ಹುಬ್ಬಳ್ಳಿ: ಅವಳಿ ನಗರಗಳಾದ ಹುಬ್ಬಳ್ಳಿ – ಧಾರವಾಡ (Hubballi-Dharwad) ನಡುವೆ ಸಂಚರಿಸಲಿರೊ ಚಿಗರಿ ಬಸ್‌ಗಳಲ್ಲಿ (Chigari Bus) ಉಚಿತ ಪ್ರಯಾಣಕ್ಕೆ (Free Travel) ಅವಕಾಶವಿಲ್ಲ. ಈ ಬಸ್‌ಗಳಲ್ಲಿ ಮಹಿಳೆಯರಿಗೆ (Women) ಉಚಿತ ಪ್ರಯಾಣಕ್ಕೆ ಅವಕಾಶವಿಲ್ಲದಿರೋದು ಅಸಮಾಧಾನಕ್ಕೆ ಕಾರಣವಾಗಿದೆ. ಹುಬ್ಬಳ್ಳಿ - ಧಾರವಾಡ ರಾಜ್ಯದ ಎರಡನೇ ಅತಿದೊಡ್ಡ ಮಹಾನಗರವಾಗಿದೆ. ಬಿಆರ್ಟಿಎಸ್ ಯೋಜನೆ (BRTC Scheme) ಸರಕಾರಕ್ಕೆ ತಲೆನೋವಾಗಿದೆ. ಈಗಾಗಲೇ ರಾಜ್ಯ ಸಾರಿಗೆ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಯೋಜನೆ ಘೋಷಣೆ ಮಾಡಿದೆ. ಎಸಿ ಬಸ್ ಆಗಿರುವ ಕಾರಣಕ್ಕೆ ಉಚಿತ ಪ್ರಯಾಣಕ್ಕೆ ಅವಕಾಶ ಇಲ್ಲ ಎಂದು ಹೇಳಲಾಗುತ್ತಿದೆ. ಆದರೆ ಚಿಗರಿ ಬಸ್ನಲ್ಲೂ ಫ್ರೀ ಬಿಡುವಂತೆ ಮಹಿಳೆಯರು ಆಗ್ರಹಿಸ್ತಿದಾರೆ.
ಎಲ್ಲಾ ಬಸ್ ರೀತಿಯಲ್ಲಿಯೇ ಫ್ರೀ ಬಿಡಬೇಕು. ಹುಬ್ಬಳ್ಳಿ ಧಾರವಾಡ ಜನತೆ ಚಿಗರಿ ಬಸ್‌ನಲ್ಲಿ ಜಾಸ್ತಿ ಓಡಾಡುವ ಹಿನ್ನೆಲೆಯಲ್ಲಿ ಫ್ರೀ ಬಿಡುವಂತೆ ಆಗ್ರಹಿಸ್ತಿದಾರೆ.
ಸರ್ಕಾರ ಆದೇಶದ ಪ್ರಕಾರ ಎಸಿ ಬಸ್‌ನಲ್ಲಿ ಫ್ರೀ ಇಲ್ಲ, ಹೀಗಿದ್ದರೂ ಬಿಆರ್ಟಿಎಸ್ ಬಸ್ ಗಳಲ್ಲಿ ಶಕ್ತಿ ಸ್ಕೀಮ್ ನಲ್ಲಿ ಅನುಮತಿ ನೀಡಲು ಮನವಿ ಮಾಡಿರೋದಾಗಿ NWKRTC ಎಂಡಿ ಭರತ್ ತಿಳಿಸಿದ್ದಾರೆ. ಸರ್ಕಾರದ ಆದೇಶದವರೆಗೂ ಉಚಿತ ಪ್ರಯಾಣಕ್ಕೆ ಅನುಮತಿ ಇಲ್ಲ ಎಂದು ಭರತ್ ಸ್ಪಷ್ಟಪಡಿಸಿದ್ದಾರೆ.
BMTCಗೆ ಆತಂಕ ತಂದ ಫ್ರೀ ಬಸ್ ಯೋಜನೆ
ವೋಲ್ವೋ ಬಸ್‌ನಲ್ಲಿ ಓಡಾಡುವ ಮಹಿಳಾ ಪ್ರಯಾಣಿಕರು ಇನ್ಮುಂದೆ ಸಾಮಾನ್ಯ ಬಸ್‌ಗಳ ಕಡೆಗೆ ಮುಖ ಮಾಡಿದರೆ ವೋಲ್ವೋ ಬಸ್ ನಷ್ಟಕ್ಕೆ ಕಾರಣವಾಗುವ ಆತಂಕ ಎದುರಾಗಿದೆ.
ಇದನ್ನೂ ಓದಿ: Bengaluru Accident: ಕುಡಿದು ಯುವಕರ ಡೆಡ್ಲಿ ಡ್ರೈವಿಂಗ್; ಆಟೋಗೆ ಡಿಕ್ಕಿ ಹೊಡೆದು ಪಕ್ಕದ ಕಾರ್ಗೂ ಗುದ್ದಿದ ಸ್ಕೋಡಾ
ಸರ್ಕಾರ ಎಸಿ ಹಾಗೂ ಐಷಾರಾಮಿ ಬಸ್‌ಗಳನ್ನು ಬಿಟ್ಟು ಸಾಮಾನ್ಯ ಬಸ್‌ಗಳಲ್ಲಿ ಮಹಿಳಾ ಪ್ರಯಾಣಿಕರಿಗೆ ಅವಕಾಶ ನೀಡಿದೆ. ಈ ಯೋಜನೆ ವೋಲ್ವೋ ಬಸ್‌ಗಳಿಗೆ ಭಾರೀ ಹೊಡೆತ ಕೊಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ