Hubballi: ಮದುಮಗನನ್ನೇ ಬಲಿ ಪಡೆದ ಸಾವಿನ ಹೆದ್ದಾರಿ; ಇದರಿಂದ ಶೀಘ್ರವೇ ಮುಕ್ತಿ ಸಿಗಲಿದೆ ಎಂದ ಜೋಶಿ

ಟೆಂಡರ್ ಕಂಪ್ಲೀಟ್ ಆದ ಕೂಡಲೇ ಕಾಮಗಾರಿ ಆರಂಭಗೊಳ್ಳಲಿದೆ. ಇನ್ನೂ ಒಂದೂವರೆ ತಿಂಗಳಲ್ಲಿ ಕಾಮಗಾರಿ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.

ಮೃತ ಆನಂದ್

ಮೃತ ಆನಂದ್

  • Share this:
ಹುಬ್ಬಳ್ಳಿ - ಈ ರಸ್ತೆಯಲ್ಲಿ (Road) ಸಾವುಗಳಿಗೆ ಕೊನೆಯೇ ಇಲ್ಲವೆನಿಸುತ್ತೆ. ಮೊನ್ನೆಯಷ್ಟೇ ಎಂಟು ಜನರನ್ನು ಬಲಿ ಪಡೆದು, 24 ಜನರಿಗೆ ಗಾಯಗೊಂಡ ಪ್ರಕರಣ ನಡೆದಿತ್ತು. ಇದರ ಬೆನ್ನ ಹಿಂದೆಯೇ ಈ ಸಾವಿನ ಹೆದ್ದಾರಿ (Deadly Road) ಮದುಮಗನನ್ನೇ (Groom) ಬಲಿ ಪಡೆದಿದೆ. ಮದುವೆಯಾಗಿ ಒಂದು ವಾರ ಗತಿಸುವ ಮುನ್ನವೇ ಮದುಮಗ ಯಮನ ಪಾದ ಸೇರಿದ್ದು, ಸಾವಿನ ಹೆದ್ದಾರಿಯಿಂದ ಮುಕ್ತಿ ಯಾವಾಗ ಅನ್ನೋ ಕೂಗು ಕೇಳಿ ಬಂದಿದೆ. ಈ ಕುರಿತು ನ್ಯೂಸ್ 18 ಗೆ ಪ್ರತಿಕ್ರಿಯಿಸಿರೋ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Union Minister Pralhad joshi), ಶೀಘ್ರವೇ ರಸ್ತೆ ಅಭಿವೃದ್ಧಿ ಕಾಮಗಾರಿ ಆರಂಭಗೊಳಿಸ್ತೇವೆ ಎಂದಿದ್ದಾರೆ.

ಮೊನ್ನೆಯಷ್ಟೇ ಎಂಟು ಜನರನ್ನು ಬಲಿ ಪಡೆದಿದ್ದ ಹುಬ್ಬಳ್ಳಿ - ಧಾರವಾಡ ಬೈ ಪಾಸ್ (Hubballi Dharwad Bypass) ಮಧುಮಗನನ್ನು ಬಲಿ ಪಡೆದಿದೆ. ಪುಣೆ - ಬೆಂಗಳೂರಿಗೆ ಸಂಪರ್ಕ ಕಲ್ಪಿಸೋ ಈ ಹೆದ್ದಾರಿ ಸಾವಿನ ರಹದಾರಿ ಅಂತಲೇ ಅಪಖ್ಯಾತಿಗೆ ಗುರಿಯಾಗಿದೆ.

ಇದೀಗ ಮತ್ತೊಂದು ಬಲಿ ಪಡೆದಿದೆ. ಬೊಲೆರೊ ಕಾರ್ ಮತ್ತು ಬೈಕ್ ಮುಖಾಮುಖಿ ಡಿಕ್ಕಿಯಾಗಿ ಮದುಮಗ ಸ್ಥಳದಲ್ಲೇ ಸಾವನ್ನಪ್ಪಿರೋ ಘಟನೆ ಹುಬ್ಬಳ್ಳಿ‌ಯ ತಾರಿಹಾಳ ಬಳಿಯ ಬೈಪಾಸ್‌ನಲ್ಲಿ ನಡೆದಿದೆ. ಮೃತ ದುರ್ದೈವಿಯನ್ನು ಆನಂದ್ ಮಾದರ (27) ಎಂದು ಗುರುತಿಸಲಾಗಿದೆ.

ಇದನ್ನೂ ಓದಿ:  BC Nagesh: ದೇಶವನ್ನು ಇಟಲಿಕರಣ ಮಾಡಲು ಹೋಗ್ತಿಲ್ಲ: ಸಿದ್ದರಾಮಯ್ಯ ಹೇಳಿಕೆಗೆ ಬಿ ಸಿ ನಾಗೇಶ್ ತಿರುಗೇಟು

ಮದುವೆ ವಾರದಲ್ಲಿಯೇ ಸಾವು

ಹುಬ್ಬಳ್ಳಿ ತಾಲೂಕಿನ ಚಳಮಟ್ಟಿ ಗ್ರಾಮದ ನಿವಾಸಿ ಆನಂದ ಮೇ 20 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ. ಮದುವೆಯಾಗಿ ಹಸೆ ಮೈಯಲ್ಲಿರಬೇಕಾದ್ರೇನೇ ಮದು ಮಗ ಸಾವಿಗೀಡಾಗಿದ್ದಾರೆ. ವೈವಾಹಿಕ ಜೀವನಕ್ಕೆ ಕಾಲಿಟ್ಟು ವಾರ ಕಳೆಯೋದ್ರೊಳಗಾಗಿ ಯಮನ ಪಾದ ಸೇರಿದ್ದಾನೆ. ಬೈಕ್ ನಲ್ಲಿ ಬರುತ್ತಿದ್ದ ವೇಳೆ ರಸ್ತೆ ಅಪಘಾತದಲ್ಲಿ ಮದುಮಗ ಸಾವನ್ನಪ್ಪಿದ್ದಾನೆ. ಈ ಕುರಿತು ಹುಬ್ಬಳ್ಳಿಯ ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ

ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ, ಮಧ್ಯಾಹ್ನ 12 ಗಂಟೆ ಸಮಯಕ್ಕೆ ಅಪಘಾತ ದುರ್ಘಟನೆ ಸಂಭವಿಸಿದೆ. ಹುಬ್ಬಳ್ಳಿ- ಧಾರವಾಡ ಬೈಪಾಸ್ ರಸ್ತೆಯಲ್ಲಿ ನಡೆದ ಭೀಕರ ಅಪಘಾತದಲ್ಲಿ ಗಾಯಗೊಂಡಿದ್ದ ಪುಟ್ಟ ಮಗು ಸೇರಿದಂತೆ ಮೂವರನ್ನು ಅದೇ ಮಾರ್ಗವಾಗಿ ಹೋಗುತ್ತಿದ್ದ ಅನಿಲಕುಮಾರ್ ಪಾಟೀಲ್ ಅವರು ಆಸ್ಪತ್ರೆಗೆ ತಮ್ಮ ವಾಹನದಲ್ಲೇ ಸಾಗಿಸಿದ್ದಾರೆ. ಆದರೆ ಗಂಭೀರವಾಗಿ ಗಾಯಗೊಂಡಿದ್ದ ಯುವಕ ಆನಂದ್ ಮಾದರ ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾನೆ.

ಅದೃಷ್ಟವಶಾತ್ ಪುಟ್ಟ ಮಗು ಹಾಗೂ ಆನಂದ್ ನ ಅಕ್ಕ ಪ್ರಾಣಾಪಾಯದಿಂದ ಪಾರಾಗಿದ್ದು, ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ. ಈ ಸಾವಿಗೆ ಕಾಗ್ರೆಸ್ ಜಿಲ್ಲಾಧ್ಯಕ್ಷ ಅನಿಲಕುಮಾರ ಪಾಟೀಲ ವಿಷಾದ ವ್ಯಕ್ತಪಡಿಸಿದ್ದಾರೆ.

ಸಾವಿನ ಹೆದ್ದಾಯಿಂದ ಶೀಘ್ರವೇ ಮುಕ್ತಿ ಎಂದ ಜೋಶಿ

ಸಾವಿನ ಹೆದ್ದಾರಿ ಎಂದೇ ಬಿಂಬಿತಗೊಂಡಿರೋ ರಾಷ್ಟ್ರೀಯ ಹೆದ್ದಾರಿಗೆ ಶೀಘ್ರವೇ ಮುಕ್ತಿ ಸಿಗಲಿದೆ ಅನ್ನೋ ಮಾತು ಕೇಳಿ ಬಂದಿದೆ. ಹುಬ್ಬಳ್ಳಿ - ಧಾರವಾಡ ಬೈಪಾಸ್ ರಸ್ತೆ ಸಾವಿನ ರಹದಾರಿ ಆಗಿರೋ ಕುರಿತು ನ್ಯೂಸ್ 18 ಕನ್ನಡ ಗ್ರೌಂಡ್ ರಿಪೋರ್ಟ್ ಮಾಡಿತ್ತು. ಈ ಕುರಿತು ನ್ಯೂಸ್ 18 ಕನ್ನಡಕ್ಕೆ ಪ್ರತಿಕ್ರಿಯಿಸಿರೋ ಕೇಂದ್ರ ಗಣಿ, ಕಲ್ಲಿದ್ದಲು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, ಇನ್ನೂ ಒಂದು ಅಥವಾ ಒಂದೂವರೆ ತಿಂಗಳಲ್ಲಿ ಮುಹೂರ್ತ ಫಿಕ್ಸ್ ಎಂದಿದ್ದಾರೆ. ಹುಬ್ಬಳ್ಳಿ – ಧಾರವಾಡ ಬೈಪಾಸ್ ರಸ್ತೆಯಲ್ಲಿ ಸಾವಿನ ಸಂಖ್ಯೆ ಏರುತ್ತಲೇ ಇದೆ.

ಆರು ಲೇನ್ ಗಳಿಂದ ಎಂಟು ಲೇನ್ ಗಳಿಗೆ ಪರಿವರ್ತನೆ

ರಾಷ್ಟ್ರೀಯ ಹೆದ್ದಾರಿಯಲ್ಲಿರೋ ಈ ರಸ್ತೆಯ ಟೆಂಡರ್ ಪ್ರಕ್ರಿಯೆ ಮುಗಿಯುತ್ತಾ ಬಂದಿದೆ. ಅದನ್ನು ನಾವು ಲೇನ್ ಗಳಲ್ಲಿ ಬದಲಾವಣೆ ಮಾಡಿದ್ದರಿಂದ ತಡವಾಗಿದೆ. ಆರು ಲೇನ್ ಗಳಿಂದ ಎಂಟು ಲೇನ್ ಗಳಿಗೆ ಪರಿವರ್ತನೆ ಮಾಡಲಾಗಿದೆ. ಹೀಗಾಗಿ ಒಂದಷ್ಟು ತಡವಾಗಿದೆ. ಆದರೆ ಇದನ್ನು ನಾವು ಆದಷ್ಟು ಬೇಗ ಮಾಡ್ತೇವೆ. ಈ ಹಿಂದೆ ನಮ್ಮಿಂದ ವಿಳಂಬವಾಗಿಲ್ಲ. ಹಿಂದಿನ ರಾಜ್ಯ ಹಾಗೂ ಹಿಂದಿನ ಕೇಂದ್ರ ಸರ್ಕಾರಗಳು ರಸ್ತೆ ಅಗಲೀಕರಣಕ್ಕೆ ಅವಕಾಶ ಕೊಟ್ಟಿರಲಿಲ್ಲ. 2025 ರವರೆಗೆ ಈಗಿರುವ ರಸ್ತೆಯನ್ನು ಅಗಲೀಕರಣ ಮಾಡುವಂತಿರಲಿಲ್ಲ.

ಇದನ್ನೂ ಓದಿ:  Anubhava Mantapa Vs Peer Pasha Dargah: ಪೀರ್ ಪಾಶಾ ದರ್ಗಾದಲ್ಲಿದೆಯಾ ಅನುಭವ ಮಂಟಪ?

ಇದರಿಂದಾಗಿ ಏನು ಮಾಡಲಾರದ ಪರಿಸ್ಥಿತಿ ನಿರ್ಮಾಣವಾಗಿತ್ತು. ಅದೆಲ್ಲವನ್ನೂ ಸರಿಪಡಿಸಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಹಸಿರು ನಿಶಾನೆ ತೋರಲಾಗಿದೆ. ಟೆಂಡರ್ ಕಂಪ್ಲೀಟ್ ಆದ ಕೂಡಲೇ ಕಾಮಗಾರಿ ಆರಂಭಗೊಳ್ಳಲಿದೆ. ಇನ್ನೂ ಒಂದೂವರೆ ತಿಂಗಳಲ್ಲಿ ಕಾಮಗಾರಿ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.
Published by:Mahmadrafik K
First published: