Hubballi: ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಸಂಭ್ರಮದ ಗಣೇಶೋತ್ಸವ, ಕುಣಿದು ಕುಪ್ಪಳಿಸಿದ ಮುತಾಲಿಕ್!

ಹುಬ್ಬಳ್ಳಿಯ ಈದ್ಗಾ ಮೈದಾನ ಗಣೇಶ ಮೂರ್ತಿ ವಿಸರ್ಜನೆ ಶಾಂತಿಯುತವಾಗಿ ಸಂಪನ್ನಗೊಂಡಿದೆ. ಗಣೇಶ ವಿಸರ್ಜನೆ ಹಿನ್ನೆಲೆಯಲ್ಲಿ ಈದ್ಗಾ ಮೈದಾನದ ಒಳಗೆ ಹಾಗೂ ಹೊರಗೆ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು. ಮೆರವಣಿಗೆಯಲ್ಲಿ ಸಾವರ್ಕರ್ ಫೋಟೋ ರಾರಾಜಿಸಿತು. ಪ್ರಮೋದ್ ಮುತಾಲಿಕ್ ಕುಣಿದು ಕುಪ್ಪಳಿಸಿದರು.

ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶ ಹಬ್ಬ

ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶ ಹಬ್ಬ

  • Share this:
ಹುಬ್ಬಳ್ಳಿಯಲ್ಲಿ ಒಂದಷ್ಟು ಆತಂಕಕ್ಕೆ ಕಾರಣವಾಗಿದ್ದ ಈದ್ಗಾ ಮೈದಾನದ ಗಣೇಶ ಮೂರ್ತಿ ಶಾಂತಿಯುತವಾಗಿ ವಿಸರ್ಜನೆಯಾಗಿದೆ. ಗಣೇಶ ವಿಸರ್ಜನೆ ಹಿನ್ನೆಲೆಯಲ್ಲಿ ಈದ್ಗಾ ಬಳಿ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು. ಈದ್ಗಾ ಮೈದಾನದ ಗಣೇಶೋತ್ಸವದ ವೇಳೆ ಸಾವರ್ಕರ್ ಫೋಟೋ ಹಾಕಿ ನಂತರ ದಿಢೀರಾಗಿ ತೆಗೆದಿದ್ದ ಆಯೋಜಕರು ವಿಸರ್ಜನಾ ಮೆರವಣಿಗೆ ವೇಳೆ ಫೋಟೋ ಹಿಡಿದು ಕುಣಿದು ಕುಪ್ಪಳಿಸಿದರು. ಮದ್ಯಾಹ್ನ 12 ಗಂಟೆಗೆ ಈದ್ಗಾ ಮೈದಾನದಿಂದ ಹೊರಟ ಮೆರವಣಿಗೆ ಸಂಜೆ 4.45 ರ ವೇಳೆಗೆ ಇಂದಿರಾ ಗ್ಲಾಸ್ ಹೌಸ್ ಬಳಿಯ ಬಾವಿ ಬಳಿ ತಲುಪಿತು. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ಮತ್ತಿತರರು ಪೂಜೆ ನೆರವೇರಿಸಿ, ಗಣೇಶ ಮೂರ್ತಿ ವಿಸರ್ಜಿಸಿದರು.

ಹುಬ್ಬಳ್ಳಿಯ ಈದ್ಗಾ ಮೈದಾನ ಗಣೇಶ ಮೂರ್ತಿ ವಿಸರ್ಜನೆ ಶಾಂತಿಯುತವಾಗಿ ಸಂಪನ್ನಗೊಂಡಿದೆ. ಗಣೇಶ ವಿಸರ್ಜನೆ ಹಿನ್ನೆಲೆಯಲ್ಲಿ ಈದ್ಗಾ ಮೈದಾನದ ಒಳಗೆ ಹಾಗೂ ಹೊರಗೆ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಮಾರ್ಗದುದ್ದಕ್ಕೂ ಪೊಲೀಸ್ ಭದ್ರತೆ ಕೈಗೊಳ್ಳಲಾಗಿತ್ತು.

ಈದ್ಗಾ ಮೈದಾನದಲ್ಲಿ ಸಂಭ್ರಮ
ಕೇವಲ ನೂರು ಮೀಟರ್ ಅಂತರದ ಈದ್ಗಾ ಮೈದಾನ ರಾಣಿ ಚೆನ್ನಮ್ಮ ವೃತ್ತ ದಾಟಲು ಮೂರು ಗಂಟೆಗೂ ಹೆಚ್ಚು ಕಾಲ ತೆಗೆದುಕೊಳ್ಳಲಾಯಿತು. ಈದ್ಗಾ ಮೈದಾನದ ಬಳಿಯೇ ಹೆಚ್ಚಿನ ಸಮಯ ಕಳೆದು ಕುಣಿದು ಕುಪ್ಪಳಿಸಿದರು. ಕೊನೆಗೂ ಶಾಂತಿಯುತವಾಗಿ ವಿಸರ್ಜನೆಗೊಂಡಿದ್ದಕ್ಕೆ ಪೊಲೀಸರು ನಿಟ್ಟುಸಿರು ಬಿಟ್ಟರು.

Hubballi Idgah Maidan celebrated Ganesha festival danced pramod Muthalik
ಹುಬ್ಬಳ್ಳಿಯಲ್ಲಿ ಗಣೇಶೋತ್ಸವ


ಇದನ್ನೂ ಓದಿ: ಹುಬ್ಬಳ್ಳಿ ಗಣಪತಿಗೆ ನಾನ್​ವೆಜ್ ನೈವೇದ್ಯ! ಮಟನ್, ಚಿಕನ್, ಫಿಶ್, ಬಿರಿಯಾನಿ ಅರ್ಪಣೆ

ಮೆರವಣಿಗೆಯಲ್ಲಿ ರಾರಾಜಿಸಿದ ಸಾವರ್ಕರ್
ಈದ್ಗಾ ಮೈದಾನ ಗಣೇಶೋತ್ಸವ ಮೆರವಣಿಗೆಯಲ್ಲಿ ಸಾವರ್ಕರ್ ಫೋಟೋ ರಾರಾಜಿಸಿತು. ಸಾವರ್ಕರ್ ಫೋಟೋ ಹಿಡಿದು ಹಿಂದುಪರ ಸಂಘಟನೆ ಮುಖಂಡರು ಕುಣಿದು ಕುಪ್ಪಳಿಸಿದರು. ಈದ್ಗಾ ಮೈದಾನದ ಬಳಿಯೇ ಗಂಟೆಗಟ್ಟಲೆ ನಿಂತ ಗಣೇಶ ಮಹಾಮಂಡಳದ ಆಯೋಜಕರು, ಜನಪದ ಕಲಾ ತಂಡಗಳ ನೇತೃತ್ವದಲ್ಲಿ ಮೆರವಣಿಗೆ ನಡೆಸಿದರು.

ಈದ್ಗಾ ಬಳಿಯೇ ಗಂಟೆಗಟ್ಟಲೇ ಡ್ಯಾನ್ಸ್​
ಮಧ್ಯಾಹ್ನ 12 ಗಂಟೆಯವರೆಗೂ ಪಾಲಿಕೆ ಪ್ರತಿಷ್ಠಾಪನೆಗೆ ಅವಕಾಶ ನೀಡಿತ್ತು. ಈ ಹಿನ್ನೆಲೆಯಲ್ಲಿ 12 ಗಂಟೆಗೆ ಗಣೇಶ ಮೂರ್ತಿಯನ್ನು ಹೊರತಂದ ಆಯೋಜಕರು ಈದ್ಗಾ ಬಳಿಯೇ ಗಂಟೆಗಟ್ಟಲೆ ನಿಂತು ಕುಣಿದರು. ಒಂದೆಡೆ ಕೆಲವರು ಸಾವರ್ಕರ್ ಫೋಟೋ ಹಿಡಿದುಕೊಂಡು ಕುಣಿದರೆ, ಮತ್ತೊಂದೆಡೆ ಸಾವರ್ಕರ್ ಫ್ಲೆಕ್ಸ್ ಹಾಕಿ ಅಭಿಮಾನ ತೋರಲಾಯಿತು.

Hubballi Idgah Maidan celebrated Ganesha festival danced pramod Muthalik
ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ


ದರ್ಶನ ಪಡೆದ ಪ್ರಮೋದ್ ಮುತಾಲಿಕ್
ಗಣೇಶ ವಿಸರ್ಜನೆ ಮೆರವಣಿಗೆಯ ಮುನ್ನ ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಗಣೇಶನ ದರ್ಶನವನ್ನು ಪಡೆದುಕೊಂಡರು. ಶ್ರೀರಾಮಸೇನೆಯಿಂದ ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿದ ಮುತಾಲಿಕ್, ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.

ಮುರುಘಾ ಸ್ವಾಮೀಜಿಯ ಬಂಧನ ವಿಚಾರಕ್ಕೆ ಪ್ರತಿಕ್ರಿಯಿಸಿದ ಪ್ರಮೋದ್ ಮುತಾಲಿಕ್, ಕಾನೂನು ಚೌಕಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ. ಶ್ರೀಗಳ ಕಡೆಯವರು ಇದೊಂದು ಷಡ್ಯಂತ್ರ ಅಂತಾರೆ. ಸಂತ್ರಸ್ತರ ಕಡೆಯವರು ಪ್ರಕರಣ ದಾಖಲಿಸಿದ್ದಾರೆ. ತನಿಖೆಯಿಂದ ಸತ್ಯಾಸತ್ಯತೆ ಹೊರಬರಲಿದೆ ಎಂದರು.

ಹಿಂದೂಗಳೆಲ್ಲಾ ಒಂದಾಗಿದ್ದಾರೆ-ಮುತಾಲಿಕ್
ರಾಣಿ ಚನ್ನಮ್ಮ ಮೈದಾನದಲ್ಲಿನ ಗಣೇಶ ವಿಸರ್ಜನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಹಿಂದೂಗಳೆಲ್ಲಾ ಒಂದಾಗಿದ್ದಾರೆ. ಹುಬ್ಬಳ್ಳಿಯ ಜನ ಐತಿಹಾಸಿಕ ಘಟನೆಗೆ ಸಾಕ್ಷಿಯಾಗಿದ್ದಾರೆ. ಏನೋ ಅವಘಡ, ಗಲಾಟೆ ಆಗಿಬಿಡುತ್ತೆ ಅಂತ ಅಂಜೂಮನ್ ಸಂಸ್ಥೆ ಮತ್ತು ಕಾಂಗ್ರೆಸ್ ಆರೋಪ ಮಾಡಿತ್ತು.

ಇದನ್ನೂ ಓದಿ: ಆರ್​ಎಸ್​ಎಸ್​ ಹೊಗಳಿದ ಮಮತಾ ಬ್ಯಾನರ್ಜಿ; ಸಂಘದ ನಾಯಕರನ್ನು ಸೆಳೆಯುವ ಯತ್ನವೇ?

ಅತ್ಯಂತ ಶಾಂತಿಯುತವಾಗಿ ಗಣೇಶೋತ್ಸವ ನೆರವೇರಿದೆ. ಹಿಂದೂಗಳು ಶಾಂತಿಪ್ರಿಯರು ಅಂತ ಮತ್ತೊಮ್ಮೆ ಸಾಬೀತಾಗಿದೆ. ಹಿಂದೂಗಳ ಶಕ್ತಿ ಎಂತಹುದು ಅನ್ನೋದನ್ನ ತೋರಿಸಿದ್ದೇವೆ ಅಂತಾ ಮುತಾಲಿಕ್ ಹೇಳಿದ್ರು.

ಕುಣಿದು ಕುಪ್ಪಳಿಸಿದ ಮುತಾಲಿಕ್
ಗಣೇಶ ಮೂರ್ತಿ ವಿಸರ್ಜನೆ ವೇಳೆ ಪ್ರಮೋದ್ ಮುತಾಲಿಕ್ ಕುಣಿದು ಕುಪ್ಪಳಿಸಿದರು. ಶ್ರೀರಾಮ ಸೇಮೆ ಕಾರ್ಯಕರ್ತರ ಜೊತೆ ಸೇರಿ ಡೊಳ್ಳಿನ ಸದ್ದಿಗೆ ಹೆಜ್ಜೆ ಹಾಕಿದರು. ಭಗವಾಧ್ವಜ ಹಿಡಿದು ಸಂಭ್ರಮಾಚರಣೆ ಮಾಡಿದರು. ನಾಸಿಕ್ ಢೋಲ್ ಗೆ ಮುತಾಲಿಕ್ ಹೆಜ್ಜೆ ಹಾಕಿದರು.
Published by:Thara Kemmara
First published: