ಹುಬ್ಬಳ್ಳಿ(ಡಿ.05): ಹೆತ್ತವರಿಗೆ ಹೆಗ್ಗಣವೇ ಮುದ್ದು ಅನ್ನೋ ಮಾತಿದೆ. ಮಕ್ಕಳು ಕೆಲವೊಮ್ಮೆ ಅಪರಾಧ (Crime) ಮಾಡಿದ್ರೂ ಅದನ್ನು ಪೋಷಕರು ಒಪ್ಪಿಕೊಳ್ಳೋಕೆ ಸಿದ್ಧರಿರುವುದಿಲ್ಲ. ಹೀಗಿರುವಾಗ ಹೆತ್ತಪ್ಪನೇ ಮಗನ ಕೊಲೆಗೆ (Murder) ಸುಪಾರಿ ಕೊಟ್ಟು, ಪೊಲೀಸರ ಬಲೆಗೆ ಬಿದ್ದಿದ್ದಾನೆ. ಈ ಆಘಾತಕಾರಿ ಪ್ರಕರಣ ಹುಬ್ಬಳ್ಳಿಯಲ್ಲಿ (Hubballi) ಬೆಳಕಿಗೆ ಬಂದಿದೆ. ಉದ್ಯಮಿ ಪುತ್ರನ ನಾಪತ್ತೆ ಪ್ರಕರಣ ಕೊಲೆಯ ಸ್ವರೂಪ ಸಿಕ್ಕಿದ್ದು, ಪ್ರಕರಣ ಗಂಡು ಮೆಟ್ಟಿದ ನಾಡನ್ನು ನಡುಗಿಸಿದೆ.
ಹೌದು ಹುಬ್ಬಳ್ಳಿಯ ಖ್ಯಾತ ಉದ್ಯಮಿ ಪುತ್ರನ ನಾಪತ್ತೆ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ಉದ್ಯಮಿಯ ದೇವರಗುಡಿಹಾಳ ತೋಟದ ಮನೆಯಲ್ಲೇ ಮಗನ ಕೊಲೆ ಮಾಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ತನ್ನ ಮಗ ನಾಪತ್ತೆಯಾಗಿದ್ದಾನೆ ಎಂಬ ದೂರು ನೀಡಿದ್ದ ತಂದೆ, ಮಗನನ್ನು ಹುಡುಕಿಕೊಡಿ ಅಂತ ಪೊಲೀಸ್ ಠಾಣೆಯಲ್ಲಿ ಹೈಡ್ರಾಮಾ ಮಾಡಿದ್ದ. ಹೀಗೆ ಸುಪಾರಿ ಕೊಲೆ ಆರೋಪ ಹೊತ್ತವರು ಮಹಾವೀರ ಜ್ಯುವೆಲರ್ಸ್ ಮಾಲೀಕ ಉದ್ಯಮಿ ಭರತ್ ಜೈನ್. ಕೊಲೆಯಾದ ಯುವಕನನ್ನು ಅಖಿಲ್ ಜೈನ್(30) ಎಂದು ಗುರುತಿಸಲಾಗಿದೆ.
ಇದನ್ನೂ ಓದಿ: HD Kumaraswamy ಪ್ರಧಾನಮಂತ್ರಿ ಆಗೋ ಸಾಧ್ಯತೆ, ಡಿಸೆಂಬರ್ 18ರ ನಂತರ ಬಿಗ್ ಸರ್ಪ್ರೈಸ್: CM Ibrahim
ಡಿ.3 ರಂದು ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಈ ವೇಳೆ ಭರತ ಜೈನ್ ಪೊಲೀಸ್ ಠಾಣೆಯಲ್ಲಿ ಹೈಡ್ರಾಮ ಮಾಡಿದ್ದ. ತನಿಖೆ ಚುರುಕುಗೊಳಿಸಿದ ಪೊಲೀಸರಿಗೆ ತಂದೆ ಮೇಲೆಯೇ ಅನುಮಾನ ಮೂಡಿತ್ತು. ಭರತ್ ಜೈನ್ನನ್ನ ತೀವ್ರ ವಿಚಾರಣೆಗೆ ಒಳಪಡಿಸಿದಾಗ ಸತ್ಯಾಂಶ ಬಯಲಿಗೆ ಬಂದಿದೆ. ಮಗನ ಹತ್ಯೆಗೆ ಸ್ಥಳೀಯ ಹಂತಕರಿಗೆ ಸುಪಾರಿ ನೀಡಿದ್ದಾಗಿ ತಂದೆ ಬಾಯ್ಬಿಟ್ಟಿದ್ದಾನೆ.
ತಂದೆ ಹೇಳಿಕೆ ಆಧರಿಸಿ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಮಗನ ಹತ್ಯೆಗೆ ಸುಪಾರಿ ಕೊಟ್ಟಿದ್ದಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಅಖಿಲ್ ಜೈನ್ ಶವಕ್ಕಾಗಿ ಹುಡುಕಾಟ ಮುಂದುವರೆದಿದೆ. ಪಿ.ಐ. ಜಗದೀಶ ಹಂಚಿನಾಳ ನೇತೃತ್ವದ ತಂಡದಿಂದ ಆರೋಪಿಗಳನ್ನು ಬಂಧಿಸಿದೆ. ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ರೌಡಿಶೀಟರ್ ಜೊತೆ ಕಾಂಗ್ರೆಸ್ ಜಿಲ್ಲಾಧ್ಯಕ್ಷನ ಸಭೆ
ರೌಡಿ ಶೀಟರ್ ವಿಚಾರವಾಗಿ ಬಿಜೆಪಿಗೆ ಬುದ್ದಿ ಹೇಳ್ತಿರೋ ಕಾಂಗ್ರೆಸ್ ಪಕ್ಷದ ನಾಯಕರೇ ರೌಡಿ ಶೀಟರ್ ನೊಂದಿಗೆ ಸಭೆ ಮಾಡಿದ ಘಟನೆ ಹುಬ್ಬಳ್ಳಿಯಲ್ಲಿ ಬೆಳಕಿಗೆ ಬಂದಿದೆ. ಧಾರವಾಡ ಗ್ರಾಮೀಣ ಅಧ್ಯಕ್ಷ ಅನೀಲ್ ಕುಮಾರ್ ಪಾಟೀಲ್ ರೌಡಿ ಶೀಟರ್ ನೊಂದಿಗೆ ಸಭೆ ಮಾಡಿ ಚರ್ಚೆಗೆ ಗ್ರಾಸವಾಗಿದ್ದಾರೆ. ರೌಡಿ ಶೀಟರ್ ಸಂತೋಷ್ ಚಲವಾದಿ ಜೊತೆ ಸಭೆ ಪಾಟೀಲ ಸಭೆ ಮಾಡಿದ್ದಾರೆ. ಸಂತೋಷ್ ಛಲವಾದಿ ವಿರುದ್ಧ ಹುಬ್ಬಳ್ಳಿ ವಿವಿಧ ಪೊಲೀಸ್ ಠಾಣೆಯಲ್ಲಿ ಹತ್ತಕ್ಕೂ ಹೆಚ್ಚು ಕೇಸ್ ಗಳು ದಾಖಲಾಗಿವೆ. ಮತದಾರರ ಹೆಸರು ಡಿಲೀಟ್ ಆಗಿರೋ ವಿಚಾರವಾಗಿ ಅನಿಲ್ ಕುಮಾರ ಪಾಟೀಲ್ ಸಭೆ ಕರೆದಿದ್ದರು. ಸಭೆಯಲ್ಲಿ ರೌಡಿ ಶೀಟರ್ ನನ್ನ ಪಕ್ಕ ಕೂರಿಸಿಕೊಂಡ ಅನಿಲ್ ಪಾಟೀಲ್ ಸಮಾಲೋಚನೆ ಮಾಡಿದರು.
ಇದನ್ನೂ ಓದಿ: Shocking Murder: ಶ್ರದ್ಧಾ ಕೊಲೆಯಿಂದ ಸ್ಪೂರ್ತಿ ಪಡೆದು ತನ್ನ ಪ್ರೇಯಸಿಯನ್ನೇ ಕೊಂದ ವ್ಯಕ್ತಿ
ವಾರ್ಡ್ ನಂಬರ್ 58 ರಲ್ಲಿ ಅನಿಲ್ ಪಾಟೀಲ್ ಸಭೆ ನಡೆಸಿದರು. ಮತದಾರರ ಪಟ್ಟಿ ಪರಿಷ್ಕರಣೆ ಮಾಡಲು ಬೂತ್ ಮಟ್ಟದ ಮುಖಂಡರಿಗೆ ಸಲಹೆ ನೀಡಿದರು. ರೌಡಿ ಶೀಟರ್ ಸೇರ್ಪಡೆ ವಿಚಾರವಾಗಿ ಬಿಜೆಪಿ ವಿರುದ್ದ ಕೈ ಮುಖಂಡರು ವಾಗ್ದಾಳಿ ನಡೆಸುತ್ತಿದ್ದಾರೆ. ಅತ್ತ ವಿರೋಧ, ಇತ್ತ ರೌಡಿ ಶೀಟರ್ ಪಕ್ಕ ಕೂರಿಸಿಕೊಂಡು ಸಭೆ ಮಾಡ್ತಿರೋದು ದ್ವಂದ್ವ ನಿಲುವಿಗೆ ಕಾರಣವಾಗಿದೆ. ಧಾರವಾಡ ಸೆಂಟ್ರಲ್ ಕ್ಷೇತ್ರದ ಪ್ರಬಲ ಆಕಾಂಕ್ಷಿಯಾಗಿರೋ ಅನಿಲ್ ಪಾಟೀಲ್ ಸಭೆ ಮಾಡಿದ್ದಾರೆ.
ಕಾಂಗ್ರೆಸ್ ಪಕ್ಷ ಯಾರದೋ ಸ್ವಂತ ಆಸ್ತಿ ಅಲ್ಲ. ನನಗೆ ಟಿಕೆಟ್ ಕೊಡ್ತಾರೆ ಅನ್ನೋ ಗ್ಯಾರಂಟಿ ನನಗಿದೆ. ಕಾಂಗ್ರೆಸ್ ಪಕ್ಷದಲ್ಲಿ ಬಿ ಫಾರಂ ತರೋವರೆಗೂ ಅಭ್ಯರ್ಥಿ ಯಾರು ಅನ್ನೋದು ಗೊತ್ತಾಗಲ್ಲ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪರವಾಗಿಯೇ ಕೆಲಸ ಮಾಡಬೇಕೆಂದು ಅನಿಲ್ ಪಾಟೀಲ್ ಈ ವೇಳೆ ಕರೆ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ