• Home
  • »
  • News
  • »
  • state
  • »
  • Hubballi: ಫಿನಾಯಿಲ್ ಕುಡಿದು ಪೇದೆ ಆತ್ಮಹತ್ಯೆಗೆ ಯತ್ನ, ಯೂ ಟರ್ನ್ ಹೊಡೆದ ಕುಟುಂಬ ಸದಸ್ಯರು!

Hubballi: ಫಿನಾಯಿಲ್ ಕುಡಿದು ಪೇದೆ ಆತ್ಮಹತ್ಯೆಗೆ ಯತ್ನ, ಯೂ ಟರ್ನ್ ಹೊಡೆದ ಕುಟುಂಬ ಸದಸ್ಯರು!

ಫಿನಾಯಿಲ್ ಕುಡಿದು ಪೇದೆ ಆತ್ಮಹತ್ಯೆಗೆ ಯತ್ನ

ಫಿನಾಯಿಲ್ ಕುಡಿದು ಪೇದೆ ಆತ್ಮಹತ್ಯೆಗೆ ಯತ್ನ

ರಾಜ್ಯ ಗುಪ್ತಚರ ಇಲಾಖೆಯ ಪೊಲೀಸ್ ಪೇದೆಯೋರ್ವ ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿರೋ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಮೊದಲು ಹಿರಿಯ ಅಧಿಕಾರಿಗಳ ಕಿರುಕುಳ ಆತ್ಮಹತ್ಯೆ ಯತ್ನಕ್ಕೆ ಕಾರಣ ಎಂದಿದ್ದ ಕುಟುಂಬದ ಸದಸ್ಯರು ನಂತರ ಯೂ ಟರ್ನ್ ಹೊಡೆದಿದ್ದಾರೆ.

  • News18 Kannada
  • Last Updated :
  • Dharwad, India
  • Share this:

ವರದಿ: ಶಿವರಾಮ ಆಸುಂಡಿ


ಹುಬ್ಬಳ್ಳಿ(ಅ.28): ಫಿನಾಯಿಲ್ ಕುಡಿದು ಗುಪ್ತಚರ ಇಲಾಖೆ (Intelligence Department) ಸಿಬ್ಬಂದಿ ಆತ್ಮಹತ್ಯೆಗೆ ಯತ್ನಿಸಿರೋ ಘಟನೆ ಹುಬ್ಬಳ್ಳಿಯಲ್ಲಿ ಬೆಳಕಿಗೆ ಬಂದಿದೆ. ಗುಪ್ತಚರ ಇಲಾಖೆಯ ರಮೇಶ್ ಆತ್ಮಹತ್ಯೆಗೆ (Suicide) ಯತ್ನಿಸಿದ ಸಿಬ್ಬಂದಿ. ರಮೇಶ್ ಗುಪ್ತಚರ ಇಲಾಖೆ ವಿಭಾಗದಲ್ಲಿ ಚಾಲಕನಾಗಿ ಕಾರ್ಯನಿರ್ವಹಿಸುದ್ದರು. ದೀಪಾವಳಿ ರಜೆ (Deepavali) ಬಳಿಕ ರಮೇಶ್ ಕರ್ತವ್ಯಕ್ಕೆ ಹಾಜರಾಗಿದ್ದರು. ಆದರೆ ತಡವಾಗಿ ಕರ್ತವ್ಯಕ್ಕೆ ಹಾಜರಾಗಿದ್ದರಿಂದ ಗುಪ್ತಚರ ಇಲಾಖೆ ಎಸಿಪಿ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ. ಇದರಿಂದ ಮನನೊಂದು ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ.


ಹಿರಿಯ ಅಧಿಕಾರಿಗಳ ಕಿರುಕುಳದಿಂದ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಮೊದಲು ಕುಟುಂಬದ ಸದಸ್ಯರು ಆರೋಪಿಸಿದ್ದರಾದರೂ ಬಳಿಕ ಕುಟುಂಬದ ಸದಸ್ಯರು ಯೂ ಟರ್ನ್ ಹೊಡೆದಿದ್ದಾರೆ. ತಮ್ಮ ಹೇಳಿಕೆ ಬದಲಾಯಿಸಿರುವ ಅವರು ಘಟನೆಗೆ ನಿಖರ ಕಾರಣ ತಿಳಿದಿಲ್ಲ ಎಂದಿದ್ದಾರೆ. ಹೀಗಾಗಿ ಗುಪ್ತಚರ ಇಲಾಖೆ ಸಿಬ್ಬಂದಿಯ ಆತ್ಮಹತ್ಯೆ ಪ್ರಕರಣ ಚರ್ಚೆಗೆ ಗ್ರಾಸವಾಗಿದೆ.


ಇದನ್ನೂ ಓದಿ:  Murder: ಮಂಡ್ಯದಲ್ಲಿ ಕೊಲೆ, ಹಾಸನದಲ್ಲಿ ಸಿಕ್ಕಿತು ಡೆಡ್ ಬಾಡಿ; ಭೂಮಿಯೊಳಗೆ ಹುಗಿದಿತ್ತು ಸಾವಿನ ರಹಸ್ಯ!


ಪ್ರಕರಣ ಮುಚ್ಚಿ ಹಾಕುವ ಯತ್ನ


ಕಿಮ್ಸ್ ಆಸ್ಪತ್ರೆ ಇದ್ದರೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿರುವುದರ ಬಗ್ಗೆಯೂ ಶಂಕೆ ವ್ಯಕ್ತವಾಗಿದೆ. ಸದ್ಯ ಹುಬ್ಬಳ್ಳಿಯ ಶಕುಂತಲಾ ಆಸ್ಪತ್ರೆಯಲ್ಲಿ ರಮೇಶ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಕರ್ತವ್ಯದ ಒತ್ತಡದ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆಂಬ ಮಾಹಿತಿ ಇದ್ದು, ಅದನ್ನು ಮುಚ್ಚಿ ಹಾಕುವ ಪ್ರಯತ್ನಗಳು ನಡೆದಿವೆ. ಅದೇ ಹಿನ್ನೆಲೆಯಲ್ಲಿ ಕುಟುಂಬದ ಸದಸ್ಯರೂ ಯೂ ಟರ್ನ್ ಹೊಡೆದಿದ್ದಾರೆ ಎಂದು ಪೊಲೀಸ್ ವಲಯದಲ್ಲಿ ಕೇಳಿ ಬರುತ್ತಿದೆ.


ತನ್ನ ಪತಿ ಆತ್ಮಹತ್ಯೆಗೆ ಯತ್ನಿಸಿಲ್ಲ. ಉಪವಾಸ ಇದ್ದದ್ದರಿಂದ ಕುಸಿದು ಬಿದ್ದು ಹೀಗಾಗಿಗೆ. ವೈದ್ಯರು ಯಾವುದೇ ಪ್ರಾಣಾಪಾಯವಿಲ್ಲ ಎಂದಿದ್ದಾರೆ. ಆದಷ್ಟು ಬೇಗ ತಮ್ಮ ಪತಿ ಡಿಸ್ಚಾರ್ಜ್ ಆಗಲಿದ್ದಾರೆ ಎಂದು ರಮೇಶ್ ಪತ್ನಿ ತಿಳಿಸಿದ್ದಾರೆ.


ಗುಜರಿ ಗೋಡೌನ್​ನಲ್ಲಿ ಆಕಸ್ಮಿಕ ಬೆಂಕಿ


ಗುಜರಿ ಗೋಡೌನ್​ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಘಟನೆ ಹುಬ್ಬಳ್ಳಿಯ ವೀರಾಪುರ ಓಣಿಯ ಗೊಲ್ಲರ ಕಾಲೋನಿಯಲ್ಲಿ ನಡೆದಿದೆ. ಈ ದುರಂತ ಸಿಲಿಂಡರ್ ಬ್ಲಾಸ್ಟ್ ಅಥವಾ ಪಟಾಕಿ ಸಿಡಿದು ನಡೆದಿರೋ ಸಾಧ್ಯತೆಗಳಿವೆ. ಅಗ್ನಿ ಶಾಮಕ ದಳ ಸಿಬ್ಬಂದಿಯಿಂದ ಬೆಂಕಿ ನಂದಿಸಲು ಹರಸಾಹಸ ನಡೆಯಿತು. ಅಕ್ಕ – ಪಕ್ಕದ ಮನೆಗಳಿಂದಲೂ ನೀರು ಹಾಕಿ ಬೆಂಕಿ ನಂದಿಸೋ ಯತ್ನ ನಡೆಯಿತು. ಬೆಂಕಿ ವ್ಯಾಪಿಸಿ ಅಕ್ಕ - ಪಕ್ಕದ ಮನೆಗಳಿಗೂ ವ್ಯಾಪಿಸೋ ಆತಂಕ ಸೃಷ್ಟಿಯಾಗಿತ್ತು. ಬೆಂಡಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರಕರಣ.


ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಬರ್ಬರವಾಗಿ ಕೊಲೆ


ಹುಬ್ಬಳ್ಳಿಯ ನವನಗರ ಪೊಲೀಸ್ ಠಾಣೆ ವ್ಯಾಪ್ಯಿಯಲ್ಲಿ ಮೇ 19 ರಂದು ಹಾಡಹಗಲೇ ಯುವಕನ ಬರ್ಬರ ಹತ್ಯೆಗೈದ ಪ್ರಕರಣ ನಡೆದಿತ್ತು. ಹುಬ್ಬಳ್ಳಿಯ ನೇಕಾರ ನಗರದ ವಿನಯ್ ಎಂಬುವನನ್ನು ಬರ್ಬರವಾಗಿ ಹತ್ಯೆಗೈಯಲಾಗಿತ್ತು. ತ್ರಿಕೋನ ಪ್ರೇಮಕಥೆಗೆ ಯುವಕನ ಕೊಲೆಯಾಗಿರೋ ಶಂಕೆ ವ್ಯಕ್ತವಾಗಿತ್ತು. ಪ್ರೀತಿ ವಿಷಯಕ್ಕೆ ವಿನಯ್ ನನ್ನು ಟಾರ್ಗೆಟ್ ಮಾಡಿದ್ದ ಗುಂಪು, ನವನಗರ ವ್ಯಾಪ್ತಿಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಬರ್ಬರವಾಗಿ ಕೊಲೆ ಮಾಡಿದ್ದರು.


ರಾಘವೇಂದ್ರ ಎಂಬಾತನ ಮೇಲೆ ಕೊಲೆ ಆಪಾದನೆ ಕೇಳಿ ಬಂದಿತ್ತು. ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳಿಗೆ ಜಾಲ ಬೀಸುತ್ತಿದ್ದಂತೆಯೇ ರಾಘವೇಂದ್ರ ತಾನಾಗಿಯೇ ಬಂದು ಪೊಲೀಸರಿಗೆ ಶರಣಾಗಿದ್ದ. ಕೊಲೆ ಆರೋಪಿ ರಾಘುಗೆ ಮೂವರು ಸಹಕರಿಸಿದ್ದರು. ಘಟನೆ ನಡೆದ ಬಳಿಕ ಮೃತ ಯುವಕನನ್ನು ಆಸ್ಪತ್ರೆಗೆ ಕರೆದೊಯ್ಯಲು ಮೂವರು ಪ್ರಯತ್ನಿಸಿದ್ದರು.


ಇದನ್ನೂ ಓದಿ: Crime News: ರಾಜ್ಯದ ಪಾಲಿಗಿಂದು 'ಸಾವಿನ ಸಂಡೇ'! ವಿವಿಧ ಪ್ರಕರಣಗಳಲ್ಲಿ ಐದಕ್ಕೂ ಹೆಚ್ಚು ಮಂದಿ ದುರ್ಮರಣ


ಯುವಕರು ಜೈಲುಪಾಲು


ಪರಿಚಯಸ್ಥರ ಕಾರ್ ತೆಗೆದುಕೊಂಡು ಹೋಗಿದ್ದ ಮೂವರು ಯುವಕರು, ಕೊಲೆ ಕೃತ್ಯದಲ್ಲಿ ಭಾಗಿಯಾಗಿದ್ದರು. ಸ್ನೇಹಿತ ಕರೆದನು ಎಂದು ಹೋದ ಮೂವರು ಯುವಕರು ಇದೀಗ ಜೈಲು ಪಾಲಾಗಿದ್ದಾರೆ. ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Published by:Precilla Olivia Dias
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು