Hubballi: ಆನ್​ಲೈನ್ ಗೇಮ್​​ನಲ್ಲಿ 11 ಕೋಟಿ ಗೆದ್ದ ವಿದ್ಯಾರ್ಥಿ, ಸ್ನೇಹಿತರಿಂದಲೇ ಕಿಡ್ನ್ಯಾಪ್!

ಹಣಕ್ಕಾಗಿ ಜನ ಏನೆಲ್ಲಾ ಮಾಡ್ತಾರೆ ಅನ್ನೋದಕ್ಕೆ ಹುಬ್ಬಳ್ಳಿಯಲ್ಲಿ ನಡೆದ ಪ್ರಕರಣವೇ ಸಾಕ್ಷಿ. ಒಂದು ಕೋಟಿ ಹಣಕ್ಕಾಗಿ ವಿದ್ಯಾರ್ಥಿಯೋರ್ವನನ್ನು ಗೆಳೆಯನೇ ಅಪಹರಿಸಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಸದ್ಯ ಪ್ರಕರಣ ಸುಖಾಂತ್ಯಗೊಂಡಿದ್ದು ಪೋಷಕರು ನಿಟ್ಟುಸಿರು ಬಿಡುವಂತಾಗಿದೆ.

ಹುಬ್ಬಳ್ಳಿಯಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಯ ಕಿಡ್ನ್ಯಾಪ್

ಹುಬ್ಬಳ್ಳಿಯಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಯ ಕಿಡ್ನ್ಯಾಪ್

  • Share this:
ಹಣಕ್ಕಾಗಿ ಜನ ಏನೆಲ್ಲಾ ಮಾಡ್ತಾರೆ ಅನ್ನೋದಕ್ಕೆ ಹುಬ್ಬಳ್ಳಿಯಲ್ಲಿ ನಡೆದ ಪ್ರಕರಣವೇ ಸಾಕ್ಷಿ. ಒಂದು ಕೋಟಿ ಹಣಕ್ಕಾಗಿ (Money) ವಿದ್ಯಾರ್ಥಿಯೋರ್ವನನ್ನು (Student) ಗೆಳೆಯನೇ (Friend) ಅಪಹರಿಸಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಆನ್​ಲೈನ್ ಗೇಮ್​​ನಲ್ಲಿ (Online Game) ವಿದ್ಯಾರ್ಥಿಯೋರ್ವ 11 ಕೋಟಿ ಹಣ ಗೆದ್ದಿದ್ದ. ಇದು ಸ್ನೇಹಿತರ ಕಣ್ಣು ಕುಕ್ಕುವಂತೆ ಮಾಡಿತ್ತು. ಅದಕ್ಕಾಗಿ ಏಳು ಮಂದಿ ಸೇರಿ ವಿದ್ಯಾರ್ಥಿಯನ್ನೇ ಕಿಡ್ನ್ಯಾಪ್ (Kidnap) ಮಾಡಿದ್ದಾರೆ. ನಂತರ ಹೆತ್ತವರಿಗೆ ಕರೆಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಹೆತ್ತವರು ಪೊಲೀಸರಿಗೆ ಮಾಹಿತಿ ನೀಡಿದ್ದು ಆರೋಪಿಗಳ ಹೆಡೆಮುರಿ (Arrest) ಕಟ್ಟಿದ್ದಾರೆ. ಸದ್ಯ ವಿದ್ಯಾರ್ಥಿಯ ಅಪಹರಣ ಪ್ರಕರಣ ಸುಖಾಂತ್ಯಗೊಂಡಿದ್ದು ಮಗ ಹೆತ್ತವರ ಮಡಿಲು ಸೇರಿದ್ದಾನೆ. ಪೋಷಕರು (Parents) ನಿಟ್ಟುಸಿರು ಬಿಡುವಂತಾಗಿದೆ.

ಹುಬ್ಬಳ್ಳಿಯಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿ ಅಪಹರಣ ಪ್ರಕರಣ ಸುಖಾಂತ್ಯಗೊಂಡಿದೆ. ಯುವಕನನ್ನು ಅಪಹರಿಸಿ 1 ಕೋಟಿಗೆ ಬೇಡಿಕೆ ಇಟ್ಟ 7 ಅಪಹರಣಕಾರರನ್ನು ಬಂಧಿಸುವಲ್ಲಿ ಹುಬ್ಬಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.

Hubballi online game winner Student kidnap case 7 people arrest
ಹುಬ್ಬಳ್ಳಿಯಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಯ ಕಿಡ್ನ್ಯಾಪ್


ಸ್ನೇಹಿತರಿಂದಲೇ ವಿದ್ಯಾರ್ಥಿಯ ಕಿಡ್ನ್ಯಾಪ್!

ಆನ್​ಲೈನ್ ಗೇಮ್​ನಲ್ಲಿ ಹಣ ಗೆದ್ದಿದ್ದ ಬಗ್ಗೆ ಗರೀಬ್ ಮುಲ್ಲಾ ತನ್ನ ಸ್ನೇಹಿತರ ಬಳಿ ಹೇಳಿಕೊಂಡಿದ್ದ. ಮಾತ್ರವಲ್ಲದೇ ಕೈಗೆ ಹಣ ಬಂದಾಗ ಬೇಕಾಬಿಟ್ಟಿ ಖರ್ಚು ಮಾಡುತ್ತಿದ್ದ ವಿಚಾರ ಕೂಡ ಸ್ನೇಹಿತರಿಗೆ ತಿಳಿಸಿದ್ದ. ಇದನ್ನು ಕೇಳಿದ ಸ್ನೇಹಿತರು ಗರೀಬ್ ನವಾಜ್ ಮುಲ್ಲಾನನ್ನು ಆಗಸ್ಟ್ 6 ರಂದು ಹುಬ್ಬಳ್ಳಿಯ ಗೋಕುಲ ರಸ್ತೆಯ ಡೆಕಥ್ಲಾನ್ ಬಳಿ ಅಪಹರಿಸಿದ್ದರು.

ಇದನ್ನೂ ಓದಿ: ಅಬ್ಬಬ್ಬಾ...! ಸಹೋದರಿ ಬೇಕೆಂದು ಈ ಭೂಪ ಮಾಡಿದ್ದೇನು ಗೊತ್ತಾ?

11 ಕೋಟಿ ಗೆದ್ದಿದ್ದ ಗರೀಬ್ ಮುಲ್ಲಾ!

ಕೆ.ಎಲ್.ಇ. ಇಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ವಿದ್ಯಾರ್ಥಿಯಾಗಿದ್ದ ಗರೀಬ್ ನವಾಜ್​, ಹುಬ್ಬಳ್ಳಿಯ ಮಂಟೂರು ರಸ್ತೆಯ ನಿವಾಸಿ. ಈತನಿಗೆ ಆನ್​ಲೈನ್ ಗೇಮ್​ ಹುಚ್ಚು. ಮಗ ಓದಿ ಇಂಜಿನಿಯರ್ ಆಗಲಿ ಅಂತ ಪೋಷಕರು ಕಾಲೇಜಿಗೆ ಕಳುಹಿಸಿದರೆ, ಮಗ ಮಾತ್ರ ಆನ್ ಲೈನ್ ಜೂಜಾಟದಲ್ಲಿ ತಲ್ಲೀನನಾಗಿದ್ದ. ಆತನ ತಲ್ಲೀನತೆ ಎಷ್ಟರಮಟ್ಟಿಗೆ ಇತ್ತೆಂದರೆ ಆನ್​ಲೈನ್ ಜೂಜಾಟದಲ್ಲಿ 11 ಕೋಟಿ ರೂಪಾಯಿಗಳನ್ನು ಗೆದ್ದು ಗೆಲುವಿನ ನಗೆ ಬೀರಿದ್ದ.

11 ಕೋಟಿ ಗೆದ್ದು ಮೋಜುಮಸ್ತಿ!

ಗೆದ್ದ 11 ಕೋಟಿ ರೂಪಾಯಿ ಡ್ರಾ ಮಾಡಲು ಗರೀಬ್ ನವಾಜ್​ಗೆ ಕರೆಂಟ್ ಅಕೌಂಟ್​​ನ ಅವಶ್ಯಕತೆ ಇತ್ತು. ಈ ಹಿನ್ನೆಲೆಯಲ್ಲಿ ಪರಿಚಯಸ್ಥನಾಗಿದ್ದ ಗೆಳೆಯ ಅಬ್ದುಲ್ ಕರೀಂನ ಹೆಸರಲ್ಲಿ ಕರೆಂಟ್ ಅಕೌಂಟ್ ಮಾಡಿಸಿದ್ದ. ಈ ವೇಳೆ 11 ಕೋಟಿ ರೂಪಾಯಿ ಗಳ ಪೈಕಿ 2 ಕೋಟಿ ರೂಪಾಯಿ ಹಣವನ್ನು ಈ ಖಾತೆಗೆ ವರ್ಗಾಯಿಸಿದ್ದ. ನಂತರ ಎಂಜಾಯ್ ಮಾಡೋಕೆ ಶುರು ಮಾಡಿದ್ದ.

ಇದನ್ನೂ ಓದಿ: ಮದ್ವೆಗೆ ಒಪ್ಪದ ಪೋಷಕರು, ನೇಣಿಗೆ ಕೊರಳೊಡ್ಡಿದ ಯುವಕ; ವಿಷಯ ಕೇಳಿ ಬಾವಿಗೆ ಹಾರಿದ ಯುವತಿ

ಮೊದಲೇ ಹಣದ ರುಚಿ ನೋಡಿದ್ದ ಅಬ್ದುಲ್ ಕರೀಂ, ಗರೀಬ್ ನವಾಜ್​ನನ್ನು ಸುಲಿಗೆ ಮಾಡೋ ತಂತ್ರ ಹೆಣೆದಿದ್ದ. ಹಣ ಕೊಡದೇ ಇದ್ದಾಗ ಅಪಹರಣ ಸ್ಕೆಚ್ ರೂಪಿಸಿದ್ದ. 7 ಜನ ಸೇರಿ ಹುಬ್ಬಳ್ಳಿಯಲ್ಲಿ ಗರೀಬ್ ನವಾಜ್​​ನನ್ನು ಅಪಹರಿಸಿದ್ದರು. ಇದರಿಂದ ಕಂಗಾಲಾದ ಪೋಷಕರು ಪೊಲೀಸರ ಮೊರೆ ಹೋಗಿದ್ದರು.

ತಂದೆಗೆ ಕರೆ ಮಾಡಿ ಹಣಕ್ಕೆ ಬೇಡಿಕೆ

ಇಂಜಿನಿಯರಿಂಗ್ ವಿದ್ಯಾರ್ಥಿಯ ಕಿಡ್ನ್ಯಾಪ್ ಬಗ್ಗೆ ಹುಬ್ಬಳ್ಳಿಯ ಬೆಂಡಿಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದರ ನಂತರ ಯುವಕನ ತಂದೆಗೆ ಕರೆ ಮಾಡಿದ್ದ ಆರೋಪಿಗಳು ಹಣಕ್ಕೆ ಬೇಡಿಕೆ ಇಟ್ಟಿದ್ದರು. ಮೊದಲು 1 ಕೋಟಿ‌, ಬಳಿಕ 15 ಲಕ್ಷ ನೀಡುವಂತೆ ಆರೋಪಿಗಳು ಬೇಡಿಕೆ ಇಟ್ಟಿದ್ದರು.

ಕರೆಗಳ ಜಾಡು ಹಿಡಿದು ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಮಹಮ್ಮದ್ ಆರಿಫ್, ಇಮ್ರಾನ್, ಅಬ್ದುಲ್ ಕರೀಮ್, ಹುಸೇನ್ ಸಾಬ್, ಇಮ್ರಾನ್ ಮದರಲಿ, ತೌಸಿಫ್ ಮತ್ತಿ, ಮಹಮ್ಮದ್ ರಜಾಕ್ ಎಂದು ಗುರುತಿಸಲಾಗಿದೆ. ಬೆಳಗಾವಿಯ ಕಿತ್ತೂರು‌ ಬಳಿ ಆರೋಪಿಗಳ‌ನ್ನು ಬಂಧಿಸಲಾಗಿದೆ. ಅತಿ ಆಸೆ ಗತಿಗೇಡು ಅನ್ನುವಂತೆ ಹಣದ ಹಿಂದೆ ಬಿದ್ದ ಆರೋಪಿಗಳು ಕೊನೆಗೂ ಅಂದರ್ ಆಗಿದ್ದಾರೆ.

ವರದಿ - ಶಿವರಾಮ ಅಸುಂಡಿ
Published by:Thara Kemmara
First published: