ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮತ್ತೆ ಚಾಕು ಇರಿತ (Stabbing) ಪ್ರಕರಣ ಬೆಳಕಿಗೆ ಬಂದಿದೆ. ಬಡ್ಡಿ ವಿಷಯಕ್ಕೆ ಸಂಬಂಧಿಸಿದಂತೆ ಓರ್ವನಿಗೆ ಚಾಕುವಿನಿಂದ ಇರಿದು ದುಷ್ಕರ್ಮಿಗಳು ಎಸ್ಕೇಪ್ ಆದ ಘಟನೆ ಹಳೆ ಹುಬ್ಬಳ್ಳಿಯ (Old Hubballi) ಆನಂದ ನಗರದಲ್ಲಿ ನಡೆದಿದೆ. ಘಟನೆಯಲ್ಲಿ ಯುವಕನಿಗೆ (Youth Injured) ಗಂಭೀರ ಗಾಯಗಳಾಗಿವೆ. ಹಲ್ಲೆಗೊಳಗಾದ ಯುವಕನ್ನು ತೌಸೀಫ್ ಸಗೀರ ಅಹಮದ್ ಮುಲ್ಲಾ @ ಚೋರ್ ಮುನ್ನಾ (32) ಎಂದು ಗುರುತಿಸಲಾಗಿದೆ. ಚೋರ್ ಮುನ್ನಾ ಅಟೋ ಚಾಲಕನಾಗಿದ್ದು (Auto Driver), ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ. ಚೋರ್ ಮುನ್ನಾ ಮೇಲೆ ಮೇಲೆ ರೌಡಿಶೀಟರ್ (Rowdysheeter) ಹಾಗೂ ಎಂಓಬಿ ಪ್ರಕರಣ ದಾಖಲಾಗಿತ್ತು. ವಿಶಾಲ್ ಗಣೇಶ್ ಹೋಟಕರ ಹಾಗೂ ಪ್ರಮೋದ್ ಚಂದ್ರಕಾಂತ್ ಮಾನೆ ಎಂಬವರಿಂದ ಚಾಕು ಇರಿತವಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ವಿಶಾಲ್ ಹಾಗೂ ಪ್ರಮೋದ್ಗೆ ಚೋರ್ ಮುನ್ನಾ ಹಣ ಕೊಡಬೇಕಾಗಿತ್ತು. ಆದ್ರೆ ಹಣ ಕೊಡದೇ ಸತಾಯಿಸುತಿದ್ದ ಎನ್ನಲಾಗಿದೆ. ಇದರಿಂದ ಕುಪಿತಗೊಂಡು ಚಾಕುವಿನಿಂದ ಇರಿದು ಹಲ್ಲೆ ಮಾಡಲಾಗಿದೆ.
ಆರೋಪಿಗಳಿಬ್ಬರು ಸಹ ರೌಡಿಶೀಟರ್ಗಳು
ಆರೋಪಿಗಳಾದ ಪ್ರಮೋದ್ ಹಾಗೂ ವಿಶಾಲ್ ಸಹ ರೌಡಿಶೀಟರ್ಗಳಾಗಿದ್ದು, ಚಾಕುವಿನಿಂದ ಇರಿದು ಎಸ್ಕೇಪ್ ಆಗಿರುವ ಆರೋಪಿಗಳ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ. ಗಾಯಾಳು ಚೋರ್ ಮುನ್ನಾನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹಳೇ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದೆ.
ಲಾಡ್ಜ್ನಲ್ಲಿ ಯುವಕನ ಅನುಮಾನಾಸ್ಪದ ಸಾವು
ಯುವಕನೋರ್ವ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಚೆನ್ನಮ್ಮಾ ವೃತ್ತದ ಬಳಿಯ ಸಂಗಮ ಲಾಡ್ಜ್ನಲ್ಲಿ ನೇಣು ಬಿಗಿದು, ಬೆಡ್ ಮೇಲೆ ಕುಳಿತ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.
ಮೃತ ಯುವಕನನ್ನು ಕಲಘಟಗಿ ತಾಲೂಕು ಕಂಪ್ಲಿಕೊಪ್ಪ ಗ್ರಾಮದ ಸಂತೋಷ್ ಹರಿಜನ ಎಂದು ಗುರುತಿಸಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕಿಮ್ಸ್ನ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಉಪ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
Cyber Crime: ವ್ಯಕ್ತಿಗೆ ಆನ್ಲೈನ್ ಮೂಲಕ ಲಕ್ಷಾಂತರ ರೂಪಾಯಿ ಪಂಗನಾಮ
ವಿದ್ಯುತ್ ಬಿಲ್ ಪಾವತಿ ಮಾಡುವುದು ಹೇಗೆಂದು ಕೇಳಲು ಹೋಗಿ ವ್ಯಕ್ತಿಯೋರ್ವ ಮೋಸ ಹೋದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಬರೋಬ್ಬರಿ 1.01 ಲಕ್ಷ ರೂಪಾಯಿ ವಂಚನೆ ಮಾಡಲಾಗಿದೆ.
ಗೂಗಲ್ನಲ್ಲಿ ದೊರೆತ ಗ್ರಾಹಕರ ಸಹಾಯವಾಣಿಗೆ ವ್ಯಕ್ತಿ ಕರೆ ಮಾಡಿದ್ದ. ಮಾಹಿತಿ ಕೇಳಿದ ವ್ಯಕ್ತಿಯ ಬ್ಯಾಂಕ್ ಖಾತೆಯಿಂದ ಆನ್ಲೈನ್ನಲ್ಲಿ ಹಣ (Online Cheating) ವರ್ಗಾಯಿಸಿಕೊಳ್ಳಲಾಗಿದೆ.
1.01 ಲಕ್ಷ ಹಣ ಕಳೆದುಕೊಂಡ ವ್ಯಕ್ತಿ
ವಿದ್ಯುತ್ ಬಿಲ್ ಪಾವತಿಸಲು (Electricity Bill) ಗೂಗಲ್ನಲ್ಲಿ ದೊರೆತ ಮೊಬೈಲ್ ನಂಬರ್ಗೆ ಕರೆ ಮಾಡಿದ ದೇವರಗುಡಿಹಾಳ ರಸ್ತೆಯ ದೀಪಕ್ ಶೂರಪಾಲಿ ಅವರು, 1.01 ಲಕ್ಷ ರೂ. ಹಣವನ್ನು ಕಳೆದುಕೊಂಡಿದ್ದಾರೆ.
ಗೂಗಲ್ನಲ್ಲಿ ದೊರೆತ ಗ್ರಾಹಕರ ಸಹಾಯವಾಣಿಗೆ (Customer Helpline Number) ಕರೆ ಮಾಡಿದ ದೀಪಕ್, ವಿದ್ಯುತ್ ಬಿಲ್ ಪಾವತಿ ಮಾಡುವುದು ಹೇಗೆಂದು ಮಾಹಿತಿ ಕೇಳಿದ್ದಾರೆ.
ಇದನ್ನೂ ಓದಿ: Love Jihad: 'ಯೋಗಿ ಆದಿತ್ಯನಾಥ್ಗೆ ಲವ್ ಮಾಡೋದು ಗೊತ್ತಿಲ್ಲ, ಕಟೀಲ್ ಪೋಲಿ ಹುಡುಗ ತರ' -ಸಿಎಂ ಇಬ್ರಾಹಿಂ ವ್ಯಂಗ್ಯ
ಆಪ್ ಡೌನ್ಲೋಡ್ ಮಾಡಿಕೊಳ್ಳಲು ಹೇಳಿದ ವಂಚಕರು
ಸಲಹೆ ನೀಡುವ ನೆಪದಲ್ಲಿ ವಂಚಕ, ಮೊಬೈಲ್ಗೆ ವೀವರ್ ಕ್ವಿಕ್ ಸಪೋರ್ಟ್ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಸೂಚಿಸಿದ್ದ ಅಪರಿಚಿತರು, ದೀಪಕ್ ರಿಂದ ಮೊದಲು 10 ರೂಪಾಯಿ ವರ್ಗಾಯಿಸಿಕೊಂಡಿದ್ದರು.
ನಂತರ ಯುಪಿಐ ಪಿನ್ ಸಂಖ್ಯೆ ತಿಳಿದುಕೊಂಡು, ಆನ್ಲೈನ್ನಲ್ಲಿ ಹಣ ವರ್ಗಾಯಿಸಿಕೊಳ್ಳಲಾಗಿದೆ. ಹುಬ್ಬಳ್ಳಿ ಸೈಬರ್ ಪೊಲೀಸ್ ಠಾಣೆಯಲ್ಲಿ ದಾಖಲಿಸಿಕೊಳ್ಳಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ