Bayalaata Play: ಬಣ್ಣ ಹಚ್ಚಿದ ಇನ್​​ಸ್ಪೆಕ್ಟರ್ ಕಾಲಿಮಿರ್ಚಿ; ಖಡಕ್ ಡ್ಯೂಟಿಗೂ ಸೈ, ಬಯಲಾಟಕ್ಕೂ ಜೈ

ಜೆ.ಎಂ.ಕಾಲಿಮಿರ್ಚಿ ಹುಟ್ಟಿದ್ದು ಮುಸ್ಲಿಂ ಸಮಾಜದಲಾದ್ರು ಜಾತಿ, ಧರ್ಮ ಬೇಧವಿಲ್ಲದೆ ಆಚರಣೆಗಳನ್ನು ಮಾಡುತ್ತಾರೆ. ಗಣೇಶ ಚತುರ್ಥಿ ಸಂದರ್ಭದಲ್ಲಿ ಪೊಲೀಸ್ ಠಾಣೆಯಲ್ಲಿ ಗಣೇಶನ ಪ್ರತಿಷ್ಟಾಪಿಸಿದ್ದ ಕಾಲಿಮಿರ್ಚಿ , ಅದ್ಧೂರಿಯಾಗಿ ಹಬ್ಬ ಆಚರಿಸಿದ್ದರು. ಆ ಮೂಲಕ ಭಾವೈಕ್ಯ ಸಂದೇಶ ಸಾರಿದ್ದರು.

ಇನ್​​ಸ್ಪೆಕ್ಟರ್ ಕಾಲಿಮಿರ್ಚಿ

ಇನ್​​ಸ್ಪೆಕ್ಟರ್ ಕಾಲಿಮಿರ್ಚಿ

  • Share this:
ಹುಬ್ಬಳ್ಳಿ: ಪೊಲೀಸ್ ಇಲಾಖೆ (Police Department) ಅಂದ್ರೆ ಸದಾ ಒತ್ತಡದ ಕೆಲಸ. ಒಂದಷ್ಟು ನಿದ್ದೆ ಮಾಡೋಕೆ ಟೈಮ್ ಸಿಕ್ಕರೂ ಸಾಕು ಅನ್ನೋ ಅಧಿಕಾರಿಗಳಿದ್ದಾರೆ. ಹೀಗಿರುವಾಗ ಇಲ್ಲೊಬ್ಬ ಅಧಿಕಾರಿ ಡ್ಯೂಟಿಗೂ ಸೈ, ಬಯಲಾಟಕ್ಕೂ (Bayalata) ಜೈ ಅಂತಿದಾರೆ. ಅದರಲ್ಲಿಯೂ ಹುಬ್ಬಳ್ಳಿಯ ಗೋಕುಲ್ ರೋಡ್ ಪೊಲೀಸ್ ಠಾಣೆ (Gokul Road Police Station) ಅಂದ್ರೆ ಅದರ ಕಥೆ ಹೇಳುವಂತೆಯೇ ಇಲ್ಲ. ಸದಾ ಕರ್ತವ್ಯ ನಿರತವಾಗಿರೋ ಅನಿವಾರ್ಯತೆ ಇರೋ ಈ ಠಾಣೆಯಲ್ಲಿ ಕೆಲಸ ಮಾಡುತ್ತಲೇ ಪೊಲೀಸ್ ಇನ್ಸಪೆಕ್ಟರ್ (Police Inspector) ಒಬ್ಬರು ಬಯಲಾಟದಲ್ಲಿ ಬಣ್ಣ ಹಚ್ಚಿ ಗೆಜ್ಜೆ ಕಟ್ಟಿಕೊಂಡು ಹೆಜ್ಜೆ ಹಾಕಿ ಎಲ್ಲರನ್ನೂ ಹುಬ್ಬೇರುವಂತೆ ಮಾಡಿದ್ದಾರೆ. ಹುಬ್ಬಳ್ಳಿ ಗಲಭೆ ಇರಲಿ, ಸರಣಿ ಕಳ್ಳತನವಿರಲಿ, ಇನ್ಯಾವುದೇ ಪ್ರಕಣವಿರಲಿ, ಆರೋಪಿಗಳ ಹೆಡೆಮುರಿ ಕಟ್ಟಿ ಹಿರಿಯ ಪೊಲೀಸ್ ಅಧಿಕಾರಿಗಳಿಂದಲೂ ಭೇಷ್ ಅನಿಸಿಕೊಂಡವರು ಪೊಲೀಸ್ ಇನ್​ಸ್ಪೆಕ್ಟರ್ ಜೆ.ಎಂ. ಕಾಲಿಮಿರ್ಚಿ (Police Inspector JM Kalimirchi). ಪೊಲೀಸ್ ಇಲಾಖೆಯಲ್ಲಿದ್ದರೂ ಸಾಂಸ್ಕೃತಿಕ ತುಡಿತ ಮಾತ್ರ ಇವರಿಗೆ ಇರೋದ್ರಿಂದ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳೋದನ್ನು ಪ್ರವೃತ್ತಿಯನ್ನಾಗಿಸಿಕೊಂಡಿದ್ದಾರೆ.

ಬಹುಮುಖ ಪ್ರತಿಭೆಯನ್ನೊಳಗೊಂಡಿರುವ ಜೆ.ಎಂ.ಕಾಲಿಮಿರ್ಚಿ, ಖಾಕಿ ತೊಟ್ಟರೆ ಖಡಕ್ ಅಧಿಕಾರಿ, ಬಣ್ಣ ಹಚ್ಚಿದ್ರೆ ಅದ್ಭುತ ಕಲಾವಿದ ಎಂದೆನಿಸಿಕೊಂಡಿದ್ದಾರೆ. ಅದಕ್ಕೆ ತಾಜಾ ನಿದರ್ಶನ ಹುಬ್ಬಳ್ಳಿಯಲ್ಲಿ ನಡೆದ ಬಯಲಾಟ ಕಾರ್ಯಕ್ರಮ. ಜನಪದ ಕಲಾ ಬಳಗ ಟ್ರಸ್ಟ್​ನಿಂದ ಹುಬ್ಬಳ್ಳಿಯ ಸವಾಯಿ ಗಂಧರ್ವ ಹಾಲ್ ನಲ್ಲಿ ಕರ್ಣ ಪರ್ವ ದೊಡ್ಡಾಟ ನಡೆಯಿತು.

ಕರ್ಣಪರ್ವ ದೊಡ್ಡಾಟದಲ್ಲಿ ಕಲೆ ಪ್ರದರ್ಶನ

ಉತ್ತರ ಕರ್ನಾಟಕ ಪ್ರಸಿದ್ಧ ಕಲೆ ದೊಡ್ಡಾಟದಲ್ಲಿ ಹೆಜ್ಜೆ ಹಾಕುವ ಮೂಲಕ ಇನ್​​ಸ್ಪೆಕ್ಟರ್ ಜೆ.ಎಂ.ಕಾಲಿಮಿರ್ಚಿ ಗಮನ ಸೆಳೆದರು.

ಹುಬ್ಬಳ್ಳಿಯ ಗೋಕುಲ ರೋಡ್ ಠಾಣೆ ಇನ್​ಸ್ಪೆಕ್ಟರ್ ಜೆ.ಎಮ್.ಕಾಲಿಮಿರ್ಚಿ ದೊಡ್ಡಾಟಕ್ಕೆ ಬಣ್ಣ ಹಚ್ಚಿದ್ದರು. ಡಾ. ಚಂದ್ರಶೇಖರ್ ಕಂಬಾರ ಅವರ ದತ್ತಿ ಕಾರ್ಯಕ್ರಮದಲ್ಲಿ "ಕರ್ಣಪರ್ವ" ಎಂಬ ದೊಡ್ಡಾಟದಲ್ಲಿ ಇನ್​​ಸ್ಪೆಕ್ಟರ್ ತಮ್ಮ ಕಲೆ‌ ಪ್ರದರ್ಶಿಸಿದ್ದಾರೆ.

Hubballi Police inspector participate in bayalaata play saklb mrq
ಬಯಲಾಟದ ವೇಷದಲ್ಲಿ ಇನ್​​ಸ್ಪೆಕ್ಟರ್ ಕಾಲಿಮಿರ್ಚಿ


ವೃಷಸೇನ (ಕರ್ಣನ ಮಗ) ಪಾತ್ರದಲ್ಲಿ ವಿಶೇಷ ವೇಷ ಧರಿಸಿದ ಇನ್​​ಸ್ಪೆಕ್ಟರ್ ಕಾಲಿಮಿರ್ಚಿ ಗಮನ ಸೆಳೆದರು. ಗೆಜ್ಜೆ ಕಟ್ಟಿ, ಹೆಜ್ಜೆ ಹಾಕಿದ ಪೊಲೀಸ್ ಅಧಿಕಾರಿಯ ಕಲಾ ಕೌಶಲ್ಯಕ್ಕೆ ಕಲಾಸಕ್ತರು ಮೆಚ್ಚುಗೆ ವ್ಯಕ್ತಪಡಿಸಿದರು.

ಎದುರಾಳಿ ಎದೆ ನಡುಗುವಂತೆ ಸಂಭಾಷಣೆ

ಇದುವರೆಗೆ ಜೆ.ಎಂ.ಕಾಲಿಮರ್ಚಿ ಖಾಕಿ ಹಾಕಿಕೊಂಡಿದ್ದನ್ನಷ್ಟೇ ಜನ ನೋಡಿದ್ದಾರೆ. ಖಾಕಿ ತೊಟ್ಟು ಕೈಯಲ್ಲಿ ಲಾಠಿ ಹಿಡಿದರೆ ಎಂತಹ ಅಪರಾಧಿಗಳೇ ಇರಲಿ ನಡುಗುತ್ತಾರೆ. ಅವರ ಸರ್ವೀಸ್ ರೆಕಾರ್ಡ್ ನೋಡಿದಾಗ ಎಂತೆಂತಹ ಅಪರಾಧಿಗಳಿಗೆ ಹೆಡೆಮುರಿ ಕಟ್ಟಿದ್ದಾರೆ ಅನ್ನೋದು ಅದರಿಂದ ವೇದ್ಯವಾಗುತ್ತದೆ. ಹಾಗೇ ಇವರು ಬಣ್ಣ ಹಚ್ಚಿ ಸ್ಟೇಜ್ ಹತ್ತಿದ್ರೆ ಭರಪೂರ ಮನರಂಜನೆ ಪಕ್ಕಾ.

Hubballi Police inspector participate in bayalaata play saklb mrq
ಇನ್​​ಸ್ಪೆಕ್ಟರ್ ಕಾಲಿಮಿರ್ಚಿ


ಕರ್ಣ ಪರ್ವ ಬಯಲಾಟದಲ್ಲಿ ಕೈಯಲ್ಲಿ ಧನಸ್ಸು ಹಿಡಿದು ಎದುರಾಳಿ ಎದೆ ನಡುಗುವಂತೆ ಸಂಭಾಷಣೆ ನಡೆಸುವುದನ್ನ ನೋಡಿದ್ರೆ ಇವರು ಪರಿಪೂರ್ಣ ಕಲಾವಿದರು ಅನಿಸೋದು ಸಹಜ.

ಇದನ್ನೂ ಓದಿ:  Fishing Problems: ಹವಾಮಾನ ವೈಪರೀತ್ಯಕ್ಕೆ ನಲುಗಿದ ಮೀನುಗಾರಿಕೆ, ಕಡಲ ಮಕ್ಕಳಿಗೆ ತಪ್ಪದ ಸಂಕಷ್ಟ

ಜನಪದ ಕಲೆ ಉಳಿಸುವಂತೆ ಕರೆ

ದೊಡ್ಡಾಟ ಕಲೆ ಉಳಿಸಿ ಬೆಳೆಸಬೇಕೆಂದು ಜನಪದ ಕಲಾ ಬಳಗ ಟ್ರಸ್ಟ್ ಮುಖಂಡರು ಮಾಡಿಕೊಂಡ ಮನವಿಗೆ ಸ್ಪಂದಿಸಿ ಜೆ.ಎಂ.ಕಾಲಿಮಿರ್ಚಿ ಬಣ್ಣ ಹಚ್ಚಿ ತಮ್ಮ ಪ್ರತಿಭೆ ಮೆರೆದರು. ಆ ಮೂಲಕ ಜನಪದ ಕಲೆಗಳಾದ ದೊಡ್ಡಾಟ, ಸಣ್ಣಾಟ ಇತ್ಯಾದಿಗಳನ್ನು ಉಳಿಸಿ ಬೆಳೆಸಿ ಪ್ರೋತ್ಸಾಹಿಸುವಂತೆ ಇನ್​ಸ್ಪೆಕ್ಟರ್ ಕರೆ ನೀಡಿದ್ದಾರೆ.

Hubballi Police inspector participate in bayalaata play saklb mrq
ಬಯಲಾಟದ ದೃಶ್ಯ


ಪೊಲೀಸ್ ಅಧಿಕಾರಿಗಳಿಗೂ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ಎಣ್ಣೆ - ಸೀಗೆಕಾಯಿ ಅನ್ನೋ ಪರಸ್ಥಿತಿ ಅನ್ನೋ ಮಾತಿರುವಾಗಲೇ, ಕರ್ತವ್ಯದ ಜೊತೆಗೆ, ದೊಡ್ಡಾಟ ಪ್ರದರ್ಶನ ಮಾಡುವ ಮೂಲಕ ಜೆ.ಎಂ.ಕಾಲಿಮಿರ್ಚಿ, ಯುವ ಸಮುದಾಯಕ್ಕೆ ರಂಗಭೂಮಿ ಕಲೆ- ಸಂಸ್ಕೃತಿಯನ್ನು ಉಳಿಸಿ ಬೆಳೆಸುವಂತೆ ಕರೆ ನೀಡಿರೋದು ಎಲ್ಲರ ಮೆಚ್ಚುಗೆಗೂ ಪಾತ್ರವಾಗಿದೆ.

ಇದನ್ನೂ ಓದಿ:  Kodagu Flood: 2018ರಲ್ಲಿ ಕೊಡಗಿಗೆ ಬಂದ ಹಣವನ್ನು ಬೇರೆ ಜಿಲ್ಲೆಗಳಿಗೆ ಬಳಸಿತೇ ಸರ್ಕಾರ? ಎಲ್ಲಿ ಹೋಯ್ತು ದುಡ್ಡು?

ಮುಸ್ಲಿಂ ಆಗಿದ್ದರೂ ಗಣೇಶ ಪ್ರತಿಷ್ಠಾಪನೆ ಮಾಡಿದ್ದ ಅಧಿಕಾರಿ

ಇನ್ನು ಜೆ.ಎಂ.ಕಾಲಿಮಿರ್ಚಿ ಹುಟ್ಟಿದ್ದು ಮುಸ್ಲಿಂ ಸಮಾಜದಲಾದ್ರು ಜಾತಿ, ಧರ್ಮ ಬೇಧವಿಲ್ಲದೆ ಆಚರಣೆಗಳನ್ನು ಮಾಡುತ್ತಾರೆ. ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆ ವಿಚಾರ ದೊಡ್ಡ ಚರ್ಚೆಗೆ ಗ್ರಾಸವಾಗಿತ್ತು.

ಇಂತಹ ಸಂದರ್ಭದಲ್ಲಿಯೇ ಗಣೇಶ ಚತುರ್ಥಿ ಸಂದರ್ಭದಲ್ಲಿ ಪೊಲೀಸ್ ಠಾಣೆಯಲ್ಲಿ ಗಣೇಶನ ಪ್ರತಿಷ್ಟಾಪಿಸಿದ್ದ ಕಾಲಿಮಿರ್ಚಿ , ಅದ್ಧೂರಿಯಾಗಿ ಹಬ್ಬ ಆಚರಿಸಿದ್ದರು. ಆ ಮೂಲಕ ಭಾವೈಕ್ಯ ಸಂದೇಶ ಸಾರಿದ್ದರು.
Published by:Mahmadrafik K
First published: