Hubballi: ತಾಯಿ ಅಗಲಿಕೆಯ ನೋವಲ್ಲೂ ಕರ್ತವ್ಯಕ್ಕೆ ಹಾಜರಾದ ಇನ್ಸ್​ಪೆಕ್ಟರ್​; ಕುಖ್ಯಾತ ಕಳ್ಳನ ಹೆಡೆಮುರಿ ಕಟ್ಟಿದ ಪಿಐ

ತಾಯಿ ಅಗಲಿಕೆ ನಡುವೆಯೇ ಮೂರು ದಿನಗಳಲ್ಲಿ ಕರ್ತವ್ಯಕ್ಕೆ ಹಾಜರಾದ ರವಿಚಂದ್ರ ಅವರು ಹಲವು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತಾಯಿ ಅಗಲಿಕೆಯ ನಡುವೆ ಕರ್ತವ್ಯಕ್ಕೆ ಹಾಜರಾದ ಇನ್ಸ್​ಪೆಕ್ಟರ್

ತಾಯಿ ಅಗಲಿಕೆಯ ನಡುವೆ ಕರ್ತವ್ಯಕ್ಕೆ ಹಾಜರಾದ ಇನ್ಸ್​ಪೆಕ್ಟರ್

  • Share this:
ಹುಬ್ಬಳ್ಳಿ (ಸೆ.23): ಸಿನಿಮೀಯ ರೀತಿಯಲ್ಲಿ ಕಳ್ಳತನ ಮಾಡುತ್ತಿದ್ದ ಕಳ್ಳನನ್ನು ಬಂಧಿಸುವಲ್ಲಿ ಉಪನಗರ ಠಾಣೆ ಇನ್ಸ್ ಪೆಕ್ಟರ್ (Police Inspector) ರವಿಚಂದ್ರ ಬಡಫಕೀರಪ್ಪನವರ್ ಯಶಸ್ವಿಯಾಗಿದ್ದಾರೆ. ಒಂದೇ ವಾರದಲ್ಲಿ ನಿರಂತರವಾಗಿ ಕಳ್ಳತನ ಪ್ರಕರಣಗಳು ಅವಳಿ ನಗರದಲ್ಲಿ ನಡೆದಿದ್ದವು. ಆಗ ಉಪನಗರ ಠಾಣೆಯಲ್ಲೂ ಕೂಡ ಕಳ್ಳತನವಾಗಿತ್ತು. ಈ ಸಂದರ್ಭದಲ್ಲಿ ಇನ್ಸ್ ಪೆಕ್ಟರ್ ರವಿಚಂದ್ರ ಅವರ ತಾಯಿ (Mother) ಹೃದಯ ಸಂಬಂಧಿ ಖಾಯಿಲೆಯಿಂದ ಮೃತಪಟ್ಟಿದ್ದರು (Death). ಆದ್ರೆ ತಾಯಿ ಅಗಲಿಕೆ ನಡುವೆಯೇ ಮೂರು ದಿನಗಳಲ್ಲಿ ಕರ್ತವ್ಯಕ್ಕೆ ಹಾಜರಾದ ರವಿಚಂದ್ರ ಅವರು ಹಲವು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪೊಲೀಸರಿಗೇ ಚಳ್ಳೆಹಣ್ಣು ತಿನ್ನಿಸುತ್ತಿದ್ದವನ ಬಂಧನ

ಪೊಲೀಸ್ ವಸತಿ ಗೃಹಗಳನ್ನು ಟಾರ್ಗೆಟ್ ಮಾಡ್ತಿದ್ದ ಖತರ್ನಾಕ್ ಕಳ್ಳನನ್ನು ಬಂಧಿಸುವಲ್ಲಿ ಹುಬ್ಬಳ್ಳಿಯ ಉಪ ನಗರ ಪೊಲೀಸ್ ಠಾಣೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಹುಬ್ಬಳ್ಳಿಯ ಪೊಲೀಸ್ ವಸತಿ ನಿಲಯಗಳನ್ನು ಟಾರ್ಗೆಟ್ ಮಾಡ್ತಿದ್ದ ಈ ಖತರ್ನಾಕ್ ಕಳ್ಳ, ಚಿನ್ನಾಭರಣ, ನಗದು ದೋಚಿ ಎಸ್ಕೇಪ್ ಆಗುತ್ತಿದ್ದ. ಕೊನೆಗೂ ಚಾಲಾಕಿ ಕಳ್ಳನನ್ನು ಬಂಧಿಸುವಲ್ಲಿ ಪೊಲೀಸರು ಸಫಲರಾಗಿದ್ದಾರೆ. ಬಂಧಿತನನ್ನು ಬಳ್ಳಾರಿ ಜಿಲ್ಲೆಯ ಕುರಿಹಟ್ಟಿಯ ಗಣೇಶ ಕಾಲೋನಿಯ ಶ್ರೀಕಾಂತ್ @ರೊಡ್ಡ ಭೀಮಲಿಂಗಪ್ಪ ಎಂದು ಗುರುತಿಸಲಾಗಿದೆ.



ಪೊಲೀಸರ ವಸತಿಗಳ ಟಾರ್ಗೆಟ್ ಮಾಡಿ ಕಳ್ಳತನ

ಕಾರು ಚಾಲಕನಾಗಿದ್ದ ರೊಡ್ಡ ಭೀಮಲಿಂಗಪ್ಪ, ಪೊಲೀಸರ ವಸತಿಗಳ ಟಾರ್ಗೆಟ್ ಮಾಡಿ ಕದ್ದು ಪರಾರಿಯಾಗ್ತಿದ್ದ. ಪೊಲೀಸರ ಮನೆಗಳಿಗೇ ಕನ್ನ ಹಾಕೋ ಮೂಲಕ ಪೊಲೀಸರಿಗೆ ಈತ ದೊಡ್ಡ ತಲೆನೋವಾಗಿ ಮಾರ್ಪಟ್ಟಿದ್ದ. ಕೊನೆಗೆ ಪೊಲೀಸ್ ಇನ್ಸಪೆಕ್ಟರ್ ರವಿಚಂದ್ರ ನೇತೃತ್ವದ ತಂಡದಿಂದ ಆರೋಪಿ ಬಂಧಿಸಿದೆ. ಬಂಧಿತನಿಂದ 165 ಗ್ರಾಂ ಚಿನ್ನಾಭರಣ, 20 ಗ್ರಾಂ ಬೆಳ್ಳಿ, 30 ಸಾವಿರ ರೂಪಾಯಿ ನಗದು ವಶಕ್ಕೆ ಪಡೆಯಲಾಗಿದೆ. ಪೊಲೀಸರ ಕಾರ್ಯಕ್ಕೆ ಪೊಲೀಸ್ ಆಯುಕ್ತ ಲಾಭೂ ರಾಮ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಉಪ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪೊಲೀಸರ ಮನೆಗಳಲ್ಲಿ ಕದ್ದು, ಅವರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಿದ್ದ ಖದೀಮ ಕೊನೆಗೂ ಅಂದರ್ ಆಗಿದ್ದಾನೆ.

ಇದನ್ನೂ ಓದಿ: B S Yediyurappa: ಮಾಜಿ ಸಿಎಂ ಯಡಿಯೂರಪ್ಪಗೆ ತಾತ್ಕಾಲಿಕ ರಿಲೀಫ್; ಲಂಚ ಪ್ರಕರಣದ ತನಿಖೆಗೆ ಸುಪ್ರೀಂ ಕೋರ್ಟ್​ ತಡೆ

ಪೊಲೀಸ್ ಠಾಣೆಯಲ್ಲಿಯೇ ಕತ್ತು ಕೊಯ್ದುಕೊಂಡ ಯುವಕ

ಯುವಕನೋರ್ವ ಪೊಲೀಸ್ ಠಾಣೆಯಲ್ಲಿಯೇ ಬ್ಲೇಡ್ ನಿಂದ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿರೋ ಘಟನೆ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಇದೇ ವೇಳೆ ಪೊಲೀಸ್ ಕ್ವಾರ್ಟರ್ಸ್ ಟಾರ್ಗೆಟ್ ಮಾಡಿ ಚಿನ್ನಾಭರಣ, ನಗದು ದೋಚಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ ಖದೀಮನನ್ನು ಹುಬ್ಬಳ್ಳಿ ಪೊಲೀಸರು ಬಂಧಿಸಿದ್ದಾರೆ.
ಪೊಲೀಸ್ ಠಾಣೆಯಲ್ಲಿಯೇ ಕತ್ತು ಕೊಯ್ದುಕೊಂಡ ಯುವಕ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ನಡೆದಿದೆ.



ಕತ್ತುಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಯುವಕನನ್ನು ರಾಘವೇಂದ್ರ ಎಂದು ಗುರುತಿಸಲಾಗಿದೆ. ಹಳೇ ಹುಬ್ಬಳ್ಳಿಯ ಇಂಡಿ ಪಂಪ್ ಸರ್ಕಲ್ ಬಳಿಯಲ್ಲಿನ ಬಿರಿಯಾನಿ ಹೌಸ್ ಅಂಗಡಿಯ ಮಾಲೀಕರ ಜೊತೆ ರಾಘವೇಂದ್ರ ಜಗಳ ಮಾಡಿದ್ದಾನೆ. ಯುವಕನ ಮತ್ತು ಮಾಲೀಕನ ನಡುವೆ ಮಾತಿಗೆ ಮಾತು ಬೆಳೆದು ಅತಿರೇಕಕ್ಕೆ ಹೋಗಿದೆ.

ಇದನ್ನೂ ಓದಿ: Good News: ಹಳ್ಳಿಗೆ ಬಂದ 101 ವಿದ್ಯಾರ್ಥಿಗಳು; ಇದರಿಂದ ರೈತರಿಗೆ ಏನು ಲಾಭ?

ಯುವಕನಿಗೆ ಕಿಮ್ಸ್ ನಲ್ಲಿ ಚಿಕಿತ್ಸೆ

ಬಿರಿಯಾನಿ ಹೌಸ್ ಮಾಲೀಕ ಯುವಕನನ್ನು ಹಳೇ ಹುಬ್ಬಳ್ಳಿ ಠಾಣೆಗೆ ಕರೆತಂದಿದ್ದ. ಪೊಲೀಸರು ಬಿರಿಯಾನಿ ಹೌಸ್ ಮಾಲೀಕ ಹಾಗೂ ರಾಘವೇಂದ್ರನ ವಿಚಾರಣೆ ನಡೆಸಿದ್ದರು. ಈ ವೇಳೆ ಪೊಲೀಸರ ಸಮ್ಮುಖದಲ್ಲಿಯೇ ರಾಘವೇಂದ್ರ ಬ್ಲೇಡ್ ನಿಂದ ಕುತ್ತಿಗೆ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ತಕ್ಷಣ ಗಾಯಾಳು ಯುವಕನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಏಕೆ ಹೀಗೆ ಮಾಡಿದ ಅಂತ ಗೊತ್ತಾಗಿಲ್ಲ. ಕ್ಷುಲ್ಲಕ ಕಾರಣಕ್ಕೆ ಪೊಲೀಸ್ ಠಾಣೆಗೆ ಬರುವಂತಾಯಿತಲ್ಲಾ ಅಂತ ಯುವಕ ಹೀಗೆ ಮಾಡಿರಬಹುದೆಂದು ಶಂಕಿಸಲಾಗಿದೆ. ಯುವಕನಿಗೆ ಕಿಮ್ಸ್ ನಲ್ಲಿ ಚಿಕಿತ್ಸೆ ಮುದುವರೆಸಲಾಗಿದೆ.
Published by:ಪಾವನ ಎಚ್ ಎಸ್
First published: