• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Hubballi: ಬಿಟ್ಟೂ ಬಿಡದ ಈದ್ಗಾ ವಿವಾದ, ಕಾಮಣ್ಣ ಪ್ರತಿಷ್ಠಾಪನೆಗೆ ಹಗ್ಗ ಜಗ್ಗಾಟ!

Hubballi: ಬಿಟ್ಟೂ ಬಿಡದ ಈದ್ಗಾ ವಿವಾದ, ಕಾಮಣ್ಣ ಪ್ರತಿಷ್ಠಾಪನೆಗೆ ಹಗ್ಗ ಜಗ್ಗಾಟ!

ಈದ್ಗಾ ಮೈದಾನ

ಈದ್ಗಾ ಮೈದಾನ

ಹುಬ್ಬಳ್ಳಿ ಈದ್ಗಾ ಮೈದಾನಕ್ಕೂ, ವಿವಾದಕ್ಕೂ ಬಿಟ್ಟೂ ಬಿಡದ ನಂಟು. ಇದೀಗ ಕಾಮಣ್ಣ ಮೂರ್ತಿ ಪ್ರತಿಷ್ಠಾಪನೆಗೆ ಹಗ್ಗ ಜಗ್ಗಾಟ ನಡೆದಿದ್ದು, ಅನುಮತಿ ನೀಡುವಂತೆ ಹಿಂದೂ ಪರ ಸಂಘಟನೆಗಳು ಪಟ್ಟು ಹಿಡಿದಿವೆ.

  • News18 Kannada
  • 5-MIN READ
  • Last Updated :
  • Hubli-Dharwad (Hubli), India
  • Share this:

ಹುಬ್ಬಳ್ಳಿ(ಮಾ.09): ಹುಬ್ಬಳ್ಳಿಯ ಈದ್ಗಾ ಮೈದಾನ (Hubballi Idgah Maidan), ಸದಾ ಒಂದಲ್ಲೊಂದು ವಿವಾದ ಒಡಲೊಳಗೆ ಬಚ್ಚಿಟ್ಟುಕೊಂಡ ಮೈದಾನ. ಕಳೆದ ಕೆಲ ದಿನಗಳ ಹಿಂದೆ ಟಿಪ್ಪು ಜಯಂತಿ ವಿಚಾರವಾಗಿ ಗಮನ ಸೆಳೆದ ಈದ್ಗಾ ಮೈದಾನ, ತದನಂತರ ಹೆಸರು ಬದಲಾವಣೆಯಲ್ಲೂ ಚರ್ಚೆಗೆ ಬಂದಿತ್ತು. ಈದ್ಗಾ ಮೈದಾನದ ಹೆಸರು ರಾಣಿ ಚೆನ್ನಮ್ಮ (Rani Chennamma)  ಎಂದು ಪಾಲಿಕೆ ನಾಮಕರಣ ಮಾಡಲು ಮುಂದಾಗದ್ದೇ, ವಿವಾದಕ್ಕೆ ಕೇಂದ್ರವಾಗಿತ್ತು. ಆದ್ರೆ ಇದೀಗ ಹೋಳಿ ವಿಷಯವಾಗಿ ಮತ್ತೆ ಈದ್ಗಾ ಮೈದಾನದ ವಿವಾದ ಮುನ್ನೆಲೆಗೆ ಬಂದಿದೆ. ಪಾಲಿಕೆ ಮೇಯರ್ (Mayor), ಕಾಮಣ್ಣನ ಪ್ರತಿಷ್ಠಾಪನೆಗೆ ಅವಕಾಶ ಕೊಟ್ರೆ, ಪಾಲಿಕೆ ಅಧಿಕಾರಿಗಳು ಅನುಮತಿ ಕೊಟ್ಟಿಲ್ಲ. ಇದು ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.


ಒಂದು ಕಡೆ ಈದ್ಗಾ ಮೈದಾನದ ಮುಂಭಾಗ ಪ್ರತಿಭಟನೆ ಮಾಡ್ತಿರೋ ಹಿಂದೂ ಸಂಘಟನೆಗಳು. ಮತ್ತೊಂದು ಕಡೆ ಈದ್ಗಾ ಮೈದಾನದಲ್ಲಿ ಅನುಮತಿ ನೀಡಲಾಗಿದೆ ಎನ್ನುತ್ತಿರೋ ಮೇಯರ್.  ಹುಬ್ಬಳ್ಳಿಯ ಈದ್ಗಾ ಮೈದಾನ ಮತ್ತೊಮ್ಮೆ ವಿವಾದಕ್ಕೆ ಕಾರಣವಾಗಿದೆ. ಮೇಯರ್ ಹಾಗೂ ಪಾಲಿಕೆ ಆಯುಕ್ತರ ಕಂದಕ ಇದೀಗ ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.


ಇದನ್ನೂ ಓದಿ: Holi 2023: ಇವರೇ ಚಿಗುರು ಮೀಸೆಯ ಮನ್ಮಥ, ಸುಂದರ ಕಾಂತಿಯ ರತಿಯ ಸೃಷ್ಟಿಕರ್ತರು!


ಪಾಲಿಕೆ ಮೇಯರ್ ಈರೇಶ್ ಅಂಚಟಗೇರಿ ಈದ್ಗಾ ಮೈದಾನದಲ್ಲಿ ಮೂರು ದಿನಗಳ ಕಾಮಣ್ಣನ ಪ್ರತಿಷ್ಠಾಪನೆಗೆ ಅನುಮತಿ ನೀಡಲಾಗಿದೆ ಎಂದಿದ್ರು. ಕೆಲ ಷರತ್ತು ವಿಧಿಸಿ 9 ರಿಂದ 11 ದಿನರ ವರೆಗೂ ಮೂರು ದಿನಗಳ ಕಾಲ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಕಾಮಣ್ಣನ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ನೀಡಿದ್ರು.




ರಾಣಿ ಚೆನ್ನಮ್ಮ ಮೈದಾನ ಗಜಾನನ ಉತ್ಸವ ಮಹಾ ಮಂಡಳಿ ಯಿಂದ ಅನುಮತಿ ಕೇಳಿ ಮನವಿ ಮಾಡಿದ್ವು, ಇದಕ್ಕೆ ಪಾಲಿಕೆ ಮೇಯರ್ ಅನುಮತಿ ನೀಡಿದ್ದೇವೆ ಎಂದಿದ್ದರು. ಆದ್ರೆ ಪಾಲಿಕೆ ಆಯುಕ್ತ ಇದುವರೆಗೂ ಅನುಮತಿ ಆದೇಶದ ಪ್ರತಿ ನೀಡಿದೆ ಇರೋದು ಹಿಂದೂ ಸಂಘಟನೆಗಳ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿತ್ತು. ಮೇಯರ್ ಅನುಮತಿ ನೀಡಿದ್ರೂ, ಪಾಲಿಕೆ ಆಯುಕ್ತರು ಅನುಮತಿ ನೀಡದೆ ಇರೋದನ್ನ ಖಂಡಿಸಿ ಹಿಂದೂ ಪರ ಸಂಘಟನೆಗಳು ಈದ್ಗಾ ಮೈದಾನದ ಮುಂಭಾಗ ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಪಾಲಿಕೆ ಆಯುಕ್ತರು, ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ವಿರುದ್ದ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.


ಇದನ್ನೂ ಓದಿ: ಮದುವೆ, ಮಕ್ಕಳು ಆಗದಿದ್ರೆ ತಪ್ಪದೇ ಕಾಮಣ್ಣನ ಆಶೀರ್ವಾದ ಪಡೆಯಿರಿ! ಈ ಊರಲ್ಲಿದೆ ದೇಗುಲ


ಇನ್ನು ಈದ್ಗಾ ಮೈದಾನದಲ್ಲಿ ಈ ಹಿಂದೆ ಟಿಪ್ಪು ಜಯಂತಿಗೆ ಅವಕಾಶ ಕೊಡಲಾಗಿತ್ತು. ಹೀಗಾಗಿ ಹಿಂದೂ ಸಂಘಟನೆಗಳು ನಮಗೂ ಕಾಮಣ್ಣನ ಮೂರ್ತಿ ಪ್ರತಿಷ್ಠಾಪನೆ ಮಾಡಲು ಅವಕಾಶ ಕೇಳಿ ಮನವಿ ಮಾಡಿಕೊಂಡಿದ್ರು. ಇದನ್ನು ಪರಿಶೀಲಿಸಿ ಪಾಲಿಕೆ ಸರ್ವ ಸದಸ್ಯರು ಮೂರು ದಿನಗಳ ಕಾಲ ಕಾಮಣ್ಣನ ಮೂರ್ತಿ ಪ್ರತಿಷ್ಠಾಪನೆ ಮಾಡಲು ಅವಕಾಶ ಕೊಟ್ಟಿದ್ವು. ಹಲವು ಷರತ್ತು ವಿಧಿಸಿ ಪಾಲಿಕೆ ಸರ್ವ ಸದಸ್ಯರು ಟಿಪ್ಪು ಜಯಂತಿಗೆ ಅವಕಾಶ ಕೊಟ್ಟ ಹಿನ್ನಲೆ ಕಾಮಣ್ಣನ ಮೂರ್ತಿ ಪ್ರತಿಷ್ಟಾಪನೆ ಮಾಡೋದಕ್ಕೆ ಅನುಮತಿ ಕೊಟ್ಟಿತ್ತು. ಅನುಮತಿ ನೀಡಲಾಗಿದೆ ಎಂದು ಮೇಯರ್ ಆದೇಶದ ಹೊರಡಿಸಿದ್ರು. ಆದ್ರೆ ರಾತ್ರಿ ಕಳೆದರೂ ಪಾಲಿಕೆ ಆಯುಕ್ತ ಸಂಘಟನೆಗಳಿಗೆ ಅನುಮತಿ ಕೊಟ್ಟಿಲ್ಲ. ಇದನ್ನು ಖಂಡಿಸಿ ಹಿಂದೂ ಸಂಘಟನೆಗಳು ಈದ್ಗಾ ಮೈದಾನದಲ್ಲಿ ನಾವು ಕಾಮಣ್ಣನ ಮೂರ್ತಿ ಪ್ರತಿಷ್ಠಾಪನೆ ಮಾಡೇ ಮಾಡ್ತೀವಿ ಎಂದು ಪಟ್ಟು ಹಿಡಿದಿದ್ದಾರೆ.




ಒಟ್ಟಾರೆಯಾಗಿ ಟಿಪ್ಪು ಸುಲ್ತಾನ ಜಯಂತಿ ಆಚರಣೆ ವಿಚಾರವಾಗಿ ಸುದ್ದಿಯಾಗಿದ್ದ ಈದ್ಗಾ ಮೈದಾನ ಕಾಮಣ್ಣನ ಮೂರ್ತಿ ಪ್ರತಿಷ್ಠಾಪನೆ ವಿಚಾರವಾಗಿ ಮತ್ತೆ ಮುನ್ನಲೆಗೆ ಬಂದಿದೆ. ಒಂದು ಕಡೆ ಪಾಲಿಕೆ ಮೇಯರ್ ಅನುಮತಿ ಕೊಟ್ರೆ, ಆಯುಕ್ತ ಅನುಮತಿ ನೀಡದಿರುವುದು ಹಲವಾರು ಅನುಮಾನಕ್ಕೆ ಕಾರಣವಾಗಿದೆ. ಇನ್ನು 12 ರಂದು ಧಾರವಾಡಕ್ಕೆ ಮೋದಿ ಬರೋ ಕಾರಣ ಭದ್ರತೆ ದೃಷ್ಟಿಯಿಂದ ಪಾಲಿಕೆ ಆಯುಕ್ತರು ಅನುಮತಿ ನೀಡಿಲ್ಲ ಎನ್ನಲಾಗ್ತಿದೆ. ಅಧಿಕಾರಿಗಳು ಟಿಪ್ಪು ವಂಶಸ್ಥರು ಎಂದು ಹಿಂದೂ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅನುಮತಿ ಸಿಗದೆ ಹೋದ್ರು, ನಾವು ಕಾಮಣ್ಣನ ಪ್ರತಿಷ್ಠಾಪನೆ ಮಾಡೇ ಮಾಡ್ತೀವಿ ಅನ್ನೋದು ಸಂಘಟಕರ ವಾದ. ಈ ವಿವಾದ ಎಲ್ಲಿಗೆ ತಲುಪುತ್ತೋ ಕಾದು ನೋಡಬೇಕಿದೆ.

Published by:Precilla Olivia Dias
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು