• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Hubballi: ಮತ್ತೆ ಹುಬ್ಬಳ್ಳಿ ಈದ್ಗಾ ವಿವಾದ ಮುನ್ನಲೆಗೆ; ಚುನಾವಣಾ ಹೊಸ್ತಿಲಲ್ಲಿ ಕಿತ್ತೂರು ರಾಣಿ ಚೆನ್ನಮ್ಮ‌ ಮೈದಾನ ಮಾಡಲು ಹೊರಟ ಬಿಜೆಪಿ!

Hubballi: ಮತ್ತೆ ಹುಬ್ಬಳ್ಳಿ ಈದ್ಗಾ ವಿವಾದ ಮುನ್ನಲೆಗೆ; ಚುನಾವಣಾ ಹೊಸ್ತಿಲಲ್ಲಿ ಕಿತ್ತೂರು ರಾಣಿ ಚೆನ್ನಮ್ಮ‌ ಮೈದಾನ ಮಾಡಲು ಹೊರಟ ಬಿಜೆಪಿ!

ಹುಬ್ಬಳ್ಳಿ ಈದ್ಗಾ ಮೈದಾನ

ಹುಬ್ಬಳ್ಳಿ ಈದ್ಗಾ ಮೈದಾನ

ಹುಬ್ಬಳ್ಳಿ ಈದ್ಗಾ ಮೈದಾನ ಒಂದಲ್ಲ‌ ಒಂದು ಕಾರಣಕ್ಕೆ‌ ಸುದ್ದಿಯಲ್ಲಿರುತ್ತೆ. ಇದೀಗ ಈದ್ಗಾ ಮೈದಾನವನ್ನು ಚೆನ್ನಮ್ಮ ಮೈದಾನ ಮಾಡಲು ಬಿಜೆಪಿ ಹೊರಟಿದ್ದು, ಚುನಾವಣೆ ಹೊಸ್ತಿಲಲ್ಲಿ ಮಾಡುತ್ತಿರುವ ಉದ್ದೇಶ ಆದರೂ ಏನು ಎಂಬ ಪ್ರಶ್ನೆ ಎದುರಾಗಿದೆ.

  • News18 Kannada
  • 5-MIN READ
  • Last Updated :
  • Hubli-Dharwad (Hubli), India
  • Share this:

ಹುಬ್ಬಳ್ಳಿ: ನಗರದ ಈದ್ಗಾ ಮೈದಾನ (Idgah Maidan) ವಿವಾದ ಮತ್ತೆ ಮುನ್ನಲೆಗೆ ಬಂದಿದೆ. ಚುನಾವಣೆ ಹೊಸ್ತಿಲಲ್ಲಿ (Karnataka Election) ಬಿಜೆಪಿ (BJP) ಈದ್ಗಾ ಮೈದಾನದ ಹೆಸರಲ್ಲಿ ರಾಜಕಾರಣಕ್ಕೆ (Karnataka Politics) ಮುಂದಾಗಿರೋದು ಚರ್ಚೆಗೆ ಗ್ರಾಸವಾಗಿದೆ. ಈದ್ಗಾ ಮೈದಾನ ವಿವಾದ (Controversy) ಬಿಜೆಪಿಗೆ ಟರ್ನಿಂಗ್ ಪಾಯಿಂಟ್ ಆಗಿತ್ತು. ಇದೀಗ ಈದ್ಗಾ ಮೈದಾನದ ಹೆಸರು ಬದಲಾಯಿಸಲು ಬಿಜೆಪಿ ಮುಂದಾಗಿದೆ. ಚುನಾವಣಾ ಹೊಸ್ತಿಲಲ್ಲಿ ಇದೆಲ್ಲಾ ಏನು ಅಂತ ಪ್ರತಿಪಕ್ಷಗಳು ಪ್ರಶ್ನಿಸಿವೆ.


ಈದ್ಗಾ ಮೈದಾನಕ್ಕೆ ಮರು ನಾಮಕರಣ ಮಾಡಲು ಪ್ರಸ್ತಾವನೆ


ಹುಬ್ಬಳ್ಳಿಯ ಈದ್ಗಾ ಮೈದಾನಕ್ಕೆ ಮರು ನಾಮಕರಣ ಮಾಡಲು ಪ್ರಸ್ತಾವನೆ ಸಲ್ಲಿಸಿದೆ. ಕಿತ್ತೂರ ರಾಣಿ ಚೆನ್ನಮ್ಮ ಮೈದಾನ ಎಂದು ನಾಮಕರಣ ಮಾಡಲು ಮಹಾನಗರ ಪಾಲಿಕೆ ಮುಂದಾಗಿದೆ. ವಾರ್ಡ್ ನಂಬರ್ 57 ರಲ್ಲಿ ಚೆನ್ನಮ್ಮ ವೃತ್ತದ ಪಕ್ಕದಲ್ಲಿ ಈದ್ಗಾ ಮೈದಾನವಿದೆ. ಧ್ವಜಾರೋಹಣ ವಿಚಾರದಲ್ಲಿ ವಿವಾದಕ್ಕೆ ತುತ್ತಾಗಿದ್ದ ಈದ್ಗಾ ಮೈದಾನ ರಾಷ್ಟ್ರದ ಗಮನ ಸೆಳೆದಿತ್ತು. ಗಣೇಶ ಮೂರ್ತಿ ಪ್ರತಿಷ್ಠಾಪನೆ, ಟಿಪ್ಪು ಜಯಂತಿ ಆಚರಣೆ ಕಾರಣದಿಂದಲೂ ಈದ್ಗಾ ಮೈದಾನ ಸದ್ದು ಮಾಡಿತ್ತು.


ಕಿತ್ತೂರು ರಾಣಿ ಚೆನ್ನಮ್ಮ


ಇದನ್ನೂಓದಿ: Actress Abhinaya: ವರದಕ್ಷಿಣೆ ಕೇಸಲ್ಲಿ ಜೈಲು ಸೇರುವ ಭೀತಿ, ಪೊಲೀಸರಿಗೆ ಸಿಗದೇ ತಲೆಮರೆಸಿಕೊಂಡ ಅಭಿನಯ! ಖ್ಯಾತ ನಟಿ ಪತ್ತೆಗೆ ಲುಕ್‌ ಔಟ್ ನೋಟಿಸ್ ಜಾರಿ


ಈಗ ಮೈದಾನಕ್ಕೆ ಕಿತ್ತೂರ ರಾಣಿ ಚೆನ್ನಮ್ಮ ಮೈದಾನ ಎಂದು ನಾಮಕರಣ ಮಾಡಲು ಬಿಜೆಪಿ ಆಡಳಿತವಿರುವ ಮಹಾನಗರ ಪಾಲಿಕೆ ಮುಂದಾಗಿದೆ. ಪಾಲಿಕೆ ಸಾಮಾನ್ಯ ಸಭೆಯಲ್ಲಿ ಸದ್ದಿಲ್ಲದೆ ಬಿಜೆಪಿ ಸದಸ್ಯರು ಠರಾವು ಪಾಸು ಮಾಡಿದ್ದಾರೆ. ಠರಾವು ಪಾಸ್ ಮಾಡಿದ್ದು ಆಗಸ್ಟ್ ತಿಂಗಳಲ್ಲಿ. ಆರು ತಿಂಗಳ ನಂತರ ಇದೀಗ ಆಕ್ಷೇಪಣೆಗಳಿಗೆ ಆಹ್ವಾನ ಮಾಡಲಾಗಿದೆ.


ಆಕ್ಷೇಪಣೆ ಸಲ್ಲಿಸಲು 30 ದಿನಗಳ ಕಾಲಾವಕಾಶ


30 ದಿನಗಳ ಒಳಗಾಗಿ ಪಾಲಿಕೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ‌. ವಲಯ ಕಛೇರಿ 08 ರಲ್ಲಿ ಆಕ್ಷೇಪಣೆ ಸಲ್ಲಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ನಿಗದಿತ ಅವಧಿ ನಂತರ ಬಂದ ಸಲಹೆ, ಸೂಚನೆ, ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಮಹಾನಗರ ಪಾಲಿಕೆ ವಲಯ ಆಯುಕ್ತರು ಪ್ರಕಟಣೆ ನೀಡಿದ್ದಾರೆ.


ಕಾಂಗ್ರೆಸ್​​, ಎಂಐಎಂನಿಂದ ತೀವ್ರ ವಿರೋಧ


ಇದಕ್ಕೆ ಕಾಂಗ್ರೆಸ್ ಹಾಗೂ ಎಂ.ಐ.ಎಂ ಪಾಲಿಕೆ ಸದಸ್ಯರ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಗೆ ಹೆಸರು ಬದಲಾಯಿಸೋದು ಬಿಟ್ರೆ ಬೇರೆ ಗೊತ್ತಿಲ್ಲ. ಈದ್ಗಾ ಮೈದಾನದ ಮೂಲಕವೇ ಬಿಜೆಪಿ ರಾಜಕೀಯ ಏಳ್ಗೆ ಕಂಡಿದೆ. ಇದೀಗ ಈದ್ಗಾ ಹೆಸರಲ್ಲಿ ಮತ್ತೆ ರಾಜಕಾರಣ ಆರಂಭಿಸಿದೆ. ವಿಧಾನಸಭೆ ಚುನಾವಣೆಯಲ್ಲಿ ಲಾಭ ಮಾಡಿಕೊಳ್ಳಲು ಈದ್ಗಾ ಮೈದಾನ ರಾಜಕಾರಣ ಮಾಡುತ್ತಿದೆ. ಇದರಿಂದ ಚುನಾವಣೆಯಲ್ಲಿ ಬಿಜೆಪಿಗೆ ಯಾವುದೇ ಲಾಭವಾಗಲ್ಲ ಎಂದು ಪಾಲಿಕೆ ಸದಸ್ಯ, ಕಾಂಗ್ರೆಸ್ ನ ಆರೀಫ್ ಭದ್ರಾಪುರ ಅಭಿಪ್ರಾಯಪಟ್ಟಿದ್ದಾರೆ‌.




ಹೋರಾಟದ ಎಚ್ಚರಿಕೆ!


ಯಾವುದೇ ಈದ್ಗಾ ಮೈದಾನದ ಹೆಸರು ಬದಲಾಯಿಸೋಕೆ ಬಿಡಲ್ಲ ಎಂದು  ಎಐಎಂಐಎಂ ಪಾಲಿಕೆ ಸದಸ್ಯ ಹಾಗೂ ಎಂಐಎಂ ಜಿಲ್ಲಾಧ್ಯಕ್ಷ ನಜೀರ್ ಅಹ್ಮದ್ ಹೊನ್ಯಾಳ್ ಎಚ್ಚರಿಸಿದ್ದಾರೆ. ಪಾಲಿಕೆ ಹೊರಗೆ ಮತ್ತು ಪಾಲಿಕೆ ಒಳಗೆ ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ.


ಇದನ್ನೂ ಓದಿ: G Parameshwar: 'ಸಿಎಂ ಆಗೋ ಲಕ್ಷಣ ಕಾಣಿಸುತ್ತಿಲ್ಲ ಗಡ್ಡ ಬೋಳಿಸು' -ಕಾಯಕರ್ತರ ಪ್ರೀತಿ ಕಂಡು ಕಣ್ಣೀರಿಟ್ಟ ಜಿ ಪರಮೇಶ್ವರ್


ಕಾಂಗ್ರೆಸ್, ಎಂಐಎಂ ಆರೋಪಿಸಿದಂತೆ ಇದರಲ್ಲಿ ಯಾವುದೇ ರಾಜಕಾರಣವಿಲ್ಲ. ಚುನಾವಣೆಗಾಗಿ ಮೈದಾನದ ಹೆಸರು ಬದಲಾಯಿಸ್ತಿಲ್ಲ. ಆರು ತಿಂಗಳ ಹಿಂದೆಯೇ ಪಾಲಿಕೆ ಸಭೆಯಲ್ಲಿ ಠರಾವು ಪಾಸ್ ಮಾಡಲಾಗಿತ್ತು. ಇದೀಗ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಸಾರ್ವಜನಿಕರು ಮಾಡಿಕೊಂಡ ಮನವಿ ಮೇರೆಗೆ, ಸರ್ಕಾರದ ಮಾರ್ಗದರ್ಶನ ಪಡೆದು ಮೈದಾನದ ಹೆಸರು ಬದಲಾಯಿಸಲು ಮುಂದಾಗಿದ್ದೇವೆ ಎಂದು ಉಪ ಮೇಯರ್ ಉಮಾ ಮುಕುಂದ ತಿಳಿಸಿದ್ದಾರೆ.


ಈದ್ಗಾ ಮೈದಾನದ ಹೆಸರು ಬದಲಿಸೋದಾದ್ರೆ ಚನ್ನಮ್ಮ - ಸಂಗೊಳ್ಳಿ ರಾಯಣ್ಣ ಮೈದಾನ ಅಂತ ಮಾಡಿ ಎಂದು ಕೆಲ ಕನ್ನಡಪರ ಸಂಘಟನೆಗಳು ಆಗ್ರಹಿಸಿವೆ. ಒಟ್ಟಾರೆ ಈದ್ಗಾ ಮೈದಾನ ಮತ್ತೆ ವಿವಾದದ ಸ್ವರೂಪ ಪಡೆಯೋದು ಖಚಿತವಾಗಿದೆ. ಈದ್ಗಾ ಮೈದಾನ ಮತ್ತೆ ವಿವಾದದ ಕೇಂದ್ರವಾಗಿದೆ.

Published by:Sumanth SN
First published: