾಲಿಗೆ ಬಿದ್ದು ನ್ಯಾಯಕ್ಕಾಗಿ ಕುಟುಂಬಸ್ಥರ ಕಣ್ಣೀರು


ಓರ್ವ ಕಾರ್ಪೋರೇಟರ್, ಬಾಲಾಪರಾಧಿಗಳನ್ನು ಹೊರತುಪಡಿಸಿದರೆ ಬಹುತೇಕ ಆರೋಪಿಗಳಿಗೆ ಇದುವರೆಗೂ ಜಾಮೀನು ಸಿಕ್ಕಿಲ್ಲ. ಈಗಲೂ ಜೈಲಿನಲ್ಲಿಯೇ ಕೊಳೆಯುತ್ತಿದ್ದಾರೆ.


Hubballi Riots Police submitted charge sheet to court saklb mrq
ಬಂಧಿತ ಆರೋಪಿ


ಆರು ತಿಂಗಳ ನಂತರ ಚಾರ್ಜ್​​​ಶೀಟ್​ ಸಲ್ಲಿಕೆ


ಘಟನೆ ನಡೆದ ಸುಮಾರು ಆರು ತಿಂಗಳ ನಂತರ ಚಾರ್ಜ್ ಶೀಟ್ ಸಲ್ಲಿಕೆಯಾಗಿದ್ದು, ಗಲಭೆಯ ಪಿತೂರಿಕಾರರು, ಕೃತ್ಯದಲ್ಲಿ ಭಾಗಿಯಾದವರು, ಗಲಭೆ ಹೇಗೆ ನಡೆಯಿತು ಎಂಬಿತ್ಯಾದಿ ಅಂಶಗಳನ್ನು ಚಾರ್ಜ್ ಶೀಟ್ ನಲ್ಲಿ ವಿವರವಾಗಿ ಸಲ್ಲಿಸಲಾಗಿದೆ. ಚಾರ್ಜ್ ಶೀಟ್ ನಲ್ಲಿಕೆಯಿಂದಾಗಿ ಪ್ರಕರಣ ಮಹತ್ವದ ಘಟ್ಟಕ್ಕೆ ಬಂದು ನಿಂತಿದ್ದು, ಜೈಲಿನಲ್ಲಿರೋ ಆರೋಪಿಗಳಲ್ಲಿ ನಡುಕ ಹುಟ್ಟಿಸಿದೆ.


ಡಿಜೆ ಹಳ್ಳಿ, ಕೆಜಿ ಹಳ್ಳಿ ಪ್ರಕರಣಕ್ಕೂ ಹುಬ್ಬಳ್ಳಿ ಗಲಭೆಗೂ ಸಾಮ್ಯತೆ


ಡಿಜೆ.ಹಳ್ಳಿ, ಕೆಜಿ ಹಳ್ಳಿ (DJ Halli, KG Halli Riots) ಪ್ರಕರಣಕ್ಕೂ ಹುಬ್ಬಳ್ಳಿ ಗಲಭೆಗೂ (Hubballi Stone Pelting) ಸಾಮ್ಯತೆ ಇದ್ದು, ದುಷ್ಕೃತ್ಯ ಎಸಗಿದ ಮತೀಯ ಶಕ್ತಿಗಳನ್ನು ಮಟ್ಟ ಹಾಕೋದಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ (Home Minister Araga Jnanendra) ಹೇಳಿದ್ದರು.


ಬಂಧಿತ ಆರೋಪಿ
ಹುಬ್ಬಳ್ಳಿ ಗಲಾಟೆ


ಇದನ್ನೂ ಓದಿ:  Karnataka Assembly Elections: ಕುಂದಾಪುರದಲ್ಲಿ ಹಾಲಾಡಿ ಎಂಬ ಅಶ್ವಮೇಧದ ಕುದುರೆಗೆ ತಡೆಯೊಡ್ಡುತ್ತಾ ಕಾಂಗ್ರೆಸ್​?


ಹುಬ್ಬಳ್ಳಿಯ ಸರ್ಕ್ಯೂಟ್ ಹೌಸ್ ನಲ್ಲಿ ಅಧಿಕಾರಿಗಳ ಸಭೆ ನಡೆಸಿದ ನಂತರ ಪೊಲೀಸ್ ಠಾಣೆಗೆ ಭೇಟಿ ನೀಡಿ, ಅಲ್ಲಿಂದ ಕಲ್ಲು ತೂರಾಟಕ್ಕೆ ತುತ್ತಾಗಿದ್ದ ಹನುಮಾನ ಮಂದಿರಕ್ಕೆ (Hanuman Temple) ಭೇಟಿ ನೀಡಿದ್ದರು. ನಂತರ ಮಾತನಾಡಿದ ಅವರು, ಮೊದಲು ದೂರು ಕೊಟ್ಟು ಹೋದವರು, ಮರಳಿ ಗುಂಪು‌ ಗುಂಪಾಗಿ ಬರ್ತಾರೆ ಅಂದ್ರೆ ಏನು ಅರ್ಥ. ಪೊಲೀಸರ ಮೇಲೆ ದಾಳಿ ಮಾಡಿದ್ದಾರೆ, ವಾಹನಗಳು ಜಖಂಗೊಳಿಸಿದ್ದಾರೆ ಎಂದು ಕಿಡಿಕಾರಿದ್ದರು.

Published by:Mahmadrafik K
First published: