Hubballi Crime News: ಕೊಲೆ ಯತ್ನ ಆರೋಪ; ಪತಿ ವಿರುದ್ಧವೇ ಪಾಲಿಕೆ ಸದಸ್ಯೆ ಶೃತಿ ದೂರು

ಕಿಡ್ನ್ಯಾಪ್ ಪ್ರಕರಣದಲ್ಲಿ (Kidnap Case) ಓರ್ವ ಪಾಲಿಕೆ ಸದಸ್ಯನನ್ನು ಪೊಲೀಸರು ವಿಚಾರಣೆಗೆ ಗುರಿಪಡಿಸಿದರೆ, ಮತ್ತೋರ್ವ ಸದಸ್ಯೆ ತನ್ನ ಪತಿ ವಿರುದ್ಧವೇ ಕೊಲೆ ಯತ್ನ (Murder Attempt) ಪ್ರಕರಣ ದಾಖಲಿಸಿದ್ದಾರೆ.

ಪಾಲಿಕೆ ಸದಸ್ಯೆ

ಪಾಲಿಕೆ ಸದಸ್ಯೆ

  • Share this:
ಹುಬ್ಬಳ್ಳಿ - ಮಹಾನಗರ ಪಾಲಿಕೆ ಸದಸ್ಯರು (Municipal Corporation Members) ಅಭಿವೃದ್ಧಿ ಕಾರ್ಯಗಳ ಮೂಲಕ ಚರ್ಚೆಗೆ ಗ್ರಾಸವಾಗೋ ಬದಲಿಗೆ ಬೇರೆ ಬೇರೆ ಕಾರಣಗಳಿಂದಾಗಿ ಚರ್ಚೆಗೆ ಗ್ರಾಸವಾಗಲಾರಂಭಿಸಿದ್ದಾರೆ. ಎರಡು - ಮೂರು ದಿನಗಳ ಅಂತರದಲ್ಲಿ ಇಬ್ಬರು ಪಾಲಿಕೆ ಸದಸ್ಯರು ಪೊಲೀಸ್ ಠಾಣೆ (Police Station) ಮೆಟ್ಟಿಲೇರಿ ಚರ್ಚೆಗೆ ಗ್ರಾಸವಾಗಿದ್ದಾರೆ. ಕಿಡ್ನ್ಯಾಪ್ ಪ್ರಕರಣದಲ್ಲಿ (Kidnap Case) ಓರ್ವ ಪಾಲಿಕೆ ಸದಸ್ಯನನ್ನು ಪೊಲೀಸರು ವಿಚಾರಣೆಗೆ ಗುರಿಪಡಿಸಿದರೆ, ಮತ್ತೋರ್ವ ಸದಸ್ಯೆ ತನ್ನ ಪತಿ ವಿರುದ್ಧವೇ ಕೊಲೆ ಯತ್ನ (Murder Attempt) ಪ್ರಕರಣ ದಾಖಲಿಸಿದ್ದಾರೆ. ಈ ಇಬ್ಬರೂ ಪಾಲಿಕೆ ಸದಸ್ಯರು ಅಣ್ಣ - ತಂಗಿ ಅನ್ನೋದು ಮತ್ತೊಂದು ವಿಶೇಷ.

ಪಾಲಿಕೆ ಸದಸ್ಯೆಯ ಮೇಲೆ ಹಲ್ಲೆ ನಡೆಸಿ, ಕತ್ತು ಹಿಸುಕಿ ಕೊಲೆಗೆ ಯತ್ನಿಸಿದ ಆರೋಪ ಕೇಳಿ ಬಂದಿದೆ. ಪತಿ ವಿರುದ್ಧ ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆಯ 58 ನೇ ವಾರ್ಡ್ ಸದಸ್ಯೆ ದೂರು ನೀಡಿದ್ದಾರೆ. ಕಾಂಗ್ರೆಸ್ ನ ಶೃತಿ ಚಲುವಾದಿ ದೂರು ನೀಡಿದ ಪಾಲಿಕೆ ಸದಸ್ಯೆ.

ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪತಿ ಸಂತೋಷ್ ಚಲುವಾದಿಯಿಂದ ಹಲ್ಲೆ, ಕೊಲೆ ಯತ್ನ ಮಾಡಿದ್ದಾನೆಂದು ಆರೋಪಿಸಲಾಗಿದೆ. ಅನ್ಯ ಮಹಿಳೆಯೊಂದಿಗೆ ಮಾತನಾಡುವ, ಚಾಟ್ ಮಾಡುವ ವಿಚಾರಕ್ಕೆ ಗಂಡ - ಹೆಂಡತಿ ನಡುವೆ ವಾಗ್ವಾದ ನಡೆದಿದೆ.

ಇದನ್ನೂ ಓದಿ:  Crime News: ಅಪ್ಪನ ಬೆಟ್ಟಿಂಗ್ ವ್ಯವಹಾರ ತಾಯಿಗೆ ಹೇಳಿದ್ದೇ ತಪ್ಪಾಯ್ತು; ಮಗನೆಂದು ಕುರುಣೆಯಿಲ್ಲದೆ ಕೊಂದ ಪಾಪಿ ತಂದೆ

ಕತ್ತು ಹಿಸುಕಿ ಕೊಲೆ ಯತ್ನ

ಇದೇ ವಿಚಾರವಾಗಿ ಜಗಳ ಮುಂದುವರಿದು ಶೃತಿಯನ್ನು ಹೊರ ಹೋಗದಂತೆ ಪತಿ ಸಂತೋಷ್ ಕೋಣೆಯಲ್ಲಿ ಕೂಡಿಹಾಕಿದ್ದ ಎನ್ನಲಾಗಿದೆ. ಗರ್ಭಿಣಿ ಎಂಬುದನ್ನೂ ಲೆಕ್ಕಿಸದೇ ಮನಬಂದಂತೆ ಥಳಿಸಿ ಕೂಡಿ ಹಾಕಿದ್ದಾನೆ.  ನನಗೆ ಸ್ಟೇಶನ್ ಜೈಲು ಹೊಸದೇನೂ ಅಲ್ಲ. ಯಾವ ಪೊಲೀಸ್ ಠಾಣೆಗೆ ಬೇಕಿದ್ರೂ ದೂರು ನೀಡು. ನಿನ್ನ ಜೊತೆ ನಿನ್ನ ಅಣ್ಣನನ್ನೂ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆಂದು ಆರೋಪಿಸಿದ್ದಾರೆ. ಜಗಳ ವಿಕೋಪಕ್ಕೆ ಹೋಗಿ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ್ದಾನೆಂದು ಶೃತಿ ದೂರು ನೀಡಿದ್ದಾರೆ.

ಪ್ರೀತಿಸಿ ಮದುವೆಯಾಗಿದ್ದ

ದೂರು ಆಧರಿಸಿ ಸಂತೋಷ್ ಚಲವಾದಿಯನ್ನು ಬಂಧಿಸಿರುವ ಕೇಶ್ವಾಪುರ ಠಾಣೆ ಪೊಲೀಸರು ತನಿಖೆ ನಡೆಸಿದ್ದಾರೆ. ವಿನಯ್ ಪಿಳ್ಳೆ ಮತ್ತು ಕುಮಾರ ಪಿಳ್ಳೆ ಕೊಲೆ ಪ್ರಕರಣದಲ್ಲಿ ಸಂತೋಷ್ ಚಲುವಾದಿ ಬಂಧಿತನಾಗಿದ್ದ. ಇತ್ತೀಚೆಗಷ್ಟೇ ನ್ಯಾಯಾಲಯದಿಂದ ಜಾಮೀನು ಪಡೆದು ಹೊರಗೆ ಬಂದಿದ್ದ. ಶೃತಿ ಚಲುವಾದಿಯ ಸಹೋದರ ಚೇತನ್ ಹಿರೇಕೆರೂರ ಸಹ ಪಾಲಿಕೆ ಸದಸ್ಯನಾಗಿದ್ದಾನೆ. ಸಂತೋಷ್ ಚಲುವಾದಿಯನ್ನು ಶೃತಿ ಪ್ರೀತಿಸಿ ಮದುವೆಯಾಗಿದ್ದಳು.

ಗೋಕುಲ ರೋಡ್ ಪೊಲೀಸರಿಂದ ಕಳ್ಳರ ಬಂಧನ

ಗೋಕುಲ ರೋಡ್ ಠಾಣೆ ಪೊಲೀಸರ ಕಾರ್ಯಾಚರಣೆ ನಡೆಸಿ ಕುಖ್ಯಾತ ಸರಗಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸರಗಳ್ಳತನ ಮಾಡಿ ತಲೆಮರೆಸಿಕೊಂಡಿದ್ದ ಐವರನ್ನು ಬಂಧಿಸಲಾಗಿದೆ. ಬಂಧಿತರಿಂದ 150 ಗ್ರಾಂ ಚಿನ್ನ, ಒಂದು ಬೈಕ್, ಒಂದು ಕಾರು ವಶಪಡಿಸಿಕೊಳ್ಳಲಾಗಿದೆ.

ಕೊಲ್ಹಾಪುರ, ಧಾರವಾಡ, ಹುಬ್ಬಳ್ಳಿ ಹಾಗೂ ಬೆಳಗಾವಿಗಳಲ್ಲಿ ಸರಗಳ್ಳತನ ಮಾಡಿದ್ದ ಆರೋಪಿಗಳು ತಲೆಮರೆಸಿಕೊಂಡಿದ್ದರು. ಪೊಲೀಸ್ ಇನ್ಸ್ ಪೆಕ್ಟರ್ ಜೆ ಎಂ ಕಾಲಿಮಿರ್ಚಿ ನೇತೃತ್ವದಲ್ಲಿ ಕಾರ್ಯಚರಣೆ ಮಾಡಿ ಬಂಧಿಸಲಾಗಿದೆ. ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಇದನ್ನೂ ಓದಿ:  Paying guest: ಧಾರವಾಡದಲ್ಲಿ ಎರಡು ಸಾವಿರಕ್ಕೂ ಅಧಿಕ ಪಿಜಿಗಳಿಗೆ ನೋಟಿಸ್ ನೀಡಲು ಮುಂದಾದ ಪಾಲಿಕೆ

ಪ್ರೇಮ ವೈಫಲ್ಯದಿಂದ ಯುವಕ ಆತ್ಮಹತ್ಯೆ

ಪ್ರೇಮ ವೈಫಲ್ಯದಿಂದ ಯುವಕನೋರ್ವ ಆತ್ಮಹತ್ಯೆಗೆ ಶರಣಾದ ಘಟನೆ ಹುಬ್ಬಳ್ಳಿ ತಾಲೂಕಿನ ನೂಲ್ವಿ ಗ್ರಾಮದಲ್ಲಿ ನಡೆದಿದೆ. ಮೃತ ದುರ್ದೈವಿಯನ್ನು ಕೊಟ್ರೇಶ್ ಮಠಪತಿ (20) ಎಂದು ಗುರುತಿಸಲಾಗಿದೆ. ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಕೊಟ್ರೇಶ್, ಅದೇ ಗ್ರಾಮದ ಯುವತಿಯನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ.

ಆದರೆ ಪ್ರೀತಿಸಿದ ಹುಡುಗಿಯ ಮದುವೆ ಬೇರೆಯವರೊಂದಿಗೆ ನಿಶ್ಚಯನಾಗಿದ್ದರಿಂದ ಮನನೊಂದ ಕೊಟ್ರೇಶ್ ಗ್ರಾಮದ ಹೊರವಲಯದಲ್ಲಿರೋ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಶರಣಾಗಿದ್ದಾನೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
Published by:Pavana HS
First published: