• Home
 • »
 • News
 • »
 • state
 • »
 • Hubballi: ಕಾಂಗ್ರೆಸ್​ನಿಂದ ಪೇ ಮೇಯರ್ ಅಭಿಯಾನ; ರಾಷ್ಟ್ರಪತಿ ಕಾರ್ಯಕ್ರಮದಲ್ಲಿಯೂ ನಡೀತಾ ಭ್ರಷ್ಟಾಚಾರ?

Hubballi: ಕಾಂಗ್ರೆಸ್​ನಿಂದ ಪೇ ಮೇಯರ್ ಅಭಿಯಾನ; ರಾಷ್ಟ್ರಪತಿ ಕಾರ್ಯಕ್ರಮದಲ್ಲಿಯೂ ನಡೀತಾ ಭ್ರಷ್ಟಾಚಾರ?

ಪೇ ಮೇಯರ್ ಪೋಸ್ಟರ್

ಪೇ ಮೇಯರ್ ಪೋಸ್ಟರ್

ಊಟ ದಾನಿಗಳ ಕೊಡುಗೆಯಾಗಿದೆ. ಕೇವಲ ಪೆಂಡಾಲ್ ಮತ್ತು ಕುರ್ಚಿ ಹಾಕೋಕೆ 1.50 ಕೋಟಿ ರೂಪಾಯಿ ಖರ್ಚು ಮಾಡಿರೋ ಲೆಕ್ಕ ತೋರಿಸುತ್ತಿರೋದು ಹಲವಾರು ಅನುಮಾನಕ್ಕೆಡೆ ಮಾಡಿದೆ.

 • Share this:

  ಹುಬ್ಬಳ್ಳಿ: ರಾಜ್ಯದ ವಿವಿಧೆಡೆ ಕಾಂಗ್ರೆಸ್ ನಾಯಕರು (Congress Leaders) ಪೇ ಸಿಎಂ ಅಭಿಯಾನ (Pay CM Campaign)  ನಡೆಸಿದ್ದರು. ಅದಕ್ಕೆ ವಿರುದ್ಧವಾಗಿ ಬಿಜೆಪಿ (BJP) ಸಹ ಅಭಿಯಾನ ನಡೆಸಿತ್ತು. ಇದೀಗ ಹುಬ್ಬಳ್ಳಿಯಲ್ಲಿ ಪೇ ಮೇಯರ್ ಅಭಿಯಾನ (Pay Mayor) ಆರಂಭಿಸಲಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು (President Draupadi Murmu) ಪೌರ ಸನ್ಮಾನ ಕಾರ್ಯಕ್ರಮದಲ್ಲಿಯೂ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಲಾಗಿದ್ದು, ಅದನ್ನು ಖಂಡಿಸಿ ಪೇ ಮೇಯರ್ ಅಭಿಯಾನ ಆರಂಭಿಸಲಾಗಿದೆ. ಪೇ ಮೇಯರ್ ಅಭಿಯಾನದ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹುಬ್ಬಳ್ಳಿ-ಧಾರವಾಡ ಮೇಯರ್ ಈರೇಶ್ ಅಂಚಟಗೇರಿ ವಿರುದ್ಧ ಪೇ ಮೇಯರ್ ಅಭಿಯಾನ ಆರಂಭಿಸಲಾಗಿದೆ. ರಾಷ್ಟ್ರಪತಿಗಳ ಪೌರ ಸನ್ಮಾನ ಕಾರ್ಯಕ್ರಮದ ಹೆಸರಲ್ಲಿ ಭ್ರಷ್ಟಾಚಾರ ಆರೋಪಿಸಿ ಕೈ ನಾಯಕರು ಪೇ ಮೇಯರ್ ಅಭಿಯಾನ ಆರಂಭಿಸಿದ್ದಾರೆ.


  ಹುಬ್ಬಳ್ಳಿಯ ಮಾನ ಕಳೆದ ನೀವು ತಕ್ಷಣ ರಾಜೀನಾಮೆ ಕೊಡಿ ಎಂದು ಅಭಿಯಾ‌ನ ನಡೆಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಪಾಲಿಕೆ ಮೇಯರ್ ಈರೇಶ್ ಅಂಚಟಗೇರಿ ವಿರುದ್ಧ ಅಭಿಯಾನ ನಡೆಸಲಾಗುತ್ತಿದೆ. ಮತ್ತೊಂದೆಡೆ ಹುಬ್ಬಳ್ಳಿ ಹಾಗೂ ಧಾರವಾಡದ ವಿವಿಧೆಡೆ ಪೇ ಮೇಯರ್ ಪೋಸ್ಟರ್ ಹಚ್ಚಲಾಗಿದೆ. ಕಸದ ತೊಟ್ಟಿ ಮತ್ತಿತರ ಕಡೆ ಪೋಸ್ಟರ್ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಗಿದೆ.


  ಪೆಂಡಾಲ್, ಕುರ್ಚಿ ಹಾಕಲು 1.50  ಕೋಟಿ


  ಪೆಂಡಾಲ್ ಹಾಕಿದ ನಂತ್ರ ಕೊಟೇಶನ್ ಕರೆಯಲಾಗಿದೆ. ರಾಷ್ಟ್ರಪತಿ ಕಾರ್ಯಕ್ರಮದಲ್ಲಿಯೂ ಭ್ರಷ್ಟಾಚಾರ ನಡೆದ ಗುಮಾನಿ ಇದೆ. ಕಾರ್ಯಕ್ರಮ ನಡೆದ ಸ್ಥಳ ಉಚಿತವಾಗಿ ನೀಡಲಾಗಿದೆ. ಊಟ ದಾನಿಗಳ ಕೊಡುಗೆಯಾಗಿದೆ. ಕೇವಲ ಪೆಂಡಾಲ್ ಮತ್ತು ಕುರ್ಚಿ ಹಾಕೋಕೆ 1.50 ಕೋಟಿ ರೂಪಾಯಿ ಖರ್ಚು ಮಾಡಿರೋ ಲೆಕ್ಕ ತೋರಿಸುತ್ತಿರೋದು ಹಲವಾರು ಅನುಮಾನಕ್ಕೆಡೆ ಮಾಡಿದೆ.


  Hubballi congress leaders start pay mayor campaign saklb mrq
  ಪೇ ಮೇಯರ್ ಪೋಸ್ಟರ್


  40 ಪರ್ಸೆಂಟೇಜ್ ಗಿಂತಲೂ ಹೆಚ್ಚು ಭ್ರಷ್ಟಾಚಾರ ನಡೆದಿದೆ ಎಂಬ ಅನುಮಾನವಿದ್ದು, ಕೂಡಲೇ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುವಂತೆ ಮೇಯರ್ ಈರೇಶ್ ಅಂಚಟಗೇರಿಗೆ ಕಾಂಗ್ರೆಸ್ ಮುಖಂಡ ರಜತ್ ಉಳ್ಳಾಗಡ್ಡಿ ಮಠ ಆಗ್ರಹಿಸಿದ್ದಾರೆ.


  ಇದನ್ನೂ ಓದಿ:  Bengaluru: ವಿವಾದಿತ ಸ್ಟೀಲ್ ಬ್ರಿಡ್ಜ್ ಕೆಳಗಡೆ ಪ್ಲೇ‌ ಏರಿಯಾ; ಇದು BBMP ಹಣ ಲೂಟಿ ಮಾಡೋ ಸ್ಕೀಮ್ ಎಂದು ಆರೋಪ


  ಕಾಂಗ್ರೆಸ್ ಆರೋಪಕ್ಕೆ ಮೇಯರ್ ಪ್ರತಿಕ್ರಿಯೆ


  ಈ ಕುರಿತು ಪ್ರತಿಕ್ರಿಯಿಸಿರೋ ಮೇಯರ್ ಈರೇಶ್ ಅಂಚಟಗೇರಿ, ನನಗೆ ಸಹಿ ಮಾಡೋ ಪವರ್ಸ್ ಇಲ್ಲ. ಹೀಗಿರುವಾಗ ನಾನು ಹೇಗೆ ಭ್ರಷ್ಟಾಚಾರ ಮಾಡೋಕೆ ಸಾಧ್ಯವಾಗುತ್ತದೆ. ಕೆಲಸವನ್ನು ನಿರ್ಮಿತಿ ಕೇಂದ್ರದವರಿಗೆ ಕೊಡಲಾಗಿತ್ತು. ಭ್ರಷ್ಟಚಾರವಾಗಿದೆಯೇ ಇಲ್ಲವೊ ಅನ್ನೋದನ್ನು ಅವರನ್ನೇ ಕೇಳಲಿ. ಅದನ್ನು ಬಿಟ್ಟು ನನ್ನ ವಿರುದ್ಧ ಪೋಸ್ಟರ್ ಹಾಕಿ ತೇಜೋವಧೆ ಮಾಡುತ್ತಿರುವುದಕ್ಕೆ ಕಾಂಗ್ರೆಸ್ ಮುಖಂಡರಾದ ರಜತ್ ಉಳ್ಳಾಗಡ್ಡಿ ಮಠ ಹಾಗೂ ದೀಪಕ್ ಚಿಂಚೋರೆ ವಿರುದ್ಧ ದೂರು ದಾಖಲಿಸೋದಾಗಿ ಎಚ್ಚರಿಸಿದ್ದಾರೆ.


  Hubballi congress leaders start pay mayor campaign saklb mrq
  ಪೇ ಮೇಯರ್ ಪೋಸ್ಟರ್


  ಬಿಜೆಪಿಯಿಂದ ಪ್ರತಿಭಟನೆ


  ಮತಾಂತರ ಮಾಡುತ್ತಿರುವ ಮೌಲಾನಾಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ ನಡೆಯಿತು. ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ ನಡೆಯಿತು. ಸಂಗೊಳ್ಳಿ ರಾಯಣ್ಣ ವೃತ್ತದಿಂದ ತಹಶೀಲ್ದಾರ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು. ಮೌಲಾನಾಗಳಿಗೆ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು. ಬೈರಿದೇವರಕೊಪ್ಪದ ಹಿಂದೂ ಯುವತಿಗೆ ಇಸ್ಲಾಂಗೆ  ಮತಾಂತರಕ್ಕೆ ಮುಂದಾಗಿದ್ದಕ್ಕೆ ಖಂಡನೆ ಮಾಡಲಾಯಿತು.


  ಇದನ್ನೂ ಓದಿ:  Mysuru Dasara 2022: ದಸರಾ ದರ್ಶನಕ್ಕೆ ವಿಶೇಷ ಬಸ್​ಗಳ ವ್ಯವಸ್ಥೆ; 81 KSRTC ಬಸ್​​ಗಳಿಗೆ ಚಾಲನೆ


  ಹಿಂದೂ ಯುವತಿಯರನ್ನು ಮತಾಂತರ ಮಾಡಿ ನಂತರ ಅವರಿಂದ ಮತಾಂತರಗೊಳಿಸುವ ಪ್ರಕ್ರಿಯೆ ನಡೆದಿದೆ. ಕೂಡಲೇ ಇದಕ್ಕೆ ಕಡಿವಾಣ ಹಾಕಬೇಕು. ಮತಾಂತರ ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಮತಾಂಧ ಮೌಲಾನಾಗಳನ್ನ ಬಂದಿಸುವಂತೆ ಆಗ್ರಹಿಸಿದರು.


  Hubballi congress leaders start pay mayor campaign saklb mrq
  ಪೇ ಮೇಯರ್ ಪೋಸ್ಟರ್


  ಹುಬ್ಬಳ್ಳಿ ಧಾರವಾಡ ಮಹಾನಗರ ಬಿಜೆಪಿ ಅದ್ಯಕ್ಷ ಸಂಜಯ ಕಪಟಕರ್ ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಯಿತು. ಹುಬ್ಬಳ್ಳಿ ತಹಸಿಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

  Published by:Mahmadrafik K
  First published: