ಹುಬ್ಬಳ್ಳಿಯಲ್ಲಿ ಅಂತ್ಯ ಸಂಸ್ಕಾರದ ವೇಳೆ ನೀರು ಕುಡಿದ ಶವ!; ಹೆಣವನ್ನು ಮತ್ತೆ ಆಸ್ಪತ್ರೆಗೆ ತಂದ ಕುಟುಂಬ!

ಅಂತ್ಯಸಂಸ್ಕಾರಕ್ಕೂ ಮುನ್ನ ಮೃತದೇಹದವನ್ನು ಮೈ ತೊಳೆಯುವುದು ಪದ್ಧತಿ ಗ್ರಾಮದಲ್ಲಿ ಇದೆ. ಅದರಂತೆ ಗ್ರಾಮಸ್ಥರು ಸೇರಿ ಮೈ ತೊಳೆಯುತ್ತಿರುವಾಗ ಮೃತ ವ್ಯಕ್ತಿ ನೀರು ಕುಡಿದಂತೆ ಭಾಸವಾಗಿತ್ತು!

news18-kannada
Updated:July 26, 2020, 8:24 AM IST
ಹುಬ್ಬಳ್ಳಿಯಲ್ಲಿ ಅಂತ್ಯ ಸಂಸ್ಕಾರದ ವೇಳೆ ನೀರು ಕುಡಿದ ಶವ!; ಹೆಣವನ್ನು ಮತ್ತೆ ಆಸ್ಪತ್ರೆಗೆ ತಂದ ಕುಟುಂಬ!
ಸಾಂದರ್ಭಿಕ ಚಿತ್ರ
  • Share this:
ಧಾರವಾಡ (ಜು.26) : ವ್ಯಕ್ತಿಯೊರ್ವ ಹೃದಯಾಘಾತಕ್ಕೆ ಈಡಾಗಿದ್ದ ಬಳಿಕ ಮೃತದೇಹವನ್ನು ಅಂತ್ಯಸಂಸ್ಕಾರ ಮಾಡಲು ಸಲ ಸಿದ್ಧತೆ ಮಾಡಿಕೊಂಡ ಗ್ರಾಮಸ್ಥರಿಗೆ ಅಚ್ಚರುಯೊಂದು ನಡೆದೆ. ಅಂತ್ಯ ಸಂಸ್ಕಾರಕ್ಕೂ ಮೊದಲು ಶವದ ತೊಳೆಯುತ್ತಿದ್ದ ವೇಳೆ ಮೃತ ವ್ಯಕ್ತಿ ನೀರು ಕುಡಿದ ಎಂದು ಭಾವಿಸಿದ ಆತನ ಸಂಬಂಧಿಕರು ಹಾಗೂ ಗ್ರಾಮಸ್ಥರು ಮೃತದೇಹವನ್ನು ಜಿಲ್ಲಾ ಆಸ್ಪತ್ರೆಗೆ ತಂದು ಪರೀಕ್ಷೆಗೆ ಒಳಪಡಿಸಿದ್ದಾರೆ!

ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ನಿವಾಸಿಯಾದ ಶಿಕ್ಷಕ ಈರಣ್ಣ ಕಾಂಬ್ಳೆ ಎಂಬುವವರು ಶುಕ್ರವಾರ ಬೆಳಗ್ಗೆ ಹುಬ್ಬಳ್ಳಿ ಕಿಮ್ಸ್​​ ನಲ್ಲಿ ಮೃತಪಟ್ಟಿದ್ದರು. ನಂತರ  ಮೃತದೇಹವನ್ನು ಸ್ವಗ್ರಾಮಕ್ಕೆ ತಂದು ಅಂತ್ಯಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು.

ಅಂತ್ಯಸಂಸ್ಕಾರಕ್ಕೂ ಮುನ್ನ ಮೃತದೇಹದವನ್ನು ಮೈ ತೊಳೆಯುವುದು ಪದ್ಧತಿ ಗ್ರಾಮದಲ್ಲಿ ಇದೆ. ಅದರಂತೆ ಗ್ರಾಮಸ್ಥರು ಸೇರಿ ಮೈ ತೊಳೆಯುತ್ತಿರುವಾಗ ಮೃತ ವ್ಯಕ್ತಿ ನೀರು ಕುಡಿದ ಎಂದು ಭಾವಿಸಿದ್ದು ಇಷ್ಟೆಲ್ಲ ಬೆಳವಣಿಗೆಗಳಿಗೆ ಕಾರಣವಾಗಿದೆ.

ಮೃತ ವ್ಯಕ್ತಿ ನೀರು ಕುಡಿದ ಎಂದು ಅಲ್ಲಿನ ಕೆಲವರು ಹೇಳುತ್ತಿದ್ದಂತೆಯೇ ಆತನ ಜೀವ ಇನ್ನೂ ಇದೆ ಎಂದು ಗ್ರಾಮಸ್ಥರು ಹಾಗೂ ಕುಟುಂಬ ಸದಸ್ಯರು ಭಾವಿಸಿದರು. ಹೀಗಾಗಿ ತಡಮಾಡದೇ ಧಾರವಾಡ ಜಿಲ್ಲಾ ಆಸ್ಪತ್ರೆಗೆ ತಂದರು. ಸುದ್ದಿ ತಿಳಿಯುತಿದಂತೆ ಜಿಲ್ಲಾಸ್ಪತ್ರೆಯತ್ತ ಗ್ರಾಮಸ್ಥರ ದಂಡೆ ಆಗಮಿಸಿತ್ತು.

ಜಿಲ್ಲಾಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿದಾಗ ಆತ ಆಗಲೇ ಮೃತಪಟ್ಟಿರುವುದನ್ನು ವೈದ್ಯರು ಖಚಿತಪಡಿಸಿದರು. ಬಳಿಕ ಮತ್ತೆ ಹೆಬ್ಬಳ್ಳಿಗೆ ಮೃತದೇಹವನ್ನು ತೆಗೆದೊಯ್ದ ಗ್ರಾಮಸ್ಥರು ವಿಧಿವಿಧಾನಗಳೊಂದಿಗೆ ಅಂತ್ಯಸಂಸ್ಕಾರ ಪೂರ್ಣಗೊಳಿಸಿದರು.

ಇದನ್ನೂ ಓದಿ: ಪಿಪಿಇ ಕಿಟ್ ಧರಿಸಿ ಐಸೋಲೇಷನ್ ವಾರ್ಡ್‌‌ಗೆ ಭೇಟಿ ನೀಡಿದ ಬೀದರ್ ಜಿಲ್ಲಾಧಿಕಾರಿಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಮೃತನ ಸಹೋದರಿ, ಅಣ್ಣ ಮನೆಯಲ್ಲಿ ಮೂರ್ಚೆ ತಪ್ಪು ಬಿದ್ದಿದ್ದ. ಆತನಿಗೆ ಹೃದಯ ಸಂಬಂಧಿ ಕಾಯಿಲೆ ಇತ್ತು. ಹೀಗಾಗಿ ಆತನಿಗೆ ಹೃದಯಾಘಾತವಾಗಿರಬೇಕೆಂದು ಹುಬ್ಬಳ್ಳಿ ಕಿಮ್ಸ್​​ಗೆ ದಾಖಲು ಮಾಡಲಾಯಿತು. ಆದರೆ ಕಿಮ್ಸ್ ನಲ್ಲಿ  ಸಾವು ಸಂಭವಿಸಿತ್ತು. ನಂತರ ಗ್ರಾಮಕ್ಕೆ ಮೃತದೇಹ ತಂದಾಗ ಅವರ ಸ್ವಲ್ಪ ನೀರು ಕುಡಿದರು. ದೇಹದಲ್ಲೂ ಉಷ್ಣಾಂಶ ಇತ್ತು.  ಹೀಗಾಗಿ ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ ಜಿಲ್ಲಾಸ್ಪತ್ರೆಯವರು ಆಗಲೇ ಮೃತಪಟ್ಟಿರುವುದನ್ನು ವೈದ್ಯರು ಖಚಿತಪಡಿಸಿದ ನಂತರ ಅಂತ್ಯಸಂಸ್ಕಾರಕ್ಕೆ ಕರೆದೋಯ್ಯಲಾಗಿದೆ ಎಂದರು.
Published by: Rajesh Duggumane
First published: July 26, 2020, 8:24 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading