Hubballi: ಹುಬ್ಬಳ್ಳಿಯಲ್ಲಿ ಖತರ್ನಾಕ್ ಕಳ್ಳರ ಬಂಧನ; ಲಕ್ಷಾಂತರ ನಗದು, ನಾಲ್ಕು ಬೈಕ್ ವಶಕ್ಕೆ

ಹುಬ್ಬಳ್ಳಿ ಪೊಲೀಸರು ಐವರು ಖತರ್ನಾಕ್ ಕಳ್ಳರನ್ನು ಬಂಧಿಸಿದ್ದು, ಲಕ್ಷಾಂತರ ರೂಪಾಯಿ ನಗದು, ನಾಲ್ಕು ಬೈಕ್ ವಶಕ್ಕೆ ಪಡೆದಿದ್ದಾರೆ. ಹುಬ್ಬಳ್ಳಿ - ಧಾರವಾಡ ಅವಳಿ ನಗರವಲ್ಲದೇ ಇತರೆಡೆಯೂ ಕಳ್ಳತನ ಮಾಡಿರೋ ಮಾಹಿತಿ ಸಿಕ್ಕಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಹುಬ್ಬಳ್ಳಿ ಶಹರ ಪೊಲೀಸ್ ಠಾಣೆ

ಹುಬ್ಬಳ್ಳಿ ಶಹರ ಪೊಲೀಸ್ ಠಾಣೆ

  • Share this:
ಹುಬ್ಬಳ್ಳಿ – ಧಾರವಾಡ (Hubballi-Dharwad) ಅವಳಿ ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಕಳ್ಳತನ ಪ್ರಕರಣ (Theft Case) ಹೆಚ್ಚಾಗಿವೆ. ಅದರಲ್ಲಿಯೂ ಸರಣಿ ಕಳ್ಳತನ ಪ್ರಕರಣಗಳು ಹೆಚ್ಚಾಗಿರೋದು ಜನರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಸ್ಟೇಷನ್ ರಸ್ತೆ, ಮರಾಠ ಗಲ್ಲಿ ಮತ್ತಿತರ ಕಡೆ ಸರಣಿ ಕಳ್ಳತನ ಮಾಡಿದ್ದಕ್ಕೆ ಸಂಬಂಧಿಸಿ ಮೊನ್ನೆಯಷ್ಟೇ ಸರಣಿ ಕಳ್ಳತನ ಮಾಡಿದ್ದ ನಾಲ್ವರು ಅಂತರರಾಜ್ಯ ಕಳ್ಳರನ್ನು ಬಂಧಿಸಿದ್ದ ಹುಬ್ಬಳ್ಳಿ ಪೊಲೀಸರು, ಇದೀಗ ಐವರು ಖತರ್ನಾಕ್ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹುಬ್ಬಳ್ಳಿ ಪೊಲೀಸರು (Hubballi Police) ಯಶಸ್ವಿ ಕಾರ್ಯಾಚರಣೆ ನಡೆಸಿ ಸರಣಿ ಕಳ್ಳತನ ಮಾಡ್ತಿದ್ದ ಐವರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಹಳೇ ಹುಬ್ಬಳ್ಳಿಯ ಸಾಧಿಕ್, ಸೋಪಿಲ್, ಮೌಲಾಲಿ ಜೋಪಡಿಯ ಹಮೀದ್, ದಾಂಡೇಲಿಯ ಬಾಬು ಮತ್ತು ಬೆಂಗಳೂರಿನ ಚಂದು ಎಂದು ಗುರುತಿಸಲಾಗಿದೆ.

ಬಂಧಿತರಿಂದ ಲಕ್ಷಾಂತರ ರೂಪಾಯಿ ನಗದು, ನಾಲ್ಕು ಬೈಕ್ ವಶಕ್ಕೆ ಪಡೆಯಲಾಗಿದೆ. ಮನೆ, ಅಂಗಡಿ, ಗೋದಾಮು ಸೇರಿದಂತೆ ಇನ್ನಿತರೆಡೆ ಸರಣಿ ಕಳ್ಳತನ ಮಾಡಿದ್ದ ಆರೋಪಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಶಹರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ರಾತ್ರಿಯೇ ಕಳ್ಳರ ಕಾರ್ಯಚರಣೆ

ಹುಬ್ಬಳ್ಳಿ ನಗರದ ವಿದ್ಯಾನಗರ, ಉಪನಗರ, ಕೇಶ್ವಾಪುರ, ಧಾರವಾಡ ಸೇರಿದಂತೆ ಒಂಬತ್ತು ಠಾಣೆಗಳ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ್ದರು. ರಾತ್ರಿ ಹೊತ್ತೇ ಈ ಕಳ್ಳರು ಕಾರ್ಯಾಚರಣೆ ಮಾಡಿ ದೋಚುತ್ತಿದ್ದರು.

ಬಾಗಿಲು ಹಾಕಿದ್ದ ಮನೆ ಹಾಗೂ ಅಂಗಡಿ, ಪಾನ್‌ಶಾಪ್‌, ಮೆಡಿಕಲ್, ಗೋದಾಮುಗಳನ್ನು ಟಾರ್ಗೆಟ್ ಮಾಡಿ, ಕೀಲಿ ಮುರಿದು ಕಳ್ಳತನ ಮಾಡುತ್ತಿದ್ದರು. ಮೊಬೈಲ್ ಅಂಗಡಿಗಳ ಶಟರ್ಸ್‌ ಮುರಿದು ಸರಣಿ ಕಳ್ಳತನ ಮಾಡಿದ್ದ ಆರೋಪಿಗಳು, ಅಶೋಕನಗರ ಠಾಣೆ ವ್ಯಾಪ್ತಿಯ ಸಂತೋಷ ನಗರ ಮತ್ತು ಜೆ.ಕೆ. ಸ್ಕೂಲ್ ರಸ್ತೆಯಲ್ಲಿ ಆರು ಅಂಗಡಿಗಳ ಕಳ್ಳತನ ಮಾಡಿದ್ದರು.

ಅಲ್ಲದೆ ಮನೆಯೊಂದರ ಬೋಗ ಮುರಿದು ನಗದು ದೋಚಿದ್ದರು. ಈ ತಂಡ ಅವಳಿ ನಗರವಲ್ಲದೆ ಬೇರೆ ನಗರಗಳಲ್ಲೂ ಸರಣಿ ಕಳ್ಳತನ ಮಾಡಿದೆ ಎಂಬ ಮಾಹಿತಿ ಸಿಕ್ಕಿದೆ. ಹೀಗಾಗಿ ಎಲ್ಲೆಲ್ಲಿ ಕಳ್ಳತನ ಮಾಡಿದ್ದಾರೆ ಅನ್ನೋದರ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಇದನ್ನೂ ಓದಿ:  Ramya: ಎಂಎಲ್‌ಎ, ಎಂಪಿಗಳ ರಿಯಲ್ ಎಸ್ಟೇಟ್ ಬ್ಯುಸಿನೆಸ್‌ನಿಂದ ಬೆಂಗಳೂರು ಮುಳುಗುತ್ತಿದೆ! ಜನಪ್ರತಿನಿಧಿಗಳ ವಿರುದ್ಧ ರಮ್ಯಾ ಕಿಡಿ

ಮತ್ತೊಂದು ಆನ್ ಲೈನ್ ವಂಚನೆ

65 ಸಾವಿರ ರೂಪಾಯಿ ಹಣ ವರ್ಗಾಯಿಸಿಕೊಂಡು ವಂಚನೆ ಮಾಡಿರುವ ಘಟನೆ ಹುಬ್ಬಳ್ಳಿಯಲ್ಲಿ ಬೆಳಕಿಗೆ ಬಂದಿದೆ. ಬ್ಯಾಂಕ್‌ ಖಾತೆದಾರರಿಗೆ ಗೊತ್ತಾಗದಂತೆ 65 ಸಾವಿರ ರೂಪಾಯಿ ವರ್ಗಾವಣೆ ಮಾಡಿಕೊಳ್ಳಲಾಗಿದೆ.

ಹುಬ್ಬಳ್ಳಿ ನಗರದ ಜ್ಯೋತಿ ವಂಚನೆಗೆ ಒಳಗಾದ ಮಹಿಳೆಯಾಗಿ ದ್ದಾಳೆ. ಬ್ಯಾಂಕ್ ಖಾತೆಯ ಯಾವುದೇ ಮಾಹಿತಿ ಹಂಚಿಕೊಳ್ಳದಿದ್ದರೂ ಹಣ ವಂಚನೆ ಮಾಡಲಾಗಿದೆ. ಒಟ್ಟು 65 ಸಾವಿರ ರೂಪಾಯಿ ವರ್ಗಾಯಿಸಿ ಕೊಂಡು ಮೋಸ ಮಾಡಲಾಗಿದೆ. ಅಪರಿಚಿತ ವ್ಯಕ್ತಿಯಿಂದ ಕೃತ್ಯ ನಡೆದಿದೆ. ಹುಬ್ಬಳ್ಳಿ - ಧಾರವಾಡ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.

15 ದಿನಕ್ಕೆ ನವವಿವಾಹಿತೆ ಆತ್ಮಹತ್ಯೆ

ಒಲ್ಲದ ವಿವಾಹಕ್ಕೆ ನವವಿವಾಹಿತೆ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಮಂಗಳೂರು ಹೊರವಲಯದ ಅಂಬ್ಲಮೊಗರು ಎಂಬಲ್ಲಿ ನಡೆದಿದೆ. ರಶ್ಮಿ (24) ಆತ್ಮಹತ್ಯೆಗೆ ಶರಣಾದ ನವ ವಿವಾಹಿತೆ. ರಶ್ಮಿಗೆ ಕೇವಲ 15 ದಿನಗಳ ಹಿಂದೆ ವಿವಾಹವಾಗಿತ್ತು. ಅಷ್ಟರಲ್ಲೇ ಸೂಸೈಡ್ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ:  Bellary: ಮೃತ ಮಗನನ್ನು ಬದುಕಿಸಿಕೊಳ್ಳಲು ಶವವನ್ನ ಉಪ್ಪಿನ ರಾಶಿಯಲ್ಲಿಟ್ರು; ಬಳ್ಳಾರಿಯಲ್ಲೊಂದು ವಿಚಿತ್ರ ಘಟನೆ

ಮಂಗಳೂರಿನ ಗಂಜಿಮಠ ಮೂಲದ ದುಬೈಯಲ್ಲಿ ಇಂಜಿನಿಯರ್ ಆಗಿರುವ ಸಂದೀಪ್ ಅವರನ್ನು ರಶ್ಮಿ ವಿವಾಹವಾಗಿದ್ದರು. 15 ದಿನದ ಹಿಂದೆಯಷ್ಟೇ ಸಪ್ತಪದಿ ತುಳಿದು ಬಂದಿದ್ದರು. ಆದರೆ ಮದುವೆ ಇಷ್ಟ ಇಲ್ಲದ್ದಕ್ಕೆ ಸೆಪ್ಟೆಂಬರ್ 3 ರಂದು ಇಲಿ ಪಾಷಣ ಸೇವಿಸಿ ಅಸ್ವಸ್ಥಗೊಂಡಿದ್ದರು. ಚಿಕಿತ್ಸೆ ಫಲಕಾರಿಯಾಗದೇ ರಶ್ಮಿ ಸಾವನ್ನಪ್ಪಿದ್ದಾರೆ.
Published by:Mahmadrafik K
First published: